ಬಿಡುಗಡೆಗೊಂಡ ಹೊಸ ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್
ಬ್ರಿಟಿಶ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಲ್ಯಾಂಡ್ ರೋವರ್ ತನ್ನ 2018ರ ಹೊಸ ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್ ಕಾರುಗಳನ್ನು ಬಿಡುಗಡೆಗೊಳಿಸಿದೆ.
ಬ್ರಿಟಿಶ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಲ್ಯಾಂಡ್ ರೋವರ್ ತನ್ನ 2018ರ ಹೊಸ ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ರೇಂಜ್ ರೋವರ್ ಸ್ಪೋರ್ಟ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 99.48 ಲಕ್ಷ ಮತ್ತು ಪ್ರೀಮಿಯಮ್ ರೇಂಜ್ ರೋವರ್ ಕಾರು ರೂ. 1.74 ಕೋಟಿಯ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಇದೇ ಏಪ್ರಿಲ್ ತಿಂಗಳಿಂದ ಈ ಎರಡೂ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯು ಆರಂಭವಾಗಿದ್ದು, ಗ್ರಾಹಕರು ಈ ಕಾರಿನ ಖರೀದಿಗಾಗಿ ಲ್ಯಾಂಡ್ ರೋವರ್‍ನ ಅಧಿಕೃತ ವೆಬ್‍ಸೈಟ್‍ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಹೊಸ ಲ್ಯಾಂಡ್ ರೋವರ್ ಕಾರಿನ ಮಾಡಲ್‍ಗಳು ಜೆರ್ರಿ ಮೆಕ್‍ಗವರ್ನ್ ವಿನ್ಯಾಸವನ್ನು ಆಧರಿಸಿದ್ದು, ಎರಡೂ ರೇಂಜ್ ರೋವರ್ ಎಸ್‍ಯುವಿ ಕಾರುಗಳು ಆಧುನಿಕ ಪ್ಯಾಕೇಜ್ ಅನ್ನು ಪಡೆದುಕೊಂಡಿದೆ.

ವೈಶಿಷ್ಟ್ಯತೆಗಳು
ಬಿಡುಗಡೆಗೊಂಡ ರೇಂಜ್ ರೋವರ್ ಕಾರುಗಳು ಸೊಗಸಾದ ವಿನ್ಯಾಸವನ್ನು ಹೊಂದಿದೆ. ರೇಂಜ್ ರೋವರ್ ಸ್ಪೋರ್ಟ್ಸ್ ಹೆಸರಿಗೆ ತಕ್ಕ ಹಾಗೆ ಸ್ಪೋರ್ಟಿ ವಿನ್ಯಾಸವನ್ನು ಪಡೆದುಕೊಂಡಿದ್ದು, ಅಗಲವಾದ ಏರ್ ಡ್ಯಾಮ್ಸ್, ಶಾರ್ಪರ್ ಎಡ್ಜ್ ಮತ್ತು ಬ್ಲೇಕ್ಡ್ ಔಟ್ ಅಂದವನ್ನು ಹೊಂದಿದೆ.

ಜೊತೆಗೆ ಈ ಎಸ್‍ಯುವಿ ಕಾರುಗಳು ಆಫ್-ರೋಡ್ ಸಾಮರ್ಥ್ಯವನ್ನು ಪಡೆದಿದ್ದು, ವಿದ್ಯುತ್ ಏರ್ ಸಸ್ಷೆಷನ್, ಟೆರ್ರೈನ್ ರೆಸ್ಪಾನ್ಸ್ 2, ಟ್ವಿನ್ ಸ್ಪೀಡ್ ಟ್ರ್ಯಾನ್ಫರ್ ಬಾಕ್ಸ್, ವಿದ್ಯುನ್ಮಾನ ಕೇಂದ್ರದ ಭೇದಾತ್ಮಕತೆ, ಅಡಾಪ್ಟಿವ್ ಡೈನಾಮಿಕ್ಸ್ ಎಂಬ ವೈಶಿಷ್ಟ್ಯತೆಗಳಿಂದ ಕಾರಿನ ಚಾಲನೆ ಆರಾಮಾದಾಯಕವಾಗಿರಲಿದೆ.

ಕಾರಿನ ಒಳಭಾಗದ ಬಗ್ಗೆ ಹೇಳುವುದಾದರೆ, ಟಚ್ ಪ್ರೋ ಡ್ಯೊ ಡ್ಯುಯಲ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಅಳವಡಿಸಲಾಗಿದ್ದು, ಈ ವ್ಯವಸ್ಥೆಯು ಡ್ಯಾಶ್ ಬೋರ್ಡ್‍ನ ಪ್ರಮುಖ ಭಾಗವನ್ನು ರೂಪಿಸುತ್ತದೆ ಮತ್ತು ರೋಟರಿ ಕ್ನಾಬ್ಸ್ ಗಳಿಂದ ನಿಯಂತ್ರಿಸಬಹುದಾದ ಬಹಳಷ್ಟು ಕಾರ್ಯಗಳನ್ನು ಅಳವಡಿಸುತ್ತದೆ. ಹಾಗು 12.3 ಇಂಚಿನ ಡಿಜಿಟಲ್ ಇನ್ಸ್ಟ್ರೂಮೆಂಟ್ ಕಂಸೋಲ್ ಅಡ್ವಾನ್ಸ್ಡ್ ರಿಯಲ್ ಟೈಮ್ ಡೆಟಾವನ್ನು ತೋರಿಸುತ್ತದೆ.

ಎಂಜಿನ್ ಸಾಮರ್ಥ್ಯ
ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್ ಕಾರುಗಳು 3.0 ಲೀಟರ್ ಸೂಪರ್‍ಚಾರ್ಜ್ಡ್ ವಿ6 ಪೆಟ್ರೋಲ್, 5.0 ಲೀಟರ್ ಸೂಪರ್‍ಚಾರ್ಜ್ಡ್ ವಿ8 ಪೆಟ್ರೋಲ್, 3.0 ಲೀಟರ್ ವಿ6 ಡೀಸೆಲ್ ಮತ್ತು 4.4 ಲೀಟರ್ ವಿ8 ಡೀಸೆಲ್ ಎಂಜಿನ್ ಎಂಬ ನಾಲ್ಕು ಎಂಜಿನ್ ಆಯ್ಕೆಗಳನ್ನು ಪಡೆದಿದ್ದು, ಎಂಜಿನ್‍ಗಳನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ವಿ6 ಪೆಟ್ರೋಲ್ ಎಂಜಿನ್ 335 ಬಿಹೆಚ್‍ಪಿ ಮತ್ತು 450ಎನ್ಎಮ್ ಟಾರ್ಕ್, ವಿ6 ಡೀಸೆಲ್ ಎಂಜಿನ್ 190ಬಿಹೆಚ್‍ಪಿ ಮತ್ತು 255ಎನ್ಎಮ್ ಟಾರ್ಕ್, ವಿ8 ಡೀಸೆಲ್ ಏಂಜಿನ್ 250ಬಿಹೆಚ್‍ಪಿ ಮತ್ತು 740ಎನ್ಎಮ್ ಟಾರ್ಕ್ ಮತ್ತು ವಿ8 ಪೆಟ್ರೋಲ್ ಎಂಜಿನ್ 518 ಬಿಹೆಚ್‍ಪಿ ಮತ್ತು 625ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ರೇಂಜ್ ರೋವರ್ ಸ್ಪೋರ್ಟ್ ಕಾರು ವೋಲ್ವೊ ಎಕ್ಸ್ ಸಿ90, ಆಡಿ ಕ್ಯೂ7 ಮತ್ತು ಮರ್ಸಿಡಿಸ್ ಬೆಂಝ್ ಜಿಎಲ್ಎಕ್ಸ್ ಕಾರುಗಳಿಗೆ ಪೈಪೋಟಿ ನೀಡಿದರೆ ಇನ್ನು ಹೊಸ ರೇಂಜ್ ರೋವರ್ ಕಾರು ಫೋರ್ಷೆ ಕಯೆನ್ನೆ, ಜಾಗ್ವಾರ್ ಎಫ್ ಫೇಸ್ ಮತ್ತು ಜೀಪ್ ಗ್ರ್ಯಾಂಡ್ ಚೆರೊಕೀ ಕಾರುಗಳಿಗೆ ಪೈಪೋಟಿ ನೀಡಲಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಎಸ್‍ಯುವಿ ವಿಷಯಗಳಿಗೆ ಬಂದಾಗ, ರೇಂಜ್ ರೋವರ್ ಯಾವಾಗಲೂ ಅತ್ಯಂತ ಜನಪ್ರಿಯ ಹೆಸರುಗಳಲ್ಲಿ ಒಂದಾಗಿದ್ದು, 70 ವರ್ಷಗಳಷ್ಟು ಹಳೆಯದಾದ ಲ್ಯಾಂಡ್ ರೋವರ್ ಮತ್ತೊಮ್ಮೆ ಆನ್-ರೋಡ್ ಮತ್ತು ಆಫ್-ರೋಡ್ ಶ್ರೇಷ್ಠತೆಯ ಉತ್ತಮ ಪ್ಯಾಕೇಜ್ ಅನ್ನು ತಂದಿದೆ.


Click it and Unblock the Notifications








