ಬಿಡುಗಡೆಯಾಗಲಿರುವ ರೆನಾಲ್ಟ್‌ ಮಿನಿ ಎಂಪಿವಿ ಕಾರು ಹೇಗಿರಲಿದೆ?

ರೆನಾಲ್ಟ್ ಇಂಡಿಯಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ತನ್ನ ಹೊಚ್ಚ ಹೊಸ ಮಿನಿ ಎಂಪಿವಿ ಕಾರು ಮಾದರಿಯನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಆರ್‍‌ಬಿಸಿ ಕೋಡ್‌ನೆಮ್‌ನೊಂದಿಗೆ ಹೊಸ ಕಾರಿನ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ.

ಬಿಡುಗಡೆಯಾಗಲಿರುವ ರೆನಾಲ್ಟ್‌ ಮಿನಿ ಎಂಪಿವಿ ಕಾರು ಹೇಗಿರಲಿದೆ?

ಮಧ್ಯಮ ಗಾತ್ರದ ಹಲವು ಕಾರು ಮಾದರಿಗಳನ್ನು ಬಿಡುಗಡೆಗೊಳಿಸಿ ಯಶಸ್ವಿಯಾಗಿರುವ ರೆನಾಲ್ಟ್ ಸಂಸ್ಥೆಯು ಲೊಡ್ಜಿ ಎಂಪಿವಿ ಕಾರುಗಳ ಮಾರಾಟದಲ್ಲಿ ತುಸು ಹಿನ್ನೆಡೆ ಅನುಭವಿಸಿತ್ತು. ಹೀಗಾಗಿ ಹೊಸ ಕಾರು ಉತ್ಪನ್ನದೊಂದಿಗೆ ಮತ್ತೊಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿರುವ ರೆನಾಲ್ಟ್ ಸಂಸ್ಥೆಯು ಈ ಬಾರಿ 7 ಸೀಟರ್ ಮಾದರಿಯ ಮಿನಿ ಎಂಪಿವಿ ಕಾರು ಮಾದರಿಯೊಂದನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ಬಿಡುಗಡೆಯಾಗಲಿರುವ ರೆನಾಲ್ಟ್‌ ಮಿನಿ ಎಂಪಿವಿ ಕಾರು ಹೇಗಿರಲಿದೆ?

ರೆನಾಲ್ಟ್ ಇಂಡಿಯಾ ಸಂಸ್ಥೆಯು ಭಾರತದಲ್ಲಿ ತನ್ನ ಹೊಸ ಎಂಪಿವಿ ಕಾರುನ್ನು ಆರ್‌ಬಿಸಿ ಎನ್ನುವ ಕೋಡ್ ಆಧಾರ ಮೇಲೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಬಗೆಗೆ ಕೆಲವು ಮಹತ್ವದ ಮಾಹಿತಿಗಳು ಲಭ್ಯವಾಗಿವೆ.

ಬಿಡುಗಡೆಯಾಗಲಿರುವ ರೆನಾಲ್ಟ್‌ ಮಿನಿ ಎಂಪಿವಿ ಕಾರು ಹೇಗಿರಲಿದೆ?

ರೆನಾಲ್ಟ್ ಹೊಸ ಮಿನಿ ಎಂಪಿವಿ ಕಾರು ಕ್ವಿಡ್‌ ಕಾರಿಗಿಂತ ದೊಡ್ಡದಾಗಿದ್ದು, ಲೊಡ್ಜಿ ಕಾರಿಗಿಂತ ಚಿಕ್ಕದಾದ ಗಾತ್ರದೊಂದಿಗೆ ಉತ್ತಮ ತಾಂತ್ರಿಕ ಅಂಶಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುವ ನೀರಿಕ್ಷೆಯಿದೆ.

ಬಿಡುಗಡೆಯಾಗಲಿರುವ ರೆನಾಲ್ಟ್‌ ಮಿನಿ ಎಂಪಿವಿ ಕಾರು ಹೇಗಿರಲಿದೆ?

ತಮಿಳುನಾಡಿನ ಪ್ರಮುಖ ಕಡೆಗಳಲ್ಲಿ ರೆನಾಲ್ಟ್ ಹೊಸ ಎಂಪಿವಿ ಕಾರು ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ರೆನಾಲ್ಟ್ ಸಂಸ್ಥೆಯ ಸಿಎಂಎಫ್ ಎ ಪ್ಲಸ್ ಕಾರು ಉತ್ಪಾದನಾ ಪ್ಯಾರ್ಟ್‌ಫಾರ್ಮ್ ಅಡಿಯಲ್ಲಿ ಈ ಹೊಸ ಕಾರನ್ನು ಅಭಿವೃದ್ಧಿ ಮಾಡಲಾಗಿದೆಯೆಂತೆ.

MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಬಿಡುಗಡೆಯಾಗಲಿರುವ ರೆನಾಲ್ಟ್‌ ಮಿನಿ ಎಂಪಿವಿ ಕಾರು ಹೇಗಿರಲಿದೆ?

ಎಂಪಿವಿ ಮಾದರಿಗಳಲ್ಲೇ ಸಣ್ಣ ಗಾತ್ರದ ಕಾರು ಆವೃತ್ತಿಯಾಗಿರುವ ರೆನಾಲ್ಟ್ ಹೊಸ ಕಾರು ಬೆಲೆ ಮತ್ತು ಎಂಜಿನ್ ಗಾತ್ರದಲ್ಲೂ ತುಸು ಬದಲಾವಣೆಯೊಂದಿಗೆ ಗ್ರಾಹಕರನ್ನು ಸೆಳೆಯುವ ವಿಶ್ವಾಸದಲ್ಲಿದ್ದು, ಲೊಡ್ಜಿ ಕಾರುಗಳ ಮಾರಾಟದಲ್ಲಿ ಆದ ಹಿನ್ನಡೆಯನ್ನು ಈ ಕಾರಿನ ಮೂಲಕ ಗ್ರಾಹಕರ ಬೇಡಿಕೆಯನ್ನು ಕಾಯ್ದುಕೊಳ್ಳಲು ಇದು ನೆರವಾಗಲಿದೆ.

ಬಿಡುಗಡೆಯಾಗಲಿರುವ ರೆನಾಲ್ಟ್‌ ಮಿನಿ ಎಂಪಿವಿ ಕಾರು ಹೇಗಿರಲಿದೆ?

ಮೂಲಗಳ ಪ್ರಕಾರ, 7 ಸೀಟರ್ ಸೌಲಭ್ಯವನ್ನು ಹೊಂದಿರುವ ರೆನಾಲ್ಟ್ ಹೊಸ ಎಂಪಿವಿ ಕಾರು ಗುಣಮಟ್ಟ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದ್ದು, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಲ್‌ಇಡಿ ಡಿಆರ್‌ಎಸ್ ಸೌಲಭ್ಯಗಳು ಇದರಲ್ಲಿವೆ.

ಬಿಡುಗಡೆಯಾಗಲಿರುವ ರೆನಾಲ್ಟ್‌ ಮಿನಿ ಎಂಪಿವಿ ಕಾರು ಹೇಗಿರಲಿದೆ?

ಎಂಜಿನ್ ಸಾಮರ್ಥ್ಯ

ಹೊಸ ಕಾರುಗಳಲ್ಲಿ 1.0-ಲೀಟರ್ ಅಥವಾ 1.2-ಲೀಟರ್ ಪೆಟ್ರೋಲ್ ಎಂಜಿನ್ ಒದಗಿಸುವ ಸಾಧ್ಯತೆಗಳಿವೆ. ಇಲ್ಲಿ ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ರೆನಾಲ್ಟ್ ಸಂಸ್ಥೆಯು ತನ್ನ ಹೊಸ ಕಾರುಗಳಲ್ಲಿ ಡಿಸೇಲ್ ಎಂಜಿನ್ ಒದಗಿಸದಿರಲು ನಿರ್ಧರಿಸಿದೆಯೆಂತೆ.

ಬಿಡುಗಡೆಯಾಗಲಿರುವ ರೆನಾಲ್ಟ್‌ ಮಿನಿ ಎಂಪಿವಿ ಕಾರು ಹೇಗಿರಲಿದೆ?

ಕಾರಿನ ಬೆಲೆ ಮತ್ತು ಬಿಡುಗಡೆ ಮಾಹಿತಿ

ಕಾರಿನ ಗುಣಮಟ್ಟ ಮತ್ತು ಎಂಜಿನ್ ಸಾಮರ್ಥ್ಯವನ್ನು ನೋಡಿದಾಗ ಹೊಸ ಕಾರಿನ ಬೆಲೆಯು ರೂ. 6 ಲಕ್ಷದಿಂದ ರೂ. 8 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಹೊಸ ಕಾರುಗಳು 2019ರ ಮೊದಲ ತ್ರೈಮಾಸಿಕ ಅವಧಿಗೆ ಖರೀದಿಗೆ ಲಭ್ಯವಾಗುವ ಬಗ್ಗೆ ಟೀಂ-ಬಿಎಚ್‌ಪಿ ಸುದ್ದಿಸುದ್ದಿ ಸಂಸ್ಥೆಯು ವರದಿ ಮಾಡಿದೆ.

MOST READ: ಟ್ರಾಫಿಕ್ ಪೊಲೀಸ್‍‍ರಿಂದ ತಪ್ಪಿಸಿಕೊಳ್ಳಬಹುದು ಆದ್ರೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.!

ಬಿಡುಗಡೆಯಾಗಲಿರುವ ರೆನಾಲ್ಟ್‌ ಮಿನಿ ಎಂಪಿವಿ ಕಾರು ಹೇಗಿರಲಿದೆ?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕ್ವಿಡ್ ಕಾರುಗಳ ಡಿಸೈನ್ ಆಧಾರಿತ ಹೊಸ ರೆನಾಲ್ಟ್ ಕಾರುಗಳು 7 ಸೀಟರ್ ವ್ಯವಸ್ಥೆಯಿಂದಾಗಿ ಮಾರುಕಟ್ಟೆಯಲ್ಲಿ ಯಶಸ್ವಿಯಾಗುವ ಸಾಧ್ಯತೆಗಳಿದ್ದು, ಉತ್ತಮ ತಾಂತ್ರಿಕ ಅಂಶಗಳೊಂದಿಗೆ ಕೈಗೆಟುಕುವ ಬೆಲೆಗಳಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡಿದಲ್ಲಿ ಹೊಸ ಸಂಚಲನವನ್ನೇ ಸೃಷ್ಠಿಸಬಹುದು.

ಟಾಟಾ ಸಂಸ್ಥೆಯು ಬಿಡುಗಡೆ ಮಾಡಿರುವ ಹೊಚ್ಚ ಹೊಸ ಟಾಟಾ ಟಿಯಾಗೊ ಎನ್ಆರ್‌ಜಿ ಎಡಿಷನ್ ಕಾರುಗಳ ಫೋಟೋ ಗ್ಯಾಲರಿ...

More from DriveSpark

Article Published On: Friday, September 14, 2018, 13:37 [IST]
English summary
Renault RBC Mini MPV spotted Again.
Read more on renault mpv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+