ಆಟೋ ಎಕ್ಸ್‌ಪೋ 2018: ಬರಲಿದೆ ರೆನಾಲ್ಟ್ ಹೊಸ ಜೊಯ್ ಇ-ಸ್ಪೋರ್ಟ್ ಕಾರು
ಫ್ರಾನ್ಸ್ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ರೆನಾಲ್ಟ್ ತನ್ನ ಹೊಸ ಜೊಯ್ ಇ-ಸ್ಪೋರ್ಟ್ ಕಾರಿನ ಪರಿಕಲ್ಪನೆಯನ್ನು 2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಲಾಗಿದೆ.
ಫ್ರಾನ್ಸ್ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ರೆನಾಲ್ಟ್ ತನ್ನ ಹೊಸ ಜೊಯ್ ಇ-ಸ್ಪೋರ್ಟ್ ಕಾರಿನ ಪರಿಕಲ್ಪನೆಯನ್ನು 2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇದು ಭಾರತದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ.

ರೆನಾಲ್ಟ್ ಜೊಯ್ ಇ-ಸ್ಪೋರ್ಟ್ ಕಾರು 456-ಬಿಹೆಚ್ ಪಿ ಮತ್ತು 640-ಎನ್ಎಂ ಟಾರ್ಕ್‌ನ್ನು ಕಾರಿನ ನಾಲ್ಕು ಚಕ್ರಗಳಿಗೆ ರವಾನಿಸುವ ಗುಣಹೊಂದಿದ್ದು, 1.4ಟನ್ ತೂಕದೊಂದಿಗೆ ಕಾರ್ಬನ್ ಫೈಬರ್ ಮತ್ತು ಸ್ಟೀಲ್ ರೋಲ್ ಕೇಜ್‌ನೊಂದಿಗೆ ನಿರ್ಮಾಣ ಮಾಡಲಾಗಿದೆ.

ಇನ್ನು ಜೊಯ್ ಇ-ಸ್ಪೋರ್ಟ್ ಕಾರು 3.2 ಸೆಕೆಂಡಿಗೆ 100kph, 10ಸೆಕೆಂಡಿಗೆ 209kph ಟಾಪ್ ಸ್ಪೀಡ್‌ನಲ್ಲಿ ಚಲಿಸಬಲ್ಲ ಎಂಜಿನ್ ಹೊಂದಿದ್ದು, 40 ಕಿಲೋ ವ್ಯಾಟ್ ಬ್ಯಾಟರಿ ಪವರ್ ಹೊಂದಿದೆ. ಮತ್ತು ನೀರು ಮತ್ತು ಏರ್ ಕೂಲಿಂಗ್ ಸಿಸ್ಟಂ ಅನ್ನು ಕೂಡ ಹೊಂದಿದೆ.

ರೆನಾಲ್ಟ್ ಜೊಯ್ ಇ-ಸ್ಪೋರ್ಟ್ ಟೋರ್ಕ್ ಎಂಜಿನಿಯರಿಂಗ್ ನಿರ್ಮಿಸಿದ ಬೆಸ್ಪೋಕ್ ಚಾಸಿಸ್ ಆಗಿದ್ದು, ಓಲಿನ್ ನಿಂದ ನಾಲ್ಕು-ರೀತಿಯಲ್ಲಿ ಹೊಂದಾಣಿಕೆಯ ಆಘಾತ ಅಬ್ಸಾರ್ಬರ್ಗಳನ್ನು ಒಳಗೊಂಡಿರುವ 'ಡಬಲ್ ಟ್ರೈಯಾಂಗಲ್' ಫ್ರಂಟ್ ಮತ್ತು ಹಿಂಭಾಗದ ಅಮಾನತು ಸೆಟಪ್, 20 ಇಂಚಿನ ಮಿಶ್ರಲೋಹದ ಚಕ್ರಗಳ ಅಳವಡಿಕೆ ಇದೆ.

ಹಾಗೆಯೇ ಕಾರಿನ ಒಳಾಂಗಣಗಳು ರೆಕಾರ್ವೊ ಬಕೆಟ್ ಸೀಟ್‌ಗಳೊಂದಿಗೆ ರೇಂಜ್ ಹಾರ್ನೆಸ್, ಆಯತಾಕಾರದ ಸ್ಟಿರಿಂಗ್ ಚಕ್ರದೊಂದಿಗೆ ಹೆಚ್ಚು ಮಿತವ್ಯಯವನ್ನು ಹೊಂದಿರುತ್ತವೆ. ಸ್ಕ್ವೇರ್ ಡಿಸ್ಪ್ಲೆ ಐದು ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದೆ.

ಈ ಮೂಲಕ ಎಲೆಕ್ಟ್ರಿಕ್ ಕಾರುಗಳ ಸರಣಿಯಲ್ಲಿ ರೆನಾಲ್ಟ್ ಜೊಯ್ ಇ-ಸ್ಪೋರ್ಟ್ಸ್ ಕಾರು ಯುವ ಸ್ಪೋರ್ಟ್ಸ್ ರೈಡರ್ ಗಳಿಗೆ ಹೊಸ ಆಯಾಮ ನೀಡಲಿದ್ದು, ಬಿಡುಗಡೆಯ ನಂತರ ಭಾರತದಲ್ಲಿ ಯಾವ ರೀತಿಯ ಬದಲಾವಣೆಯನ್ನು ಉಂಟುಮಾಡಲಿದೆ ಎಂದು ಕಾದು ನೋಡಬೇಕಾಗಿದೆ.


Click it and Unblock the Notifications








