ಭಾರತದಲ್ಲಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರು ಆವೃತ್ತಿ ಬಿಡುಗಡೆ

ಜೆಕ್ ಆಟೋ ಉತ್ಪಾದನಾ ಸಂಸ್ಥೆಯಾದ ಸ್ಕೋಡಾ ಕಳೆದ ತಿಂಗಳ ಹಿಂದಷ್ಟೇ ಸೂಪರ್ಬ್ ಕಾರ್ಪೊರೇಟ್ ಎಡಿಷನ್ ಬಿಡುಗಡೆಗೊಳಿಸಿತ್ತು. ಇದೀಗ ಸ್ಪೋರ್ಟಿ ಸೆಡಾನ್ ಗ್ರಾಹಕರಿಗಾಗಿ ಸೂಪರ್ಬ್ ಸ್ಪೋರ್ಟ್‌ಲೈನ್ ಮಾದರಿಗಳನ್ನು ಭಾರತದಲ್ಲೂ ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರು ಆವೃತ್ತಿ ಬಿಡುಗಡೆ

ಸ್ಕೋಡಾ ಇಂಡಿಯಾ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ಸ್ಪೋರ್ಟ್‌ಲೈನ್ ಸೆಡಾನ್ ಆವೃತ್ತಿಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ನೊಂದಿಗೆ ಮಾರಾಟಕ್ಕೆ ಲಭ್ಯವಿದ್ದು, ಪೆಟ್ರೋಲ್ ಆವೃತ್ತಿಯ ಬೆಲೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.28.99 ಲಕ್ಷಕ್ಕೆ ಮತ್ತು ಡೀಸೆಲ್ ಆವೃತ್ತಿಯ ಬೆಲೆಯನ್ನು ರೂ. 31.49 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಭಾರತದಲ್ಲಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರು ಆವೃತ್ತಿ ಬಿಡುಗಡೆ

ಸಾಮಾನ್ಯ ಮಾದರಿಯ ಸೂಪರ್ಬ್ ಆವೃತ್ತಿಗಿಂತಲೂ ವಿಭಿನ್ನ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಸೂಪರ್ಬ್ ಸ್ಪೋರ್ಟ್‌ಲೈನ್ ಆವೃತ್ತಿಗಳಲ್ಲಿ ಸ್ಪೋರ್ಟಿ ಮಾದರಿಯ ಫ್ರಂಟ್ ಗ್ರೀಲ್, ರೂಫ್, ಒಆರ್‌ವಿಎಂ, ಸೈಡ್ ಸ್ಕರ್ಟ್, ಬೂಟ್ ಸ್ಪಾಯ್ಲರ್ ನೀಡಲಾಗಿದೆ.

ಭಾರತದಲ್ಲಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರು ಆವೃತ್ತಿ ಬಿಡುಗಡೆ

ಸೆಡಾನ್ ಪ್ರಿಯರ ನೆಚ್ಚಿನ ಆಯ್ಕೆಯಾದ ಸ್ಪೋರ್ಟ್‌ಲೈನ್ ಕಾರುಗಳಲ್ಲಿ ಹೊಸದಾಗಿ ಬ್ಲಡ್ ರೆಡ್ ಕಲರ್ ಆಯ್ಕೆಯನ್ನು ನೀಡಲಾಗಿದ್ದು, ವೈಟ್ ಮತ್ತು ಗ್ರೇ ಬಣ್ಣದಲ್ಲೂ ಕೂಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಆವೃತ್ತಿಗಳನ್ನು ಆಯ್ದುಕೊಳ್ಳಬಹುದಾಗಿದೆ.

ಭಾರತದಲ್ಲಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರು ಆವೃತ್ತಿ ಬಿಡುಗಡೆ

ಇದಲ್ಲದೇ ಸಾಮಾನ್ಯ ಕಾರುಗಳಿಂತಲೂ ವಿಭಿನ್ನವಾಗಿರುವ ಹೊಸ ಕಾರುಗಳಲ್ಲಿ ಹೆಡ್‌ಲ್ಯಾಂಪ್ ಮತ್ತು ಫಾಗ್ ಲ್ಯಾಂಪ್ ಕೂಡಾ ನವೀಕೃತಗೊಂಡಿದ್ದು, ಸ್ಪೋರ್ಟಿ ಲುಕ್ ಹೆಚ್ಚಿಸಲು 19-ಇಂಚಿನ ಡ್ಯುಯಲ್ ಟೋನ್ ಅಲಾಯ್ ಚಕ್ರಗಳನ್ನು ಜೋಡಿಸಲಾಗಿದೆ.

ಭಾರತದಲ್ಲಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರು ಆವೃತ್ತಿ ಬಿಡುಗಡೆ

ಇನ್ನು ಕಾರಿನ ಒಳಭಾಗದ ವಿನ್ಯಾಸಗಳ ಬಗೆಗೆ ಹೇಳುವುದಾದರೇ, ಬ್ಲ್ಯಾಕ್ ಥೀಮ್‌ನೊಂದಿಗೆ ರೆಡ್ ಅಕ್ಸೆಂಟ್ ಹೊಂದಿರುವ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರುಗಳು, ಡ್ಯಾಶ್‌ಬೋರ್ಡ್ ಮೇಲೆ ಕಾರ್ಬನ್ ಫೈಬರ್ ಟ್ರಿಮ್ ಮತ್ತು ಅಲ್ಯುಮಿನಿಯಂ ಪೆಡಲ್ಸ್ ಪಡೆದುಕೊಂಡಿದೆ.

ಭಾರತದಲ್ಲಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರು ಆವೃತ್ತಿ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರುಗಳು 1.8-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದರೇ, 2-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆದುಕೊಂಡಿದೆ. ಈ ಮೂಲಕ ಪೆಟ್ರೋಲ್ ಎಂಜಿನ್ 180ಬಿಎಚ್‌ಪಿ, 250ಎನ್ಎಂ ಟಾರ್ಕ್ ಮತ್ತು ಡಿಸೇಲ್ ಎಂಜಿನ್ 177-ಬಿಎಚ್‌ಪಿ, 350-ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಭಾರತದಲ್ಲಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರು ಆವೃತ್ತಿ ಬಿಡುಗಡೆ

ಹಾಗೆಯೇ ಪೆಟ್ರೋಲ್ ಕಾರುಗಳಲ್ಲಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅಳವಡಿಕೆಯಿದ್ದು, ಡಿಸೇಲ್ ಕಾರುಗಳಲ್ಲಿ 6-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಣೆ ಮಾಡಿರುವುದು ಸೆಡಾನ್ ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ.

MOST READ: ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ಭಾರತದಲ್ಲಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರು ಆವೃತ್ತಿ ಬಿಡುಗಡೆ

ಇನ್ನು ಹೊಸ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಗರಿಷ್ಠ ಮಟ್ಟದ ಸುರಕ್ಷಾ ಸಾಧನಗಳನ್ನು ಅಳವಡಿಸಲಾಗಿದ್ದು, 6 ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್ ಮತ್ತು ರಿಯರ್ ವ್ಯೂ ಕ್ಯಾಮೆರಾ ಸೌಲಭ್ಯ ಹೊಂದಿದೆ.

ಭಾರತದಲ್ಲಿ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರು ಆವೃತ್ತಿ ಬಿಡುಗಡೆ

ಈ ಮೂಲಕ ಸ್ಪೋರ್ಟಿ ಸೆಡಾನ್ ಗ್ರಾಹಕರನ್ನು ಸೆಳೆಯಲು ಯತ್ನಿಸಿರುವ ಸ್ಕೋಡಾ ಸಂಸ್ಥೆಯು ವಿನೂತನ ಚಾಲನಾ ಅನುಭವ ನೀಡಲು ಸೂಪರ್ಬ್ ಸ್ಪೋಟ್‌ಲೈನ್ ಹೊರತಂದಿದ್ದು, ಸೂಪರ್ಬ್ ಕಾರುಗಳ ಲೊರೆನ್ ಮತ್ತು ಕ್ಲೆಮೆಂಟ್ ಆವೃತ್ತಿಗಳಿಂತ ಕೆಳದರ್ಜೆಯಲ್ಲಿ ಇವು ಮಾರಾಟವಾಗಲಿವೆ.

More from DriveSpark

Article Published On: Tuesday, October 16, 2018, 16:16 [IST]
English summary
Skoda Superb Sportline Launched In India; Prices Start At Rs 28.99 Lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+