ಎಸ್‌ಯುವಿ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ ನಿಸ್ಸಾನ್ ಟೆರ್ರಾ
ನಿಸ್ಸಾನ್ ತನ್ನ ಹೊಸ ಲೆಫ್ಟ್ ಹ್ಯಾಂಡ್ ಡ್ರೈವ್ ಟೆರ್ರಾ ಆವೃತ್ತಿಯನ್ನು ಸದ್ಯ ಚೀನಾ ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಏಪ್ರಿಲ್ 12ರಂದು ಹೊಸ ಕಾರನ್ನು ಬಿಡುಗಡೆ ಮಾಡುವ ಬಗ್ಗೆ ನಿಸ್ಸಾನ್ ಹೇಳಿಕೊಂಡಿದೆ.
ಜಪಾನ್ ಮೂಲದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾದ ನಿಸ್ಸಾನ್ ತನ್ನ ಹೊಸ ಲೆಫ್ಟ್ ಹ್ಯಾಂಡ್ ಡ್ರೈವ್ ಟೆರ್ರಾ ಆವೃತ್ತಿಯನ್ನು ಸದ್ಯ ಚೀನಾ ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಏಪ್ರಿಲ್ 12ರಂದು ಹೊಸ ಕಾರನ್ನು ಬಿಡುಗಡೆ ಮಾಡುವ ಬಗ್ಗೆ ನಿಸ್ಸಾನ್ ಹೇಳಿಕೊಂಡಿದೆ.

ಟೆರ್ರಾ ಕಾರುಗಳು ಜಪಾನ್ ಮಾರುಕಟ್ಟೆಗಳಲ್ಲಿ ದೊರೆಯುವ ಸಣ್ಣ ಎಸ್ಯುವಿ ಕಾರುಗಳಂತೆಯೇ ವಿನ್ಯಾಸಗಳನ್ನು ಒಳಗೊಂಡ ಫುಲ್ ಸೈಜ್ ಎಸ್‌ಯುವಿ ಕಾರು ಇದಾಗಿದ್ದು, ಬಾಡಿ ಆನ್ ಫ್ರೇಮ್ ಆನ್ನು ಆಧರಿಸಿರುವುದು ಮರ್ಸಿಡಿಸ್ ಎಕ್ಸ್-ಕ್ಲಾಸ್ ಪಿಕಪ್ ಹೋಲಿಕೆ ಪಡೆದಿದೆ.

ಒಟ್ಟಾರೆ ಟೆರ್ರಾ ಕಾರು ಒರಟಾದ ವಿನ್ಯಾಸವನ್ನು ಹೊಂದಿದ್ದು, 4x4 ಡ್ರೈವ್ ಟೆಕ್ನಾಲಜಿ ಹೊಂದುವ ಮೂಲಕ ಜನಪ್ರಿಯ ಎಸ್‌ಯುವಿಗಳಾದ ಫೋರ್ಡ್ ಎಂಡೀವರ್ ಮತ್ತು ಟೊಯೊಟಾ ಫಾರ್ಚೂನರ್ ಕಾರುಗಳನ್ನು ಹಿಂದಿಕ್ಕುವ ಎಲ್ಲಾ ಗುಣಲಕ್ಷಣಗಳನ್ನು ಪಡೆದುಕೊಂಡಿದೆ.

ಇನ್ನು ನಿಸ್ಸಾನ್ ನ ಸಿಗ್ನೇಚರ್ V-ಗ್ರಿಲ್, ಹೊಸದಾಗಿ ವಿನ್ಯಾಸಗೊಂಡ ಬಂಪರ್, ಎಲ್ಎಡಿ ಡೇ ಟೈಮ್ ರನ್ನಿಂಗ್ ಲೈಟ್ಸ್ ಮತ್ತು ಪ್ರೊಜೆಕ್ಟರ್ ಲೈಟ್ ಗಳನ್ನು ಹೊಂದಿದ್ದು, ಕ್ರೋಮ್ ಸ್ಟ್ರಿಪ್ ಹೊಂದಿರುವ ಟೈಲ್ ಲ್ಯಾಂಪ್ ಟೈಲ್ ಗೇಟ್ ಅನ್ನು ಆವರಿಸಿದೆ.

ಒಳವಿನ್ಯಾಸದಲ್ಲೂ ಸಾಕಷ್ಟು ಸುಧಾರಿತ ಅಂಶಗಳನ್ನು ಪಡೆದಿದ್ದು, 3 ಸೀಟಿಂಗ್ ಸಾಲುಗಳನ್ನು ಹೊಂದಿದೆ. ಹೀಗಾಗಿ 7 ಮಂದಿ ಅರಾಮದಾಯಕವಾಗಿ ಕಾರು ಪ್ರಯಾಣ ಮಾಡಬಹುದಾಗಿದ್ದು, ಡ್ಯಾಶ್ ಬೋರ್ಡ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಸ್ಟೀರಿಂಗ್ ವೀಲ್ಹ್‌ಗೆ ಸಿಲ್ವರ್ ಅಸ್ಸೆಂಟ್ಸ್ ಅನ್ನು ಪಡೆದಿದೆ.

ಎಂಜಿನ್ ಸಾಮರ್ಥ್ಯ
ಟೆರ್ರಾ ಕಾರುಗಳು 2.3-ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿರಲಿದೆ ಎನ್ನಲಾಗಿದ್ದು, ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಇಷ್ಟು ಮಾಹಿತಿ ಹೊರತುಪಡಿಸಿ ಬೇರಾವ ಮಾಹಿತಿಯನ್ನು ನಿಸ್ಸಾನ್ ಸಂಸ್ಥೆಯು ಬಹಿರಂಗಗೊಳಿಸಲಿಲ್ಲ.

ಭಾರತದಲ್ಲಿ ಬಿಡುಗಡೆ ಯಾವಾಗ?
ನಿಸ್ಸಾನ್ ಟೆರ್ರಾ ಕಾರು ಫುಲ್ ಸೈಜ್ ಎಸ್‍ಯುವಿಯಾಗಿರುವ ಹಿನ್ನೆಲೆ ಭಾರತೀಯ ಮಾರುಕಟ್ಟೆಗಳಲ್ಲಿ ಟೆರ್ರಾ ಕಾರುಗಳು ಹೊಸ ಟ್ರೆಂಡ್ ಸೃಷ್ಠಿಸುವ ಸಾಧ್ಯತೆಗಳಿವೆ. ಆದ್ರೆ ಟೆರ್ರಾ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ.

ಒಂದು ವೇಳೆ ಭಾರತದಲ್ಲಿನ ಎಸ್‍ಯುವಿ ವಿಭಾಗಕ್ಕೆ ನಿಸ್ಸಾನ್ ಟೆರ್ರಾ ಕಾಲಿಟ್ಟಿದಲ್ಲಿ ಟೆಯೊಟಾ ಫಾರ್ಚುೂನರ್, ಫೋರ್ಡ್ ಎಂಡೀವರ್, ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಮತ್ತು ಇಸುಝು ಎಂಯು-ಎಕ್ಸ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.


Click it and Unblock the Notifications