ಥರ್ಡ್ ಪಾರ್ಟಿ ಇನ್ಸುರೆನ್ಸ್ ವಿಚಾರದಲ್ಲಿ 'ಸುಪ್ರೀಂ' ಆದೇಶ ಕಷ್ಟ ಕಷ್ಟ

By Praveen Sannamani

ಕಳೆದ ವಾರವಷ್ಟೇ ಸುಪ್ರೀಂಕೋರ್ಟ್ ಥರ್ಡ್ ಪಾರ್ಟಿ ವಿಮಾ ವಿಚಾರಕ್ಕೆ ಸಂಬಂಧಪಟ್ಟಂತೆ ಮಹತ್ವದ ಆದೇಶವೊಂದನ್ನು ಪ್ರಕಟಿಸಿತ್ತು. ಸೆ.1 ರಿಂದಲೇ ಜಾರಿಗೆ ಬರುವಂತೆ ಹೊಸ ಕಾರು ಮತ್ತು ಬೈಕ್‌ಗಳಿಗೆ ಗರಿಷ್ಠ ಮಟ್ಟದ ಕಡ್ಡಾಯ ಥರ್ಡ್ ಪಾರ್ಟಿ ವಿಮೆ ಹೊಂದಿರಬೇಕೆಂಬ ಆದೇಶವು ಅವೈಜ್ಞಾನಿಕವಾಗಿರುವ ಹಿನ್ನೆಲೆಯಲ್ಲಿ ವಿಮಾ ಸಂಸ್ಥೆಗಳೇ ಸುಪ್ರೀಂ ಆದೇಶಕ್ಕೆ ಚಕಾರ ಎತ್ತಿವೆ.

ಥರ್ಡ್ ಪಾರ್ಟಿ ಇನ್ಸುರೆನ್ಸ್ ವಿಚಾರದಲ್ಲಿ 'ಸುಪ್ರೀಂ' ಆದೇಶ ಕಷ್ಟ ಕಷ್ಟ

ಹೌದು, ರಸ್ತೆ ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ವಾಹನ ಮಾಲೀಕ ನೀಡಬೇಕಾದ "ಥರ್ಡ್ ಪಾರ್ಟಿ ವಿಮಾ ಪಾಲಿಸಿ" ವಿಚಾರದಲ್ಲಿ ಮಹತ್ವದ ಆದೇಶ ನೀಡಿದ್ದ ಸುಪ್ರೀಂಕೋರ್ಟ್, ಹೊಸ ಕಾರುಗಳು ಖರೀದಿಸುವ ಮಾಲೀಕರು ಕಡ್ಡಾಯವಾಗಿ 3 ವರ್ಷದ ಪ್ರಿಮಿಯಂ ಮತ್ತು ಬೈಕ್ ಮಾಲೀಕರು 5 ವರ್ಷದ ಪ್ರಿಮಿಯಂ ಹೊಂದಲೇಬೇಕೆಂಬ ನಿಯಮ ಜಾರಿಗೆ ಆದೇಶಿಸಿತ್ತು. ಆದ್ರೆ ಇದು ವಾಸ್ತವಾಂಶಕ್ಕೆ ಬಂದಲ್ಲಿ ಹಲವು ದೋಷಗಳಿಂದ ಕೂಡಿದ್ದು, ವಿಮಾ ಸಂಸ್ಥೆಗಳೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿವೆ.

ಥರ್ಡ್ ಪಾರ್ಟಿ ಇನ್ಸುರೆನ್ಸ್ ವಿಚಾರದಲ್ಲಿ 'ಸುಪ್ರೀಂ' ಆದೇಶ ಕಷ್ಟ ಕಷ್ಟ

ಒಂದೇ ಬಾರಿಗೆ ಕಾರು ಮಾಲೀಕರು 3 ವರ್ಷದ ಹಾಗೂ ಬೈಕ್ 5 ವರ್ಷದ ಥರ್ಡ್ ಪಾರ್ಟಿ ಪ್ರಿಮಿಯಂ ಖರೀದಿಯು ಆರ್ಥಿಕವಾಗಿ ಹೊರೆಯಾಗಲಿದ್ದು, ಅದಕ್ಕೂ ಹೆಚ್ಚಿನ ಮಟ್ಟದಲ್ಲಿ ವಿಮಾ ಸಂಸ್ಥೆಗಳು ಸಂಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಥರ್ಡ್ ಪಾರ್ಟಿ ಇನ್ಸುರೆನ್ಸ್ ವಿಚಾರದಲ್ಲಿ 'ಸುಪ್ರೀಂ' ಆದೇಶ ಕಷ್ಟ ಕಷ್ಟ

ಹೊಸ ರೂಲ್ಸ್ ಕಷ್ಟ ಕಷ್ಟ

ಒಂದು ವೇಳೆ ವಾಹನ ಸವಾರರು ಗರಿಷ್ಠ ಮಟ್ಟದ ಥರ್ಡ್ ಪಾರ್ಟಿ ಇನ್ಸುರೆನ್ಸ್ ಖರೀದಿ ಮಾಡಿದ್ದೆ ಆದರೂ, ಪ್ರತಿ ವರ್ಷದ ಪರಿಹಾರ ಒದಗಿಸಬೇಕಾದ ವಿಮಾ ಸಂಸ್ಥೆಗಳಿಗೆ ಇದು ತುಂಬಲಾರದ ನಷ್ಟವೇ ಸರಿ. ಕಾರಣ, ಹಲವು ನ್ಯೂನತೆಗಳಿಂದ ಕೂಡಿರುವ ಹೊಸ ಆದೇಶದಿಂದ ಪ್ರಿಮಿಯಂ ಮೊತ್ತಗಳನ್ನ ಪ್ರತಿ ವರ್ಷ ಪರಿಷ್ಠರಣೆ ಮಾಡುವ ಅವಕಾಶವೇ ಇರುವುದಿಲ್ಲ.

ಥರ್ಡ್ ಪಾರ್ಟಿ ಇನ್ಸುರೆನ್ಸ್ ವಿಚಾರದಲ್ಲಿ 'ಸುಪ್ರೀಂ' ಆದೇಶ ಕಷ್ಟ ಕಷ್ಟ

ಹೀಗಾಗಿ ವಿಮಾ ಸಂಸ್ಥೆಗಳು ಕಾರು ಮಾಲೀಕರಿಗೆ 3 ವರ್ಷದ ಹಾಗೂ ಬೈಕ್ ಸವಾರರಿಗೆ 5 ವರ್ಷದ ಥರ್ಡ್ ಪಾರ್ಟಿ ಪ್ರಿಮಿಯಂ ಮೊತ್ತವನ್ನು ನಿಗದಿಪಡಿಸುವ ವಿಚಾರದಲ್ಲಿ ಗೊಂದಲಕ್ಕೆ ಸಿಲುಕಿದ್ದು, ಪ್ರಮುಖ ವಿಮಾ ಸಂಸ್ಥೆಗಳು ಹೊಸ ಆದೇಶವನ್ನು ಮತ್ತೊಮ್ಮೆ ಪರಿಶೀಲನೆ ಮಾಡುವಂತೆ ರಿಟ್ ಸಲ್ಲಿಸಲು ಮುಂದಾಗಿವೆ.

ಥರ್ಡ್ ಪಾರ್ಟಿ ಇನ್ಸುರೆನ್ಸ್ ವಿಚಾರದಲ್ಲಿ 'ಸುಪ್ರೀಂ' ಆದೇಶ ಕಷ್ಟ ಕಷ್ಟ

ಇದಲ್ಲದೇ ಹೊಸ ಆದೇಶವನ್ನು ಜಾರಿಗೊಳಿಸುವ ಮುನ್ನ ತೆರಿಗೆ ಇಲಾಖೆಯಲ್ಲಿನ ಕೆಲವು ನಿಯಮಗಳನ್ನ ಸಹ ಬದಲಾವಣೆ ತರಬೇಕಾದ ಅವಶ್ಯಕತೆಗಳಿದ್ದು, ಇದು ಒಂದೇ ತಿಂಗಳಿನಲ್ಲಿ ಬದಲಾವಣೆಗೊಳಿಸಿ ತುರ್ತು ಆದೇಶವನ್ನು ಹೊರಡಿಸುವುದು ಅಷ್ಟು ಸುಲಭವಲ್ಲ.

ಥರ್ಡ್ ಪಾರ್ಟಿ ಇನ್ಸುರೆನ್ಸ್ ವಿಚಾರದಲ್ಲಿ 'ಸುಪ್ರೀಂ' ಆದೇಶ ಕಷ್ಟ ಕಷ್ಟ

ಹೀಗಾಗಿ ಸುಪ್ರೀಂಕೋರ್ಟ್ ಆದೇಶವು ಮುಂದಿನ ತಿಂಗಳು ಸೆ.1 ರಿಂದ ಜಾರಿಯಾಗುವುದು ಬಹುತೇಕ ಅನುಮಾನವಾಗಿದ್ದು, ಆದೇಶದಲ್ಲಿನ ಕೆಲವು ಸಾಧಕ-ಬಾಧಕಗಳನ್ನು ಚರ್ಚಿಸಿದ ನಂತರವಷ್ಟೇ ಜಾರಿಗೊಳಿಸುವ ಅವಶ್ಯಕತೆಯಿದೆ.

ಥರ್ಡ್ ಪಾರ್ಟಿ ಇನ್ಸುರೆನ್ಸ್ ವಿಚಾರದಲ್ಲಿ 'ಸುಪ್ರೀಂ' ಆದೇಶ ಕಷ್ಟ ಕಷ್ಟ

ಮೋಟಾರು ವಿಮೆ ಏಕೆ ಬೇಕು?

ಭಾರತೀಯ ಮೋಟಾರು ವಾಹನ ಕಾಯ್ದೆ 1988 ಪ್ರಕಾರ ಎಲ್ಲ ವಾಹನಗಳ ಮಾಲಿಕರು ಕಾರು ವಿಮೆ ಮಾಡಿಸತಕ್ಕುದ್ದು. ಒಂದು ವೇಳೆ ಅಪಘಾತ ಸಂದರ್ಭದಲ್ಲಿ ವ್ಯಕ್ತಿಯ ಸುರಕ್ಷತೆ ಹಾಗೂ ಪರಿಹಾರ ಒದಗಿಸುವುದು ಮುಖ್ಯ. ಇದರಿಂದ ಮೂರನೇ ವ್ಯಕ್ತಿಗೆ ನೈಸರ್ಗಿಕ ರಕ್ಷಣೆಯೂ ಸಿಗುತ್ತದೆ.

ಥರ್ಡ್ ಪಾರ್ಟಿ ಇನ್ಸುರೆನ್ಸ್ ವಿಚಾರದಲ್ಲಿ 'ಸುಪ್ರೀಂ' ಆದೇಶ ಕಷ್ಟ ಕಷ್ಟ

ಕಾರು ವಿಮಾ ಪಾಲಿಸಿಯಲ್ಲಿ ಎಷ್ಟು ವಿಧ?

ಕಾರು ವಿಮಾ ಪಾಲಿಸಿಯಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ ಮೂರನೇ ವ್ಯಕ್ತಿ ವಿಮಾ ಹಾಗೂ ಸಮಗ್ರ ಪಾಲಿಸಿ. ಮೊದಲನೆಯ ಪಾಲಿಸಿಯಲ್ಲಿ ವಿಮೆಯೂ ಅಪಘಾತಕ್ಕೆ ಪರಿಹಾರ ನೀಡುವುದು ಮೂರನೇ ವ್ಯಕ್ತಿಗೆ ಮಾತ್ರ. ಅಂದರೆ ಕಾರಿಗೆ ಆಗುವ ಹಾನಿಯನ್ನು ಇದು ಒಳಗೊಂಡಿರುವುದಿಲ್ಲ. ಎರಡನೇಯದ್ದಲ್ಲಿ ವಾಹನಕ್ಕಾಗುವ ನಷ್ಟವನ್ನು ಭರಿಸುತ್ತದೆ. ಇದರಂತೆ ಪಾಲಿಸಿ ಆಧಾರದಲ್ಲಿ ನಷ್ಟ ಪರಿಹಾರ ದೊರಕುತ್ತದೆ.

ಥರ್ಡ್ ಪಾರ್ಟಿ ಇನ್ಸುರೆನ್ಸ್ ವಿಚಾರದಲ್ಲಿ 'ಸುಪ್ರೀಂ' ಆದೇಶ ಕಷ್ಟ ಕಷ್ಟ

ಬಂಪರ್ ಟು ಬಂಪರ್

ಇವೆರಡ ಹೊರತಾಗಿ ಇನ್ನೊಂದು ಬಗೆಯ ಬಂಪರ್ ಟು ಬಂಪರ್ ಎಂಬ ಹೊಸ ರೂಪದ ವಿಮಾ ಸೌಲಭ್ಯ ಕೂಡಾ ಇದೆ. ಬಂಪರ್ ಟು ಬಂಪರ್ ವಿಮೆ ಏಕರೂಪದ ಪಾಲಿಸಿಯಾಗಿದ್ದು, ಸಮಗ್ರ ವಿಮೆಯಲ್ಲಿ ಪರಿಗಣಿಸಲಾಗದ ಟೈರ್, ಬೆಲ್ಟ್, ಟ್ರಾನ್ಸ್‌ಮಿಷನ್ ಮುಂತಾದ ಬಿಡಿಭಾಗಗಳನ್ನು ಹೊಂದಿರುತ್ತದೆ. ಹೊಸ ಹಾಗೂ ದುಬಾರಿ ಕಾರುಗಳಿಗೆ ಇದು ಮಾಡಿಸಿದರೆ ಉತ್ತಮ.

ಥರ್ಡ್ ಪಾರ್ಟಿ ಇನ್ಸುರೆನ್ಸ್ ವಿಚಾರದಲ್ಲಿ 'ಸುಪ್ರೀಂ' ಆದೇಶ ಕಷ್ಟ ಕಷ್ಟ

ಯಾವುದು ಉತ್ತಮ?

ಹೆಸರಲ್ಲೇ ಸೂಚಿಸಿರುವಂತೆಯೇ ಎಲ್ಲ ಬಗೆಯ ನಷ್ಟಗಳನ್ನು ಭರಿಸುವ ಸಮಗ್ರ ವಿಮಾ ಪಾಲಿಸಿ ಮಾಡಿಸುವುದು ಉತ್ತಮ. ಆದರೆ ಇದು ದುಬಾರಿಯೂ ಹೌದು. ಇದರಲ್ಲಿ ಥರ್ಡ್ ಪಾರ್ಟಿ ಜತೆಗೆ ವಾಹನಕ್ಕಾಗುವ ನಷ್ಟ ಜತೆಗೆ ಸಹ ಪ್ರಯಾಣಿಕ ಸೇರಿದಂತೆ ಮಾಲೀಕರಿಗಾಗುವ ನಷ್ಟವನ್ನು ಭರಿಸುತ್ತದೆ.

ಥರ್ಡ್ ಪಾರ್ಟಿ ಇನ್ಸುರೆನ್ಸ್ ವಿಚಾರದಲ್ಲಿ 'ಸುಪ್ರೀಂ' ಆದೇಶ ಕಷ್ಟ ಕಷ್ಟ

ಏನೆಲ್ಲ ಅಗತ್ಯವಿದೆ?

ವಿಮಾ ಪಾಲಿಸಿದಾರರಿಗೆ ಸರಿಯಾದ ಮಾಹಿತಿ ನೀಡಬೇಕು. ಅಂದರೆ ವಿಮಾ ಕಂಪನಿಗಳು ನೀಡುವ ಫಾರ್ಮ್ ನಲ್ಲಿ ನೀವಿರುವ ಜಾಗ, ಯಾವ ಉದ್ದೇಶಕ್ಕಾಗಿ ವಾಹನ ಬಳಸುತ್ತೀರಿ, ಆಫೀಸ್ ಬಳಕೆಗಾಗಿ ಅಥವಾ ವಾಣಿಜ್ಯ ಬಳಕೆಗಾಗಿ ಇವುಗಳ ಬಗ್ಗೆ ಸರಿಯಾದ ಮಾಹಿತಿ ನೀಡಿದ್ದಲ್ಲಿ ಹಲವು ವಿನಾಯಿತಿಗಳು ನಿಮ್ಮ ಪಾಲಾಗುತ್ತವೆ.

ಥರ್ಡ್ ಪಾರ್ಟಿ ಇನ್ಸುರೆನ್ಸ್ ವಿಚಾರದಲ್ಲಿ 'ಸುಪ್ರೀಂ' ಆದೇಶ ಕಷ್ಟ ಕಷ್ಟ

ಕಂಪನಿನಿಂದ ಕಂಪನಿಗೆ ಪ್ರೀಮಿಯಂ ವಿಭಿನ್ನ

ವಿಮಾ ಕಂಪನಿಗಳು ಗ್ರಾಹಕರಿಗೆ ನೀಡುವ ವಿಮಾರಕ್ಷಣೆ ಕಂಪನಿಯಿಂದ ಕಂಪನಿಗೆ ಭಿನ್ನವಾಗಿರುತ್ತದೆ. ಹಾಗಾಗಿ ಗ್ರಾಹಕರು ತಮ್ಮ ಕಾರುಗಳಿಗೆ ಪಡೆಯುವ ವಿಮೆಗಾಗಿ ಲಭ್ಯವಿರುವ ವಿಮಾ ಕಂಪನಿಗಳಿಂದ ತಮಗಾಗುವ ಲಾಭ ಕುರಿತು ಸಮಗ್ರ ಮಾಹಿತಿ ಹೊಂದಿರಬೇಕು.

ಥರ್ಡ್ ಪಾರ್ಟಿ ಇನ್ಸುರೆನ್ಸ್ ವಿಚಾರದಲ್ಲಿ 'ಸುಪ್ರೀಂ' ಆದೇಶ ಕಷ್ಟ ಕಷ್ಟ

ಒಟ್ಟಿನಲ್ಲಿ ಅಪಘಾತ ಸಂದರ್ಭದಲ್ಲಿ ಚಾಲಕರ ಸೇರಿದಂತೆ ಸಹ ಪ್ರಯಾಣಿಕರ ಹಿತ ಕಾಪಾಡುವ ವಿಮೆಯನ್ನು ಮಾಡಿಸಿದರೆ ಉತ್ತಮ. ಕೇವಲ ಅಪಘಾತ ಮಾತ್ರವಲ್ಲ, ಕಳ್ಳತನ, ಬೆಂಕಿ ಆಕಸ್ಮಿಕ ಇತ್ಯಾದಿ ಅನಾಹುತಗಳಿಗೂ ವಿಮಾ ರಕ್ಷಣೆ ದೊರಕುತ್ತಿದೆ.

Kannada
Read more on insurance traffic rules
English summary
Non-life insurers find going tough.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more