ಬರಲಿದೆ ರೆನಾಲ್ಟ್ ಸಂಸ್ಥೆಯ ಹೊಸ ಕ್ರಾಸ್ಓವರ್ ಎಸ್‍ಯುವಿ ಕಾರು...
ಫ್ರೇಂಚ್ ಮೂಲದ ವಾಹನ ತಯಾರಕ ಸಂಸ್ಥೆಯಾದ ರೆನಾಲ್ಟ್ ತಮ್ಮ ಮುಂಬರಲಿರುವ ಕ್ರಾಸ್‍ಓವರ್ ಎಸ್‍ಯುವಿ ಕಾರಿನ ಇಮೇಜ್ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.
ಫ್ರೇಂಚ್ ಮೂಲದ ವಾಹನ ತಯಾರಕ ಸಂಸ್ಥೆಯಾದ ರೆನಾಲ್ಟ್ ತಮ್ಮ ಮುಂಬರಲಿರುವ ಕ್ರಾಸ್‍ಓವರ್ ಎಸ್‍ಯುವಿ ಕಾರಿನ ಇಮೇಜ್ ಟೀಸರ್ ಅನ್ನು ಬಿಡುಗಡೆಗೊಳಿಸಿದ್ದು, ಈ ಕಾರು ಮೊದಲಿಗೆ 2018ರ ಮಾಸ್ಕೋ ಅಂತರಾಷ್ಟ್ರೀಯ ಮೋಟಾರು ಪ್ರದರ್ಶನದಲ್ಲಿ ಬಹಿರಂಗಗೊಳ್ಳಲಿದೆ.

ಹೊಸ ರೆನಾಲ್ಟ್ ಕ್ರಾಸ್ಒವರ್ ಎಸ್‍ಯುವಿ ಕಾರು ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಮಾರಾಟವಾದ ಕ್ಯಾಪ್ಟರ್ ಕ್ರಾಸ್ಒವರ್ಗೆ ನಿಕಟವಾಗಿ ಸಂಬಂಧಿಸಿದೆ. ಈ ಕಾರು ಕ್ಯಾಪ್ಚುರ್ ಮತ್ತು ಡಸ್ಟರ್ ಕಾರಿನಲ್ಲಿ ಬಳಸಲಾದ್ ಎಮ್0 ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದ್ದು, ಕ್ಯಾಪ್ಚುರ್ ಕಾರಿನಂತೆಯೆ 4 ಮೀಟರ್ ಉದ್ದವಿರಲಿದೆ.

ಟೀಸರ್ ಚಿತ್ರದಲ್ಲಿ ತೋರಿಸಿದ ಹಾಗೆ ಕಾರಿನ ಮುಂಭಾಗವು ಎಲ್ಇಡಿ ಡೇ ಲೈಟ್ ರನ್ನಿಂಗ್ ಲ್ಯಾಂಪ್ಸ್ ಹೊದಿರುವ ಚೂಪಾದ ಹೆಡ್‍ಲ್ಯಾಂಪ್ಸ್, ಕಾಪ್ಚುರ್ ಕಾರಿನಲ್ಲಿ ಬಳಸಲಾದ ಗ್ರಿಲ್ ಮತ್ತು ಆಕ್ರಮಣಕಾರಿ ವಿನ್ಯಾಸದ ಬಂಪರ್ ಅನ್ನು ಪಡೆದುಕೊಂಡಿರಲಿದೆ. ಒಟ್ಟಾರೆ ಕಾರಿನ ವಿನ್ಯಾಸವು ರೆನಾಲ್ಟ್ ಸಂಸ್ಥೆಯ ಮೇಗನ್ ಕಾರನ್ನು ಹೋಲುತ್ತದೆ.

ರೆನಾಲ್ಟ್ ಕ್ರಾಸ್ಓವರ್ ಅಕರು ಮೊದಲಿಗೆ ರಷ್ಯ ದೇಶದಲ್ಲಿ ಬಿಡುಗಡೆಗೊಳ್ಳಲ್ಲಿದ್ದು, ಈ ಕಾರು ಮಾಸ್ಕೋನಲ್ಲಿನ ರೆನಾಲ್ಟ್ ಪ್ಲಾಂಟ್‍ನಲ್ಲಿ ಉತ್ಪಾದನೆಯಾಗಲಿದೆ. ಇದಲ್ಲದೆ ಇತರ ಉದಯೋನ್ಮುಖ ಲೆಫ್ಟ್-ಹ್ಯಾಂಡ್-ಡ್ರೈವ್ ಮಾರುಕಟ್ಟೆಗಳಲ್ಲಿ ರೆನಾಲ್ಟ್ ಹೊಸ ಎಸ್‍ಯುವಿ ಅನ್ನು ಪರಿಚಯಿಸುತ್ತದೆ.

ಚೀನ ಅಂತಹ ದೇಶಗಳಲ್ಲಿ ರೆನಾಲ್ಟ್ ಸಂಸ್ಥೆಯು ತಮ್ಮ ಕ್ರಾಸ್ಓವರ್ ಎಸ್‍ಯುವಿ ಕಾರನ್ನು ಸಿಅಮ್‍ಎಫ್-ಬಿ ಪ್ಲಾಟ್‍ಫಾರ್ಮ್‍ನ ಅಡಿಯಲ್ಲಿ ಬಿಡುಗಡೆಗೊಳಿಸಲಿದ್ದು, ಕ್ಯಾಪ್‍ಚುರ್‍ಗೆ ಪ್ರೀಮಿಯಂ ಪರ್ಯಾಯವಾಗಿ ಹೊಸ ಕ್ರಾಸ್ಒವರ್ ಎಸ್‍ಯುವಿಯನ್ನು ರೆನಾಲ್ಟ್ ಸ್ಲಾಟ್ ಮಾಡಲು ನಾವು ನಿರೀಕ್ಷಿಸುತ್ತೇವೆ ಮತ್ತು ಹೊಸ ಎಸ್‍ಯುವಿಯನ್ನು ಡಸ್ಟರ್‍ನಂತೆಯೆ ಡಸಿಯ ಬ್ರ್ಯಾಂಡ್ನ ಅಡಿಯಲ್ಲಿ ಮಾರಾಟ ಮಾಡಬಹುದು ಎನ್ನಲಾಗಿದೆ.

ರೆನಾಲ್ಟ್ ವೆಚ್ಚವನ್ನು ಕಡಿಮೆ ಮಾಡಲು ಕ್ಯಾಪ್‍ಚುರ್‍ನಿಂದ ಆಂತರಿಕ ಅಂಶಗಳನ್ನು ಅನುಸರಿಸಬಹುದು. ಬಿಡುಗಡೆಗೊಂಡ ಕ್ಯಾಪ್ಚುರ್ ಕ್ರಾಸ್ಓವರ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಲಿಲ್ಲ ವಾದರೂ, ಯುಟಿಲಿಟಿ ವಾಹನ ವಿಭಾಗದ ಬೆಳವಣಿಗೆಯೊಂದಿಗೆ ರೆನಾಲ್ಟ್ ದೇಶದಲ್ಲಿ ಹೊಸ ಎಸ್‍ಯುವಿಯನ್ನು ಪರಿಚಯಿಸುವ ಯೋಜನೆ ಇದೆ ಎನ್ನಲಾಗಿದೆ.

ರೆನಾಲ್ಟ್ ಹೊಸ ಕ್ರಾಸ್ಓವರ್ ಎಸ್‍ಯುವಿ ಅನ್ನು ಫ್ರೆಂಚ್ ಟೆಕ್ನಿಕಲ್ ತಯಾರಕರಿಗೆ ಪ್ರೀಮಿಯಂ ಉತ್ಪನ್ನವಾಗಲಿದೆ. ಹೊಸ ಕ್ರಾಸ್ಓವರ್ ಎಸ್‍ಯುವಿ ಅನೇಕ ಅಂಶಗಳಲ್ಲಿ ಕ್ಯಾಪ್ಟರ್ಗೆ ಹೋಲುತ್ತದೆ ಎಂಬ ನಿರೀಕ್ಷೆ ಇದೆ. ಆದರೆ ಕಾರಿನ ಹೊರಭಾಗದ ವಿನ್ಯಾಸವನ್ನು ಗಮನಿಸಿದಲ್ಲಿ ಕ್ಯಾಪ್ಚುರ್ ಕಾರಿಗಿಂತ ಪ್ರೀಮಿಯಮ್ ಲುಕ್ ಅನ್ನು ಪಡೆದುಕೊಂಡಿದೆ.

ರೆನಾಲ್ಟ್ ಸಂಸ್ಥೆಯ ಹೊಸ ಕ್ರಾಸ್‍ಓವರ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಸಂಸ್ಥೆಯು ಯಾವುದೇ ಮಾಹಿತಿಯನ್ನು ಹೊರಹಾಕಲಿಲ್ಲವಾದರೂ, ಮಾಸ್ಕೋ ಅಂತರಾಷ್ಟ್ರೀಯ ಮೋಟಾರು ಪ್ರದರ್ಶನದಲ್ಲಿ ಬಹಿರಂಗಗೊಳ್ಳುವ ಸಮಯದ ವರೆಗೂ ಕಾಯ್ದು ನೋಡಬೇಕಿದೆ.


Click it and Unblock the Notifications