ವಿಮೆ ಹೆಸರಿನಲ್ಲಿ ಗ್ರಾಹಕನಿಗೆ ಸೇಲ್ಸ್ ಮ್ಯಾನೇಜರ್‍‍ನಿಂದ ಮಹಾ ಮೋಸ.. ಕೊನೆಗೆ ಏನಾಯ್ತು.?

ಮೊನ್ನೆ ಸ್ಕೋಡಾ, ನೆನ್ನೆ ಟಾಟಾ ಮೋಟಾರ್ಸ್ ಇಂದು ಹ್ಯುಂಡೈ ಶೋರಂ ಸಿಬ್ಬಂದಿ ಇಂದ ಹೀಗೆ ಗ್ರಾಹಕರು ಪ್ರತಿಯೊಂದು ಕಡೆ ತಾವು ಮಾಡುವ ನಿರ್ಲಕ್ಯದಿಂದ ಮೋಸ ಹೋಗುತ್ತಿದ್ದಾರೆ. ಯಾವುದಾದರು ಒಂದು ವಸ್ತುವನ್ನು ಖರೀದಿಸುವಾಗ ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದಿದ್ದರೂ ಮುಖ್ಯವಾದ ಮಾಹಿಗಳನ್ನು ನಾವು ಅರಿಯುವುದು ಅನಿವಾರ್ಯ.

ವಿಮೆ ಹೆಸರಿನಲ್ಲಿ ಗ್ರಾಹಕನಿಗೆ ಸೇಲ್ಸ್ ಮ್ಯಾನೇಜರ್‍‍ನಿಂದ ಮಹಾ ಮೋಸ.. ಕೊನೆಗೆ ಏನಾಯ್ತು.?

ಕಾರು ಅಥವಾ ಬೇರೆ ಯಾವ ವಾಹನವನ್ನು ಖರೀದಿಸುವ ಮುನ್ನ ಅದಕ್ಕೆ ಹೂಡುತ್ತಿರುವ ಹಣವು ಸೂಕ್ತವೇ ಮತ್ತು ಯಾವುದಕ್ಕೆ ಎಷ್ಟು ಹಣ್ಣ ನೀಡುತ್ತಿರುತ್ತೇವೆ ಎಂದು ಪರಿಶೀಲಿಸಬೇಕು, ಇಲ್ಲಿಯೆ ಹಲವು ಸೇಲ್ಸ್ ಮ್ಯಾನೇಜರ್‍‍ಗಳು ನಮಗೆ ಟೋಪಿ ಹಾಕಲು ನೋಡುತ್ತಾರೆ. ಹೊಸ ಕಾರು ಖರೀದಿಸುವಾಗ ಅಧಿಕೃತ ಡೀಲರ್‍‍ನ ಬಳಿಯೆ ವಿಮೆಯನ್ನು ಕೊಳ್ಳಲು ಒತ್ತಾಯಿಸಬಾರದು.

ವಿಮೆ ಹೆಸರಿನಲ್ಲಿ ಗ್ರಾಹಕನಿಗೆ ಸೇಲ್ಸ್ ಮ್ಯಾನೇಜರ್‍‍ನಿಂದ ಮಹಾ ಮೋಸ.. ಕೊನೆಗೆ ಏನಾಯ್ತು.?

ಇಂತಹ ಘಟನೆಯೊಂದು ಚೆನ್ನೈ ನಗರದಲ್ಲಿ ನದೆದಿದ್ದು, ಅಲ್ಲಿನ ಹ್ಯುಂಡೈ ಶೋರಂಗೆ ಹೊಸ ವೆರ್ನಾ ಕಾರು ಖರೀದಿಸಲು ಹೋದ ಗ್ರಾಹಕನಿಗೆ ಅಲ್ಲಿದ್ದ ಸೇಲ್ಸ್ ಮ್ಯಾನೇಜರ್ ಅವರಲ್ಲಿಯೆ ಕಡ್ಡಾಯವಾಗಿ ವಿಮೆಯನ್ನು ಕೊಳ್ಳಬೇಕೆಂದು ಗ್ರಾಹಕನನ್ನು ಒತ್ತಾಯಿಸಿದ್ದಾನೆ. ಅದಾದ ನಂತರ ನಡೆದ ಘಟನೆಯ ಬಗ್ಗೆ ತಿಳಿಯಲು ಮುಂದಕ್ಕೆ ಓದಿರಿ..

ವಿಮೆ ಹೆಸರಿನಲ್ಲಿ ಗ್ರಾಹಕನಿಗೆ ಸೇಲ್ಸ್ ಮ್ಯಾನೇಜರ್‍‍ನಿಂದ ಮಹಾ ಮೋಸ.. ಕೊನೆಗೆ ಏನಾಯ್ತು.?

ಚೈನ್ನೈ ನಗರದ ನಿವಾಸಿಯಾದ ಸ್ಯಾಂಡಿಯವರು ರೂ. 15.20 ಲಕ್ಷ ನೀಡಿ ಹೊಸದಾದ ಹ್ಯುಂಡೈ ವೆರ್ನಾ ಕಾರನ್ನುಅಣ್ಣಾನಗರ್‍‍ನಲ್ಲಿರುವ, ಕುನ್ ಹ್ಯುಂಡೈ ಶೋರಂ ಡೀಲರ್‍‍ನ ಬಳಿ ಖರೀದಿಸಿದ್ದರು. ಆದ್ರೆ ಖರೀದಿಸಿದ ನಂತರ ಇನ್‍ವಾಯ್ಸ್ ಅನ್ನು ಗಮನಿಸಿದಾಗ ಅದರಲ್ಲಿ ವಿಮೆಯ ಮೊತ್ತವೇ 73,000 ಸಾವಿರದಲಿತ್ತು.

ವಿಮೆ ಹೆಸರಿನಲ್ಲಿ ಗ್ರಾಹಕನಿಗೆ ಸೇಲ್ಸ್ ಮ್ಯಾನೇಜರ್‍‍ನಿಂದ ಮಹಾ ಮೋಸ.. ಕೊನೆಗೆ ಏನಾಯ್ತು.?

ಇದನ್ನು ಗಮನಿಸಿ ತಕ್ಷಣ ಅವರ ಸ್ನೇಹಿತನ ಸಲಹೆಯನ್ನು ಕೇಳಲು ಮುಂದಾದಗ ಅವರು 12 ಲಕ್ಷದ ವಾಹನಕ್ಕು ಸುಮಾರು 53ಸಾವಿರದ ವಿಮೆಯ ಖರ್ಚನ್ನು ಮಾತ್ರ ನೀಡಲು ಸಾಧ್ಯ ಎಂದು ಹೇಳಿದ್ದು, ಮತ್ತು ಇದರಲ್ಲಿ ಎಲ್ಲಾ ಅನುಕೂಲತೆಗಳು ಸೇರಿಕೊಂಡಿರುತ್ತವೆ ಎಂದು ಸಲಹೆ ನೀಡಿದ್ದಾರೆ.

ವಿಮೆ ಹೆಸರಿನಲ್ಲಿ ಗ್ರಾಹಕನಿಗೆ ಸೇಲ್ಸ್ ಮ್ಯಾನೇಜರ್‍‍ನಿಂದ ಮಹಾ ಮೋಸ.. ಕೊನೆಗೆ ಏನಾಯ್ತು.?

ವಿಮೆಯ ಮೊತ್ತದಲ್ಲಿ ಸುಮಾರು 2 ರಿಂದ 3 ಸಾವಿರದ ವ್ಯತ್ಯಾಸವಿದ್ದರೆ ನಾನು ನೀಡುತ್ತಿದ್ದೆ ಆದರೆ ಸರಾಸರಿಯಾಗಿ 20 ಸಾವಿರದ ವ್ಯಾತ್ಯಾಸವನ್ನು ನೀಡಲು ಆತನ ಮನಸ್ಸು ಸಮ್ಮತಿಸಲಿಲ್ಲ ಎಂದು ಸ್ಯಾಂಡಿಯವರ ಅಭಿಪ್ರಾಯ.

ವಿಮೆ ಹೆಸರಿನಲ್ಲಿ ಗ್ರಾಹಕನಿಗೆ ಸೇಲ್ಸ್ ಮ್ಯಾನೇಜರ್‍‍ನಿಂದ ಮಹಾ ಮೋಸ.. ಕೊನೆಗೆ ಏನಾಯ್ತು.?

ಇದರ ಬಗ್ಗೆ ಮಾತನಾಡಲು ಕಾರು ಖರೀದಿ ಮಾಡಿದ ಶೋರಂಗೆ ಭೇಟಿ ನೀಡಿ, ತನಗೆ ಕಾರನ್ನು ಖರೀದಿಸಲು ಹೇಳಿದ ಸೇಲ್ಸ್ ಮ್ಯಾನೇಜರ್‍‍ನ ಬಳಿ ವ್ಯವಹರಿಸಲು ಹೇಳಿದಾಗ ಅವರು, ಖಡ್ಡಾಯವಾಗಿ ನಮ್ಮಲ್ಲಿಯೇ ನೀವು ವಿಮೆಯನ್ನು ಕೊಳ್ಳಬೇಕು ಏಕೆಂದರೆ ನಾವು ಇದರಲ್ಲಿ ಹೊರಗಡೆಯ ಇನ್ನಿತರೆ ವಿಮೆ ಸಂಸ್ಥೆಗಳು ನೀಡದ ಸೌಕರ್ಯಗಳನ್ನು ನಾವು ನಿಮಗೆ ನೀಡುತ್ತೆವೆ ಎಂದು ಹೇಳಿದ್ದಾರೆ.

ವಿಮೆ ಹೆಸರಿನಲ್ಲಿ ಗ್ರಾಹಕನಿಗೆ ಸೇಲ್ಸ್ ಮ್ಯಾನೇಜರ್‍‍ನಿಂದ ಮಹಾ ಮೋಸ.. ಕೊನೆಗೆ ಏನಾಯ್ತು.?

ಇದರಿಂದ ಗೊಂದಲ್ಲದಲ್ಲಿ ಸಿಲುಕಿದ್ದ ಸ್ಯಾಂಡಿ ತಮ್ಮ ಮತ್ತೊಬ್ಬ ಸ್ನೇಹಿತರಾದ ಭರಣೀಂದ್ರನ್ ಗುಣಸೇಕರನ್ ಅವರ ಸಲಹೆಗಾಗಿ ಮುಂದಾದರು. ಅವರಿಗೆ ನೀಡಲಾದ ಟಾರ್ಗೆಟ್ ಅನ್ನು ಮುಗಿಸಲು ಇಂತಹ ಬೊಗಸೆ ಮಾತುಗಳನ್ನು ಹೇಳಿ ಹೇಗಾದರು ನಮ್ಮನ್ನು ಖರೀದಿಸುವ ಹಾಗೆ ಮಾಡುತ್ತಾರೆ ಎಂದು ಸ್ನೇಹಿತ ಹೇಳಿದರು.

ವಿಮೆ ಹೆಸರಿನಲ್ಲಿ ಗ್ರಾಹಕನಿಗೆ ಸೇಲ್ಸ್ ಮ್ಯಾನೇಜರ್‍‍ನಿಂದ ಮಹಾ ಮೋಸ.. ಕೊನೆಗೆ ಏನಾಯ್ತು.?

ಇದು ನನ್ನಿಂದ ಸಾದ್ಯವಾಗದ ಕೆಲಸ ಮತ್ತು ಇದರ ಬಗ್ಗೆ ಪೂರ್ಣ ಮಾಹಿತಿ ಇಲ್ಲವಾದುದರಿಂದ ನಾನೊಬ್ಬನೆ ಈ ಕಾರ್ಯವನ್ನು ಮಾಡಲು ಆಗುತ್ತದೆಯೆ ಎಂದು ಗೂಗಲ್ ಮಾಡಿದರು. ಅದರಲ್ಲಿ ಮೋಟಾರ್ ವೆಹಿಕಲ್ ಆಕ್ಟ್ ನ ಪ್ರಕಾರ ಯಾವೊಬ್ಬ ಡೀಲರ್ ಅಥವಾ ಸೇಲ್ಸ್ ಮ್ಯಾನೇಜರ್ ತಮ್ಮಲಿಯೆ ಖಡ್ಡಾಯವಾಗಿ ವಿಮೆಯನ್ನು ಕೊಳ್ಳಲು ಒತ್ತಾಯಿಸುವ ಹಾಗಿಲ್ಲ ಎಂದು ಉಲ್ಲೇಖಿಸಲಾಗಿದೆ.

ವಿಮೆ ಹೆಸರಿನಲ್ಲಿ ಗ್ರಾಹಕನಿಗೆ ಸೇಲ್ಸ್ ಮ್ಯಾನೇಜರ್‍‍ನಿಂದ ಮಹಾ ಮೋಸ.. ಕೊನೆಗೆ ಏನಾಯ್ತು.?

ವಿಷಯವನ್ನು ಅರಿತ ಸ್ಯಾಂಡಿ ಹ್ಯುಂಡೈ ಸಂಸ್ಥೆಯ ಗ್ರಾಹಕ ಪ್ರತಿನಿಧಿಯೊಂದಿಗೆ ಕರೆಯಲ್ಲಿ 'ನಾವು ನಿಮ್ಮ ಸಂಸ್ಥೆಯ ಕಾರನ್ನು ಖರೀದಿಸಿದರೆ, ಅದರ ಜೊತೆಗೆ ಖಡ್ಡಾಯವಾಗಿ ನಿಮ್ಮಲಿಯೇ ವಿಮೆಯನ್ನು ಕೂಡ ಕೊಳ್ಳಬೇಕೆ'ಎಂದು ಕೇಳಿದಾಗ ಮತ್ತು ಮೋಟಾರ್ ಖಾಯ್ದೆಯ ಬಗ್ಗೆ ಮಾತನಾಡಲು ಶುರು ಮಾಡಿದಾಗ ಆ ಪ್ರತಿನಿದಿಯು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮತ್ತೊಂದು ಕರೆಯಲ್ಲಿ ನಿಮಗೆ ನೀಡುತ್ತೇವೆ ಎಂದು ಹೇಳಿ ಕರೆ ಕಟ್ ಮಾಡಿದ್ದಾರೆ.

ವಿಮೆ ಹೆಸರಿನಲ್ಲಿ ಗ್ರಾಹಕನಿಗೆ ಸೇಲ್ಸ್ ಮ್ಯಾನೇಜರ್‍‍ನಿಂದ ಮಹಾ ಮೋಸ.. ಕೊನೆಗೆ ಏನಾಯ್ತು.?

ಇದಾದ ನಂತರ ಯಾವುದೇ ಕರೆಯು ಬಾರದ ನಂತರ ತಮ್ಮಲಿದ್ದ ಆಧಾರನವನ್ನು ಸೇರಿಸಿ ಒಂದೆರಡು ಮೈಲ್‍ಗಳನ್ನು ಕಳುಹಿಸಿದರು, ಅಲ್ಲಿಂದ ಸಹ ಪ್ರತ್ಯುತ್ತರ ಸಿಗಲಿಲ್ಲ. ಹೊಸ ಕಾರಿನ ಡೆಲಿವರಿ ಸಮಯವು ಸಮೀಪಸುತ್ತಿದ್ದಲ್ಲಿ ಸೇಲ್ಸ್ ಮ್ಯಾನೇಜರ್‍‍ನ ಕಡೆಯಿಂದ ಇನ್ನುಳಿದ ಹಣವನ್ನು ಪಾವತಿಸಲು ಪದೇ ಪದೇ ಕರೆಗಳು ಬರುತ್ತಿದ್ದವು.

ವಿಮೆ ಹೆಸರಿನಲ್ಲಿ ಗ್ರಾಹಕನಿಗೆ ಸೇಲ್ಸ್ ಮ್ಯಾನೇಜರ್‍‍ನಿಂದ ಮಹಾ ಮೋಸ.. ಕೊನೆಗೆ ಏನಾಯ್ತು.?

20 ಸಾವಿರದ ಮೊತ್ತವು ಜೀರ್ಣಿಸಿಕೊಳ್ಳುವ ಮಾತಲ್ಲವೆಂದು ಈ ಬಾರಿ ಸ್ಯಾಂಡಿಯವರು ದೆಹಲಿಯಲ್ಲಿರುವ ಹ್ಯುಂಡೈ ಕಸ್ಟಮರ್ ಕೇರ್‍‍ಗೆ ಕರೆ ಮಾಡಿದರು. ಕರೆಯಲ್ಲಿ ಮಾತನಾಡಿದ ಗ್ರಾಹಕ ಪ್ರತಿನಿಧಿಯು ಸ್ಪಷ್ಟವಾಗಿ 'ನಾವು ಯಾವುದೇ ಗ್ರಾಹಕರನ್ನು ನಮ್ಮಲ್ಲಿಯೆ ವಿಮೆಯನ್ನು ಕೊಳ್ಳಲು ಒತ್ತಾಯಿಸುವುದಿಲ್ಲ ಎಂದು ಹೇಳಲಾಗಿ, ಒತ್ತಾಯಿಸಿದ ಆ ಸೇಲ್ಸ್ ಮ್ಯಾನೇಜರ್‍‍ನನ್ನು ಕರೆಯಲ್ಲಿ ಭಾಗಿಯಾಗಲು ಆದೇಶಿಸಿದರು.

ವಿಮೆ ಹೆಸರಿನಲ್ಲಿ ಗ್ರಾಹಕನಿಗೆ ಸೇಲ್ಸ್ ಮ್ಯಾನೇಜರ್‍‍ನಿಂದ ಮಹಾ ಮೋಸ.. ಕೊನೆಗೆ ಏನಾಯ್ತು.?

ಸ್ಯಾಂಡಿ ಸೇಲ್ಸ್ ಮ್ಯಾನೇಜರ್‍‍ಗೆ ಕರೆ ಮಾಡಿದ ನಂತರ, ಕರೆಯಲಿದ್ದ ಗ್ರಾಹಕರ ಪ್ರತಿನಿದಿಗೆ ನಡೆದ ಘಟನೆಯ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಲು ಮುಂದಾದರು. ಈ ಕುರಿತಾಗಿ ಸೇಲ್ಸ್ ಮ್ಯಾನೇಜರ್‍‍ನನ್ನು ಮಾತನಾಡಲು ಹೇಳಿದಾಗ ಆತ 'ಹ್ಯುಂಡೈ ಸಂಸ್ಥೆ ಪಾಲಿಸಿಯ ಪ್ರಕಾರ ಗ್ರಾಹಕರು ಡೀಲರ್‍‍ನ ಬಳಿ ಖಡ್ಡಾಯವಾಗಿ ವಿಮೆಯನ್ನು ಖರಿದಿಸಬೇಕು ಇಲ್ಲವಾದರೆ ಭವಿಷ್ಯದಲ್ಲಿ ಕ್ಲೈಮ್ ಮಾಡಲು ಆಗುವ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳುತ್ತಿದ್ದ. ಆದರೆ ಪಾಪ ಸೇಲ್ಸ್ ಮ್ಯಾನೇಜರ್‍‍ಗೆ ಕರೆಯಲ್ಲಿ ಗ್ರಾಹಕರ ಪ್ರತಿನಿಧಿ ಕೂಡಾ ಇರುವುದು ಆತನನಿಗೆ ತಿಳಿದಿಲ್ಲ.

ವಿಮೆ ಹೆಸರಿನಲ್ಲಿ ಗ್ರಾಹಕನಿಗೆ ಸೇಲ್ಸ್ ಮ್ಯಾನೇಜರ್‍‍ನಿಂದ ಮಹಾ ಮೋಸ.. ಕೊನೆಗೆ ಏನಾಯ್ತು.?

ತಕ್ಷಣವೇ ಗ್ರಾಹಕ ಪ್ರತಿನಿಧಿಯು ಸ್ಯಾಂಡಿಯವರ ಮತ್ತು ಸೇಲ್ಸ್ ಮ್ಯಾನೇಜರ್ ಅವರ ಸಂಭಾಷಣೆಯನ್ನು ತಡೆದು, ಗ್ರಾಹಕ ಪ್ರತಿನಿಧಿಯು ಸೇಲ್ಸ್ ಮ್ಯಾನೇಜರ್‍‍ಗೆ 'ಮಾನ್ಯರೆ ನೀವು ಹೇಳಿದ ಈ ಹಕ್ಕು ಯಾವ ಪಾಲಿಸಿಯಲ್ಲಿ ವ್ಯಕ್ತವಾಗಿದೆ ದೃಢಿಕರಿಸಿ ಎಂದು ಕೇಳಿದಾಗ, ಸೇಲ್ಸ್ ಮ್ಯಾನೇಜರ್ ಮಂಕಾದ.

ವಿಮೆ ಹೆಸರಿನಲ್ಲಿ ಗ್ರಾಹಕನಿಗೆ ಸೇಲ್ಸ್ ಮ್ಯಾನೇಜರ್‍‍ನಿಂದ ಮಹಾ ಮೋಸ.. ಕೊನೆಗೆ ಏನಾಯ್ತು.?

ಸೇಲ್ಸ್ ಮ್ಯಾನೇಜರ್ ತಾನು ಮತ್ತು ಸ್ಯಾಂಡಿಯವರ ಸಂಭಾಷಣೆಯ ನಡುವೆ ಹ್ಯುಂಡೈ ಸಿಬ್ಬಂದಿಯು ಇರುವುದು ತಿಳಿದಿರಲಿಲ್ಲ ಪಾಪ. ಹ್ಯುಂಡೈ ಸಿಬ್ಬಂದಿಯು ಕರೆಯಲ್ಲಿ ಇರುವುದನ್ನು ಅರಿತ ನಂತರ ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡಲು ನಾವು ಮುಂದಾಗುತ್ತೇವೆ ಎಂದು ಹೇಳಿಕೊಂಡಿದ್ದಾನೆ.

ವಿಮೆ ಹೆಸರಿನಲ್ಲಿ ಗ್ರಾಹಕನಿಗೆ ಸೇಲ್ಸ್ ಮ್ಯಾನೇಜರ್‍‍ನಿಂದ ಮಹಾ ಮೋಸ.. ಕೊನೆಗೆ ಏನಾಯ್ತು.?

ಇಷ್ಟೆಲ್ಲಾ ಆದ ನಂತರ ಡೀಲರ್ ಸ್ಯಾಂಡಿಯವರು ಹೊರಗಡೆ ವಿಮೆಯನ್ನು ಖರೀದಿಸಲು ಅವಕಾಶ ಮಾಡಿಕೊಟ್ಟು, ಬಿಲ್‍ನಲ್ಲಿ ವಿಮೆಯ ಬಗ್ಗೆ ಯಾವುದೇ ಲೆಕ್ಕಾಚಾರವನ್ನು ಉಲ್ಲೇಖಿಸಲಿಲ್ಲ. ಇದಾದ ನಂತರ ಅದೇ ಸೇಲ್ಸ್ ಮ್ಯಾನೇಜರ್ ಸ್ಯಾಂಡಿಯವರಿಗೆ ಕರೆ ಮಾಡಿ ಹೀಯಾಳಿಸುವ ಹಾಗೆ 'ನಾವು ನಿಮ್ಮಂತ ಗ್ರಾಹಕರನ್ನು ನೋಡಿಯೇ ಇಲ್ಲ ಸರ್'ಎಂದು ಹೊಗಳಿದ್ದಾನೆ.

ವಿಮೆ ಹೆಸರಿನಲ್ಲಿ ಗ್ರಾಹಕನಿಗೆ ಸೇಲ್ಸ್ ಮ್ಯಾನೇಜರ್‍‍ನಿಂದ ಮಹಾ ಮೋಸ.. ಕೊನೆಗೆ ಏನಾಯ್ತು.?

ಸ್ಯಾಂಡಿಯವರು ಈ ವಿಷಯದ ಬಗ್ಗೆ ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮುಂದಾದಾಗ ಅನೇಕರಿಗೆ ಈ ವಿಷಯವು ತಿಳಿದೇ ಇಲ್ಲವಂತೆ. ನಂತರ ಸ್ಯಾಂಡಿಯವರು ತಮ್ಮ ಸಂಬಂದಿಕರು ಯಾರಾದರು ಹೊಸ ಕಾರನ್ನು ಖರೀದಿಸಿದರೆ ಕಾತುರದಿಂದ ಕಾರಿನ ಬಿಲ್ ಅನ್ನು ಗಮನಿಸಿ ಅಲ್ಲಿದ್ದ ಲೋಪವನ್ನು ತಮ್ಮ ಸಂಭಂದಿಕರಿಗೆ ತಿಳಿಸಲು ಮುಂದಾದರು.

ವಿಮೆ ಹೆಸರಿನಲ್ಲಿ ಗ್ರಾಹಕನಿಗೆ ಸೇಲ್ಸ್ ಮ್ಯಾನೇಜರ್‍‍ನಿಂದ ಮಹಾ ಮೋಸ.. ಕೊನೆಗೆ ಏನಾಯ್ತು.?

ಹೊಸ ಕಾರು ಖರೀದಿಸಿದ ಅವರ ಸ್ನೇಹಿತರಲ್ಲಿ ವಿಮೆಗಾಗಿ ನೀಡಿದ ಮೊತ್ತವನ್ನು ಗಮನಿಸಿ, ಅವರು ಇವೆಲ್ಲವೂ ಕೇವಲ ಪ್ಯಾಕೇಜಿನಲ್ಲಿ ಸೇರಿರುವುವ ಮೊತ್ತವೆಂದು ಸುಮ್ಮನಿದ್ದರಂತೆ. ಹೀಗಾಗಿ ನೀವಾಗಲಿ ನಿಮ್ಮ ಬಂಧು-ಮಿತ್ರರು ಈ ರೀತಿಯ ವ್ಯವಹಾರಗಳನ್ನು ನಡೆಸುವಾಗ ಎಚ್ಚರದಿಂದಿರಲು ಉಪದೇಶಿಸಿ.

Most Read Articles

Kannada
English summary
Great fraud by salesman in the name of insurance

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more