ಮಾರಾಟಕ್ಕಿದೆಯೆಂತೆ ಸಚಿನ್ ನೆಚ್ಚಿನ ಬಿಎಂಡಬ್ಲ್ಯು ಎಕ್ಸ್5ಎಮ್ ಕಾರು..

ಕ್ರಿಕೆಟ್ ಆಟದಲ್ಲಿ ಮಾತ್ರವಲ್ಲದೆ ಆಗಾಗ ಟ್ರಾಫಿಕ್ ನಿಯಮಗಳ ಬಗ್ಗೆ ಜನಸಾಮನ್ಯರಿಗೆ ಅರಿವು ಮೂಡಿಸಲು ಮುಂದಾದ ಸಚಿನ್ ತೆಂಡುಲ್ಕರ್ ಅವರು ಬಿಎಮ್‍‍ಡಬ್ಲ್ಯೂ ಸಂಸ್ಥೆಯ ಬ್ಯ್ರಾಂಡ್ ಅಂಬಾಸಿಡರ್ ಎಂದು ತಿಳಿದೆಯೆ ಇದೆ. ಅಲ್ಲದೇ ಅವರ ಕಾರ್ ಕಲೆಕ್ಷನ್‍‍

ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಆಗಾಗ ಟ್ರಾಫಿಕ್ ನಿಯಮಗಳ ಬಗ್ಗೆ ಜನಸಾಮನ್ಯರಿಗೆ ಅರಿವು ಮೂಡಿಸುತ್ತಿರುವ ಸಚಿನ್ ತೆಂಡುಲ್ಕರ್ ಅವರು ಬಿಎಂಡಬ್ಲ್ಯು ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಎಂಬುವುದು ಬಹುತೇಕರಿಗೆ ತಿಳಿದಿರುವ ವಿಚಾರ. ಇದಲ್ಲದೇ ಸಚಿನ್ ಅವರ ಬಳಿ ದೊಡ್ಡ ಮಟ್ಟದ ಐಷಾರಾಮಿ ಕಾರುಗಳ ಕಲೆಕ್ಷನ್‍‍ ಕೂಡಾ ಇದ್ದು, ಇದರಲ್ಲಿ ತಮ್ಮ ನೆಚ್ಚಿನ ಕಾರೊಂದನ್ನ ಮಾರಾಟ ಮಾಡುತ್ತಿರುವ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಮಾರಾಟಕ್ಕಿದೆ ಸಚಿನ್ ನೆಚ್ಚಿನ ಬಿಎಮ್‍‍ಡಬ್ಲ್ಯೂ ಎಕ್ಸ್5ಎಮ್ ಕಾರು..

2012ರಲ್ಲಿ ಸಚಿನ್ ತೆಂಡುಲ್ಕರ್ ಅವರು ಜರ್ಮನ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆ ಬಿಎಂಡಬ್ಲ್ಯು ಬ್ರಾಂಡ್ ಅಂಬಾಸಿಡರ್ ಆಗಿ ನೇಮಕರಾಗಿದ್ದು, ಅದಕ್ಕೂ ಮುನ್ನವೇ ಸಚಿನ್ ಅವರು ಹಲವಾರು ಬಿಎಂಡಬ್ಲ್ಯು ಸೇರಿದಂತೆ ಹಲವಾರು ಐಷಾರಾಮಿ ಎಸ್‍‍ಯುವಿ ಕಾರುಗಳನ್ನು ಬಳಸುತ್ತಿದ್ದರು.

ಮಾರಾಟಕ್ಕಿದೆ ಸಚಿನ್ ನೆಚ್ಚಿನ ಬಿಎಮ್‍‍ಡಬ್ಲ್ಯೂ ಎಕ್ಸ್5ಎಮ್ ಕಾರು..

ಹೀಗೆ ಸಚಿನ್ ತೆಂಡುಲ್ಕರ್ ಅವರು ಬಳಸುತ್ತಿದ್ದ ಕಾರುಗಳಲ್ಲಿ ಒಂದಾದ ಬಿಎಂಡಬ್ಲ್ಯು ಎಕ್ಸ್5ಎಮ್ ಕಾರು ಈಗ ಮಾರಾಟಕ್ಕಿದ್ದು, ಈ ಕಾರನ್ನು ಖರೀದಿಸಲು ಇಚ್ಛಿಸುವ ಸಚಿನ್ ಅಭಿಮಾನಿಗಳಿಗಿದು ಸುವರ್ಣ ಅವಕಾಶ ಎಂದು ಹೇಳಬಹುದು. ಹಾಗಾದ್ರೆ ಸಚಿನ್ ಅವರು ಬಳಸಿದ ಬಿಎಂಡಬ್ಲ್ಯು ಎಕ್ಸ್5ಎಮ್ ಕಾರಿನ ಬಗ್ಗೆ ತಿಳಿಯಲು ಕೆಳಗಿನ ಸ್ಲೈಡರ್‍‍ಗಳತ್ತ ಸಾಗಿರಿ...

ಮಾರಾಟಕ್ಕಿದೆ ಸಚಿನ್ ನೆಚ್ಚಿನ ಬಿಎಮ್‍‍ಡಬ್ಲ್ಯೂ ಎಕ್ಸ್5ಎಮ್ ಕಾರು..

ಸಚಿನ್ ತೆಂಡುಲ್ಕರ್ ಬಳಸಿದ ಬಿಎಂಡಬ್ಲ್ಯು ಎಕ್ಸ್5ಎಮ್ ಎಸ್‍‍ಯುವಿ ಕಾರು ಲಾಂಗ್ ಬೀಚ್ ಬ್ಲೂ ಬಣ್ಣವನ್ನು ಪಡೆದಿದ್ದು, ಈ ಕಾರಿನಲ್ಲಿರುವ 'ಎಮ್' ಎಂಬುದು ಇದರ ಸಾಮರ್ಥ್ಯದ ಸಂಕೇತವಾಗಿದೆ.

ಮಾರಾಟಕ್ಕಿದೆ ಸಚಿನ್ ನೆಚ್ಚಿನ ಬಿಎಮ್‍‍ಡಬ್ಲ್ಯೂ ಎಕ್ಸ್5ಎಮ್ ಕಾರು..

ಜಾಹೀರಾತಿನ ಪ್ರಕಾರ ಈ ಕಾರನ್ನು ಈಗಾಗಲೇ 4 ಮಂದಿ ಗ್ರಾಹಕರು ಖರೀದಿಸಿದ್ದು, ಇದೀಗ ಮತ್ತೆ ಮಾರಾಟಕ್ಕೆ ಇಡಲಾಗಿದೆ. ಪ್ರಸ್ತುತ ಈ ಕಾರು 21 ಲಕ್ಷಕ್ಕೆ ಮಾರಾಟಕ್ಕಿದ್ದು, ಓಡೋ ಮೀಟರ್‍‍ನ ರೀಡಿಂಗ್ ಪ್ರಕಾರ, ಈ ಕಾರು ಈಗಾಗಲೇ 72,000 ಕಿಲೋಮೀಟರ್ ಚಲಿಸಿದೆ.

ಮಾರಾಟಕ್ಕಿದೆ ಸಚಿನ್ ನೆಚ್ಚಿನ ಬಿಎಮ್‍‍ಡಬ್ಲ್ಯೂ ಎಕ್ಸ್5ಎಮ್ ಕಾರು..

ಎಂಜಿನ್ ಸಾಮರ್ಥ್ಯ

ಮಾರಾಟಕ್ಕಿರುವ ಈ ಕಾರು 4.6-ಲೀಟರ್(4,619ಸಿಸಿ) ಪೆಟ್ರೋಲ್ ಎಂಜಿನ್ ಸಹಾಯದಿಂದ 347-ಬಿಹೆಚ್‍‍ಪಿ ಮತ್ತು 480-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾರಾಟಕ್ಕಿದೆ ಸಚಿನ್ ನೆಚ್ಚಿನ ಬಿಎಮ್‍‍ಡಬ್ಲ್ಯೂ ಎಕ್ಸ್5ಎಮ್ ಕಾರು..

ಸಚಿನ್ ಬಳಸಲಾಗಿದ್ದ ಬಿಎಮ್‍‍‍ಡಬ್ಲ್ಯೂ ಎಕ್ಸ್5ಎಮ್ 7 ಸೆಕೆಂಡುಗಳಲ್ಲಿ ಕಾರು 0-100 ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯ ಮತ್ತು ಗಂಟೆಗೆ 239 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದೆ.

ಮಾರಾಟಕ್ಕಿದೆ ಸಚಿನ್ ನೆಚ್ಚಿನ ಬಿಎಮ್‍‍ಡಬ್ಲ್ಯೂ ಎಕ್ಸ್5ಎಮ್ ಕಾರು..

ವಿಶೇಷವೇನೆಂದರೆ, ಮಾರುಕಟ್ಟೆಯಲ್ಲಿರುವ ಹಲವಾರು ಐಷಾರಾಮಿ ಎಸ್‍‍ಯುವಿ ಕಾರುಗಳು ಖರೀದಿಸಿದ್ದರೂ ಸಚಿನ್ ತೆಂಡುಲ್ಕರ್ ಅವರು ಬಳಸಿದ ಬಿಎಮ್‍‍ಡಬ್ಲ್ಯೂ ಎಕ್ಸ್5ಎಮ್ ಕಾರು ಹೆಚ್ಚು ಸಾಮರ್ಥ್ಯವನ್ನು ಪಡೆದುಕೊಂಡಿದೆ. ಮತ್ತು ಹಲವಾರು ಬಾರಿ ಸಚಿನ್ ಈ ಕಾರಿನಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ.

ಮಾರಾಟಕ್ಕಿದೆ ಸಚಿನ್ ನೆಚ್ಚಿನ ಬಿಎಮ್‍‍ಡಬ್ಲ್ಯೂ ಎಕ್ಸ್5ಎಮ್ ಕಾರು..

ಇನ್ನು ಈ ಕಾರಿನಲ್ಲಿ ಪವರ್ ವಿಂಡೊಸ್, ಸೆಂಟ್ರಲ್ ಲಾಕಿಂಗ್ ಸಿಸ್ಟಮ್, ಆಡಿಯೊ ಸಿಸ್ಟಂ ರಿಮೋಟ್ ಲಾಕಿಂಗ್, ಅಲಾಯ್ ವ್ಹೀಲ್ಸ್, ಲೆದರ್‌ನಿಂದ ಸಜ್ಜುಗೊಳಿಸಲಾದ ಸೀಟ್‍‍ಗಳು, ಎಬಿಎಸ್, ಟ್ರ್ಯಾಕ್ಷನ್ ಕಂಟ್ರೋಲ್, ಎಲೆಕ್ಟ್ರಿಕ್ ಸೀಟ್ಸ್, ಪವರ್ ಮಿರರ್ಸ್, ಪಾರ್ಕಿಂಗ್ ಸೆನ್ಸಾರ್ಸ್, ಏರ್‍‍ಬ್ಯಾಗ್ಸ್ ಮತ್ತು ಸನ್‍‍ರೂಫ್ ಎಂಬ ಹತ್ತು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಮಾರಾಟಕ್ಕಿದೆ ಸಚಿನ್ ನೆಚ್ಚಿನ ಬಿಎಮ್‍‍ಡಬ್ಲ್ಯೂ ಎಕ್ಸ್5ಎಮ್ ಕಾರು..

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಬಳಸಲಾದ ಈ ಬಿಎಮ್‍‍‍ಡಬ್ಲ್ಯೂ ಎಕ್ಸ್5ಎಮ್ ಎಸ್‍‍ಯುವಿ ಕಾರನ್ನು ಖರೀಸಿದಲು ಇಚ್ಛಿಸುವವರು Acireto Multi Trade Pvt Limited ಅಥವಾ +91-9969471365 ಸಂಪರ್ಕಿಸಬಹುದಾಗಿದ್ದು, ಇಲ್ಲವಾದಲ್ಲಿ ಹೆಚ್ಚಿನ ಮಾಹಿತಿಗಾಗಿ aciertomultitradegmail.com ಗೆ ಮೈಲ್ ಕೂಡಾ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

Source : Cartoq

ಮಾರಾಟಕ್ಕಿದೆ ಸಚಿನ್ ನೆಚ್ಚಿನ ಬಿಎಮ್‍‍ಡಬ್ಲ್ಯೂ ಎಕ್ಸ್5ಎಮ್ ಕಾರು..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

635 ಕೇಸ್‌ಗಳಿರುವ ಸ್ಕೂಟರಿನ ಕಥೆ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ.!

ಬಿಡದಿಯಲ್ಲಿರುವ ಟೊಯೊಟಾ ಘಟಕದ ವಿಸ್ತರಣೆಗಾಗಿ 7 ಸಾವಿರ ಕೋಟಿ ಹೂಡಿಕೆ ಮಾಡಿದ ಸುಜುಕಿ

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

ಮನೆಯಲ್ಲಿ ಸ್ಪೋಟಗೊಂಡ ಎಲೆಕ್ಟ್ರಿಕ್ ಸ್ಕೂಟರ್ : ವೀಡಿಯೊ

'ಒಬ್ಬ ವ್ಯಕ್ತಿಗೆ ಒಂದೇ ವಾಹನ' - ಟ್ರಾಫಿಕ್ ನಿರ್ವಹಣೆಗಾಗಿ ಹೊಸ ರೂಲ್ಸ್

More from DriveSpark

Article Published On: Thursday, August 9, 2018, 17:37 [IST]
English summary
Sachin Tendulkar’s BMW X5 is on sale, and you can BUY it!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+