ಪೊಲೀಸ್ ಇಲಾಖೆಗೆ ಬಲಿಷ್ಠ ಟಾಟಾ ಎಲೆಕ್ಟ್ರಿಕ್ ಕಾರುಗಳು ಸೇರ್ಪಡೆಗೆ ಸಜ್ಜು: ಐಷಾರಾಮಿ ಫೀಚರ್ಸ್!
ಸುಸ್ಥಿರ ಮತ್ತು ಪರಿಸರ ಸ್ನೇಹಿ ಪೊಲೀಸ್ ವ್ಯವಸ್ಥೆಗೆ ಮಹತ್ವದ ಹೆಜ್ಜೆಯಾಗಿ ಆರು ಕಸ್ಟಮೈಸ್ ಮಾಡಿದ ಟಾಟಾ ಕರ್ವ್ ಇವಿಗಳನ್ನು ರಾಜ್ಯ ಪೊಲೀಸ್ ವಾಹನಗಳ ಸಮೂಹದಲ್ಲಿ ಸೇರಿಸಲಾಗಿದ್ದು, ಇವುಗಳನ್ನು ರಸ್ತೆ ಸುರಕ್ಷತಾ ಜಾರಿ ಕರ್ತವ್ಯಗಳಿಗಾಗಿ ನಿರ್ದಿಷ್ಟವಾಗಿ ಕಾನ್ಫಿಗರ್ ಮಾಡಲಾಗಿದೆ. ಈ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯು ಭಾರತದಾದ್ಯಂತ ಸರ್ಕಾರಿ ಫ್ಲೀಟ್‌ಗಳಲ್ಲಿ ವ್ಯಾಪಕ ಸ್ವೀಕಾರಕ್ಕೆ ದಾರಿ ಮಾಡಿಕೊಡಲಿದೆ, ಸಾರ್ವಜನಿಕ ಸುರಕ್ಷತಾ ಮೂಲಸೌಕರ್ಯವನ್ನು ಹೆಚ್ಚಿಸುತ್ತಾ ದೇಶದ ಹಸಿರು ಭವಿಷ್ಯಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದು ಹೇಳಬಹುದು.
ಆದರೆ ಇವು ಕರ್ನಾಟಕ ರಾಜ್ಯ ಪೋಲೀಸ್ ಇಲಾಖೆಗೂ ಸಿಕ್ಕರೆ ಇನ್ನೂ ಅಂದವಾಗಿರುತ್ತದೆ. ಹೌದು, ಹಿಮಾಚಲ ಪ್ರದೇಶ ಪೊಲೀಸರು ತಮ್ಮ ರಸ್ತೆ ಸುರಕ್ಷತಾ ಜಾರಿ ಕರ್ತವ್ಯಗಳಿಗಾಗಿ ಕಸ್ಟಮೈಸ್ ಮಾಡಿದ ಟಾಟಾ ಕರ್ವ್ ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಸೇರಿಸಿಕೊಳ್ಳುವ ಮೂಲಕ ತಮ್ಮ ವಾಹನಗಳ ಫ್ಲೀಟ್ ಅನ್ನು ನವೀಕರಿಸಿದ್ದಾರೆ. ಇವುಗಳನ್ನು ಅಲ್ಲಿನ ರಸ್ತೆ ಸುರಕ್ಷತಾ ಜಾರಿ ಕರ್ತವ್ಯಗಳಿಗಾಗಿ ನಿರ್ದಿಷ್ಟವಾಗಿ ಕಾನ್ಫಿಗರ್ ಮಾಡಲಾಗಿದೆ.

ನೀಲಿ ಪಟ್ಟೆಗಳನ್ನು ಹೊಂದಿರುವ ಪೊಲೀಸ್ ಲಿವರಿ, "ಪೊಲೀಸ್" ಡೆಕಲ್‌ಗಳು, ರಾಜ್ಯ ಲಾಂಛನ ಮತ್ತು 'ಡಯಲ್ 112' ತುರ್ತು ಸಂಖ್ಯೆಯ ಸ್ಟಿಕ್ಕರ್ ಅನ್ನು ಒಳಗೊಂಡ ಆರು ಟಾಟಾ ಕರ್ವ್ ಇವಿಗಳನ್ನು ಅಲ್ಲಿನ ಪೊಲೀಸರಿಗೆ ನಿಯೋಜಿಸಲಾಗಿದೆ. ಈ ವಾಹನಗಳು ರೂಫ್‌ಗೆ ಜೋಡಿಸಲಾದ 360-ಡಿಗ್ರಿ ಕ್ಯಾಮೆರಾ, ಸೈರನ್, ಧ್ವನಿವರ್ಧಕ ಮತ್ತು ಇತರ ತುರ್ತು ಉಪಕರಣಗಳಂತಹ ಪೊಲೀಸ್ - ನಿರ್ದಿಷ್ಟ ವೈಶಿಷ್ಟ್ಯಗಳನ್ನು ಹೊಂದಿವೆ.
ಹಿಮಾಚಲ ಪ್ರದೇಶ ಪೊಲೀಸ್ ಫ್ಲೀಟ್‌ನಲ್ಲಿ ಟಾಟಾ ಕರ್ವ್ವ್ ಇವಿಗಳ ನಿಯೋಜನೆಯು ಸರ್ಕಾರಿ ಕಾರ್ಯಾಚರಣೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿಸುವುದು, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಮತ್ತು ಇಂಧನ ವೆಚ್ಚವನ್ನು ಕಡಿಮೆ ಮಾಡುವ ರಾಜ್ಯದ ಮಹತ್ವದ ನಿರ್ಧಾರವನ್ನು ಎತ್ತಿತೋರುತ್ತದೆ. ಈ ಎಲೆಕ್ಟ್ರಿಕ್ ವಾಹನಗಳು ಕಾರ್ಯಕ್ಷಮತೆ, ಸೌಕರ್ಯ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುತ್ತವೆ.

ಹೊಸ ಇವಿಗಳು ಸವಾಲಿನ ಭೌಗೋಳಿಕ ಪರಿಸ್ಥಿತಿಗಳಲ್ಲಿ ಪೊಲೀಸ್ ಕೆಲಸಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತವೆ. ಈ ನವೀಕರಣವು ಭಾರತೀಯ ಸರ್ಕಾರಿ ಇಲಾಖೆಗಳಲ್ಲಿ ವಿದ್ಯುದ್ದೀಕರಣದ ಕಡೆಗೆ ಬೆಳೆಯುತ್ತಿರುವ ಪ್ರವೃತ್ತಿಯನ್ನು ಸೂಚಿಸುತ್ತದೆ, ಪರಿಸರ ಸುಸ್ಥಿರತೆ ಮತ್ತು ಕಾರ್ಯಾಚರಣೆಯ ದಕ್ಷತೆಗಾಗಿ ಫ್ಲೀಟ್ ಸ್ವತ್ತುಗಳನ್ನು ಆಧುನೀಕರಿಸುವ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಹೇಳಬಹುದು.
ಟಾಟಾ ಕರ್ವ್ ಇವಿ ವಿಶೇಷತೆಗಳು: ಟಾಟಾ ಕರ್ವ್ ಇವಿಯು ಕ್ರಿಯೇಟಿವ್, ಅಕಾಂಪ್ಲಿಷ್ಡ್, ಅಕಾಂಪ್ಲಿಷ್ಡ್ ಪ್ಲಸ್ ಎಸ್, ಎಂಪವರ್ಡ್ ಪ್ಲಸ್ ಮತ್ತು ಎಂಪವರ್ಡ್ ಪ್ಲಸ್ ಎ' ಎಂಬ ಐದು ಟ್ರಿಮ್‌ಗಳಲ್ಲಿ ಲಭ್ಯವಿವೆ. ಈ ವೇರಿಯೆಂಟ್‌ಗಳಲ್ಲಿ ಯಾವುದು ಹಿಮಾಚಲ ಪ್ರದೇಶ ಪೊಲೀಸ್ ಇಲಾಖೆಯನ್ನು ತಲುಪಿದೆ ಎಂಬುದು ಸ್ಪಷ್ಟವಾಗಿಲ್ಲ. ಕರ್ವ್ವಿ ಇವಿ ಬೆಲೆಗಳು ರೂ. 17.49 ಲಕ್ಷದಿಂದ ಪ್ರಾರಂಭವಾಗಿ ರೂ.21.99 ಲಕ್ಷದ (ಎಕ್ಸ್ ಶೋರೂಂ) ವರೆಗೆ ಹೋಗುತ್ತವೆ.
ಟಾಟಾ ಕರ್ವ್ ಇವಿ 45 kWh ಮತ್ತು 55 kWh ಬ್ಯಾಟರಿ ಆಯ್ಕೆಗಳನ್ನು ಹೊಂದಿರುವ ಸಂಪೂರ್ಣ-ಎಲೆಕ್ಟ್ರಿಕ್ ಕೂಪ್-SUV ಆಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ 430 ಕಿ.ಮೀ ನಿಂದ 502 ಕಿ.ಮೀ ಓಡಿಸಬಹುದು. ಇದು ಫ್ರಂಟ್ ವೆಂಟಿಲೇಟೆಡ್ ಸೀಟುಗಳು, 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್‌ನಂತಹ ಫೀಚರ್ಸ್ ಒಳಗೊಂಡಿದೆ.
ಜೊತೆಗೆ ಟಚ್ ಬೇಸ್ಡ್ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್, ಟ್ರೆಪೆಜಾಯ್ಡಲ್ ಎಸಿ ವೆಂಟ್ಸ್, ಫೋರ್-ಸ್ಪೋಕ್ ಸ್ಟೀರಿಂಗ್, ವೈರ್ ಲೆಸ್ ಚಾರ್ಜಿಂಗ್ ಪ್ಯಾಡ್, 320 ಡಬ್ಲ್ಯೂ 9-ಸ್ಪೀಕರ್ ಜೆಬಿಎಲ್ ಆಡಿಯೋ, ಟೈಪ್ ಸಿ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ರಿಕ್ಲೈನಬಲ್ ರಿಯರ್ ಸೀಟ್, ಕೂಲ್ಡ್ ಗ್ಲೋವ್ ಬಾಕ್ಸ್ ಹೊಂದಿದೆ. ಕನೆಕ್ಟೆಡ್ ಕಾರ್ ಟೆಕ್, ಲೆವೆಲ್ 2 ಎಡಿಎಎಸ್ ಮತ್ತು ಪವರ್ಡ್ ಟೈಲ್ ಗೇಟ್ ಹೊಂದಿದೆ.
ಸುರಕ್ಷತೆಯ ವಿಷಯಕ್ಕೆ ಬಂದರೆ 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಪಾರ್ಕಿಂಗ್ ಸೆನ್ಸರ್‌ಗಳು, ರೀಜೆನ್ ಬ್ರೇಕಿಂಗ್‌ನಂತಹ ಸುಧಾರಿತ ಸೇಫ್ಟಿ ಫೀಚರ್ಸ್ ಒಳಗೊಂಡಿದೆ. ಈ ಮೂಲಕ ಟಾಟಾ ಕರ್ವ್ ಇವಿ ಹಿಮಾಚಲ ಪ್ರದೇಶ ರಾಜ್ಯದ ಪೊಲೀಸ್ ಮತ್ತು ರಸ್ತೆ ಸುರಕ್ಷತಾ ಜಾರಿ ಅಗತ್ಯಗಳಿಗೆ ಸೂಕ್ತವಾದ ಕಾರ್ಯಕ್ಷಮತೆಯೊಂದಿಗೆ ಪ್ರಾಯೋಗಿಕತೆಯನ್ನು ಸಂಯೋಜಿಸುತ್ತದೆ.


Click it and Unblock the Notifications








