ಹೈವೇನಲ್ಲಿ ಡ್ರೈವಿಂಗ್ ಮಾಡಲು ವಾಹನ ಸವಾರರಿಗೆ 11 ಬಹುಮೂಲ್ಯ ಟಿಪ್ಸ್

ಕಾರಿನಲ್ಲಿ ದೂರ ಪ್ರಯಾಣ ಹೊರಡುವ ವೇಳೆ ಕೆಲವೊಂದು ಅಂಶಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಇವುಗಳಲ್ಲಿ ಹವಾಮಾನ ಪರಿಸ್ಥಿತಿ ಪ್ರಮುಖ ಅಂಶವಾದರೆ ಚಾಲಕನ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ.

By Manoj B.k

ಹೈವೇನಲ್ಲಿ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇದ್ದೆ ಇರುತ್ತೆ. ಈ ವೇಳೆ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಚಾಲನೆಯ ಸಂದರ್ಭದಲ್ಲಿ ಕೆಲವು ಸಣ್ಣಪುಟ್ಟ ತಪ್ಪುಗಳೇ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತವೆ.

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್..

ಹೈವೇ ಪ್ರಯಾಣದ ವೇಳೆ ನೀವು ಸರಿಯಾದ ಮಾರ್ಗದಲ್ಲೇ ವಾಹನ ಚಾಲನೆ ಮಾಡುತ್ತಿದ್ದರೂ ಸಹ ಕೆಲವೊಮ್ಮೆ ಇತರರು ಮಾಡುವ ಸಂಚಾರಿ ನಿಯಮ ಉಲ್ಲಂಘನೆಯು ನಿಮ್ಮ ಜೀವಕ್ಕೆ ಸಂಚಕಾರ ತರಬಹುದು. ಹೀಗಾಗಿ ಸುಖಕರ ಪ್ರಯಾಣಕ್ಕಾಗಿ ಈ ಟಿಪ್ಸ್‌ ತಪ್ಪದೇ ಪಾಲಿಸಿ.

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

01. ಪ್ರಯಾಣ ಆರಂಭಕ್ಕೂ ಮುನ್ನ

ದೂರ ಪ್ರಯಾಣ ಆರಂಭಕ್ಕೂ ಮುನ್ನ ಇಂಧನ ಟ್ಯಾಂಕ್ ಸಂಪೂರ್ಣವಾಗಿ ಭರ್ತಿ ಮಾಡಿಡಿ. ಇನ್ನು ಮೊಬೈಲ್ ಫೋನ್ ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಲು ಮರೆಯದಿರಿ.

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

ಜೊತೆಗೆ ನಿಮ್ಮ ಡ್ರೈವಿಂಗ್ ಲೈಸೆನ್ಸ್, ಆರ್‌ಸಿ, ಇನ್ಸುರೆನ್ಸ್‌ನಿಂದ ಹಿಡಿದು ಕಾರು ಅಥವಾ ಬೈಕಿಗೆ ಸಂಬಂಧಪಟ್ಟ ಎಲ್ಲಾ ದಾಖಲಾತಿಯ ಪ್ರತಿಗಳು ವಾಹನದಲ್ಲಿ ಇಟ್ಟುಕೊಳ್ಳುವುದನ್ನು ಮರೆಯಬೇಡಿ.

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

02. ವೇಗದಲ್ಲಿ ಮಿತಿಯಿರಲಿ

ಭಾರತೀಯ ಬಹುತೇಕ ಹೆದ್ದಾರಿಗಳಲ್ಲಿ ವೇಗದ ಮಿತಿ ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಹಾಗಾಗಿ ಹೆದ್ದಾರಿ ಪರಿಸ್ಥಿತಿಗೆ ಅನುಗುಣವಾಗಿ ವೇಗದ ಮಿತಿಯಿರಲಿ. ನಿಮ್ಮ ಗುರಿತಲುಪಲು ಯಾವುದೇ ರೀತಿಯ ಅವಸರಬೇಡ.

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

ಮಳೆ, ಟ್ರಾಫಿಕ್ ಅಥವಾ ಮಂಜಿನ ತೊಂದರೆಯಿದ್ದಲ್ಲಿ ನಿಧಾನವಾಗಿ ಚಲಿಸಲು ಮರೆಯದಿರಿ. ಮುನ್ಮುಖವಾಗಿ ಚಲಿಸುವ ಪ್ರತಿಯೊಂದು ವಾಹನವನ್ನು ಓವರ್ ಟೇಕ್ ಮಾಡುವ ಗೋಜಿಗೆ ಹೋಗದಿರಿ.

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

03. ಟ್ಯಾಂಕರ್ ಮತ್ತು ಲಾರಿಗಳು

ಘಾಟಿ ಪ್ರದೇಶಗಳಲ್ಲಿ ನಿಧಾನವಾಗಿ ಚಲಿಸುವ ಅಮಿತ ಭಾರದ ಟ್ಯಾಂಕರ್ ಮತ್ತು ಸರಕು ಲಾರಿಗಳು ತುಂಬಿಕೊಂಡಿರುವುದರಿಂದ ಅತಿಯಾದ ಜಾಗ್ರತೆಯಿಂದ ಪ್ರಯಾಣ ಮುಂದುವರಿಸಿರಿ.

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

ಹೆದ್ದಾರಿಗಳಲ್ಲಿ ಸಾಕಷ್ಟು ಹೊತ್ತು ಡ್ರೈವಿಂಗ್ ಮಾಡಿ ದಣಿವಾಗಿರುವುದರಿಂದ ಅಜಾಗರೂಕತೆಯಿಂದ ಚಾಲನೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಓವರ್ ಟೇಕ್ ಮಾಡುವಾಗ ಎಚ್ಚರದಿಂದ ಇರಬೇಕು.

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

04. ಎಡಭಾಗದಲ್ಲಿ ಚಲಿಸಿ

ಪ್ರಯಾಣದುದ್ಧಕ್ಕೂ ಬಲಬದಿಯಲ್ಲಿ ಚಲಿಸುವ ಸಾಹಸ ಬೇಡ. ಒಮ್ಮೆ ಓವರ್ ಟೇಕ್ ಮಾಡಿದ ಬಳಿಕ ಎಡಬದಿಯ ಲೇನ್ ನಲ್ಲಿ ಮುಂದಕ್ಕೆ ಚಲಿಸಿ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

ಕಡಿದಾದ ತಿರುವು, ಕಿರಿದಾದ ಸೇತುವೆ, ಅಂಕುಡೊಂಕು, ವಕ್ರಾಕೃತಿ, ಝಿಬ್ರಾ ಕ್ರಾಸಿಂಗ್, ಇಳಿಜಾರು, ರೈಲ್ವೆ ಕ್ರಾಸಿಂಗ್ ಹೀಗೆ ಎಲ್ಲಾ ರಸ್ತೆ ಚಿಹ್ನೆಗಳನ್ನು ನೋಡಿಕೊಂಡು ಮುಂದೆ ಸಾಗಬೇಕು.

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

05. ರಸ್ತೆ ಉಬ್ಬುಗಳು

ಹೆದ್ದಾರಿಗಳಲ್ಲಿ ರಾತ್ರಿ ವೇಳೆಯಲ್ಲಿ ವೇಗವಾಗಿ ಚಲಿಸುವಾಗ ರಸ್ತೆ ಉಬ್ಬುಗಳು ಕಣ್ಣಿಗೆ ಕಾಣಸಿಗದು. ಇನ್ನು ಕೆಲವು ಕಡೆಗಳಲ್ಲಿ ರಸ್ತೆ ಉಬ್ಬುಗಳ ಚಿಹ್ನೆಯೇ ಇರಲಾರದು.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಹೈವೇನಲ್ಲಿ ಡ್ರೈವಿಂಗ್ ಮಾಡಲು ವಾಹನ ಸವಾರರಿಗೆ 11 ಬಹುಮೂಲ್ಯ ಟಿಪ್ಸ್

ಹಾಗಾಗಿ ಆಕಸ್ಮತ್ ಎದುರಾಗುವ ರಸ್ತೆ ಉಬ್ಬುಗಳ ಬಗ್ಗೆ ಎಚ್ಚರದಿಂದಿರಬೇಕು. ವಾಹನಗಳ ನಡುವೆ ಸುರಕ್ಷಿತ ಅಂತರವನ್ನು ಕಾಪಾಡಿಕೊಂಡು ವೇಗದ ಮಿತಿ ಬಗ್ಗೆ ನಿಗಾವಹಿಸುವುದು ಒಳಿತು.

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

06. ರಸ್ತೆ ಚಿಹ್ನೆ

ರಸ್ತೆ ಮಾರ್ಗ ಬದಿಗಳಲ್ಲಿರುವ ರಸ್ತೆ ಚಿಹ್ನೆಗಳನ್ನು ಪಾಲಿಸಲು ಮರೆಯದಿರಿ. ಕಡಿದಾದ ತಿರುವು, ಕಿರಿದಾದ ಸೇತುವೆ, ವಕ್ರಾಕೃತಿ, ಝಿಬ್ರಾ ಕ್ರಾಸಿಂಗ್, ಇಳಿಜಾರು, ಚಿಹ್ನೆಗಳನ್ನು ನೋಡಿಕೊಂಡು ಮುಂದೆ ಸಾಗಬೇಕು.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

07. ಎರಡು ಲೇನ್ ಹೆದ್ದಾರಿ

ಎರಡು ಲೇನ್ ಹೆದ್ದಾರಿಗಳನ್ನು ಸಮೀಪಿಸಿದಾಗ ವೇಗದಲ್ಲಿ ಮಿತಿಯಿರಲಿ. ಮುಂಭಾಗದಿಂದ ಬರುವ ವಾಹನಗಳ ಹೆಡ್ ಲೈಟ್ ಫ್ಲ್ಯಾಶ್ ಮಾಡಿದಾಗ ವಾಹನ ನಿಧಾನ ಮಾಡಿ.

ಹೈವೇನಲ್ಲಿ ಡ್ರೈವಿಂಗ್ ಮಾಡಲು ವಾಹನ ಸವಾರರಿಗೆ 11 ಬಹುಮೂಲ್ಯ ಟಿಪ್ಸ್

ಹಾಗೆಯೇ ಹೈ ಭೀಮ್ ಹೆಡ್ ಲೈಟ್ ಗಳನ್ನು ಡಿಮ್/ಡಿಪ್ ಮಾಡಲು ಮರೆಯಬೇಡಿ. ಇದರಿಂದ ಮುಂಭಾಗದ ವಾಹನಗಳ ಗಾತ್ರವು ಗೊತ್ತಾಗದೇ ನಿಮ್ಮ ವಾಹನಕ್ಕೆ ಡಿಕ್ಕಿಯಾಗುವ ಸಾಧ್ಯತೆಯಿರುತ್ತದೆ.

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

08. ಘಾಟಿ ಪ್ರದೇಶ

ಘಾಟಿ ಪ್ರದೇಶದಂತಹ ಅಂಕು ಡೊಂಕಾದ ಕಡಿದಾದ ತಿರುವುಗಳನ್ನು ಒಳಗೊಂಡಿರುವ ಎರಡು ಲೇನ್ ಹೆದ್ದಾರಿಗಳಲ್ಲಿ ಚಲಿಸುವಾಗ ಅತೀಯ ಜಾಗ್ರತೆ ಅಗತ್ಯ. ಇಲ್ಲಿ ಓವರ್ ಟೇಕ್ ಮಾಡುವುದು ಶುದ್ಧ ಅಸಂಬಂಧ.

ಹೈವೇನಲ್ಲಿ ಡ್ರೈವಿಂಗ್ ಮಾಡಲು ವಾಹನ ಸವಾರರಿಗೆ 11 ಬಹುಮೂಲ್ಯ ಟಿಪ್ಸ್

ಅತೀವ ಏರಿಳಿತದಿಂದ ಕೂಡಿದ ಇಂತಹ ರಸ್ತೆಗಳಲ್ಲಿ ಲೇನ್ ತಪ್ಪುವುದು ಅಪಘಾತವನ್ನು ಕೈಬೀಸಿ ಕರೆದಂತೆ. ಹಾಗೆಯೇ ಈ ರಸ್ತೆಗಳಲ್ಲಿ ಗುಂಡಿಗಳಿರುವುದರಿಂದ ನಿಧಾನವಾಗಿ ಸಂಚರಿಸಬೇಕು. ಘಾಟಿ ಪ್ರದೇಶದಲ್ಲಿ ಮೇಲಕ್ಕೆ ಏರುವ ವಾಹನಗಳು ಕಡಿದಾದ ತಿರುವುಗಳಲ್ಲಿ ಲೇನ್ ತಪ್ಪಿ ಬಲಭಾಗದತ್ತ ವಾಲುವ ಸಂಭವ ಇರುವುದರಿಂದ ಮೇಲಿಂದ ಕೆಳಕ್ಕೆ ಇಳಿಯುವ ವಾಹನಗಳು ವೇಗವನ್ನು ನಿಧಾನಗೊಳಿಸಿ.

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

09. ದಣಿವು

ದೂರ ಪ್ರಯಾಣದ ವೇಳೆ ದಣಿವು ಆವರಿಸಲಿರುವುದರಿಂದ ಪ್ರಯಾಣದ ಮಧ್ಯೆ ಸಣ್ಣ ಪುಟ್ಟ ಬ್ರೇಕ್ ಪಡೆದುಕೊಳ್ಳುವುದನ್ನು ರೂಢಿಸಿಕೊಳ್ಳಿ. ರಾತ್ರಿ ವೇಳೆಯಲ್ಲಿ ಟೀ ಬ್ರೇಕ್ ನಿಮಗೆ ನಿದ್ರೆ ಬರುವುದನ್ನು ತಡೆಯಲಿದೆ.

ಹೈವೇನಲ್ಲಿ ಡ್ರೈವಿಂಗ್ ಮಾಡಲು ವಾಹನ ಸವಾರರಿಗೆ 11 ಬಹುಮೂಲ್ಯ ಟಿಪ್ಸ್

ಇನ್ನು ಒಂದಕ್ಕಿಂತ ಹೆಚ್ಚು ಚಾಲಕರಿದ್ದಲ್ಲಿ ಕಡಿಮೆ ಪಕ್ಷ ಪ್ರತಿ ಮೂರು ತಾಸಿಗೊಮ್ಮೆ ಚಾಲಕರನ್ನು ಬದಲಾಯಿಸಿಕೊಳ್ಳಿರಿ.

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

10. ಪಂಚರ್ ಆದ್ದಲ್ಲಿ

ಕಾರು ಬ್ರೇಕ್ ಡೌನ್ ಅಥವಾ ಪಂಚರ್ ಆದ್ದಲ್ಲಿ ರಸ್ತೆಯಿಂದ ಬದಿಗೆ ಸರಿಸಿ ಪಾರ್ಕಿಂಗ್ ಮಾಡಿಟ್ಟುಕೊಂಡು ಹಜಾರ್ಡ್ ಲೈಟ್ ಉರಿಸಲು ಮರೆಯದಿರಿ.

ಹೈವೇನಲ್ಲಿ ಡ್ರೈವಿಂಗ್ ಮಾಡಲು ವಾಹನ ಸವಾರರಿಗೆ 11 ಬಹುಮೂಲ್ಯ ಟಿಪ್ಸ್

ಕೆಂಪು ಪ್ರತಿಫಲಕ ಸೂಚನಾ ಫಲಕಗಳು ಇಲ್ಲಿ ನೆರವಿಗೆ ಬರಲಿದೆ. ಇದರಿಂದ ಚಕ್ರ ಬದಲಾಯಿಸಲು ಅಥವಾ ಎಂಜಿನ್‌ನಲ್ಲಿ ಯಾವುದಾದರೂ ತಾಂತ್ರಿಕ ದೋಷವನ್ನು ಸರಿಪಡಿಸಿಕೊಳ್ಳಲು ಯಾವುದೇ ತೊಂದರೆ ಕಾಡದು.

More from DriveSpark

Article Published On: Monday, May 7, 2018, 17:10 [IST]
English summary
Planning A Highway Trip? Here Are 10 Important Tips To Keep In Mind.
Read more on driving tips
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+