ಬಿಡುಗಡೆಗೊಂಡ ಅಪ್ಡೇಟೆಡ್ ರೆನಾಲ್ಟ್ ಕ್ವಿಡ್ ಕಾರು.. ಈ ಬಾರಿ ಹೊಸತೇನು.?
ಫ್ರೆಂಚ್ ಮೂಲದ ವಾಹನ ತಯಾರಕ ಸಂಸ್ಥೆಯಾದ ರೆನಾಲ್ಟ್ ಕ್ವಿಡ್ ತಮ್ಮ ಜನಪ್ರಿಯ ಕ್ವಿಡ್ ಕಾರನ್ನು ಮತ್ತೆ ಬಿಡುಗಡೆಗೊಳಿಸಿದೆ. ಈ ಬಾರಿ ಬಿಡುಗಡೆಗೊಂಡ ಕ್ವಿಡ್ ಕಾರು ಹೊಸ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 2
ಫ್ರೆಂಚ್ ಮೂಲದ ವಾಹನ ತಯಾರಕ ಸಂಸ್ಥೆಯಾದ ರೆನಾಲ್ಟ್ ಕ್ವಿಡ್ ತಮ್ಮ ಜನಪ್ರಿಯ ಕ್ವಿಡ್ ಕಾರನ್ನು ಮತ್ತೆ ಬಿಡುಗಡೆಗೊಳಿಸಿದೆ. ಈ ಬಾರಿ ಬಿಡುಗಡೆಗೊಂಡ ಕ್ವಿಡ್ ಕಾರು ಹೊಸ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 2.66 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಹೊಸದಾಗಿ ಬಿಡುಗಡೆಗೊಂಡ ಕ್ವಿಡ್ ಕಾರುಗಳಲ್ಲಿ ಮುಂಭಾಗದ ಹೆಡ್‍ಲ್ಯಾಂಪ್‍ನಲ್ಲಿ ಸಿ ಆಕಾರದ ಲೈಟ್, ರೆನಾಲ್ಟ್ ಸಂಸ್ಥೆಯ ಚಿಹ್ನೆಯನ್ನು ಹೈಲೈಟ್ ಮಾಡುವ ಹಾಗೆ ರೇಜರ್ ಶಾರ್ಪ್ ಫ್ರಂಟ್ ಗ್ರಿಲ್, ಫಾಗ್ ಲ್ಯಾಂಪ್ಸ್, ಫುಲ್ ವ್ಹೀಲ್ ಕವರ್‍ಗಳು ಮತ್ತು ಬಾಡಿ ಕಲರ್‍ಡ್ ಬಂಪರ್‍ಗಳನ್ನು ಅಳವಡಿಸಲಾಗಿದೆ.

ಹೊಸ ರೆನಾಲ್ಟ್ ಕ್ವಿಡ್ ಕಾರುಗಳು ಒಟ್ಟು 8 ಟ್ರಿಮ್‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹಲವಾರು ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ. ರೆನಾಲ್ಟ್ ಸಂಸ್ಥೆಯು ಹೊಸ ವೈಶಿಷ್ಟ್ಯತೆಗಳನ್ನು ಬಳಸಿದರೂ ಬೆಲೆಯನ್ನು ಮಾತ್ರ ಔಟ್‍ಗೋಯಿಂಗ್ ಮಾಡಲ್‍ನದ್ದೆ ನೀಡಿದೆ.

| Kwid 2018 Range | Price (ex-showroom, New Delhi) |
| Standard - 0.8L SCe | Rs 266,700 |
| RXE - 0.8L SCe | Rs 309,800 |
| RXL - 0.8L SCe | Rs 335,900 |
| RXT-O (MT) - 0.8L SCe | Rs 382,500 |
| RXT-O (MT) - 1.0 L SCe | Rs 404,500 |
| RXT-O- (AMT) - 1.0 L SCe | Rs 434,500 |
| KWID Climber MT- 1.0 L SCe | Rs 429,500 |
| KWID Climber AMT- 1.0 L SCe | Rs 459,500 |

ಈ ಬಾರಿ ರೆನಾಲ್ಟ್ ಕ್ವಿಡ್ ಕಾರುಗಳಲ್ಲಿ ಹೊಸದಾಗಿ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಆರ್ಮ್‍ರೆಸ್ಟ್ ಮತ್ತು ಹಿಂಭಾಗದ ಪ್ಯಾಸೆಂಜರ್‍ಗಳಿಗೆ 12ವಿ ಸಾಕೆಟ್ ಅನ್ನು ನೀಡಲಾಗಿದೆ.

ಇನ್ನು ಕಾರಿನ ಒಳಭಾಗದಲ್ಲಿ ಹೊಸದಾಗಿ 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಇಂಟಿಗ್ರೇಟೆಡ್ ನ್ಯಾವಿಗೇಷನ್, ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಲೇನ್-ಚೇಂಜ್ ಇಂಡಿಕೇಟರ್ ಮತ್ತು ಸೀಟ್‍ಬೆಲ್ಟ್ ಹಾಗು ಲೋಡ್ ಲಿಮಿಟರ್ ಎಂಬ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ರೆನಾಲ್ಟ್ ಕ್ವಿಡ್ ಕಾರಿನ ಟಾಪ್ ಎಂಡ್ ಮಾದರಿಯು ಪವರ್ ಸ್ಟೀರಿಂಗ್, ಎಂಜಿನ್ ಇಮ್ಮೊಬಿಲೈಸರ್, ರಿಮೊಟ್ ಸೆಂಟ್ರಲ್ ಲಾಕಿಂಗ್ ಮತ್ತು ಎಮರ್ಜೆನ್ಸಿ ಲಾಕಿಂಗ್ ರೆಟ್ರಾಕ್ಟರ್ ಎಂಬ ಇನ್ನಿತರೆ ಆಯ್ಕೆಗಳನ್ನು ಜೋಡಣೆಯಾಗಿ ಪಡೆದುಕೊಂಡಿರಲಿದೆ.

ಅಪ್ಡೇಟೆಡ್ ರೆನಾಲ್ಟ್ ಕ್ವಿಡ್ ಕಾರುಗಳು 2 ಎಂಜಿನ್ ಮಾದರಿಗಳಲ್ಲಿ ಲಭ್ಯವಿದ್ದು, 0.8 ಲೀಟರ್‍ನ ಎಂಜಿನ್‍ಗಳು 800ಸಿಸಿ 3 ಸಿಲೆಂಡರ್ ಎಂಜಿನ್‍ನೊಂದಿಗೆ 52ಬಿಹೆಚ್‍ಪಿ ಮತ್ತು 72ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಇನ್ನು ಕಾರಿನ ಮತ್ತೊಂದು ಎಂಜಿನ್ 999ಸಿಸಿ 3 ಸಿಲೆಂಡರ್ ಎಂಜಿನ್ ಸಹಾಯದಿಂದ 67ಬಿಹೆಚ್‍ಪಿ ಮತ್ತು 91ಎನ್ ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎರಡೂ ಎಂಜಿನ್‍ಗಳನ್ನು 5 ಸ್ಪೀಡ್ ಮ್ಯಾನುವಲ್ ಅಥವಾ ಎಮ್‍ಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಡ್ರೈವ್‍ಸ್ಪಾರ್ಕ್ ಕನ್ನಡ ಅಭಿಪ್ರಾಯ
ರೆನಾಲ್ಟ್ ಕ್ವಿಡ್ ಕಾರುಗಳು ಸಂಸ್ಥೆಯ ಗೇಮ್ ಚೇಂಜರ್ ಕಾರಾಗಿದ್ದು, ಬಿಡುಗಡೆಗೊಂಡ ಸಮಯದಿಂದಲೂ ಇಲ್ಲಿಯ ವರೆಗೂ ಸುಮಾರು 2,50,000 ಯೂನಿಟ್ ಕಾರುಗಳು ಮಾರಾಟಗೊಂಡಿವೆ. ಈ ನಿಟ್ಟಿನಲ್ಲಿ ರೆನಾಲ್ಟ್ ಸಂಸ್ಥೆಯು ಹೊಸದಾಗಿ ಬಿಡುಗಡೆಗೊಂಡ ಕ್ವಿಡ್ ಕಾರುಗಳು ಕೂಡ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗಬೇಕು ಎಂಬ ತವಕದಲ್ಲಿದೆ.


Click it and Unblock the Notifications