ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

ನಗರ ಪ್ರದೇಶಗಳಲ್ಲಿ ವಾಹನ ಚಾಲಾಯಿಸುವುದಕ್ಕಿಂತಾ ಹೆದ್ದಾರಿಗಳಲ್ಲಿ ವಾಹನ ಸಂಚರಿಸುವುದರಲ್ಲಿ ಹಲವರು ಆಸಕ್ತಿ ತೋರುತ್ತಾರೆ. ಏಕೆಂದರೆ ನಗರ ಪ್ರದೇಶಗಳಲ್ಲಿರುವ ಟ್ರಾಫಿಕ್ ಸಮಸ್ಯೆಯಿಂದಾಗಿ ಬ್ರೇಕ್, ಆಕ್ಸಿಲರೇಟರ್, ಕ್ಲಚ್ ಒತ್ತಿ-ಒತ್ತಿ ಕೈಕಾಲುಗಳು ನೋವು ಬರುವುದಂತು ಗ್ಯಾರೆಂಟಿ. ಆದ್ರೆ ಹೆದ್ದಾರಿಗಳಲ್ಲಿ ಅಪ್ಪಿತಪ್ಪಿಯು ಇಂತಹ ತಪ್ಪನ್ನು ಮಾಡಿದ್ದಲ್ಲಿ ಅಪಘಾತ ಸಂಭವಿಸುವುದಂತು ಖಚಿತ.

ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

ಹೆದ್ದಾರಿಗಳಲ್ಲಿ ಸಾಧಾರಣವಾಗಿ ವಾಹನಗಳು ಅತೀ ವೇಗದಲ್ಲಿ ಸಂಚರಿಸುತ್ತವೆ. ಅದರಲ್ಲಿಯು ಓವರ್ ಟೇಕಿಂಗ್ ಮಾಡುವಾಗ ಕೊಂಚ ನಿಯಂತ್ರಣ ತಪ್ಪಿದರು ಅಪಘಾತ ಕಟ್ಟಿಟ್ಟಬುತ್ತಿಯಾಗಿರುತ್ತದೆ. ಎಲ್ಲರಿಗು ತಿಳಿದಿರುವ ಹಾಗೆ ದೊಡ್ಡ ಗಾತ್ರದ ವಾಹನಗಳಾದ ಬಸ್, ಟ್ರಕ್ ಮತ್ತು ಲಾರಿಗಳನ್ನು ಎಡಭಾಗದಿಂದ ಓವರ್ ಟೇಕ್ ಮಾಡಲು ಹೋದರೆ ಅಷ್ಟೆ ಗತಿ. ಅಂತಹ ಒಂದು ಘಟನೆಯ ಕುರಿತಾಗಿಯೆ ನಿಮಗಿಂದು ಮಾಹಿತಿ ನೀಡಲಿದ್ದೇವೆ.

ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

ರೈಡಿಂಗ್ ಪ್ರಿಯರಿಗೆ ಯಾವುದೇ ತಿರುವುಗಳಿಲ್ಲದೇ ಸುಧೀರ್ಘವಾದ ನೇರ ರಸ್ತೆಯಲ್ಲಿ ರೈಡಿಂಗ್ ಮಾಡಲು ಆಸಕ್ತಿ ತೋರುತ್ತಾರೆ. ಉತ್ತಮವಾದ ಚಾಲನೆಯ ಕೌಶಲ್ಯವನ್ನು ಹೊಂದಿರುವವರು ಸಹ ಹೆದ್ದಾರಿಗಳಲ್ಲಿ ಜವಾಬ್ದಾರಿತನದಿಂದ ವಾಹನ ಚಾಲವಾಣೆ ಮಾಡಬೇಕಾಗಿರುತ್ತದೆ. ಏಕೆಂದರೆ ನೀವು ಸರಿಯಾಗಿ ಡ್ರೈವಿಂಗ್ ಮಾಡಿದರೂ, ನಿಮ್ಮ ಆಸು ಪಾಸಿನಲಿ ಬರುವ ವಾಹನ ಚಾಲಕರು ನಿಯಂತ್ರಣ ತಪ್ಪಬಹುದು.

ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

ಈಗ ಹೇಳಲು ಹೊರಟಿರುವ ವಿಚಾರಕ್ಕೆ ಬರೊಣ. ಹೆಚ್ಚು ವಾಹನಗಳಿಲ್ಲದ ಹೆದ್ದಾರಿ ರಸ್ತೆಯಲ್ಲಿ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರೊಂದು ಸಂಚರಿಸುತ್ತಿದ್ದ ವೇಳೆ. ತನ್ನ ಮುಂದೆ ಒಂದು ಬೃಹತ್ ಗಾತ್ರದ ಟ್ರಕ್ ಒಂದು ಸಾಗುತ್ತಿತ್ತು. ನಂತರ ಟ್ರಕ್ ನಿಧಾನವಾಗಿ ಚಲಿಸುವುದನ್ನು ಕಂಡು ಕಾರಿನ ಚಾಲಕ ಅದನ್ನು ಎಡಿಂದ ಓವರ್ ಟೇಕ್ ಮಾಡಲು ಮುಂದಾದ.

ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

ಆದ್ರೆ ಅದೇ ಸಂದರ್ಭದಲ್ಲಿ ಆ ಬೃಹತ್ ಗಾತ್ರದ ಟ್ರಕ್ ಹೆದ್ದಾರಿಯ ಎಡಭಾಗದಲ್ಲಿ ಕಾಮಗಾರಿಕೆ ನಡೆಯುತ್ತಿದ್ದ ಕಡೆಗೆ ಹೋಗಲು ಎಡಕ್ಕೆ ತಿರುಗಿತು. ಅದೃಷ್ಟವಷಾತ್ ಟ್ರಕ್ ಡ್ರೈವರ್ ಸಂಪೂರ್ಣವಾಗಿ ಬ್ರೇಕ್ ಹಾಕಿ ವಾಹನವನ್ನು ನಿಲ್ಲಿಸಿದ.

ಈ ವಿಡಿಯೋವನ್ನು ಕಾರಿನ ಡ್ಯಾಶ್‍ಬೋರ್ಡ್ ಮೇಲಿದ್ದ ಕ್ಯಾಮೆರಾದಿಂದ ರೆಕಾರ್ಡ್ ಮಾಡಲಾಗಿದ್ದು, ವಿದೀಯೋವನ್ನು ಗಮನಿಸಿದ್ದಲ್ಲಿ ಟ್ರಕ್ ಚಾಲಕನು ಇಂಡಿಕೇಟರ್ ಅನ್ನು ಸಹ ಆನ್ ಮಾಡಲಿಲ್ಲ ಎಂಬುದು ಖಚಿತವಾಗುತ್ತದೆ. ಆದುದರಿಂದಲೇ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರಿನ ಚಾಲಕನು ಎಡದಿಂದ ಓವರ್ ಟೇಕ್ ಮಾಡಲು ಮುಂದಾದ.

ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

ಎಡದಿಂದ ಒವರ್ ಟೇಕ್ ಮಾಡಿದರೆ ಅಪಯ

ರಸ್ತೆ ನಿಯಮಗಳ ಪ್ರಕಾರ ಯಾವಾಗಲು ವಾಹನವನ್ನು ಓವರ್ ಟೇಕ್ ಮಾಡಲು ಬಲಭಾಗದಿಂದ ಹೋಗಬೇಕು ಮತ್ತು ಬ್ಲೈಂಡ್ ಸ್ಪಾಟ್ ಹಿಂದೆ ಹೋಗುವುದನ್ನು ಕಡಿಮೆ ಮಾಡಬೇಕಾಗಿರುತ್ತದೆ. ಏಕೆಂದರೆ ಟ್ರಕ್‍ಗಳಲ್ಲಿ ಬ್ಲೈಂಡ್ ಸ್ಪಾಟ್ ಅನ್ನು ಅಧಿಕವಾಗಿ ಹೊಂದಿರುತ್ತದೆ ಮತ್ತು ಟ್ರಕ್ ಚಾಲಕರಿಗೆ ಎಡಭಾಗದ ಪ್ರದೇಶವೆ ಹೆಚ್ಚು ಗೋಚರವಾಗುತ್ತದೆ.

ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

ಭಾರತೀಯ ವಾಹನಗಳಲ್ಲಿ ಬಲ ಭಾಗದಲ್ಲಿ ಸ್ಟೀರಿಂಗ್ ವ್ಹೀಲ್ ನೀಡುರುವ ಕಾರಣ, ವಾಹನ ಚಾಲಕರಿಗೆ ಎಡಭಾಗಕ್ಕಿಂತಲೂ ಬಲಭಾಗದಲ್ಲಿ ಗೋಚರತೆಯು ಹೆಚ್ಚಿರುತ್ತದೆ. ಹೆದ್ದಾರಿಗಳಲ್ಲಿ ಬಲಭಾಗದಿಂದ ಓವರ್ ಟೇಕ್ ಮಾದುವುದೇ ಉತ್ತಮ ಏಕೆಂದರೆ ಬಲಭಾಗದಲ್ಲಿ ಯಾವುದೆ ತಿರುವುಗಳು ಇರುವುದಲ್ಲವಾದ ಕಾರಣ ಅದೇ ಒಳಿತು.

ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

ನಡೆದ ಘಟನೆಯಲ್ಲಿ ಅದೃಷ್ಟವಷಾತ್ ಕಾರು ಚಾಲಕರಿಗಾಗಲಿ ಟ್ರಾಕ್ಕಿಗಾಗಲಿ ಯಾವುದೇ ಹಾನಿಯಾಗಲಿಲ್ಲ. ಟ್ರಕ್ ಚಾಲಕ ಮತ್ತು ಕಾರು ಚಾಲಕರಿಬ್ಬರೂ ಬ್ರೇಕ್ ಒತ್ತಿದ ಕಾರಣ ಗುದ್ದುವು ಸಂಭವವು ಇಲ್ಲದಾಂತಾಯಿತು. ಇಬ್ಬರಲ್ಲಿ ಒಬ್ಬರು ನಿಯಂತ್ರಣ ತಪ್ಪಿದ್ದರೂ, ಹೆಚ್ಚಿನ ಪ್ರಮಾಣದಲ್ಲಿ ಅಪಘಾತ ಸಂಭವಿಸುತ್ತಿತ್ತು.

Source: Rishi Sinha

ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

ಹೈವೇಯಲ್ಲಿ ಡ್ರೈವಿಂಗ್ ಮಾಡಲು 10 ಬಹುಮೂಲ್ಯ ಟಿಪ್ಸ್

ಕಾರಿನಲ್ಲಿ ದೂರ ಪ್ರಯಾಣ ಹೊರಡುವ ವೇಳೆ ಕೆಲವೊಂದು ಅಂಶಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಇವುಗಳಲ್ಲಿ ಹವಾಮಾನ ಪರಿಸ್ಥಿತಿ ಪ್ರಮುಖ ಅಂಶವಾದರೆ ಚಾಲಕನ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಆರೋಗ್ಯ ಸಮಸ್ಯೆಯಿದ್ದಲ್ಲಿ ದೂರ ಪ್ರಯಾಣವನ್ನು ನಿಶ್ಚಿತ ದಿನದಿಂದ ಮುಂದೂಡುವುದು ಒಳಿತು. ಹೆದ್ದಾರಿ ಪ್ರಯಾಣದ ವೇಳೆ ಗಮನದಲ್ಲಿಟ್ಟುಕೊಳ್ಳಬೇಕಾದ 10 ಅಂಶಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

MOST READ: ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

01. ಪ್ರಯಾಣ ಆರಂಭಕ್ಕೂ ಮುನ್ನ

ದೂರ ಪ್ರಯಾಣ ಆರಂಭಕ್ಕೂ ಮುನ್ನ ಇಂಧನ ಟ್ಯಾಂಕ್ ಸಂಪೂರ್ಣವಾಗಿ ಭರ್ತಿ ಮಾಡಿಡಿ. ಇನ್ನು ಮೊಬೈಲ್ ಫೋನ್ ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಲು ಮರೆಯದಿರಿ. ಡ್ರೈವಿಂಗ್ ಲೈಸನ್ಸ್ ನಿಂದ ಹಿಡಿದು ಕಾರಿಗೆ ಸಂಬಂಧಪಟ್ಟ ಎಲ್ಲ ದಾಖಲಾತಿ ಪ್ರತಿಗಳನ್ನು ಕೈಯಲ್ಲಿಟ್ಟುಕೊಳ್ಳಲು ಮರೆಯದಿರಿ.

ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

02. ವೇಗದಲ್ಲಿ ಮಿತಿಯಿರಲಿ

ಭಾರತೀಯ ಬಹುತೇಕ ಹೆದ್ದಾರಿಗಳಲ್ಲಿ ವೇಗ ಮಿತಿ ನಿಯಮ ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಹಾಗಾಗಿ ಹೆದ್ದಾರಿ ಪರಿಸ್ಥಿತಿಗೆ ಅನುಗುಣವಾಗಿ ವೇಗದಲ್ಲಿ ಮಿತಿಯಿರಲಿ. ನಿಮ್ಮ ಗುರಿ ತಲುಪಲು ಯಾವುದೇ ರೀತಿಯ ಅವಸರ ಬೇಡ. ಮಳೆ, ಟ್ರಾಫಿಕ್ ಅಥವಾ ಮಂಜಿನ ತೊಂದರೆಯಿದ್ದಲ್ಲಿ ನಿಧಾನವಾಗಿ ಚಲಿಸಲು ಮರೆಯದಿರಿ. ಮುನ್ಮುಖವಾಗಿ ಚಲಿಸುವ ಪ್ರತಿಯೊಂದು ವಾಹನವನ್ನು ಓವರ್ ಟೇಕ್ ಮಾಡುವ ಗೋಜಿಗೆ ಹೋಗದಿರಿ.

ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

03. ಟ್ಯಾಂಕರ್ ಮತ್ತು ಲಾರಿಗಳು

ಘಾಟಿ ಪ್ರದೇಶಗಳಲ್ಲಿ ನಿಧಾನವಾಗಿ ಚಲಿಸುವ ಅಮಿತ ಭಾರದ ಟ್ಯಾಂಕರ್ ಮತ್ತು ಸರಕು ಲಾರಿಗಳು ತುಂಬಿಕೊಂಡಿರುವುದರಿಂದ ಅತಿಯಾದ ಜಾಗ್ರತೆಯಿಂದ ಪ್ರಯಾಣ ಮುಂದುವರಿಸಿರಿ. ಹೆದ್ದಾರಿಗಳಲ್ಲಿ ಸಾಕಷ್ಟು ಹೊತ್ತು ಡ್ರೈವಿಂಗ್ ಮಾಡಿ ದಣಿವಾಗಿರುವುದರಿಂದ ಅಜಾಗರೂಕತೆಯಿಂದ ಚಾಲನೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಓವರ್ ಟೇಕ್ ಮಾಡುವಾಗ ಎಚ್ಚರದಿಂದಿರಬೇಕು.

ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

04. ರಸ್ತೆ ಉಬ್ಬುಗಳು

ಹೆದ್ದಾರಿಗಳಲ್ಲಿ ರಾತ್ರಿ ವೇಳೆಯಲ್ಲಿ ವೇಗವಾಗಿ ಚಲಿಸುವಾಗ ರಸ್ತೆ ಉಬ್ಬುಗಳು ಕಣ್ಣಿಗೆ ಕಾಣಸಿಗದು. ಇನ್ನು ಕೆಲವು ಕಡೆಗಳಲ್ಲಿ ರಸ್ತೆ ಉಬ್ಬುಗಳ ಚಿಹ್ನೆಯೇ ಇರಲಾರದು. ಹಾಗಾಗಿ ಆಕಸ್ಮತ್ ಎದುರಾಗುವ ರಸ್ತೆ ಉಬ್ಬುಗಳ ಬಗ್ಗೆ ಎಚ್ಚರದಿಂದಿರಬೇಕು. ಹಾಗಾಗಿ ವಾಹನಗಳ ನಡುವೆ ಸುರಕ್ಷಿತ ಅಂತರವನ್ನು ಕಾಪಾಡಿಕೊಂಡು ಇಂತಹ ವೇಗ ಮಿತಿಗಳ ಬಗ್ಗೆ ನಿಗಾವಹಿಸುವುದು ಒಳಿತು.

ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

05. ರಸ್ತೆ ಚಿಹ್ನೆ

ಪ್ರಯಾಣ ಹಾದಿಯ ಬಗ್ಗೆ ನಿಮಗೆ ಸ್ಪಷ್ಟವಾದ ಜ್ಞಾನವಿಲ್ಲದಿದ್ದಲ್ಲಿ ರಸ್ತೆ ಮಾರ್ಗ ಬದಿಗಳಲ್ಲಿರುವ ರಸ್ತೆ ಚಿಹ್ನೆಗಳನ್ನು ಪಾಲಿಸಲು ಮರೆಯದಿರಿ. ಕಡಿದಾದ ತಿರುವು, ಕಿರಿದಾದ ಸೇತುವೆ, ಅಂಕುಡೊಂಕುವಕ್ರಾಕೃತಿ, ಝಿಬ್ರಾ ಕ್ರಾಸಿಂಗ್, ಇಳಿಜಾರು, ರೈಲ್ವೆ ಕ್ರಾಸಿಂಗ್ ಹೀಗೆ ಎಲ್ಲ ರಸ್ತೆ ಚಿಹ್ನೆಗಳನ್ನು ನೋಡಿಕೊಂಡು ಮುನ್ನುಗಬೇಕು.

ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

06. ಎರಡು ಲೇನ್ ಹೆದ್ದಾರಿ

ಎರಡು ಲೇನ್ ಹೆದ್ದಾರಿಗಳನ್ನು ಸಮೀಪಿಸಿದಾಗ ವೇಗದಲ್ಲಿ ಮಿತಿಯಿರಲಿ. ಮುಂಭಾಗದಿಂದ ಬರುವ ವಾಹನಗಳು ಹೆಡ್ ಲೈಟ್ ಫ್ಲ್ಯಾಶ್ ಮಾಡಿದಾಗ ವಾಹನ ನಿಧಾನ ಮಾಡಿ ಆ ಗಾಡಿಗೆ ಮುಂದಕ್ಕೆ ಹೋಗಲು ಅನುವು ಮಾಡಿಕೊಡಿ. ಹಾಗೆಯೇ ಹೈ ಬಿಮ್ ಹೆಡ್ ಲೈಟ್ ಗಳನ್ನು ಡಿಮ್/ಡಿಪ್ ಮಾಡಲು ಮರೆಯದಿರಿ.

ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

07. ಘಾಟಿ ಪ್ರದೇಶ

ಘಾಟಿ ಪ್ರದೇಶದಂತಹ ಅಂಕು ಡೊಂಕಾದ ಕಡಿದಾದ ತಿರುವುಗಳನ್ನು ಒಳಗೊಂಡಿರುವ ಎರಡು ಲೇನ್ ಹೆದ್ದಾರಿಗಳಲ್ಲಿ ಚಲಿಸುವಾಗ ಅತೀಯ ಜಾಗ್ರತೆ ಅಗತ್ಯ. ಇಲ್ಲಿ ಓವರ್ ಟೇಕ್ ಮಾಡುವುದು ಶುದ್ಧ ಅಸಂಬಂಧ. ಅತೀವ ಏರಿಳಿತದಿಂದ ಕೂಡಿದ ಇಂತಹ ರಸ್ತೆಗಳಲ್ಲಿ ಲೇನ್ ತಪ್ಪುವುದು ಅಪಘಾತವನ್ನು ಕೈಬೀಸಿ ಕರೆದಂತೆ. ಇನ್ನು ರಸ್ತೆಗಳಲ್ಲಿ ಗುಂಡಿಗಳಿರುವುದರಿಂದ ನಿಧಾನವಾಗಿ ಸಂಚರಿಸಬೇಕು. ಘಾಟಿ ಪ್ರದೇಶದಲ್ಲಿ ಮೇಲಕ್ಕೆ ಏರುವ ವಾಹನಗಳು ಕಡಿದಾದ ತಿರುವುಗಳಲ್ಲಿ ಲೇನ್ ತಪ್ಪಿ ಬಲಭಾಗದತ್ತ ವಾಲುವ ಸಂಭವ ಇರುವುದರಿಂದ ಮೇಲಿಂದ ಕೆಳಕ್ಕೆ ಇಳಿಯುವ ವಾಹನಗಳು ವೇಗವನ್ನು ನಿಧಾನಗೊಳಿಸಿ ಮೇಲಕ್ಕೆರುವ ವಾಹನಗಳ ಸುಗಮ ಸಂಚಾರಕ್ಕೆ ಹಾದಿ ಬಿಟ್ಟುಕೊಡಬೇಕು.

ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

08. ದಣಿವು

ದೂರ ಪ್ರಯಾಣದ ವೇಳೆ ದಣಿವು ಆವರಿಸಲಿರುವುದರಿಂದ ಪ್ರಯಾಣದ ಮಧ್ಯೆ ಸಣ್ಣ ಪುಟ್ಟ ಬ್ರೇಕ್ ಪಡೆದುಕೊಳ್ಳುವುದನ್ನು ರೂಢಿಸಿಕೊಳ್ಳಿ. ರಾತ್ರಿ ವೇಳೆಯಲ್ಲಿ ಟೀ ಬ್ರೇಕ್ ನಿಮಗೆ ನಿದ್ರೆ ಬರುವುದನ್ನು ತಡೆಯಲಿದೆ. ಇನ್ನು ಒಂದಕ್ಕಿಂತ ಹೆಚ್ಚು ಚಾಲಕರಿದ್ದಲ್ಲಿ ಕಡಿಮೆ ಪಕ್ಷ ಪ್ರತಿ ಮೂರು ತಾಸಿಗೊಮ್ಮೆ ಚಾಲಕರನ್ನು ಬದಲಾಯಿಸಿಕೊಳ್ಳಿರಿ.

MOST READ: ಕಾರು ಖರೀದಿದಾರರಿಗೆ ಮತ್ತಷ್ಟು ಹೊಸತನ ನೀಡಿದ ಮಾರುತಿ ಸುಜುಕಿ ಅರೆನಾ

ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

09. ಪಂಚರ್ ಆದಲ್ಲಿ

ಕಾರು ಬ್ರೇಕ್ ಡೌನ್ ಅಥವಾ ಪಂಚರ್ ಆದಲ್ಲಿ ರಸ್ತೆಯಿಂದ ಬದಿಗೆ ಸರಿಸಿ ಪಾರ್ಕಿಂಗ್ ಮಾಡಿಟ್ಟುಕೊಂಡು ಹಜಾರ್ಡ್ ಲೈಟ್ ಉರಿಸಲು ಮರೆಯದಿರಿ. ಕೆಂಪು ಪ್ರತಿಫಲಕ ಸೂಚನಾ ಫಲಕಗಳು ಇಲ್ಲಿ ನೆರವಿಗೆ ಬರಲಿದೆ. ಇದರಿಂದ ಚಕ್ರ ಬದಲಾಯಿಸಲು ಯಾವುದೇ ತೊಂದರೆ ಕಾಡದು.

ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

10. ಅಪಕ್ವ ಚಾಲನೆ

ದೇಶದಲ್ಲಿ ನಡೆಯುತ್ತಿರುವ ಬಹುತೇಕ ಅಪಘಾತ ಪ್ರಕರಣಗಳು ಅಪಕ್ವ ರೀತಿಯ ಚಾಲನೆಯಿಂದಲೇ ನಡೆಯುತ್ತಿರುತ್ತದೆ. ಹಾಗಾಗಿ ಇತರರನ್ನು ದೂಷಿಸುವ ಮೊದಲು ನಿಮ್ಮ ತಪ್ಪನ್ನು ಮೊದಲು ಸರಿಪಡಿಸಿಕೊಂಡು ಸುರಕ್ಷಿತ ಚಾಲನೆಗೆ ಆಸ್ಪದ ಕೊಡರಿ.

ಹ್ಯಾಪಿ ಡ್ರೈವಿಂಗ್!

Kannada
English summary
Why overtaking from the left is so dangerous. Read In Kannada
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more