2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ರಾಜಧಾನಿ ದೆಹಲಿಯಲ್ಲಿ ಕಳೆದ 7ರಿಂದ ನಿನ್ನೆವರೆಗೂ ನಡೆದ 2018ರ ಆಟೋ ಎಕ್ಸ್‌ಪೋದಲ್ಲಿ ಮಹಿಂದ್ರಾ ಸಂಸ್ಥೆಯು ತನ್ನ ಹೊಸ ಕಾರುಗಳು ಪ್ರದರ್ಶನಗೊಳ್ಳುವ ಮೂಲಕ ಕಾರು ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ.

By Rahul

ರಾಜಧಾನಿ ದೆಹಲಿಯಲ್ಲಿ ಕಳೆದ 7ರಿಂದ ನಿನ್ನೆವರೆಗೂ ನಡೆದ 2018ರ ಆಟೋ ಎಕ್ಸ್‌ಪೋದಲ್ಲಿ ಮಹಿಂದ್ರಾ ಸಂಸ್ಥೆಯು ತನ್ನ ಹೊಸ ಕಾರುಗಳು ಪ್ರದರ್ಶನಗೊಳ್ಳುವ ಮೂಲಕ ಕಾರು ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದು, ಮಹಿಂದ್ರಾ ಅನಾವರಣಗೊಳಿಸಿದ ಹೊಸ ಕಾರುಗಳ ಬಗೆಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಮಹಿಂದ್ರಾ ರೆಕ್ಸ್ಟಾನ್ (XUV700)

ದಕ್ಷಿಣ ಕೊರಿಯಾ ಮೂಲದ ರೆಕ್ಸ್ಟಾನ್ ಸಂಸ್ಥೆಯು ಮಹಿಂದ್ರಾ ಜೊತೆಗೂಡಿ ಈಗ ಹೊಸ XUV700 ಕಾರು ನಿರ್ಮಾಣ ಮಾಡಿದ್ದು, ಮಧ್ಯಮ ಕ್ರಮಾಂಕದ ಐಷಾರಾಮಿ ಎಸ್‌ಯುವಿಗಳ ಪಟ್ಟಿಯಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಮಹಿಂದ್ರಾ ರೆಕ್ಸ್ಟಾನ್ 2.2 ಲೀಟರ್ ಡೀಸೆಲ್ ಎಂಜಿನನ್ನು ಹೊಂದಿದ್ದು, 178 ಬಿಹೆಚ್‌ಪಿ ಮತ್ತು 420 ಎನ್ಎಂ ಟಾರ್ಕ್‌ನ್ನು ಉತ್ಪಾದಿಸುವ ಶಕ್ತಿಯನ್ನು ಪಡೆಯುತ್ತದೆ. ಹಾಗೆಯೇ ಎಂಜಿನ್‌ನ್ನು 7 ಸ್ಪೀಡ್ ಮರ್ಸಿಡಿಸ್-ಬೆಂಜ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ಗೆ ಸೇರಿಸಲಾಗಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಇನ್ನು ಕಾರಿನ ಫೀಚರ್ ವಿಚಾರದಲ್ಲಿ 8 ಇಂಚಿನ ಟಚ್-ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಎಲೆಕ್ಟ್ರಿಕ್ ಸನ್ ರೂಫ್, ಡ್ಯುಯಲ್-ಝೋನ್ ಕ್ಲೈಮೆಟ್ ಕಂಟ್ರೋಲರ್ ಮತ್ತು ಇನ್ನಿತರ ಫೀಚರ್ ಗಳನ್ನು ಹೊಂದಿದೆ. ಕಾರಿನ ಬೆಲೆಯನ್ನು ಸುಮಾರು 18ರಿಂದ 20 ಲಕ್ಷದವೆರೆಗೂ ಇರಬಹುದೆಂದು ಅಂದಾಜಿಸಲಾಗಿದ್ದು, ಕಾರನ್ನು ಇದೇ ವರ್ಷದಲ್ಲಿ ಬಿಡುಗಡೆಗೊಳಿಸಲು ಸಾಧ್ಯತೆಗಳಿವೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಮಹಿಂದ್ರಾ ಇ-ಕೆಯುವಿ100

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿದ್ದು, ಮಹಿಂದ್ರಾ ಸಂಸ್ಥೆಯು ತನ್ನ ಹೊಸ ಮಹಿಂದ್ರಾ ಇಕೆಯುವಿ100 ಕಾರನ್ನು ಪ್ರದರ್ಶಿಸಲಾಯಿತು. ಗ್ರಾಹಕರು ಹೆಚ್ಚಿನದಾಗಿ ಎಲೆಕಿಕ್ ಕಾರನ್ನು ಬಯಸುತ್ತಿದ್ದು, ಸಂಸ್ಥೆಯು ಮಹಿಂದ್ರಾ ಗ್ರಾಹಕರನ್ನು ತನ್ನತ್ತ ಸೆಳೆಯುವುದಕ್ಕಗಿ ಇದರೊಂದಿಗೆ ಹೆಚ್ಚಿನ ಎಲೆಕ್ಟಿಕ್ ಕಾರುಗಳನ್ನು ತಯಾರಿಸಲು ಯೋಚಿಸುತ್ತಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಕಾರಿನ ಬ್ಯಾಡ್ಜ್ ಮಾತ್ರ ಇವಿಯದಾಗಿದ್ದು ಕಾರಿನ ಒಳಭಾಗವೆಲ್ಲಾ ಆಧುನಿಕ ಉಪಕರಣಗಳೊಂದಿಗೆ ಜೋಡಿಸಲ್ಪಟ್ಟಿದೆ. ಕಾರು 30 ಕಿಲೋವ್ಯಾಟ್ಸ್ ಮೋಟಾರ್ ಮತ್ತು ಲಿಥಿಯಂ-ಐಯಾನ್ ಬ್ಯಾಟರಿ ಸಹಾಯದಿಂದ ಒಂದು ಬಾರಿಯ ಚಾರ್ಜಿಗೆ 140ಕಿಲೋಮೀಟರ್ ಚಲಿಸುವಷ್ಟು ಶಕ್ತಿಯನ್ನು ಹೊಂದಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಇನ್ನು ಕಾರಿನ ಬೆಲೆಯು 7ರಿಂದ 8ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದ್ದು, 2019 ಅರ್ಧವಾರ್ಷಿಕದ ಅವದಿಯಲ್ಲಿ ಕಾರನ್ನು ಬಿಡುಗಡೆಗೊಳ್ಳಬಹುದು ಎನ್ನಲಾಗಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಮಹಿಂದ್ರಾ ಟಿಯುವಿ300 ಕಾನ್ಸೆಪ್ಟ್

ಮಹಿಂದ್ರಾ ಟಿಯುವಿ300 ಸ್ಟಿಂಗರ್ ಕಾನ್ಸೆಪ್ಟ್ ಮಾದರಿಯು ಸಾಮಾನ್ಯ ಟಿಯುವಿ300 ಕಾರನ್ನು ಹೋಲಲಿದ್ದು, ಸ್ಟಿಂಗರ್ ಎಸ್ ಯುವಿ ಭಾರತದ ಮೊದಲ ಕನ್ವರ್ಟಬಲ್ ಎಸ್ ಯುವಿ ಕಾರು ಎನ್ನಲಾಗಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಮಹೀಂದ್ರಾ TUV300 ಸ್ಟಿಂಗರ್ ಕಾರುಗಳು ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಭರವಸೆಯೊಂದಿಗೆ ಒರಟಾದ ವಾಹನವಾಗಿ ವಿನ್ಯಾಸಗೊಳಿಸಲಾಗಿದ್ದು, ನಗರ ಪ್ರದೇಶದ ಲೈಫ್‌ಸ್ಟೈಲ್‌ಗೆ ಹೇಳಿಮಾಡಿಸಿದ ಮಾದರಿಯಾಗಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಮಹಿಂದ್ರಾ ಟಿಯುವಿ ಸ್ಟಿಂಗರ್ ಡೀಸೆಲ್ ಎಂ ಹಾವ್ಕ್ ಎಂಜಿನನ್ನು ಹೊಂದಿದ್ದು, 140 ಬಿಹೆಚ್ ಪಿ ಮತ್ತು 320 ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂದಿದೆ. ಆದ್ರೆ ಕಾರಿನ ಬೆಲೆ ಮತ್ತು ಬಿಡುಗಡೆಯ ಬಗ್ಗೆ ಸಂಸ್ಥೆಯು ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಲ್ಲ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಮಹಿಂದ್ರಾ ಥಾರ್ ವಾಂಡರ್ ಲಸ್ಟ್

2018ರ ಆಟೋ ಎಕ್ಸ್‌ಪೋದಲ್ಲಿ ಮಹೀಂದ್ರಾ ಥಾರ್ ವಂಡರ್‌ಲಸ್ಟ್ ಮಾದರಿಯನ್ನು ಪ್ರದರ್ಶನ ಮಾಡಲಾಗಿದ್ದು, ಸದ್ಯದ ಥಾರ್ ಮಾದರಿಗಳಿಂತಲೂ ಕುತೂಹಕರ ವಿನ್ಯಾಸಗಳು ಮತ್ತು ಹೊಸ ಬಣ್ಣಗಳ ಆಯ್ಕೆಯೊಂದಿಗೆ ಕಂಗೊಳಿಸುತ್ತಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಹೊಸ ಥಾರ್‌ನಲ್ಲಿ ಗುರುತರ ಬದಲಾವಣೆಗಳಾದ ಕಸ್ಟಮೈಜ್ಡ್ ಗುಲ್‌ವಿಂಗ್ ಸ್ಟೈಲ್ ಡೋರ್‌ಗಳು, ಸೆವೆನ್ ಸ್ಲಾಟ್ ಫ್ರಂಟ್ ಗ್ರಿಲ್, ಎಲ್ಇಡಿ ಹೆಡ್‌ಲೈಟ್ಸ್, ಎಲ್‌ಇಡಿ ಡಿಆರ್‌ಎಲ್ಎಸ್ ಮತ್ತು ಫಾಗ್ ಲ್ಯಾಂಪ್ ಅಳವಡಿಕೆ ಹೊಂದಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

2.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರುವ ಥಾರ್ ವಂಡರ್‌ಲಸ್ಟ್ ಕಾರುಗಳು 105 ಬಿಎಚ್‌ಪಿ ಮತ್ತು 247ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, ಫೌರ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದುಕೊಂಡಿವೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಅಧಿಕೃತ ಮಾಹಿತಿ ಇಲ್ಲವಾದರೂ ಹೊಸ ಥಾರ್ ಕಾರುಗಳು 2019ರ ಮೊದಲಾರ್ಧದಲ್ಲಿ ಖರೀದಿಗೆ ಲಭ್ಯವಾಗಲಿದ್ದು, ಸಾಮಾನ್ಯ ಥಾರ್ ಎಸ್‌ಯುವಿಗಿಂತಲೂ 1 ಲಕ್ಷಕ್ಕೂ ಅಧಿಕ ಬೆಲೆ ಹೊಂದಿರಲಿವೆ ಎನ್ನಲಾಗಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಮಹಿಂದ್ರಾ ಯುಡಿಒ

ಮಹಿಂದ್ರಾ ಯುಡಿಒ 2 ಸೀಟರ್ ಎಲೆಕ್ಟ್ರಿಕ್ ಮೊಬಿಲಿಟಿ ಪಾಡ್ ಹೊಂದಿರುವ ಪರಿಕಲ್ಪನೆಯಾಗಿದ್ದು, ವಾತಾವರಣ ನಿಯಂತ್ರಣ, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಮತ್ತು ಬ್ಲಟೂಥ್ ಸಹಿತ ಆಡಿಯೋ ಸಿಸ್ಟಂ ಹಾಗೆಯೇ ಸ್ಮಾರ್ಟ್ ಫಿಟ್ನೆಸ್ ಫೀಚರ್‌ಗಳನ್ನು ಹೊಂದಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಮಹಿಂದ್ರಾ ಆಟೋಮ್

ಮಹಿಂದ್ರಾ ಆಟೋಮ್ ಎಲೆಕ್ಟ್ರಿಕ್ ಕಾರಿನ ಪರಿಕಲ್ಪನೆಯನ್ನು ಕೂಡಾ 2018ರ ಆಟೋ ಎಕ್ಸ್ ಪೋನಲ್ಲಿ ಪ್ರದರ್ಶನಗೊಳಿಸಲಾಗಿದ್ದು, ವಾಹನ ಚಲಾವಣೆಯ ಸಮಯದಲ್ಲಿ ಬ್ಯಾಟರಿಯನ್ನು ಬದಲಾಯಿಸಿಕೊಳ್ಳಬಹುದಾದ ಆಯ್ಕೆಯನ್ನು ಹೊಂದಿದೆ. ಇದರೊಂದಿಗೆ ಇಂಟೆಲಿಜೆಂಟ್ ಕನೆಕ್ಟಿವಿಟಿ ಸಿಸ್ಟಂ ಅನ್ನು ಹೊಂದಿದ್ದು ಇದರಿಂದ ನೀವು ಬುಕ್ಕಿಂಗ್ ಮತ್ತು ಪೇಮೆಂಟ್ ಗಳನ್ನು ಕೂಡಾ ಮಾಡಬಹುದಾಗಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ATOM ಅನ್ನು ಸ್ಥಳೀಯವಾಗಿ ನಿರ್ಮಿಸಲಾಗಿದ್ದು ಹತ್ತಿರದ ಬೋರ್ಡಿಂಗ್ ಪಾಯಿಂಟ್‌ಗಳ ಜೊತೆಗೆ ರೈಲು, ಬಸ್ ಮತ್ತು ವಿಮಾನ ವೇಳಾಪಟ್ಟಿಗಳ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡಲಿದೆ ಎನ್ನಲಾಗಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಮಹಿಂದ್ರಾ ಟ್ರಿಯೊ

ಮಹಿಂದ್ರಾ ಸಂಸ್ಥೆಯು 2018ರ ಆಟೋ ಎಕ್ಸ್ ಪೋನಲ್ಲಿ ಪಾಸೆಂಜರ್ ವಾಹನಗಳನ್ನಲ್ಲದೆ, ವಾಣಿಜ್ಯ ವಾಹನವನ್ನು ಕೂಡ ಪ್ರದರ್ಶಿಸಿತು. ಮಹಿಂದ್ರಾ ಟ್ರಿಯೊ ಮಹಿಂದ್ರಾ ಸಂಸ್ಥೆಯ ಮೊದಲ ಲಿಥಿಯಂ-ಐಯಾನ್ ಬ್ಯಾಟರಿಯ 3 ವೀಲ್ಹರ್ ವಾಹನವಾಗಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಟ್ರಿಯೊ ಜೊತೆ, ವಿದ್ಯುತ್ ವಾಹನಗಳು ಮತ್ತು ಲಾಸ್ಟ್ ಮೈಲ್ ಮತ್ತು ನಗರಗಳಲ್ಲಿ ಸಂಪರ್ಕದ ಸಾಮೂಹಿಕ ದತ್ತು ಉತ್ತೇಜಿಸಲು ಮಹೀಂದ್ರಾ ಯೋಜಿಸುತ್ತಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಮಹಿಂದ್ರಾ ಇ2ಒ NXT

ಮಹಿಂದ್ರಾ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ವಾಹನವಾದ ಇ2ಒ ಎಲೆಕ್ಟ್ರಿಕ್ ಕಾರಿನ ಮುಂದುವರಿದ ಆವೃತ್ತಿ ಮಹಿಂದ್ರಾ ಇ2ಒ NXT ಆಗಿದ್ದು, ತನ್ನ ಹಳೆಯ ಕಾರಿನ ವಿನ್ಯಾಸವನ್ನೇ ಹೋಲಲಿದೆ. ಆದರೆ ಮುಂಭಾಗ ಮತ್ತು ಹಿಂಭಾಗದ ಭಾಗಗಳನ್ನು ಮಾತ್ರ ಬದಲಾಯಿಸಲಿದೆ ಎನ್ನಲಾಗಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಹೆಡ್ ಲ್ಯಾಂಪ್ ಕ್ಲಸ್ಟರ್ಸ್, ನೀಲಿ ಬ್ಯಾಕ್ ಲಿಟ್ ಗ್ರಿಲ್, ಮತ್ತು ವಿನೂತನ ಬಂಪರ್ ಜೊತೆಗೆ ಬಾಡಿ ಸ್ಕರ್ಟ್ಸ್ ಫೀಚರ್ ಗಳನ್ನು ಹೊಂದಿದೆ. ಬದಿಯಲ್ಲಿ ಮತ್ತು ಹಿಂಭಾಗದಲ್ಲಿ, ಹೊಸ e2o NXT ಬಾಕ್ಸ್ ವಿನ್ಯಾಸವನ್ನು ಸ್ಕರ್ಟ್‌ಗಳನ್ನು ನೀಡಲಾಗಿದ್ದು, ಹಿಂಭಾಗದಲ್ಲಿ ಮಹೀಂದ್ರಾ ಇವಿ ವಿಂಡ್ ಶೀಲ್ಡ್ ಕೆಳಭಾಗದಲ್ಲಿ ದೊಡ್ಡ ಗ್ರೇ ಇಂಸೆರ್ಟ್ ಸೇರಿಸುವಿಕೆಯೊಂದಿಗೆ ಟೈಲ್ ಗೇಟ್ ಅನ್ನು ನೀಡಲಾಗಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಮಹಿಂದ್ರಾ ಇ2ಒ NXT ಎರಡು ಆವೃತ್ತಿಯಲ್ಲೂ ಬರಲಿದ್ದು 11 ಅಥವಾ 15ಕಿಲೋವ್ಯಾಟ್ ಹೋಲುವ 3 ಫೇಸ್ ಎಸಿ ಇಂಡಕ್ಷನ್ ಮೋಟಾರ್ 19 ಕಿಲೋವ್ಯಾಟ್ ಮತ್ತು 70ಎನ್ಎಂ ಉತ್ಪಾದಿಸಬಲ್ಲ ಶಕ್ತಿಯನ್ನು ಹೊಂದಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

15 ಕಿಲೋವ್ಯಾಟ್ಸ್ ಬ್ಯಾಟರಿಯ ಸಹಾಯದೊಂದಿಗೆ 140ಕಿಲೋಮೀಟರ್ ಪ್ರಯಾಣಿಸಬಲ್ಲ ಶಕ್ತಿಯನ್ನು ಹೊಂದಿದ್ದು, 7 ರಿಂದ 7.30 ಗಂಟೆಗಳ ಸಮಯದಲ್ಲಿ ಬ್ಯಾಟರಿ ಪೂರ್ತಿ ಚಾರ್ಜನ್ನು ಪಡೆಯುತ್ತದೆ. ಸಿಂಗಲ್-ಫೇಸ್ 3kW 16amp ಚಾರ್ಜ್‌ರ್ ಅಥವಾ ಮೂರು-ಹಂತದ 10kW 32 AMP ಚಾರ್ಜರ್ ಮೂಲಕ 1 ಗಂಟೆ 35 ನಿಮಿಷಗಳಲ್ಲಿ ಚಾರ್ಜ್ ಆಗಲಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಹಿಂದ್ರಾ ಹೊಸ ಕಾರುಗಳು

ಕಾರಿನ ಬೆಲೆಯು 7 ರಿಂದ 8 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದ್ದು, ಸಂಸ್ಥೆ ಕಾರಿನ ಈ ಕಾರನ್ನು 2018ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸಲು ಯೋಚಿಸುತ್ತಿದೆ.

Most Read Articles

Kannada
Read more on auto expo 2018 mahindra
English summary
Mahindra SUVs And Cars - Unveils, Concepts & Images; Expected Launch Date & Price.
Story first published: Thursday, February 15, 2018, 13:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X