ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಪ್ರೀಮಿಯಂ 45ಎಕ್ಸ್ ಕಾರು..!

2019ರ ಜನವರಿ ಆರಂಭದಲ್ಲಿ ಹ್ಯಾರಿಯರ್ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸಲಿರುವ ಟಾಟಾ ಮೋಟಾರ್ಸ್ ಸಂಸ್ಥೆಯು, ತದನಂತರವಷ್ಟೇ ಮತ್ತೊಂದು ಬಹುನೀರಿಕ್ಷಿತ 45ಎಕ್ಸ್ ಹೆಸರಿನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಪ್ರೀಮಿಯಂ 45ಎಕ್ಸ್ ಕಾರು..!

ಟಾಟಾ ಮೋಟಾರ್ಸ್ ಸಂಸ್ಥೆಯು ಪ್ರೀಯಿಯಂ ಕಾರುಗಳ ವಿಭಾಗದಲ್ಲಿ ಬಹುದೊಡ್ಡ ಬದಲಾವಣೆ ತರುತ್ತಿದ್ದು, ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸದ್ಯದಲ್ಲೇ 45ಎಕ್ಸ್ ಕಾನ್ಸೆಪ್ಟ್ ಮಾದರಿಯನ್ನು ಅಭಿವೃದ್ದಿಗೊಳಿಸುವ ಯೋಜನೆ ಚಾಲನೆ ನೀಡಲಿದೆ. ಹೀಗಾಗಿ ಹೊಸ ಮಾದರಿಯ ಕಾರು 2019ರ ಮಾರ್ಚ್ ಇಲ್ಲವೇ ಮೇ ಆರಂಭದಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದು, ತಾಂತ್ರಿಕ ಅಂಶಗಳ ಪರೀಕ್ಷೆಗಾಗಿ ತಮಿಳುನಾಡಿನ ಊಟಿಯಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಪ್ರೀಮಿಯಂ 45ಎಕ್ಸ್ ಕಾರು..!

ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ 2018ರ ಆಟೋ ಎಕ್ಸ್ ಪೋದಲ್ಲಿ ವಿನೂತನ 45ಎಕ್ಸ್ ಮಾದರಿಯನ್ನು ಪ್ರದರ್ಶನ ಮಾಡಿರುವ ಟಾಟಾ ಮೋಟಾರ್ಸ್ ಮುಂದಿನ ಆರು ತಿಂಗಳ ಅವಧಿಯಲ್ಲಿ ಬಿಡುಗಡೆಯ ಸುಳಿವು ನೀಡಿದ್ದು, ಹೊಸ ಕಾರಿನ ವಿನ್ಯಾಸಗಳು ಇಂಪ್ಯಾಕ್ಟ್ ಡಿಸೈನ್ 2.0 ಸಿದ್ದಾಂತ ಆಧರಿತ ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸದೊಂದಿಗೆ ಸಿದ್ದವಾಗಿರುವುದು ಹ್ಯಾಚ್‌ಬ್ಯಾಕ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಪ್ರೀಮಿಯಂ 45ಎಕ್ಸ್ ಕಾರು..!

ಮಾರುಕಟ್ಟೆಯಲ್ಲಿ ಸದ್ಯ ಮಾರಾಟವಾಗುತ್ತಿರುವ ನೆಕ್ಸಾನ್ ಎಸ್‌ಯುವಿ ಮಾದರಿಗಳಿಂತಲೂ ವಿಶೇಷ ಹೊರ ವಿನ್ಯಾಸಗಳನ್ನು ಪಡೆದುಕೊಂಡಿರುವ 45ಎಕ್ಸ್ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರುಗಳು ಶಾರ್ಪ್ ಎಡ್ಜ್‌ ಮತ್ತು ಸ್ಪೋರ್ಟಿ ಲುಕ್ ಸೌಲಭ್ಯವು ಕಾರಿನ ಅಂದ ಹೆಚ್ಚಿಸಿವೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಪ್ರೀಮಿಯಂ 45ಎಕ್ಸ್ ಕಾರು..!

ಆದ್ರೆ ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು, ಹೊಸ ಕಾರಿನ ಎಂಜಿನ್ ವೈಶಿಷ್ಟ್ಯತೆಗಳ ಬಗೆಗೆ ಸಂದರ್ಶನವೊಂದರಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಪ್ರೀಮಿಯಂ 45ಎಕ್ಸ್ ಕಾರು..!

ವರದಿಗಳ ಪ್ರಕಾರ, 45ಎಕ್ಸ್ ಕಾರು ಮಾದರಿಯಲ್ಲಿ ಪೆಟ್ರೋಲ್ ಎಂಜಿನ್‌ನೊಂದಿಗೆ 48ಕೆವಿ ಮೈಲ್ಡ್ ಹೈಬ್ರಿಡ್(ಎಲೆಕ್ಟ್ರಿಕ್ ಮೋಟಾರ್) ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ ಎನ್ನಲಾಗಿದ್ದು, ಇದು ಕಾರಿನ ಇಂಧನ ದಕ್ಷತೆಯನ್ನು ಹೆಚ್ಚಿಸುವಲ್ಲಿ ಸಾಕಷ್ಟು ಅನುಕೂಲಕರವಾಗಲಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಪ್ರೀಮಿಯಂ 45ಎಕ್ಸ್ ಕಾರು..!

ಹೀಗಾಗಿ ಜೋಡಣೆ ಮಾಡಲು ಉದ್ದೇಶಿಸಿರುವ 1.2-ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಅಳವಡಿಕೆ ಮಾಡಿದ್ದಲ್ಲಿ ಕಾರಿನ ಮೈಲೇಜ್ ಹೆಚ್ಚಳದ ಜೊತೆಗೆ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಸಹ ತಗ್ಗಿಸಲು ನೆರವಾಗಲಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಪ್ರೀಮಿಯಂ 45ಎಕ್ಸ್ ಕಾರು..!

ಪ್ರಸ್ತುತ ಮಾರುಕಟ್ಟೆಯಲ್ಲಿ ಕೇವಲ ಐಷಾರಾಮಿ ಕಾರುಗಳಲ್ಲಿ ಮಾತ್ರವೇ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದ್ದು, ಈ ಹೊಸ ಸೌಲಭ್ಯವಿದಲ್ಲಿ ಕಾರು ಸ್ಟಾರ್ಟ್ ಆಗುವ ಸಂದರ್ಭ ಮತ್ತು ನಿಗದಿತ ಪ್ರಮಾಣದ ದೂರದ ತನಕ ಪೆಟ್ರೋಲ್ ಎಂಜಿನ್‌ಗೆ ಬದಲಾಗಿ ಎಲೆಕ್ಟ್ರಿಕ್ ಮೋಟಾರ್ ಸಹಾಯದೊಂದಿಗೆ ಚಲಿಸುತ್ತೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಪ್ರೀಮಿಯಂ 45ಎಕ್ಸ್ ಕಾರು..!

ತದನಂತರ ಆಟೋ ಮೂಡ್ ಮೂಲಕ ತನ್ನಷ್ಟೇ ತಾನೇ ಎಲೆಕ್ಟ್ರಿಕ್ ಮೋಟಾರ್‌ನಿಂದ ಪೆಟ್ರೋಲ್ ಎಂಜಿನ್‌ಗೆ ವರ್ಗಾವಣೆಗೊಳ್ಳುವ ಕಾರಿನ ಎಂಜಿನ್ ಅನವಶ್ಯಕವಾಗಿ ಇಂಧನ ವ್ಯರ್ಥವಾಗುವುದನ್ನು ತಪ್ಪಿಸುತ್ತೆ. ಈ ಮೂಲಕ ಕಾರಿನ ಮೈಲೇಜ್ ಪ್ರಮಾಣವು ಹೆಚ್ಚಾಗುವುದಲ್ಲದೇ ಮಾಲಿನ್ಯ ಪ್ರಮಾಣ ಕೂಡಾ ತಗ್ಗುವುದು.

MOST READ: ಇದೇ ತಿಂಗಳು 15ರಂದು ಅನಾವರಣಗೊಳ್ಳಲಿರುವ ಹೊಸ ಜಾವಾ ಬೈಕ್ ಹೀಗಿರಲಿವೆ ನೋಡಿ..!

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಪ್ರೀಮಿಯಂ 45ಎಕ್ಸ್ ಕಾರು..!

ಇನ್ನು ಹೊಸ ಕಾರಿನ ಬ್ಯಾನೆಟ್ ಹಾಗೂ ಹಿಂಭಾಗದ ವಿಂಡೋಗಳು ಕೂಡಾ ವಿಭಿನ್ನ ರಚನೆ ಹೊಂದಿದ್ದು, ಕಟರ್ ಫ್ರೀ ಡಿಸೈನ್‌ನೊಂದಿಗೆ ಸ್ಲಿಕ್ ಹೆಡ್‌ಲ್ಯಾಂಪ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಸೇರಿದಂತೆ ಎಲ್ಇಡಿ ಟೈಲ್ ಲೈಟ್ಸ್, ಫಾಗ್ ಲ್ಯಾಂಪ್ ಮತ್ತು ವಿನೂತನ ಗ್ರೀಲ್‌ಗಳು ಈ ಕಾರಿಗೆ ಮತ್ತಷ್ಟು ಮೆರಗು ತಂದಿವೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಪ್ರೀಮಿಯಂ 45ಎಕ್ಸ್ ಕಾರು..!

ಬೆಲೆ ಮತ್ತು ಬಿಡುಗಡೆಯ ದಿನಾಂಕ(ಅಂದಾಜು)

ಟಾಟಾ ಸಂಸ್ಥೆಯು ಬಿಡುಗಡೆ ಮಾಡಲು ಯೋಜಿಸಿರುವ ವಿನೂತನ 45ಎಕ್ಸ್ ಕಾನ್ಸೆಪ್ಟ್ ಮಾದರಿಯು 2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಮೈಲ್ಡ್ ಹೈಬ್ರಿಡ್ ಎಂಜಿನ್ ಸೌಲಭ್ಯದಿಂದಾಗಿ ಕಾರಿನ ಬೆಲೆಯು ರೂ. 11 ಲಕ್ಷದಿಂದ ರೂ. 13 ಲಕ್ಷ ಬೆಲೆ ಇರಬಹುದೆಂದು ನೀರಿಕ್ಷಿಸಲಾಗಿದೆ.

MOST READ: ವಾಣಿಜ್ಯ ವಾಹನಗಳಲ್ಲಿ ಪ್ಯಾಸೆಂಜರ್ ತುಂಬಿಕೊಂಡು ಹೋಗುವ ವಾಹನ ಮಾಲೀಕರೇ ಇತ್ತ ಗಮನಹರಿಸಿ..!

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಪ್ರೀಮಿಯಂ 45ಎಕ್ಸ್ ಕಾರು..!

ಇದರೊಂದಿಗೆ ಟಾಟಾ ಹೊಸ ಕಾರುಗಳು ಗೇಮ್‌ಚೆಂಜರ್ ಮಾದರಿಯಾಗಿ ಮಾರುಕಟ್ಟೆ ಪ್ರವೇಶ ಪಡೆಯಲಿದ್ದು, ಹ್ಯುಂಡೈ ಐ20 ಮತ್ತು ಮಾರುತಿ ಸುಜುಕಿ ಬಲೆನೊ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಿಗೆ ತ್ರೀವ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Source: Wheelmonk

Article Published On: Saturday, November 10, 2018, 19:25 [IST]
English summary
Spy Pics: Tata 45X Premium Hatchback — The Spy Images Reveal Disc Brakes On All Wheels.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+