ವಾಣಿಜ್ಯ ವಾಹನಗಳಲ್ಲಿ ಪ್ಯಾಸೆಂಜರ್ ತುಂಬಿಕೊಂಡು ಹೋಗುವ ವಾಹನ ಮಾಲೀಕರೇ ಇತ್ತ ಗಮನಹರಿಸಿ..!

ದೇಶಾದ್ಯಂತ ವಾಹನಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಅಪಘಾತ ಪ್ರಕರಣಗಳು ಕೂಡಾ ಹೆಚ್ಚಾಗುತ್ತಿವೆ. ಅದರಲ್ಲೂ ವಾಣಿಜ್ಯ ಬಳಕೆಯ ವಾಹನಗಳಲ್ಲಿ ಹಣದಾಸೆಗಾಗಿ ಪ್ಯಾಸೆಂಜರ್ ಸಾಗಿಸುವ ಪ್ರವೃತ್ತಿಯಿಂದಾಗಿ ಅಮಾಯಕರು ಪ್ರಾಣಕಳೆದುಕೊಳ್ಳುತ್ತಿದ್ದು, ಈ ಮಧ್ಯೆ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ಒಂದನ್ನು ಪ್ರಕಟಿಸಿದೆ.

ವಾಣಿಜ್ಯ ವಾಹನಗಳಲ್ಲಿ ಪ್ಯಾಸೆಂಜರ್ ತುಂಬಿಕೊಂಡು ಹೋಗುವ ವಾಹನ ಮಾಲೀಕರೇ ಇತ್ತ ಗಮನಹರಿಸಿ..!

ಮೋಟಾರ್ ವೆಹಿಕಲ್ ಕಾಯ್ದೆ ಪ್ರಕಾರ, ಸರಕು ಸಾಗಾಟಕ್ಕಾಗಿ ಅನುಮತಿ ಪಡೆದಿರುವ ವಾಣಿಜ್ಯ ವಾಹನಗಳಲ್ಲಿ ಯಾವುದೇ ಕಾರಣಕ್ಕೂ ಪ್ಯಾಸೆಂಜರ್ ಸೇವೆ ಒದಗಿಸದಂತೆ ಈಗಾಗಲೇ ನಿಯಮ ರೂಪಿಲಾಗಿದೆ. ಆದ್ರೆ ಬಹುತೇಕ ವಾಹನ ಮಾಲೀಕರು ಹಣದಾಸೆಗಾಗಿ ಪ್ಯಾಸೆಂಜರ್ ಸೇವೆ ಒದಗಿಸುತ್ತಿರುವುದು ಅಪಘಾತಗಳ ಸಂಖ್ಯೆ ಹೆಚ್ಚಾಗುವಂತೆ ಮಾಡಿದೆ. ಆದ್ರೆ ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ ಅದರಿಂದಾಗುವ ಅನಾಹುತಗಳಿಗೆ ವಾಹನ ಮಾಲೀಕರೇ ಹೊಣೆಯಾಗಬೇಕಾಗುತ್ತೆ.

ವಾಣಿಜ್ಯ ವಾಹನಗಳಲ್ಲಿ ಪ್ಯಾಸೆಂಜರ್ ತುಂಬಿಕೊಂಡು ಹೋಗುವ ವಾಹನ ಮಾಲೀಕರೇ ಇತ್ತ ಗಮನಹರಿಸಿ..!

ಹೌದು, ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪಿನ ಪ್ರಕಾರ, ವಾಣಿಜ್ಯ ಬಳಕೆಯ ವಾಹನಗಳಲ್ಲಿ ಪ್ಯಾಸೆಂಜರ್ ಸಾಗಿಸುವ ವೇಳೆ ವಾಹನಗಳು ಅಪಘಾತಕ್ಕೆ ಈಡಾಗಿ ಆಗುವ ನಷ್ಟಕ್ಕೆ ಮತ್ತೆ ಜೀವಹಾನಿಗೆ ಆ ವಾಹನ ಮಾಲೀಕನೇ ಹೊಣೆಯಾಗಿರಬೇಕಾಗುತ್ತೆ ಅಂತಾ ತೀರ್ಪು ನೀಡಿದೆ.

ವಾಣಿಜ್ಯ ವಾಹನಗಳಲ್ಲಿ ಪ್ಯಾಸೆಂಜರ್ ತುಂಬಿಕೊಂಡು ಹೋಗುವ ವಾಹನ ಮಾಲೀಕರೇ ಇತ್ತ ಗಮನಹರಿಸಿ..!

ಪ್ರಕರಣವೊಂದರ ಅರ್ಜಿ ವಿಚಾರಣೆ ವೇಳೆ ಈ ವಿಚಾರವನ್ನು ಸ್ಪಷ್ಟಪಡಿಸಿರುವ ಮದ್ರಾಸ್ ಹೈಕೋರ್ಟ್, ಇತ್ತೀಚೆಗೆ ಬಹುಪಾಲು ಅಪಘಾತ ಪ್ರಕರಣಗಳು ವಾಣಿಜ್ಯ ವಾಹನಗಳಲ್ಲಿ ಪ್ಯಾಸೆಂಜರ್ ಕ್ಯಾರಿ ಮಾಡುತ್ತಿರುವುದರಿಂದಲೇ ಇಂತಹ ಅನಾಹುತಗಳಿಗೆ ಮೂಲ ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದೆ.

ವಾಣಿಜ್ಯ ವಾಹನಗಳಲ್ಲಿ ಪ್ಯಾಸೆಂಜರ್ ತುಂಬಿಕೊಂಡು ಹೋಗುವ ವಾಹನ ಮಾಲೀಕರೇ ಇತ್ತ ಗಮನಹರಿಸಿ..!

ಸರಕು ಸಾಗಾಟದ ಜೊತೆಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬುವುದರಿಂದ ವಾಹನಗಳು ಪಲ್ಟಿ ಹೊಡೆಯುವುದು, ನಿಯಂತ್ರಣ ತಪ್ಪಿ ಕಂದಕಗಳಿಗೆ ಉರುಳಿ ಬಿಳುತ್ತಿರುವ ಘಟನೆಗಳಿಂದಾಗಿ ದೇಶಾದ್ಯಂತ ದಿನಂಪ್ರತಿ ನೂರಾರು ಜನ ಪ್ರಾಣಕಳೆದುಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ವಾಣಿಜ್ಯ ವಾಹನಗಳಲ್ಲಿ ಪ್ಯಾಸೆಂಜರ್ ತುಂಬಿಕೊಂಡು ಹೋಗುವ ವಾಹನ ಮಾಲೀಕರೇ ಇತ್ತ ಗಮನಹರಿಸಿ..!

ಸದ್ಯ ಮದ್ರಾಸ್ ಹೈಕೋರ್ಟ್ ಹೊರಡಿಸಿರುವ ಆದೇಶವು ತಮಿಳುನಾಡು ಹೊರತುಪಡಿಸಿ ಇತರೆ ರಾಜ್ಯಗಳಿಗೆ ಅನ್ವಯಿಸುವುದಿಲ್ಲ. ಆದ್ರು ಕೂಡಾ ಕರ್ನಾಟಕದಲ್ಲೂ ಇಂತಹ ಅವಘಡಗಳಿಂದಲೇ ದಿನಂಪ್ರತಿ ಅದೆಷ್ಟೋ ಜನ ಸಾವು-ನೋವುಗಳಿಗೆ ಬಲಿಯಾಗುತ್ತಿದ್ದಾರೆ ಎನ್ನುವುದನ್ನು ಅಷ್ಟೇ ಸತ್ಯ.

ವಾಣಿಜ್ಯ ವಾಹನಗಳಲ್ಲಿ ಪ್ಯಾಸೆಂಜರ್ ತುಂಬಿಕೊಂಡು ಹೋಗುವ ವಾಹನ ಮಾಲೀಕರೇ ಇತ್ತ ಗಮನಹರಿಸಿ..!

ಹೀಗಾಗಿ ಮುಂಬರುವ ದಿನಗಳಲ್ಲಿ ಈ ಕಾಯ್ದೆಯು ಕರ್ನಾಟಕ ಸೇರಿದಂತೆ ದೇಶಾದ್ಯಂತ ಜಾರಿ ಬಹುದಾದ ಎಲ್ಲಾ ಸಾಧ್ಯತೆಗಳಿದ್ದು, ವಾಣಿಜ್ಯ ವಾಹನಗಳಲ್ಲಿ ಪ್ಯಾಸೆಂಜರ್ ಕ್ಯಾರಿ ಮಾಡುವ ವಾಹನ ಮಾಲೀಕರು ಇನ್ಮುಂದೆ ಹತ್ತು ಬಾರಿ ಯೋಚಿಸುವುದು ಒಳಿತು.

ವಾಣಿಜ್ಯ ವಾಹನಗಳಲ್ಲಿ ಪ್ಯಾಸೆಂಜರ್ ತುಂಬಿಕೊಂಡು ಹೋಗುವ ವಾಹನ ಮಾಲೀಕರೇ ಇತ್ತ ಗಮನಹರಿಸಿ..!

ಇನ್ನು ಕಳೆದ ತಿಂಗಳು ಕರ್ನಾಟಕ ಹೈಕೋರ್ಟ್ ಸಹ ಮಹತ್ವದ ತೀರ್ಪು ಒಂದನ್ನು ಪ್ರಕಟಿಸಿದ್ದನ್ನು ನಾವಿಲ್ಲಿ ಅದನ್ನು ನೆನಪು ಮಾಡಿಕೊಳ್ಳಬೇಕಿದೆ. ಯಾಕೆಂದ್ರೆ ರಸ್ತೆ ನಿಮಯ ಉಲ್ಲಂಘನೆಯಿಂದಾಗಿ ಪ್ರತಿ ವರ್ಷ ಸಾವಿರಾರು ವಾಹನ ಸವಾರರು ತಮ್ಮ ಜೀವನ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ನಿರ್ಲಕ್ಷ್ಯದ ವಾಹನ ಸವಾರಿ ಅಂದ್ರೆ ತಪ್ಪಾಗುವುದಿಲ್ಲ.

ವಾಣಿಜ್ಯ ವಾಹನಗಳಲ್ಲಿ ಪ್ಯಾಸೆಂಜರ್ ತುಂಬಿಕೊಂಡು ಹೋಗುವ ವಾಹನ ಮಾಲೀಕರೇ ಇತ್ತ ಗಮನಹರಿಸಿ..!

ಹೀಗಾಗಿ ನಿಮ್ಮ ಬೈಕ್ ಅಥವಾ ಕಾರುನ್ನು ನಿಮ್ಮ ಸ್ನೇಹಿತರೋ ಅಥವಾ ಸಂಬಂಧಿಯೋ ಹೊರಗೆ ತೆಗೆದುಕೊಂಡು ಹೋದ ವೇಳೆ ನಿರ್ಲಕ್ಷ್ಯದಿಂದಾಗುವ ದುರಂತಗಳಿಗೆ ವಿಮಾ ಸಂಸ್ಥೆಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ವಾಣಿಜ್ಯ ವಾಹನಗಳಲ್ಲಿ ಪ್ಯಾಸೆಂಜರ್ ತುಂಬಿಕೊಂಡು ಹೋಗುವ ವಾಹನ ಮಾಲೀಕರೇ ಇತ್ತ ಗಮನಹರಿಸಿ..!

ಅಂದ್ರೆ, ನಿಮ್ಮ ಬೈಕ್ ಅಥವಾ ಕಾರುನ್ನು ನಿಮ್ಮ ಸ್ನೇಹಿತರೋ ಅಥವಾ ಸಂಬಂಧಿಯೋ ಹೊರಗೆ ತೆಗೆದುಕೊಂಡು ಹೋದ ವೇಳೆ ನಿರ್ಲಕ್ಷ್ಯದಿಂದ ಆಗುವ ದುರಂತಗಳಿಗೆ ವಿಮಾ ಸಂಸ್ಥೆಯು ಜವಾಬ್ದಾರಿಯಾಗಿರುವುದಿಲ್ಲವಂತೆ.

ವಾಣಿಜ್ಯ ವಾಹನಗಳಲ್ಲಿ ಪ್ಯಾಸೆಂಜರ್ ತುಂಬಿಕೊಂಡು ಹೋಗುವ ವಾಹನ ಮಾಲೀಕರೇ ಇತ್ತ ಗಮನಹರಿಸಿ..!

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರ ಅಂದ್ರೆ, ಮೂರನೇ ವ್ಯಕ್ತಿಯು ನಿಮ್ಮ ವಾಹನಗಳನ್ನು ತೆಗೆದುಕೊಂಡು ಹೋಗಿದ್ದಾಗ ಮತ್ತೊಂದು ವಾಹನಕ್ಕೆ ತಗುಲಿ ಆಗುವ ದುರಂತಗಳಿಗೆ ಮಾತ್ರವೇ ವಿಮೆ ಸಂಸ್ಥೆಯು ನಷ್ಟಕ್ಕೆ ಪರಿಹಾರ ಭರಿಸಲಿದೆ.

MOST READ: ಬಿಡುಗಡೆಗೆ ಸಿದ್ಧಗೊಂಡಿರುವ ಜಾವಾ ಬೈಕ್‍ಗಳ ಬೆಲೆ ಮತ್ತು ಬುಕ್ಕಿಂಗ್ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ವಾಣಿಜ್ಯ ವಾಹನಗಳಲ್ಲಿ ಪ್ಯಾಸೆಂಜರ್ ತುಂಬಿಕೊಂಡು ಹೋಗುವ ವಾಹನ ಮಾಲೀಕರೇ ಇತ್ತ ಗಮನಹರಿಸಿ..!

ಸ್ಪಷ್ಟವಾಗಿ ಹೇಳುವುದಾದರೇ, ಮೂರನೇ ವ್ಯಕ್ತಿಯ ಕೈಯಲ್ಲಿ ಇದ್ದಾಗ ನಿಮ್ಮ ವಾಹನಗಳು ನಿಯಂತ್ರಣ ತಪ್ಪಿ ಉರುಳಿಬಿದ್ದು, ಇಲ್ಲವೇ ಮರಗಳಿಗೆ ಡಿಕ್ಕಿ ಹೊಡೆದು, ಇಲ್ಲವೇ ಸ್ಕೀಡ್ ಆಗಿ ಆದ ಅನಾಹುತಗಳಿಗೆ ಪರಿಹಾರ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಇದಕ್ಕೆಲ್ಲಾ ವಾಹನ ಮಾಲೀಕನೇ ಜವಾಬ್ದಾರಿಯಾಗಿಬೇಕು ಎಂದಿದೆ.

ವಾಣಿಜ್ಯ ವಾಹನಗಳಲ್ಲಿ ಪ್ಯಾಸೆಂಜರ್ ತುಂಬಿಕೊಂಡು ಹೋಗುವ ವಾಹನ ಮಾಲೀಕರೇ ಇತ್ತ ಗಮನಹರಿಸಿ..!

ಬೆಂಗಳೂರಿನಲ್ಲಿ ನಡೆದ ಘಟನೆಯೊಂದರ ಪರಿಹಾರ ಕೋರಿ ಥರ್ಡ್ ಪಾರ್ಟಿ ವಿಮೆಗಾಗಿ ಅರ್ಜಿ ಸಲ್ಲಿಸಿದ್ದಾಗ ವಿಮಾ ಸಂಸ್ಥೆಯು ಅರ್ಜಿದಾರರ ಬೇಡಿಕೆಯನ್ನು ನಿರಾಕರಿಸಿತ್ತು. ಹೀಗಾಗಿ ಹೈಕೋರ್ಟ್ ಮೆಟ್ಟೇರಿದ್ದ ಅರ್ಜಿದಾರನ ಮನವಿಯನ್ನು ತಿರಸ್ಕರಿಸಿದ ಕೋರ್ಟ್ ಈ ರೀತಿಯಾಗಿ ಆದೇಶ ನೀಡಿದೆ.

MOST READ: ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

ವಾಣಿಜ್ಯ ವಾಹನಗಳಲ್ಲಿ ಪ್ಯಾಸೆಂಜರ್ ತುಂಬಿಕೊಂಡು ಹೋಗುವ ವಾಹನ ಮಾಲೀಕರೇ ಇತ್ತ ಗಮನಹರಿಸಿ..!

ಕೊನೆಯದಾಗಿ ಭಾರತೀಯ ಮೋಟಾರು ವಾಹನ ಕಾಯ್ದೆ 1988 ಪ್ರಕಾರ, ಎಲ್ಲ ವಾಹನಗಳ ಮಾಲಿಕರು ಕಾರು ವಿಮೆ ಮಾಡಿಸತಕ್ಕದ್ದು. ಒಂದು ವೇಳೆ ಅಪಘಾತ ಸಂದರ್ಭದಲ್ಲಿ ವ್ಯಕ್ತಿಯ ಸುರಕ್ಷತೆ ಹಾಗೂ ಪರಿಹಾರ ಒದಗಿಸುವುದು ಮುಖ್ಯ. ಬಹುಶಃ ನಿಮ್ಮ ವಾಹನ ನೀವು ಖರೀದಿಸುವ ವಸ್ತುಗಳಲ್ಲಿ ಅತ್ಯಂತ ದುಬಾರಿಯಾಗಿರಬಹುದು. ವಿಮೆಯು ಈ ಸ್ವತ್ತಿಗೆ ರಕ್ಷಣೆ ಒದಗಿಸುವುದಲ್ಲದೆ ಅಪಘಾತ, ಹಾನಿ ಅಥವಾ ಕಳ್ಳತನ ಸಂಭವಿಸಿದ ಸಂದರ್ಭದಲ್ಲಿ ಆರ್ಥಿಕ ನಷ್ಟವನ್ನು ನಿಭಾಯಿಸಲು ಸಹಕಾರಿಯಾಗುತ್ತದೆ.

Most Read Articles

Kannada
English summary
No insurance for people travelling by goods carriers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X