ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಾರು ಕಲಿನಿಯನ್ ಬೆಲೆ ಎಷ್ಟಿರಬಹುದು ಗೊತ್ತಾ?

ಆಟೋ ಉದ್ಯಮದಲ್ಲಿ ಭಾರೀ ಕುತೂಹಲ ಹುಟ್ಟುಹಾಕಿರುವ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಾರು ಕಲಿನಿಯನ್ ಬಿಡುಗಡೆಗಾಗಿ ದಿನಗಣನೆ ಆರಂಭವಾಗಿದ್ದು, ಹೊಸ ಕಾರಿನ ಖರೀದಿಗಾಗಿ ಜಗತ್ತಿನಾದ್ಯಂತ ಲಕ್ಷಾಂತರ ಗ್ರಾಹಕರು ಕಾಯ್ದುಕುಳಿತಿದ್ದಾರೆ. ಹೀಗಿರುವಾಗ ರೋಲ್ಸ್ ರಾಯ್ಸ್ ಕಡೆಯಿಂದ ಹೊಸ ಕಾರಿನ ಬೆಲೆ ಮತ್ತು ಬಿಡುಗಡೆ ಅವಧಿಯ ಕುರಿತಂತೆ ಮಹತ್ವದ ಮಾಹಿತಿ ಲಭ್ಯವಾಗಿದೆ.

ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಾರು ಕಲಿನಿಯನ್ ಬೆಲೆ ಎಷ್ಟಿರಬಹುದು ಗೊತ್ತಾ?

ಐಷಾರಾಮಿ ಸೆಡಾನ್‌ಗಳಿಗೆ ಹೆಗ್ಗುರುತು ಎಂದೆನಿಸಿದ್ದ ರೋಲ್ಸ್ ರಾಯ್ಸ್ ಸಂಸ್ಥೆಯು ಇದೇ ಮೊದಲ ಬಾರಿಗೆ ಎಸ್‌ಯುವಿ ಕಾರುಗಳನ್ನು ನಿರ್ಮಾಣ ಮಾಡುತ್ತಿದ್ದು, ಇದು ಐಷಾರಾಮಿ ಕಾರು ಉತ್ಪಾದಕರಲ್ಲಿಯೇ ಕುತೂಹಲ ಹುಟ್ಟುಹಾಕಿದೆ. ಅತಿ ದುಬಾರಿ ಬೆಲೆಯ ಕಲಿನಿಯನ್ ಎಸ್‌ಯುವಿ ಕಾರುಗಳ ಖರೀದಿಗಾಗಿ ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಆರಂಭವಾಗಿದ್ದು, ಇದೇ ವರ್ಷ ನವೆಂಬರ್ ಅಂತ್ಯಕ್ಕೆ ಹೊಸ ಕಾರು ಖರೀದಿಗೆ ಲಭ್ಯವಾಗುವುದು ಖಚಿತವಾಗಿದೆ.

ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಾರು ಕಲಿನಿಯನ್ ಬೆಲೆ ಎಷ್ಟಿರಬಹುದು ಗೊತ್ತಾ?

ಮಾಹಿತಿಗಳ ಪ್ರಕಾರ, ಕಲಿನಿಯನ್ ಕಾರುಗಳು ಪ್ಯಾಂಟಮ್ 8 ಸಲೂನ್ ಕಾರಿಗಿಂತ ಕೆಳದರ್ಜೆಯ ಕಾರು ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.8 ಕೋಟಿ ಮತ್ತು ಟಾಪ್ ಎಂಡ್ ಮಾದರಿಯು ರೂ.10 ಕೋಟಿ ಬೆಲೆ ಹೊಂದುವ ಸಾಧ್ಯತೆಗಳಿವೆ ಎನ್ನಲಾಗಿದೆ.

ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಾರು ಕಲಿನಿಯನ್ ಬೆಲೆ ಎಷ್ಟಿರಬಹುದು ಗೊತ್ತಾ?

ಕೇವಲ ಐಷಾರಾಮಿ ಅಷ್ಟೇ ಅಲ್ಲದೇ ಆಪ್ ರೋಡ್ ವೈಶಿಷ್ಟ್ಯತೆಗಳೊಂದಿಗೆ ಹೊತ್ತುಬರುತ್ತಿರುವ ಕಲಿನಿಯನ್ ಕಾರುಗಳು ನೂರಕ್ಕೂ ಹೆಚ್ಚು ವಿನೂತನ ಸೌಲಭ್ಯಗಳೊಂದಿಗೆ ಜಗತ್ತಿನಲ್ಲಿ ಇದುವರೆಗೆ ಉತ್ಪಾದನೆಯಾದ ಇತರೆ ಐಷಾರಾಮಿ ಕಾರುಗಳಿಂತಲೂ ವಿಶೇಷ ಎನ್ನಿಸಲಿದೆ.

ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಾರು ಕಲಿನಿಯನ್ ಬೆಲೆ ಎಷ್ಟಿರಬಹುದು ಗೊತ್ತಾ?

ಕಲಿನಿಯನ್ ಅಂದ್ರೆ ಏನು?

ರೋಲ್ಸ್ ರಾಯ್ಸ್ ಸಂಸ್ಥೆಯು ಅಭಿವೃದ್ಧಿ ಮಾಡಿರುವ ಮೊದಲ ಎಸ್‌ಯುವಿಗೆ ಕಲಿನಿಯನ್ ಎಂದು ನಾಮಕರಣ ಮಾಡಲು ಹಲವು ಕಾರಣಗಳಿದ್ದು, ಕಲಿನಿಯನ್ ಎನ್ನುವುದು ಜಗತ್ತಿನ ಅತಿ ದುಬಾರಿ ವಜ್ರದ ಮಾದರಿಯಾಗಿದೆ. ಇದು ಮೊದಲ ಬಾರಿಗೆ 1905ರಲ್ಲಿ ದಕ್ಷಿಣ ಆಫ್ರಿಕಾದ ವಜ್ರದ ಗಣಿಗಳಲ್ಲಿ ಪತ್ತೆಯಾಗಿದ್ದಲ್ಲದೆ 3,106 ಕ್ಯಾರೆಟ್ ವೈಶಿಷ್ಟ್ಯತೆಗಳೊಂದಿಗೆ ಜಗತ್ತಿನ ಅತಿ ದುಬಾರಿ ವಸ್ತುಗಳಲ್ಲಿ ಅದು ಒಂದು ಎಂಬ ಹೆಗ್ಗಳಿಕೆ ಪಡೆದುಕೊಂಡಿತ್ತು.

ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಾರು ಕಲಿನಿಯನ್ ಬೆಲೆ ಎಷ್ಟಿರಬಹುದು ಗೊತ್ತಾ?

ಹೀಗಾಗಿಯೇ ರೋಲ್ಸ್ ರಾಯ್ಸ್ ಸಂಸ್ಥೆಯು ತನ್ನ ಮೊದಲ ಎಸ್‌ಯುವಿಯನ್ನು ಕಲಿನಿಯನ್ ಎಂದು ನಾಮಕರಣ ಮಾಡುವ ಮೂಲಕ ಜಗತ್ತಿನ ಶ್ರೇಷ್ಠ ಎಸ್‌ಯುವಿ ಎಂದು ವರ್ಣನೆ ಮಾಡಿದ್ದು, ಕಾರಿನ ಪ್ರತಿ ಇಂಚಿಂಚೂ ಕೂಡಾ ಒಂದೊಂದು ವಿಶೇಷತೆಯನ್ನು ಪಡೆದುಕೊಂಡಿದೆ.

ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಾರು ಕಲಿನಿಯನ್ ಬೆಲೆ ಎಷ್ಟಿರಬಹುದು ಗೊತ್ತಾ?

ಕಾರಿನ ಡಿಸೈನ್

ಕಲಿನಿಯನ್ ಕಾರುಗಳು ಮುಂಭಾಗದಿಂದ ಫ್ಯಾಂಟಮ್ ಸೆಡಾನ್ ಕಾರಿನ ಹೋಲಿಕೆಯಿದ್ದರೂ ಸ್ಟೈನ್ ಲೆಸ್ ಸ್ಟೀಲ್ ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಸ್ಲಾಟ್ ವಿನ್ಯಾಸಗಳಲ್ಲಿ ಸಾಕಷ್ಟು ಬದಲಾವಣೆ ಪಡೆದಿದ್ದು, ಫ್ರಂಟ್ ಬಂಪರ್ ಮತ್ತು ಲೋಗೋ ಡಿಸೈನ್‌ಗಳು ವಿಶೇಷ ಎನ್ನಿಸಲಿವೆ.

ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಾರು ಕಲಿನಿಯನ್ ಬೆಲೆ ಎಷ್ಟಿರಬಹುದು ಗೊತ್ತಾ?

ಕಲಿನಿಯನ್ ಕಾರುಗಳು 5-ಸೀಟರ್ ಸೌಲಭ್ಯ ಹೊಂದಿರುವ ಎಸ್‌ಯುವಿ ಮಾದರಿಯಾಗಿದ್ದು, 22 ಇಂಚಿನ ಚಕ್ರಗಳನ್ನು ಹೊಂದಿದೆ. ಜೊತೆಗೆ ಅಲ್ಯೂಮಿನಿಯಂ ಪ್ಯಾಟ್‌ಫಾರ್ಮ್ ಮೇಲೆ ಸಿದ್ದವಾಗಿರುವ ಕಲ್ಲಿನನ್ ಕಾರುಗಳು ಫ್ಯಾಂಟಮ್ ಮಾದರಿಯಲ್ಲೇ ಎಂಜಿನ್ ಡಿಸೈನ್ ಪಡೆದಿದೆ.

MOST READ: ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕಥೆ ಏನು.?

ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಾರು ಕಲಿನಿಯನ್ ಬೆಲೆ ಎಷ್ಟಿರಬಹುದು ಗೊತ್ತಾ?

ಜೊತೆಗೆ ಆಧುನಿಕ ಐಷಾರಾಮಿ ಎಸ್‌ಯುವಿ ಎಂದೇ ಬಿಂಬಿತವಾಗಿರುವ ಕಲಿನಿಯನ್ ಕಾರುಗಳು ಸೈಡ್ ಪ್ರೋಫೈಲ್‌ನಲ್ಲಿ ಬಲವಾದ ಭುಜ ರೇಖೆಗಳನ್ನು ಹೊಂದಿರಲಿದ್ದು, ಈ ಹಿಂದೆ 1930ರಲ್ಲಿ ನಿರ್ಮಾಣವಾಗಿದ್ದ 'ಡಿ ಬ್ಲ್ಯಾಕ್' ಕಾರಿನ ಕೆಲವು ವಿನ್ಯಾಸಗಳನ್ನು ಸಹ ಇದರಲ್ಲಿ ಎರವಲು ಪಡೆದುಕೊಳ್ಳಲಾಗಿದೆ.

ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಾರು ಕಲಿನಿಯನ್ ಬೆಲೆ ಎಷ್ಟಿರಬಹುದು ಗೊತ್ತಾ?

ಕಾರಿನ ಒಳವಿನ್ಯಾಸ

ಆಧುನಿಕ ಒಳವಿನ್ಯಾಸದೊಂದಿಗೆ ಸಿದ್ದವಾಗಿರುವ ರೋಲ್ಸ್ ರಾಯ್ಸ್ ಕಲಿನಿಯನ್ ಕಾರುಗಳಲ್ಲಿ ಬಳಕೆ ಮಾಡಿರುವ ಐಷಾರಾಮಿ ವೈಶಿಷ್ಟ್ಯತೆಗಳು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಕಾರಿನ ಒಳಗೆ ಪ್ರವೇಶ ಮಾಡಿದ್ದಲ್ಲಿ ಸ್ಪರ್ಗಕ್ಕೆ ಮೂರೇ ಗೇಣು ಎನ್ನುವ ಭಾವನೆ ಮೂಡದೇ ಇರಲಾರದು.

ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಾರು ಕಲಿನಿಯನ್ ಬೆಲೆ ಎಷ್ಟಿರಬಹುದು ಗೊತ್ತಾ?

5-ಸೀಟರ್ ಸಾಮರ್ಥ್ಯವಿರುವ ಈ ಕಾರಿನಲ್ಲಿ ಪ್ರತಿ ಸೀಟುಗಳು ಸಹ ಪ್ರತ್ಯೇಕವಾಗಿ ಎಲೆಕ್ಟ್ರಿಕ್ ಆಪರೇಟ್ ಸೌಲಭ್ಯ ಹೊಂದಿದ್ದು, ನಿಮಗೆ ಬೇಕಾದ ರೀತಿಯಲ್ಲಿ ಹೋಂದಾಣಿಕೆ ಮಾಡಿಕೊಳ್ಳಬಹುದು. ಜೊತೆಗೆ ಬೆರಳುಗಳ ತುದಿಯಲ್ಲೇ ನಿಯಂತ್ರಣ ಮಾಡಬಹುದಾದ ಇನ್ಪೋಟೈನ್‌ಮೆಂಟ್ ಮತ್ತು ಎಂಟರ್‌ಟೈನ್‌ಮೆಂಟ್ ಸೌಲಭ್ಯವನ್ನು ಇದಲ್ಲಿದೆ.

ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಾರು ಕಲಿನಿಯನ್ ಬೆಲೆ ಎಷ್ಟಿರಬಹುದು ಗೊತ್ತಾ?

ಇದು ತ್ರಿ ಬಾಕ್ಸ್ ಎಸ್‌ಯುವಿ!

ಹೌದು, ಕಲಿನಿಯನ್ ಕಾರುಗಳನ್ನು ರೋಲ್ಸ್ ರಾಯ್ಸ್ ಸಂಸ್ಥೆಯು ತ್ರಿ ಬಾಕ್ಸ್ ಎಸ್‌ಯುವಿ ಎಂದು ಕರೆದಿದೆ. ಇದಕ್ಕೆ ಕಾರಣ, ಈ ಕಾರಿನಲ್ಲಿ ಎಂಜಿನ್‌ ರೂಂ, ಕ್ಯಾಬಿನ್ ಮತ್ತು ಬೂಟ್‌ ಎಂದು ಮೂರು ವಿಭಾಗಗಳನ್ನು ಪ್ರತ್ಯೇಕಿಸಿದೆ. ಇದನ್ನೇ ತ್ರಿ ಬಾಕ್ಸ್‌ ಎಸ್‌ಯುವಿ ಎನ್ನಲಾಗಿದೆ. ಇದು ಇತರೆ ಎಸ್‌ಯುವಿಗಳಲ್ಲಿ ಎಂಜಿನ್‌ ರೂಂ ಮತ್ತು ಕ್ಯಾಬಿನ್‌ಗಳು ಮಾತ್ರ ಇರುತ್ತವೆ. ಕ್ಯಾಬಿನ್‌ಗಳ ಒಳಗೆಯೇ ಬೂಟ್‌ ಇರುತ್ತದೆ. ಹೀಗಾಗಿ ಅವು ಟು ಬಾಕ್ಸ್ ಎಸ್‌ಯುವಿಗಳಾಗಿವೆ.

ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಾರು ಕಲಿನಿಯನ್ ಬೆಲೆ ಎಷ್ಟಿರಬಹುದು ಗೊತ್ತಾ?

ಇನ್ನು ಮುಂದುವರೆದು, ಕಲಿನಿಯನ್ ಕಾರುಗಳಲ್ಲಿ ಸೂಟ್ ಪ್ಯಾಕೇಜ್ ಸೌಲಭ್ಯವನ್ನು ಸಹ ಸೇರಿಸಲಾಗಿದ್ದು, ಕಾರಿನ ಬೂಟ್ ಸ್ಪೆಸ್ ಬಳಿ ಬಟನ್ ಒತ್ತಿದ್ರೆ ಸಾಕು ಎರಡು ಐಷಾರಾಮಿ ಚೇರ್‌ಗಳು ಸಣ್ಣದೊಂದು ಸಭೆ ನಡೆಸಲು ಅನೂಕಲಕರ ಮಾಡಿಕೊಡುತ್ತವೆ.

MOST READ: ಬದಲಾದ ಆಮದು ನೀತಿ- ಟೊಯೊಟಾ ಆಲ್ಫಾರ್ಡ್ ಬಿಡುಗಡೆಯಾಗುವುದು ಪಕ್ಕಾ..!!

ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಾರು ಕಲಿನಿಯನ್ ಬೆಲೆ ಎಷ್ಟಿರಬಹುದು ಗೊತ್ತಾ?

ಎಂಜಿನ್ ಸಾಮರ್ಥ್ಯ

ಕಲಿನಿಯನ್ ಕಾರುಗಳು 6.75-ಲೀಟರ್(6,750 ಸಿಸಿ) ಟ್ವಿನ್ ಟರ್ಬೋ ವಿ12 ಪೆಟ್ರೋಲ್ ಎಂಜಿನ್ ಹೊಂದಿದ್ದು, 571-ಬಿಎಚ್‌ಪಿ ಮತ್ತು 650-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಹೀಗಾಗಿ ಕಾರಿನ ವೇಗವನ್ನು ಪ್ರತಿ ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ಇರಿಸಲಾಗಿದೆ.

ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಾರು ಕಲಿನಿಯನ್ ಬೆಲೆ ಎಷ್ಟಿರಬಹುದು ಗೊತ್ತಾ?

ಇದಲ್ಲದೇ ರೋಲ್ಸ್ ರಾಯ್ಸ್ ಸಂಸ್ಥೆಯು ಮೊದಲ ಬಾರಿಗೆ ಕಲಿನಿಯನ್ ಕಾರುಗಳನ್ನು ಆಲ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ ಬಿಡುಗಡೆ ಮಾಡುತ್ತಿದ್ದು, ಆಪ್ ರೋಡ್‌ಗಳಲ್ಲೂ ಇದು ತನ್ನ ಕೌಶಲ್ಯ ಪ್ರದರ್ಶನ ಮಾಡಬಲ್ಲದು. ಇದಕ್ಕಾಗಿಯೇ ಕಾರಿನಲ್ಲಿ ವಿವಿಧ ರೀತಿಯ ಡ್ರೈವಿಂಗ್ ಮೊಡ್‌ಗಳನ್ನು ಒದಗಿಸಲಾಗಿದೆ.

ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಾರು ಕಲಿನಿಯನ್ ಬೆಲೆ ಎಷ್ಟಿರಬಹುದು ಗೊತ್ತಾ?

ಹೀಗಾಗಿ ಸದ್ಯದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಬೆಂಟ್ಲಿ ಬೆಂಟಾಗಾ ಎಸ್‌ಯುವಿ ಕಾರುಗಳಿಗೆ ಕುಲಿನಿಯನ್ ಕಾರುಗಳು ತೀವ್ರ ಪೈಪೋಟಿ ನೀಡಲಿದ್ದು, ಭಾರತೀಯ ಮಾರುಕಟ್ಟೆಯಲ್ಲೂ ಸಹ ಕಲಿನಿಯನ್ ಖರೀದಿಗಾಗಿ ನೂರಕ್ಕೂ ಹೆಚ್ಚು ಉದ್ಯಮಿಗಳು ಮತ್ತು ರಾಜಕಾರಣಿಗಳು ಬುಕ್ಕಿಂಗ್ ಮಾಡಿರುವ ಬಗ್ಗೆ ಕೆಲವು ಸುದ್ದಿಮಾಧ್ಯಮಗಳು ವರದಿ ಮಾಡಿವೆ.

More from DriveSpark

ರೋಲ್ಸ್ ರಾಯ್ಸ್ ಕಲಿನಿಯನ್ ಕಾರುಗಳ ಮತ್ತಷ್ಟು ಚಿತ್ರಗಳಿಗಾಗಿ ಈ ಫೋಟೋ ಗ್ಯಾಲರಿ ನೋಡಿ.

Article Published On: Saturday, September 29, 2018, 13:14 [IST]
English summary
Rolls-Royce Cullinan SUV India-Launch In Late November — To Be Priced Upwards Of Rs 8 Crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+