TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
'ಒಬ್ಬ ವ್ಯಕ್ತಿಗೆ ಒಂದೇ ವಾಹನ' - ಟ್ರಾಫಿಕ್ ನಿರ್ವಹಣೆಗಾಗಿ ಹೊಸ ರೂಲ್ಸ್
ದೇಶದಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಪರಿಸರ ಮಾಲಿನ್ಯ ಅಷ್ಟೇ ಅಲ್ಲದೇ ನಗರಪ್ರದೇಶಗಳಲ್ಲಿ ವಾಹನಗಳು ನಿಲ್ಲುವುದಕ್ಕೂ ಜಾಗವಿಲ್ಲ ಪರಿಸ್ಥಿತಿ ಎದುರಾಗಿದೆ. ಈ ಸಮಸ್ಯೆಯಿಂದ ಹೊರ ಬರುಲು ಮಹತ್ವದ ಯೋಜನೆಯೊಂದನ್ನ ಜಾರಿಗೆ ತರುತ್ತಿರುವ ಗುಜರಾತ್ ಸರ್ಕಾರವು ಒಬ್ಬ ವ್ಯಕ್ತಿ ಒಂದೇ ವಾಹನ ಎನ್ನುವ ಹೊಸ ನೀತಿಯೊಂದನ್ನ ಜಾರಿ ಮಾಡಲು ಸಿದ್ದತೆ ನಡೆಸಿದೆ.
ಕೈಗಾರಿಕೆಯಲ್ಲಿ ದೇಶದ ಇತರೆ ರಾಜ್ಯಗಳಿಂತ ಮುಂಚೂಣಿಯಲ್ಲಿರುವ ಗುಜರಾತ್‌ನಲ್ಲಿ ಇದೀಗ ಮಿತಿಮಿರುತ್ತಿರುವ ವಾಹನಗಳ ಸಂಖ್ಯೆಯು ಹೊಸ ಸಮಸ್ಯೆಗಳಿಗೆ ಕಾರಣವಾಗಿದ್ದು, ಇದೇ ಕಾರಣಕ್ಕೆ ಹೊಸ ಸಂಚಾರಿ ನಿಯಮವನ್ನ ಜಾರಿ ತರುತ್ತಿರುವ ಗುಜರಾತ್ ಸರ್ಕಾರವು ಒಂದಕ್ಕಿಂತ ಹೆಚ್ಚು ವಾಹನಗಳನ್ನು ಖರೀದಿ ಮಾಡುವ ಗ್ರಾಹಕರ ಮೇಲೆ ನಿಯಂತ್ರಣ ಹೇರಲು ಮುಂದಾಗಿದೆ.
ಅಂದರೇ, ಒಬ್ಬ ವ್ಯಕ್ತಿಯು ಯಾವುದಾದರೂ ಒಂದು ವಾಹನದ ಮಾಲೀಕತ್ವವನ್ನು ಮಾತ್ರವೇ ಹೊಂದಬೇಕಿದ್ದು, ಇದರಿಂದ ಒಂದಕ್ಕಿಂತಲೂ ಹೆಚ್ಚು ವಾಹನಗಳನ್ನ ಖರೀದಿ ಮಾಡುಲು ಮುಂದಾಗುವ ಗ್ರಾಹಕರಿಗೆ ಹೊಸ ರೂಲ್ಸ್ ಅವಕಾಶ ನೀಡುವದಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿ ಹೊರತುಪಡಿಸಿ ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ಕೆಲವು ಶ್ರೀಮಂತರು ಒಂದಕ್ಕಿಂತಾ ಹೆಚ್ಚು ಕಾರುಗಳನ್ನು ಮತ್ತು ಬೈಕ್‌ಗಳನ್ನು ಹೊಂದುತ್ತಿರುವ ಪ್ಯಾಶನ್ ಆಗಿದ್ದು, ಇದೇ ಕಾರಣಕ್ಕಾಗಿಯೇ ಹೆಚ್ಚಿನ ಮಟ್ಟದ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿರುವುದು.
ಇದಕ್ಕಾಗಿ ಗುಜುರಾತ್ ಸರ್ಕಾರವು ಆರ್‌ಟಿಒ ಇಲಾಖೆಯಿಂದ ಕಾರು ಮಾಲೀಕರ ಮಾಹಿತಿ ಸಂಗ್ರಹಿಸುತ್ತಿದ್ದು, ಹೊಸ ವಾಹನಗಳನ್ನು ಖರೀದಿಸುವಾಗ ಆರ್‌ಟಿಒದಿಂದ ಎನ್‍ಒಸಿ ಪ್ರಮಾಣ ಪತ್ರವನ್ನು ಪಡೆದುಕೊಂಡ ನಂತರವೇ ಹೊಸ ವಾಹನ ಖರೀದಿಗೆ ಅವಕಾಶ ಸಿಗಲಿದೆ.
ಇದರ ಹೊರತಾಗಿ ಒಂದಕ್ಕಿಂತ ಹೆಚ್ಚಿನ ವಾಹನಗಳನ್ನು ಖರೀದಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡದಿರುವಂತೆ ಗುಜರಾತ್ ರೋಡ್ ಸೆಫ್ಟಿ ಅಥಾರಟಿ ಆಕ್ಟ್ ಅಡಿಯಲ್ಲಿ ಬರುವ ಸೆಕ್ಷನ್ 33ರನ್ನ ತಿದ್ದುಪಡಿ ತರುವ ಮೂಲಕ ಬೇಕಾಬಿಟ್ಟಿ ವಾಹನ ಖರೀದಿಗೆ ನಿರ್ಬಂಧ ಹೇರಲು ಸಿದ್ದತೆ ನಡೆಸಲಾಗುತ್ತಿದೆ.
15ಕ್ಕಿಂತ ಮೇಲ್ಪಟ್ಟ ವಾಹನಗಳಿಗೆ ಸಂಕಷ್ಟ
ಹೌದು, ಗುಜರಾತ್ ಸರ್ಕಾರವು ಒಬ್ಬ ವ್ಯಕ್ತಿಗೆ ಒಂದೇ ವಾಹನ ಕಾಯ್ದೆ ಜೊತೆಗೆ 15 ವರ್ಷ ಮೇಲ್ಪಟ್ಟ ವಾಹನಗಳ ಓಡಾಟದ ಮೇಲೂ ನಿಯಂತ್ರಣ ಹೇರಲು ಮುಂದಾಗಿದ್ದು, ಹಳೆಯ ವಾಹನ ಮಾಲೀಕರು ಹೊಸ ವಾಹನಗಳನ್ನು ಖರೀದಿ ಮಾಡುವುದಾದರೇ ಕಡ್ಡಾಯ ಹಳೆಯ ವಾಹನಗಳನ್ನ ಸ್ಕ್ರ್ಯಾಪಿಂಗ್ ಮಾಡಲೇಬೇಕೆಂಬ ನಿಯಮಗಳನ್ನು ಜಾರಿ ಮಾಡುವ ಸಾಧ್ಯತೆಗಳಿವೆ.
ಒಟ್ಟಿನಲ್ಲಿ ಟ್ರಾಫಿಕ್ ಸಮಸ್ಯೆಯನ್ನ ತಗ್ಗಿಸಲು ಗುಜರಾತ್ ಸರ್ಕಾರವು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದು, ಹೊಸ ಸಂಚಾರಿ ನೀತಿ ಯಶಸ್ವಿಯಾಗಿದ್ದೇ ಆದರಲ್ಲಿ ದೇಶದ ಇತರೆ ರಾಜ್ಯಗಳಲ್ಲೂ ಹೊಸ ಕಾಯ್ದೆ ಅನುಷ್ಠಾನಕ್ಕೆ ಬಂದ್ರು ಬರಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಮಹೀಂದ್ರಾ ವಿರುದ್ಧ ಕಾರು ಮಾಲೀಕನ ಆಕ್ರೋಶ
ವಿಡಿಯೋ: ಚಾರ್ಜಿಂಗ್ ವೇಳೆ ಸ್ಪೋಟಗೊಂಡ ಎಲೆಕ್ಟ್ರಿಕ್ ಸ್ಕೂಟರ್
ಥರ್ಡ್ ಪಾರ್ಟಿ ಇನ್ಸುರೆನ್ಸ್ ವಿಚಾರದಲ್ಲಿ 'ಸುಪ್ರೀಂ' ಆದೇಶ ಕಷ್ಟ ಕಷ್ಟ
ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?
ಇನ್ಮುಂದೆ ಕಿಕಿ ಡ್ಯಾನ್ಸ್ ಮಾಡಿದ್ರೆ ಜೈಲಿನಲ್ಲಿ ಖಾಕಿ ಡ್ಯಾನ್ಸ್ ಗ್ಯಾರಂಟಿ..!