2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

Written By:

ಫೆಬ್ರುವರಿ 7ರಿಂದ 14ರ ತನಕ ರಾಜಧಾನಿ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್‌ಪೋ ಹತ್ತಾರು ವಿಶೇಷತೆಗಳಿಗೆ ಕಾರಣವಾಯ್ತು. ದೇಶದ ಪ್ರಮುಖ ಆಟೋ ಉತ್ಪಾದಕರು ಸಾಂಪ್ರದಾಯಿಕ ಕಾರು ಮಾದರಿಗಳ ಜೊತೆ ಜೊತೆಗೆ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಕೆಲವು ಕ್ರೇಜಿ ಕಾರು ಮಾಡೆಲ್‌ಗಳನ್ನು ಪ್ರದರ್ಶನ ಮಾಡಿದ್ದು ಕಾರು ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿವೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ರೆನಾಲ್ಟ್ ಇ ಕಾನ್ಸೆಪ್ಟ್

ಫ್ರಾನ್ಸ್ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ರೆನಾಲ್ಟ್ ತನ್ನ ಹೊಸ ಇ ಕಾನ್ಸೆಪ್ಟ್ ಕಾರಿನ ಪರಿಕಲ್ಪನೆಯನ್ನು 2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇದು ಭಾರತದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಇ ಕಾನ್ಸೆಪ್ಟ್ ಕಾರು ಮಾದರಿಯು ಕೇವಲ 3.2 ಸೆಕೆಂಡಿಗೆ 100kph, 10ಸೆಕೆಂಡಿಗೆ 209kph ಟಾಪ್ ಸ್ಪೀಡ್‌ನಲ್ಲಿ ಚಲಿಸಬಲ್ಲ ಎಂಜಿನ್ ಹೊಂದಿದ್ದು, 40 ಕಿಲೋ ವ್ಯಾಟ್ ಬ್ಯಾಟರಿ ಪವರ್ ಹೊಂದಿದೆ. ಮತ್ತು ನೀರು ಮತ್ತು ಏರ್ ಕೂಲಿಂಗ್ ಸಿಸ್ಟಂ ಅನ್ನು ಕೂಡ ಹೊಂದಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ರೆನಾಲ್ಟ್ ಇ ಕಾನ್ಸೆಪ್ಟ್ ಮಾದರಿಯು ಎಂಜಿನಿಯರಿಂಗ್ ನಿರ್ಮಿಸಿದ ಬೆಸ್ಪೋಕ್ ಚಾಸಿಸ್ ಆಗಿದ್ದು, ಓಲಿನ್ ನಿಂದ ನಾಲ್ಕು-ರೀತಿಯಲ್ಲಿ ಹೊಂದಾಣಿಕೆಯ ಆಘಾತ ಅಬ್ಸಾರ್ಬರ್ಗಳನ್ನು ಒಳಗೊಂಡಿರುವ 'ಡಬಲ್ ಟ್ರೈಯಾಂಗಲ್' ಫ್ರಂಟ್ ಮತ್ತು ಹಿಂಭಾಗದ ಅಮಾನತು ಸೆಟಪ್‌, 20 ಇಂಚಿನ ಮಿಶ್ರಲೋಹದ ಚಕ್ರಗಳ ಅಳವಡಿಕೆ ಇದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಮಾರುತಿ ಸುಜುಕಿ ಇ-ಸರ್ವೈವರ್

ಸುಸ್ಥಿರ ಪರಿಸರಕ್ಕಾಗಿನ ತನ್ನ ಬದ್ಧತೆಯನ್ನು ಮಾರುತಿ ಸುಜುಕಿ ವ್ಯಕ್ತಪಡಿಸಿದೆ. ನೂತನ ಸುಜುಕಿ ಇ-ಸರ್ವೈವರ್ ಕಾರು ಎರಡು ಸೀಟುಗಳ ಓಪನ್ ಟಾಪ್ ಕ್ರೀಡಾ ಬಳಕೆಯ ವಿದ್ಯುತ್ ಚಾಲಿತ ವಾಹನವಾಗಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಹಗುರ ಭಾರ, ಭವಿಷ್ಯತ್ತಿನ ವಿನ್ಯಾಸ ನೀತಿ, ಹೆಚ್ಚು ಗ್ರೌಂಡ್ ಕ್ಲಿಯರನ್ಸ್, ಶಕ್ತಿಶಾಲಿ ಎಂಜಿನ್, ಅದ್ಭುತ ರಸ್ತೆ ಸಾನಿಧ್ಯ ಹಾಗೂ ಚಾಲನಾ ಸಾಮರ್ಥ್ಯ, ಗರಿಷ್ಠ ಸುರಕ್ಷತೆ ಹಾಗೂ ವೈಶಿಷ್ಟ್ಯಗಳು ಕಂಡುಬರಲಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಕೇಂದ್ರ ಸರಕಾರವು 2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವ ಮಹತ್ತರ ಯೋಜನೆಯನ್ನು ಇಟ್ಟುಕೊಂಡಿದೆ. ಇದೀಗ 2020ರ ವೇಳೆಯಾಗುವಾಗ ವಿದ್ಯುತ್ ಕಾರನ್ನು ಬಿಡುಗಡೆ ಮಾಡುವ ಯೋಜನೆಯನ್ನು ಮಾರುತಿ ಹೊಂದಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಮಹೀಂದ್ರಾ ಟಿಯುವಿ300 ಸ್ಟಿಂಗರ್

ಪ್ರಯಾಣಿಕ ಕಾರು ವಿಭಾಗದಲ್ಲಿ ಹೊಸ ಹೊಸ ಪರಿಕಲ್ಪನೆಗಳನ್ನು ಅಭಿವೃದ್ಧಿ ಮಾಡುತ್ತಿರುವ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯು 2018ರ ಆಟೋ ಎಕ್ಸ್ ಪೋದಲ್ಲಿ ವಿನೂತನ ಕನ್ವರ್ಟಬಲ್ ಡ್ರಾಪ್ ಟಾಪ್ ಎಸ್‌ಯುವಿ ಮಾದರಿಯೊಂದನ್ನು ಪ್ರದರ್ಶನಗೊಳಿಸಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಮಹೀಂದ್ರಾ ಹೇಳಿಕೊಂಡಿರುವ ಪ್ರಕಾರ ಎಸ್‌ಯುವಿ ಮಾದರಿಗಳಲ್ಲೇ ಇದೊಂದು ವಿಶೇಷ ಡ್ರಾಪ್ ಟಾಪ್ ಕಾರು ಆವೃತ್ತಿಗಳಾಗಿದ್ದು, ಕೇವಲ ಸೆಡಾನ್‌ ಕಾರುಗಳಲ್ಲಿ ಅಷ್ಟೇ ಅಲ್ಲದೇ ಎಸ್‌ಯುವಿ ಆವೃತ್ತಿಯಲ್ಲೂ ಡ್ರಾಪ್ ಟಾಪ್ ವರ್ಷನ್‌ಗಳನ್ನು ಹೇಗೆ ನಿರ್ಮಾಣ ಮಾಡಬಹುದು ಎಂಬುವುದು ಮಹೀಂದ್ರಾ ತೊರಿಸಿಕೊಟ್ಟಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಹೀಗಾಗಿ ಲೈಫ್ ಸ್ಟೈಲ್ ಗ್ರಾಹಕರಿಗೆ ಇದೊಂದು ಆಯ್ಕೆಯಾಗಲಿದ್ದು, ಈ ಹಿಂದಿನ ಟಿಯುವಿ ಎಸ್‌ಯುವಿ ಸರಣಿಯ ಎಂ-ಹ್ವಾಕ್ ಟರ್ಬೋ ಡೀಸೆಲ್ ಎಂಜಿನ್‌ಗಳನ್ನು ಈ ಹೊಸ ಕಾರಿನಲ್ಲೂ ಬಳಕೆ ಮಾಡಲಾಗಿದೆ.

ಬಿಡುಗಡೆ(ಅಂದಾಜು)- 2018ರ ಅಂತ್ಯಕ್ಕೆ

ಬೆಲೆ(ಅಂದಾಜು)- 12 ರಿಂದ 16 ಲಕ್ಷ

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಮಾರುತಿ ಸುಜುಕಿ ಫ್ಯೂಚರ್ ಎಸ್ ಕಾನ್ಸೆಪ್ಟ್

ಮಾರುತಿ ಸುಜುಕಿ ಸಂಸ್ಥೆಯು ಮುಂಬರುವ ದಿನಗಳಲ್ಲಿ ವಿನೂತನ ಎಸ್‌ಯುವಿ ಮಾದರಿಯಾದ ಫ್ಯೂಚರ್ ಎಸ್ ಕಾನ್ಸೆಪ್ಟ್ ಮಾದರಿಯು ಹಲವು ವಿಶೇಷತೆಗಳಿಂದ ಕೂಡಿದ್ದು, '2018ರ ಆಟೋ ಎಕ್ಸ್ ಪೋ'ದ ಪ್ರಮುಖ ಆಕರ್ಷಣೆಯಾಗಿದ್ದು ಮಾತ್ರ ಸುಳ್ಳಲ್ಲ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

2020ರ ವೇಳೆಗೆ ಫ್ಯೂಚರ್ ಎಸ್ ಎಸ್‌ಯುವಿ ಕಾರುಗಳ ಉತ್ಪಾದನೆ ಕೈಗೊಳ್ಳಲಿರುವ ಮಾರುತಿ ಸುಜುಕಿಯ ತ್ರಿ ಡೋರ್ ಮಾದರಿಯಲ್ಲಿ ಹೊಸ ಕಾರನ್ನು ಸಿದ್ಧಗೊಳಿಸಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲಿ ಅತ್ಯುತ್ತಮ ಬೇಡಿಕೆ ಪಡೆಯುವ ತವಕದಲ್ಲಿವೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಇನ್ನು ಮಾರುತಿ ಸುಜುಕಿ ಪರಿಚಯಿಸಲಿರುವ ಕಾನ್ಸೆಪ್ಟ್ ಫ್ಯೂಚರ್ ಎಸ್ ಮಾದರಿಗಳು ಸಿಕ್ ಗ್ರಿಲ್ ಕೂಡಾ ಹೊಂದಿದ್ದು, ಹೊಸ ಕಾರುಗಳು ಎಲ್ಇಡಿ ಹೆಡ್‌ಲೈಟ್ಸ್, ವಿಂಡ್ ಬಾರ್ಡರ್‌ಗಳಲ್ಲಿ ಬಿಳಿ ಬಣ್ಣದ ಪಟ್ಟಿಗಳು ಕಾರಿನ ಲುಕ್ ಮತ್ತಷ್ಟು ಹೆಚ್ಚಿಸಿವೆ.

ಬಿಡುಗಡೆ(ಅಂದಾಜು)- 2019ರ ಮಧ್ಯಂತರ

ಬೆಲೆ(ಅಂದಾಜು)- 8 ರಿಂದ 10 ಲಕ್ಷ

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ರೆನಾಲ್ಟ್ ಟ್ರೆಜೊರ್ ಪರಿಕಲ್ಪನೆ

ರೆನಾಲ್ಟ್ ಸಿದ್ಧಪಡಿಸಿರುವ ಟ್ರೆಜೊರ್ ಸೂಪರ್ ಕಾರು ಸದ್ಯ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದು, ಹತ್ತು ಹಲವು ಸುಧಾರಿತ ತಂತ್ರಜ್ಞಾನಗಳ ಸೌಲಭ್ಯ ಹೊಂದಿದೆ. ಜೊತೆಗೆ ಕಾರಿನ ವಿನ್ಯಾಸಗಳು ನೋಡುಗರನ್ನು ನಿಬ್ಬೆರಗಾಗುವಂತೆ ಮಾಡುತ್ತಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ವಿಶೇಷ ವಿನ್ಯಾಸ ಹೊಂದಿರುವ ಹಿನ್ನೆಲೆ ಕೇವಲ ಇಬ್ಬರು ಮಾತ್ರ ಪ್ರಯಾಣ ಮಾಡಬಹುದಾಗಿದ್ದು, ಆಟೋಮೊನಸ್(ಚಾಲಕ ರಹಿತ) ತಂತ್ರಜ್ಞಾನ ಕೂಡಾ ಈ ಕಾರಿನಲ್ಲಿ ಲಭ್ಯವಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಕೇವಲ 4 ಸೇಕೆಂಡುಗಳಲ್ಲಿ 100 ಕಿ.ಮಿ ವೇಗ ಪಡೆದುಕೊಳ್ಳಬಲ್ಲ ಸಾಮರ್ಥ್ಯ ಹೊಂದಿರುವ ಟ್ರೆಜೊರ್, ಸಾಮಾನ್ಯ, ಸ್ಪೋರ್ಟ್ಸ್ ಮತ್ತು ಆಟೋಮೊನಸ್‌ ಮೂಡ್‌ಗಳಲ್ಲಿ ಕಾರು ಚಾಲನೆ ಮಾಡಬಹುದಾಗಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಯುನಿಟಿ ಒನ್

ಸ್ವಿಡನ್ ಮೂಲದ ಯುನಿಟಿ ಒನ್ ಸಂಸ್ಥೆಯು ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು 2018ರ ಆಟೋ ಎಕ್ಸ್‌ಪೋ ಮೇಳದಲ್ಲಿ ಬಿಡುಗಡೆಗೊಳಿಸಿದ್ದು, ಈ ಕಾರಿನ ಬೆಲೆಯನ್ನ ರೂ. 7.14 ಲಕ್ಷಕ್ಕೆ ನಿಗದಿಪಡಿಸಲಾಗಿದೆ, ಬುಕ್ಕಿಂಗ್ ಗಾಗಿ 10,000 ಸಾವಿರ ಹಣವನ್ನು ನೀಡಬೇಕಾಗಿದ್ದು, ಹಾಗೆಯೇ ಸಂಸ್ಥೆಯು ಶೇಕಡ 100 ರಷ್ಟು ರೀ ಫಂಡ್ ಕೂಡ ನೀಡಲಿದೆ ಎಂದು ಸಂಸ್ಥೆಯು ಹೇಳಿಕೊಂಡಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಯುನಿಟಿ ಒನ್ ಸಾಧಾರಣ ಹಾಗೂ ನಯವಾದ ವಿನ್ಯಾಸಗಳನ್ನು ಹೊಂದಿದ್ದು, ಸಂಪೂರ್ಣವಾಗಿ ಮುಚ್ಚಿದ ಚಕ್ರಗಳುಳ್ಳ ವಾಯುಬಲ ವೈಜ್ಞಾನಿಕ ವಿನ್ಯಾಸದೊಂದಿಗೆ ಮಹಿಂದ್ರಾ ಇ2ಒ ಕಾರನ್ನು ಹೋಲುತ್ತದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಇಬ್ಬರು ಕೂರಬಹುದಾದ ಕಾರನ್ನು ಮಾತ್ರ ಪ್ರದರ್ಶನಗೊಳಿಸಿದ್ದು, 5 ಸೀಟರ್ ಕಾರನ್ನು ವರ್ಚುವಲ್ ರಿಯಾಲಿಟಿ ಮಾದರಿಯಲ್ಲಿ ಪ್ರದರ್ಶನಗೊಳಿಸಲಾಗಿದೆ. 2 ಆಸನವುಳ್ಳ ಕಾರನ್ನು 2019ರಲ್ಲಿ ಮಾರುಕಟ್ಟೆಗೆ ಪರಿಚಯಿಸಲ್ಲಿದ್ದು, 5 ಆಸನವುಳ್ಳ ಕಾರನ್ನು 2020ರಲ್ಲಿ ಪರಿಚಯಿಸುತ್ತೇವೆ ಎಂದು ಸಂಸ್ಥೆ ಹೇಳಿಕೊಂಡಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಟಾಟಾ ಟಮೋ ರೆಸ್‌ಮೋ

ವಿಶ್ವದಾದ್ಯಂತ ಯುವಜನತೆಯಲ್ಲಿ ಸ್ಪೋರ್ಟ್ಸ್ ಕಾರುಗಳ ಕ್ರೇಜ್ ಹೆಚ್ಚುತ್ತಿರುವಂತೆಯೇ ಇದಕ್ಕೆ ಪೂರಕವಾಗಿ ಎಲ್ಲ ಆಟೋಮೊಬೈಲ್ ಸಂಸ್ಥೆಗಳು ಒಂದರ ಹಿಂದೊಂದು ವಿನೂತನ ಸ್ಪೋರ್ಟ್ಸ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಟಾಟಾ ಮೋಟಾರ್ಸ್ ಕೂಡಾ ಇದಕ್ಕೆ ಹೊರತಾಗಿಲ್ಲ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಇತ್ತೀಚೆಗಷ್ಟೇ ಸ್ವಿಜರ್ಲೆಂಡ್​ನ ಜೀನಿವಾದಲ್ಲಿ ನಡೆದ 87ನೇ ಮೋಟಾರ್ ವಾಹನಗಳ ಪ್ರದರ್ಶನದಲ್ಲಿ ಮೊದಲ ಬಾರಿಗೆ 'ಟಮೋ ರೇಸ್​ಮೋ ಅತ್ಯಾಧುನಿಕ ಸೋರ್ಟ್ಸ್ ಕಾರನ್ನು ಅನಾವರಣ ಮಾಡಿದ್ದ ಟಾಟಾ ಮೋಟಾರ್ಸ್ ಇದೀಗ ದೆಹಲಿ ಆಟೋ ಮೇಳದಲ್ಲೂ ಪ್ರಮುಖ ಆಕರ್ಷಣೆಯಾಗಿತ್ತು.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಭಾರತದಲ್ಲೇ ಮೊದಲ ಬಾರಿಗೆ ಬಿಡುಗಡೆಯಾಗಲಿರುವ ಟಮೋ ರೇಸ್​ಮೋ ಕಾರುಗಳು ಇದೇ ವರ್ಷ 2ನೇ ತ್ರೈಮಾಸಿಕ ಅವಧಿಗೆ ಮಾರುಕಟ್ಟೆ ಪ್ರವೇಶಿಸಲಿವೆ. ಆದ್ರೆ ಟಮೋ ರೆಸ್‌ಮೋ ಕಾರುಗಳು ಸೀಮಿತ ಕಾರು ಮಾದರಿಯಾಗಿರಲಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಎಂಜಿನ್ ಸಾಮರ್ಥ್ಯ

1.2 ಲೀಟರ್ ಸಾಮರ್ಥ್ಯದ ಟಬೋ ಚಾರ್ಜ್ಡ್ ಹಾಗೂ ಇಂಟರ್​ಕೂಲ್ ರೆವೋಟ್ರೋನ್ ಇಂಜಿನ್ ಅಳವಡಿಸಲಾಗಿದ್ದು, 3 ಸಿಲಿಂಡರ್​ನ ಪೆಟ್ರೋಲ್ ಇಂಜಿನ್, ಪೆಡಲ್ ಶಿಫ್ಟರ್ಸ್ ಜತೆಗೆ 6-ಸ್ಪೀಡ್ ಸ್ವಯಂಚಾಲಿತ ಹಾಗೂ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಕೂಡ ಇರಲಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಮರ್ಸಿಡಿಸ್ ಬೆಂಝ್ ಇಕ್ಯೂ ಕಾನ್ಸೆಪ್ಟ್

ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನ ಉತ್ಪಾದನೆಗೆ ವಿಶೇಷ ಗಮನಹರಿಸಿರುವ ಆಟೋ ಉತ್ಪಾದಕರು ದಿನಕ್ಕೊಂದು ಹೊಸ ಬಗೆಯ ಕಾರು ಮಾದರಿಗಳನ್ನು ಪರಿಚಯಿಸುತ್ತಿದ್ದು, ಇದೀಗ ಮರ್ಸಿಡಿಸ್ ಬೆಂಝ್ ಸಂಸ್ಥೆ ಕೂಡಾ ಇಕ್ಯೂ ಎಂಬ ಹೊಸ ಮಾದರಿಯನ್ನು ಅಭಿವೃದ್ಧಿಗೊಳಿಸಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಈ ಹಿಂದೆ ಇಕ್ಯೂಎ ಎಲೆಕ್ಟ್ರಿಕ್ ಮಾದರಿಯನ್ನು ಪ್ರದರ್ಶನಗೊಳಿಸಿದ್ದ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಇದೀಗ ಇಕ್ಯೂ ಮುಂದುವರಿದ ಕಾರು ಮಾದರಿಯನ್ನು ಪ್ರದರ್ಶನಗೊಳಿಸಿದ್ದು, ಹಿಂದಿನ ಮಾದರಿಗಿಂತಲೂ ಉತ್ತಮ ಕಾರ್ಯಕ್ಷಮತೆಯುಳ್ಳ ಎಂಜಿನ್ ಒದಗಿಸಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕ್ರೇಜಿ ಕಾರ್ ಮಾಡೆಲ್‌ಗಳು

ಹೀಗಾಗಿ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನಗೊಂಡಿರುವ ಇಕ್ಯೂ ಮಾದರಿಯು 2020ರ ನಂತರವಷ್ಟೇ ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಸುಳಿವು ನೀಡಿರುವ ಮರ್ಸಿಡಿಸ್ ಬೆಂಝ್ ಸಂಸ್ಥೆಯು, ಹೊಸ ಮಾದರಿಯಲ್ಲಿ ಮತ್ತಷ್ಟು ಬದಲಾವಣೆ ತರಲಿದೆ.

Read more on auto expo 2018 cars
English summary
Crazy Cars Models At Auto Expo.
Story first published: Thursday, February 15, 2018, 17:33 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark