ರೈತರ ಬದುಕಿಗೆ ಹೊಸ ಆಶಾಕಿರಣವಾಗುತ್ತಿದೆ ಟಫೆ ಸಂಸ್ಥೆಯ ಈ ಹೊಸ ಆ್ಯಪ್‌

ದೇಶದ ಎರಡನೇ ಅತಿದೊಡ್ಡ ಟ್ರ್ಯಾಕ್ಟರ್ ಉತ್ಪಾದನಾ ಸಂಸ್ಥೆಯಾಗಿರುವ ಟಫೆ ಇದೀಗ ರೈತರ ಕೃಷಿಯೇತರ ಆದಾಯ ಹೆಚ್ಚಿಸಲು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ರೈತರ ನಡುವೆ ಸಂವಹನ ಹೆಚ್ಚಿಸುವ ಮತ್ತು ಆದಾಯ ಗಳಿಕೆ ಮಾಡಬಹುದಾದ ಆ್ಯಪ್‌ಯೊಂದನ್ನು ಬಿಡುಗಡೆ ಮಾಡಿರುವುದು ಭಾರೀ ಜನಪ್ರಿಯತೆ ಗಳಿಸುತ್ತಿದೆ.

ರೈತರ ಬದುಕಿಗೆ ಹೊಸ ಆಶಾಕಿರಣವಾಗುತ್ತಿದೆ ಟಫೆ ಸಂಸ್ಥೆಯ ಈ ಹೊಸ ಆ್ಯಪ್‌

ಟಫೆ ಇಂಡಿಯಾ ಸಂಸ್ಥೆಯು ಬಿಡುಗಡೆ ಮಾಡಿರುವ ಆ್ಯಪ್ ಸಹಾಯದಿಂದ ರೈತರು ತಮ್ಮ ಕೃಷಿ ಉಪಕರಣಗಳನ್ನು ಹಂಚಿಕೊಳ್ಳುವ ವ್ಯವಸ್ಥೆ ಇದಾಗಿದ್ದು, ರೈತರ ಆದಾಯಕ್ಕೆ ಹೊಸ ಮಾರ್ಗ ಇದಾಗಿದೆ. ಹಾಗಾದ್ರೆ ಟಫೆ ಸಂಸ್ಥೆಯು ಬಿಡುಗಡೆ ಆ್ಯಪ್ ಯಾವುದು? ಅದರಿಂದ ರೈತರಿಗೆ ಹೇಗೆ ಲಾಭವಾಗುತ್ತೆ ಎನ್ನುವ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನಾವು ತಿಳಿಸಿಕೊಡಲಿದ್ದೇವೆ.

ರೈತರ ಬದುಕಿಗೆ ಹೊಸ ಆಶಾಕಿರಣವಾಗುತ್ತಿದೆ ಟಫೆ ಸಂಸ್ಥೆಯ ಈ ಹೊಸ ಆ್ಯಪ್‌

ರೈತರಿಂದ ರೈತರಿಗಾಗಿ..!

ಟಫೆ ಸಂಸ್ಥೆಯು ತೆರೆದಿರುವ ಹೊಸ ಆ್ಯಪ್ ಇದೀಗ ದೇಶದ ಪ್ರಮುಖ 7 ರಾಜ್ಯದಲ್ಲಿ ಕಾರ್ಯನಿರ್ವಹಣೆಯಲ್ಲಿದ್ದು, ರೈತರಿಗಾಗಿ ರೈತರಿಗಾಗಿ ಧ್ಯೇಯದೊಂದಿಗೆ ಈ ವಿನೂತನ ಯೋಜನೆಗಳನ್ನು ತೆರೆಯಲಾಗಿದೆ.

ರೈತರ ಬದುಕಿಗೆ ಹೊಸ ಆಶಾಕಿರಣವಾಗುತ್ತಿದೆ ಟಫೆ ಸಂಸ್ಥೆಯ ಈ ಹೊಸ ಆ್ಯಪ್‌

ಜೆಫಾರ್ಮ್ ಸರ್ವಿಸ್.!

ರೈತರು ತಮ್ಮಲ್ಲಿರುವ ಕೃಷಿ ಉಪಕರಣಗಳನ್ನು "ಜೆಫಾರ್ಮ್ ಸರ್ವಿಸ್"( JFarm Service) ಆ್ಯಪ್ ಮೂಲಕ ಅಗತ್ಯವಿರುವ ರೈತರೊಂದಿಗೆ ಹಂಚಿಕೊಳ್ಳುವ ಜೊತೆಗೆ ಆದಾಯ ಗಳಿಕೆ ಮಾಡಬಹುದಾದ ವೇದಿಕೆ ಇದಾಗಿದೆ.

ರೈತರ ಬದುಕಿಗೆ ಹೊಸ ಆಶಾಕಿರಣವಾಗುತ್ತಿದೆ ಟಫೆ ಸಂಸ್ಥೆಯ ಈ ಹೊಸ ಆ್ಯಪ್‌

ಅಂದ್ರೆ, ರೈತರು ಜೆಫಾರ್ಮ್ ಸರ್ವಿಸ್ ಮೂಲಕ ಅಗತ್ಯವಿರುವ ರೈತರೊಂದಿಗೆ ತಮ್ಮಲ್ಲಿರುವ ಕೃಷಿ ಉಪಕರಣಗಳಾದ ಟ್ರ್ಯಾಕ್ಟರ್‌ ಮತ್ತು ಸಣ್ಣಗಾತ್ರದ ಜೆಸಿಬಿ ಮಾಡೆಲ್‌ಗಳನ್ನು ಬಾಡಿಗೆ ರೂಪದಲ್ಲಿ ಹಂಚಿಕೊಳ್ಳಬಹುದಾಗಿದೆ.

ರೈತರ ಬದುಕಿಗೆ ಹೊಸ ಆಶಾಕಿರಣವಾಗುತ್ತಿದೆ ಟಫೆ ಸಂಸ್ಥೆಯ ಈ ಹೊಸ ಆ್ಯಪ್‌

ಇದಲ್ಲದೆ, ಅಗತ್ಯವಿರುವ ರೈತರು ತಮಗೆ ಬೇಕಾದ ಉಪಕರಣಗಳಿಗಳಿಗಾಗಿ ಇಲ್ಲಿ ಹೆಸರು ನೋಂದಾಯಿಸಿದ್ದಲ್ಲಿ ಟಫೆ ಸಂಸ್ಥೆಯೇ ಮಧ್ಯಸ್ಥಿಕೆ ವಹಿಸಿ ಅಗತ್ಯ ಕೃಷಿ ಉಪಕರಣಗಳನ್ನು ಒದಗಿಸುವ ವ್ಯವಸ್ಥೆ ಮಾಡುವುದಲ್ಲದೆ ರೈತರಿಗೆ ಆದಾಯ ಗಳಿಸಲು ಅವಕಾಶ ನೀಡುತ್ತೆ.

ರೈತರ ಬದುಕಿಗೆ ಹೊಸ ಆಶಾಕಿರಣವಾಗುತ್ತಿದೆ ಟಫೆ ಸಂಸ್ಥೆಯ ಈ ಹೊಸ ಆ್ಯಪ್‌

ಬಹುತೇಕ ರೈತರು ತಮ್ಮ ಕೃಷಿ ಚಟುವಟಿಕೆಗಳು ಮುಗಿದ ನಂತರ ಟ್ರ್ಯಾಕ್ಟರ್‌ ಮತ್ತು ಕೆಲವು ಕೃಷಿ ಉಪಕರಣಗಳನ್ನು ಇತರೆ ರೈತರಿಗೆ ಬಾಡಿಗೆಗಾಗಿ ಬಿಡುವುದು ಮಾಮೂಲಿ. ಆದ್ರೆ ಎಲ್ಲಾ ರೈತರಿಗೆ ಈ ಅವಕಾಶ ಸಿಗುವುದಿಲ್ಲ. ಇದರಿಂದಾಗಿ ಕೃಷಿ ಉಪಕರಣಗಳಿಗೆ ಕೆಲಸವಿಲ್ಲದೆ ಕೆಲವೊಮ್ಮೆ ಆರ್ಥಿಕವಾಗಿ ನಷ್ಟವಾಗುವ ಸಾಧ್ಯತೆಗಳಿರುತ್ತವೆ.

MOST READ: ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕಥೆ ಏನು.?

ರೈತರ ಬದುಕಿಗೆ ಹೊಸ ಆಶಾಕಿರಣವಾಗುತ್ತಿದೆ ಟಫೆ ಸಂಸ್ಥೆಯ ಈ ಹೊಸ ಆ್ಯಪ್‌

ಹೀಗಾಗಿ ಟಫೆ ಸಂಸ್ಥೆಯು ಪರಿಚಯಿಸಿರುವ ಜೆಫಾರ್ಮ್ ಸರ್ವಿಸ್ ಆ್ಯಪ್ ಸೇವೆಯು ಟ್ರ್ಯಾಕ್ಟರ್ ಖರೀದಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾಲದ ಸುಳಿಯಲ್ಲಿ ಸಿಲುಕಿರುವ ರೈತರಿಗೆ ಹೊಸ ಆದಾಯದ ಮಾರ್ಗವಾಗಲಿದ್ದು, ಮಧ್ಯವರ್ತಿಗಳ ಹಾವಳಿಯು ತಪ್ಪಲಿದೆ.

ರೈತರ ಬದುಕಿಗೆ ಹೊಸ ಆಶಾಕಿರಣವಾಗುತ್ತಿದೆ ಟಫೆ ಸಂಸ್ಥೆಯ ಈ ಹೊಸ ಆ್ಯಪ್‌

ಗಂಟೆಗೆ ರೂ. 600 ಬಾಡಿಗೆ ಫಿಕ್ಸ್..!

ಟಫೆ ಸಂಸ್ಥೆಯು ರೈತರ ಬಳಿಯಿರುವ ಟ್ರ್ಯಾಕ್ಟರ್ ಮತ್ತು ಕೆಲವು ಕೃಷಿ ಉಪಕರಣಗಳನ್ನು ಅಗತ್ಯವಿರುವ ರೈತರಿಗೆ ಒದಗಿಸುವ ಆದಾಯ ಗಳಿಸಲು ಅವಕಾಶ ನೀಡಲಿದ್ದು, ಟ್ರ್ಯಾಕ್ಟರ್ ಒಂದಕ್ಕೆ ಗಂಟೆಗೆ ರೂ.600 ಬಾಡಿಗೆ ಪಾವತಿಸುತ್ತೆ.

ರೈತರ ಬದುಕಿಗೆ ಹೊಸ ಆಶಾಕಿರಣವಾಗುತ್ತಿದೆ ಟಫೆ ಸಂಸ್ಥೆಯ ಈ ಹೊಸ ಆ್ಯಪ್‌

ಈ ವೇಳೆ ಟ್ರ್ಯಾಕ್ಟರ್ ಹೊಂದಿರುವ ರೈತರು ಮತ್ತು ಟ್ರ್ಯಾಕ್ಟರ್ ಅಗತ್ಯವಿರುವ ರೈತರ ಮಧ್ಯೆ ಸೇತುವೆ ಕಾರ್ಯನಿರ್ವಹಿಸುವ ಟಫೆ ಸಂಸ್ಥೆಯು ಇಂತಿಷ್ಟು ಪ್ರಮಾಣದಲ್ಲಿ ಶುಲ್ಕು ತೆಗೆದುಕೊಳ್ಳಲಿದ್ದು, ರೈತರು ತಮ್ಮ ಟ್ರ್ಯಾಕ್ಟರ್ ಸಾಲಗಳ ಮರುಪಾವತಿಗೆ ಸಹಕಾರಿಯಾಗಲಿದೆ.

ರೈತರ ಬದುಕಿಗೆ ಹೊಸ ಆಶಾಕಿರಣವಾಗುತ್ತಿದೆ ಟಫೆ ಸಂಸ್ಥೆಯ ಈ ಹೊಸ ಆ್ಯಪ್‌

ಹೊಸ ಆ್ಯಪ್‌ನಿಂದ 45 ಲಕ್ಷ ರೈತರಿಗೆ ಸಹಾಯ!

ಸದ್ಯ ಕರ್ನಾಟಕ ಸೇರಿದಂತೆ ಮಧ್ಯಪ್ರದೇಶ, ಆಂಧ್ರಪ್ರದೇಶ, ಬಿಹಾರ್, ತಮಿಳುನಾಡು ಅಸ್ಸಾಂ ರಾಜ್ಯಗಳಲ್ಲಿ ಈ ಆ್ಯಪ್ ಸೇವೆ ಕಾರ್ಯನಿರ್ವಹಣೆಯಲ್ಲಿದ್ದು, ಮಧ್ಯಪ್ರದೇಶದಲ್ಲಿ ಈ ಹೊಸ ಯೋಜನೆಯು ಪರಿಣಾಮಕಾರಿಯಾಗಿ ಜಾರಿಯಾದ ಪರಿಣಾಮ ಲಕ್ಷಾಂತರ ರೈತರು ಇದೀಗ ಲಾಭ ಪಡೆಯುತ್ತಿದ್ದಾರೆ.

ರೈತರ ಬದುಕಿಗೆ ಹೊಸ ಆಶಾಕಿರಣವಾಗುತ್ತಿದೆ ಟಫೆ ಸಂಸ್ಥೆಯ ಈ ಹೊಸ ಆ್ಯಪ್‌

ಕೃಷಿ ಚಟುವಟಿಕೆಯ ದಿನಗಳನ್ನು ಹೊರತುಪಡಿಸಿ ಖಾಲಿ ದಿನಗಳಲ್ಲಿ ಆದಾಯ ಗಳಿಕೆ ಇದು ಸಹಕಾರಿಯಾಗಲಿದ್ದು, ಆಸಕ್ತ ರೈತರು ತಮ್ಮ ಕೃಷಿ ಉಪಕರಣಗಳನ್ನು ಜೆಫಾರ್ಮ್ ಸರ್ವಿಸ್ ಮೂಲಕ ಪರಸ್ಪರ ಹಂಚಿಕೊಳ್ಳುವ ಮೂಲಕ ಸಾಲದ ಸುಳಿಯಿಂದ ಹೊರಬರಲು ಇದೊಂದು ಉತ್ತಮ ಮಾರ್ಗ ಎನ್ನಬಹುದು.

MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ರೈತರ ಬದುಕಿಗೆ ಹೊಸ ಆಶಾಕಿರಣವಾಗುತ್ತಿದೆ ಟಫೆ ಸಂಸ್ಥೆಯ ಈ ಹೊಸ ಆ್ಯಪ್‌

ಇದಕ್ಕಾಗಿ ರೈತರು ಜೆಫಾರ್ಮ್ ಸರ್ವಿಸ್ ಆ್ಯಪ್ ಬಳಕೆ ಮಾಡಲು ನೋಂದಣಿ ಮಾಡಿಕೊಳ್ಳಬೇಕಾಗುತ್ತೆ. ಇದಕ್ಕೂ ವ್ಯವಸ್ಥೆ ಮಾಡಿರುವ ಟಫೆ ಸಂಸ್ಥೆಯು ಫೀಲ್ಡ್ ಆಫೀರ್ಸ್‌ಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ರೈತರ ಉಪಕರಣಗಳನ್ನು ಹಂಚಿಕೆ ಮಾಡಿ ಹೊಸ ಆದಾಯದ ಮಾರ್ಗವನ್ನು ಕಂಡುಕೊಂಡಿದೆ.

More from DriveSpark

ಗ್ರಾಮೀಣ ವಿಭಾಗದ ಬೈಕ್ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಿರುವ ಟಿವಿಎಸ್ ಹೊಚ್ಚ ಹೊಸ ರೆಡಿಯಾನ್ ಬೈಕ್ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ..!

Article Published On: Tuesday, September 25, 2018, 18:49 [IST]
English summary
TAFE launches farmer to farmer tractor hiring app.
Read more on tractor auto news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+