ಪ್ರತಿ ಚಾರ್ಜ್‌ಗೆ 300 ಕಿ.ಮೀ ಮೈಲೇಜ್ ನೀಡುವ ಟಾಟಾ ಇ ವರ್ಷನ್ ಸೆಡಾನ್

ಕಳೆದ ತಿಂಗಳ ಹಿಂದಷ್ಟೇ ಟಾಟಾ ಸಂಸ್ಥೆಯು ಹೊಸದಾಗಿ ಅಭಿವೃದ್ಧಿಗೊಳಿಸಿದ್ದ ಎಲೆಕ್ಟ್ರಾನಿಕ್ ಸೆಡಾನ್ ಪರಿಕಲ್ಪನೆಯ ಕಾರಿನ ಬಗ್ಗೆ ಡ್ರೈವ್‌ಸ್ಪಾರ್ಕ್ ತಂಡವು ವರದಿ ಮಾಡಿತ್ತು. ಇದೀಗ ಅದೇ ಕಾರಿನ ಮತ್ತಷ್ಟು ತಾಂತ್ರಿಕ ಅಂಶಗಳು ಲಭ್ಯವಾಗಿವೆ.

By Praveen Sannamani

ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ವಿವಿಧ ಯೋಜನೆಗಳೊಂದಿಗೆ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದನೆ ಮಾಡುತ್ತಿದ್ದು, ಜನಪ್ರಿಯ ಟಾಟಾ ಮೋಟಾರ್ಸ್ ಕೂಡಾ ಈ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿರುವುದು ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಸಂಚಲನ ಸೃಷ್ಠಿಸಿದೆ.

ಪ್ರತಿ ಚಾರ್ಜ್‌ಗೆ 300 ಕಿ.ಮೀ ಮೈಲೇಜ್ ನೀಡುವ ಟಾಟಾ ಇ ವರ್ಷನ್ ಸೆಡಾನ್

ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕಾಗಿ ಈಗಾಗಲೇ ಹೊಸ ಪ್ರಯತ್ನದಲ್ಲಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಹೊಸ ಇವಿ ಕಾರು ಮಾದರಿಯೊಂದನ್ನು ಅಭಿವೃದ್ಧಿ ಮಾಡುತ್ತಿದ್ದು, ಜಿನೆವಾದಲ್ಲಿ ನಡೆಯುತ್ತಿರುವ 2018ರ ಆಟೋ ಮೇಳದಲ್ಲಿ ಹೊಸ ಕಾರು ಪ್ರದರ್ಶನಗೊಳಿಸುವ ಮೂಲಕ ಇತರೆ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಕುತೂಹಲ ಹುಟ್ಟುಹಾಕಿತ್ತು.

ಪ್ರತಿ ಚಾರ್ಜ್‌ಗೆ 300 ಕಿ.ಮೀ ಮೈಲೇಜ್ ನೀಡುವ ಟಾಟಾ ಇ ವರ್ಷನ್ ಸೆಡಾನ್

ಟಾಟಾ ಸಂಸ್ಥೆಯು ಸಿದ್ದಗೊಳಿಸಿರುವ ಎಲೆಕ್ಟ್ರಿಕ್ ಕಾರು ಕಾಲ್ಪನಿಕ ಸೆಡಾನ್ ಮಾದರಿಯಾಗಿದ್ದು, ಉನ್ನತ ಮಟ್ಟದ OMEGA ಆರ್ಕಿಟೆಕ್ಚರ್ ವಿನ್ಯಾಸದೊಂದಿಗೆ ಸಿದ್ದಗೊಳ್ಳುತ್ತಿದೆ.

ಪ್ರತಿ ಚಾರ್ಜ್‌ಗೆ 300 ಕಿ.ಮೀ ಮೈಲೇಜ್ ನೀಡುವ ಟಾಟಾ ಇ ವರ್ಷನ್ ಸೆಡಾನ್

ಜೊತೆಗೆ ಜನಪ್ರಿಯ ಟೆಸ್ಲಾ ಮಾದರಿಯಲ್ಲೇ ಟಾಟಾ ಕೂಡಾ ತನ್ನ ಎಲೆಕ್ಟ್ರಿಕ್ ಕಾರುಗಳಲ್ಲಿ ಸಿಲಿಂಡ್ರಕಲ್-ಸೆಲ್ ಲಿಥೀಯಂ ಅಯಾನ್ ಬ್ಯಾಟರಿ ಹೊಂದಿದ್ದು, ಪ್ರತಿ ಚಾರ್ಜಿಂಗ್‌ಗೆ ಬರೋಬ್ಬರಿ 300ಕಿಮಿ ಮೈಲೇಜ್ ಹಿಂದಿರುಗಿಸಬಲ್ಲವು.

ಪ್ರತಿ ಚಾರ್ಜ್‌ಗೆ 300 ಕಿ.ಮೀ ಮೈಲೇಜ್ ನೀಡುವ ಟಾಟಾ ಇ ವರ್ಷನ್ ಸೆಡಾನ್

ಈ ಬಗ್ಗೆ ಸ್ವತಃ ಟಾಟಾ ಮೋಟಾರ್ಸ್‌ನ ಎಂಡಿ ಗುಂಟೆರ್​ ಬುಟ್ಸ್ಚೆಕ್ ಅವರೇ ಮಾತನಾಡಿದ್ದು, ಇವಿ ಕಾರುಗಳ ಬ್ಯಾಟರಿ ತಂತ್ರಜ್ಞಾನ ಸುಧಾರಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನದಲ್ಲಿದ್ದು, ಸದ್ಯ ಕಾಲ್ಪನಿಕ ಕಾರುಗಳಲ್ಲಿ ಬಳಕೆ ಮಾಡಿರುವ ಸಿಲಿಂಡ್ರಕಲ್-ಸೆಲ್ ಲಿಥೀಯಂ ಅಯಾನ್ ಬ್ಯಾಟರಿಗಳು ಟೆಸ್ಲಾ ಕಾರುಗಳಿಗೆ ಸರಿಸಮನಾಗಿರಲಿವೆ ಎಂದಿದ್ದಾರೆ.

ಪ್ರತಿ ಚಾರ್ಜ್‌ಗೆ 300 ಕಿ.ಮೀ ಮೈಲೇಜ್ ನೀಡುವ ಟಾಟಾ ಇ ವರ್ಷನ್ ಸೆಡಾನ್

ಇದಲ್ಲದೇ ಟಾಟಾ ಕಾರುಗಳಲ್ಲಿ ಪ್ರತಿ ಚಾರ್ಜಿಂಗ್‌ಗೆ 400 ಕಿಮಿ ಮೈಲೇಜ್ ಒದಗಿಸಬಲ್ಲ ಬ್ಯಾಟರಿ ಆವಿಷ್ಕಾರ ಬಗ್ಗೆಯೂ ಸುಳಿವು ನೀಡಿರುವ ಗುಂಟೆರ್​ ಬುಟ್ಸ್ಚೆಕ್, ಬಿಡುಗಡೆಗಾಗಿ ಸಿದ್ದವಾಗಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಮತ್ತು ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರುಗಳು ಪ್ರತಿಸ್ಪರ್ಧಿಯಾಗಲಿದೆ.

ಪ್ರತಿ ಚಾರ್ಜ್‌ಗೆ 300 ಕಿ.ಮೀ ಮೈಲೇಜ್ ನೀಡುವ ಟಾಟಾ ಇ ವರ್ಷನ್ ಸೆಡಾನ್

ಕಾರಿನ ವಿನ್ಯಾಸ

4.3-ಮೀಟರ್ ಉದ್ದಳತೆ ಹೊಂದಿರುವ ಹೊಸ ಇವಿ ಕಾರು, 21-ಇಂಚಿನ ಚಕ್ರಗಳು, ಫ್ರೆಮ್ ಲೇಸ್ ಡೋರ್‌ಗಳು, ವುಡ್ ಕ್ರಾಫ್ಟ್ ಪ್ರೇರಿತ ಡ್ಯಾಶ್ ಬೋರ್ಡ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಮತ್ತು ಹೆಎಚ್ಐ ತಂತ್ರಜ್ಞಾನ ಪಡೆದುಕೊಂಡಿದೆ.

ಪ್ರತಿ ಚಾರ್ಜ್‌ಗೆ 300 ಕಿ.ಮೀ ಮೈಲೇಜ್ ನೀಡುವ ಟಾಟಾ ಇ ವರ್ಷನ್ ಸೆಡಾನ್

ಜೊತೆಗೆ ಪ್ರಿಮಿಯಂ ಅಂಶಗಳನ್ನು ಹೊಂದಿರುವ ಟಾಟಾ ಇವಿ ಸೆಡಾನ್ ಕಾರುಗಳು ಸಿ ಸೆಗ್ಮೆಂಟ್ ಮಾದರಿಯಲ್ಲಿ ಅತ್ಯುತ್ತಮ ಬೇಡಿಕೆ ಹೊಂದುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಹ್ಯುಂಡೈ ವೆರ್ನಾ, ಮಾರುತಿ ಸುಜುಕಿ ಸಿಯಾಜ್, ಹೋಂಡಾ ಸಿಟಿ ಮತ್ತು ಬಿಡುಗಡೆಯಾಗಲಿರುವ ಟೊಯೊಟಾ ಯಾರಿಸ್ ಕಾರುಗಳಿಗೆ ಇದು ಸಮವಾಗಿರಲಿದೆ ಎಂಬ ಮಾಹಿತಿ ಇದೆ. ಆದರೂ ಹೊಸ ಕಾರಿನ ಬೆಲೆ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಪ್ರತಿ ಚಾರ್ಜ್‌ಗೆ 300 ಕಿ.ಮೀ ಮೈಲೇಜ್ ನೀಡುವ ಟಾಟಾ ಇ ವರ್ಷನ್ ಸೆಡಾನ್

ಇನ್ನು ಕೆಲ ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಮುಕ್ತಾಯವಾದ 2018ರ ಆಟೋ ಮೇಳದಲ್ಲೂ ಟಿಯಾಗೋ ಎಲೆಕ್ಟ್ರಿಕ್ ಕಾರುಗಳನ್ನು ಪ್ರದರ್ಶನ ಮಾಡಿದ್ದ ಟಾಟಾ ಸಂಸ್ಥೆಯು, ಇಇಎಸ್ಎಲ್ ಸಂಸ್ಥೆಗೆ ಸುಮಾರು 10 ಸಾವಿರ ಎಲೆಕ್ಟ್ರಿಕ್ ಟಿಗೋರ್ ಸೆಡಾನ್ ಕಾರುಗಳನ್ನು ಒದಗಿಸುವ ಗುತ್ತಿಗೆಯನ್ನು ಕೂಡಾ ಪಡೆದುಕೊಂಡಿದೆ.

ಪ್ರತಿ ಚಾರ್ಜ್‌ಗೆ 300 ಕಿ.ಮೀ ಮೈಲೇಜ್ ನೀಡುವ ಟಾಟಾ ಇ ವರ್ಷನ್ ಸೆಡಾನ್

ಈ ಮೂಲಕ ಭವಿಷ್ಯದ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸಲು ಹವಣಿಸುತ್ತಿರುವ ಟಾಟಾ ಮೋಟಾರ್ಸ್ ಸಂಸ್ಥೆಯು, ಇದೀಗ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮಟ್ಟದ ಮೈಲೇಜ್ ನೀಡಬಲ್ಲ ಬ್ಯಾಟರಿ ತಂತ್ರಜ್ಞಾನ ಆವಿಷ್ಕಾರಕ್ಕಾಗಿ ವಿಶೇಷ ಆಸಕ್ತಿ ತೋರುತ್ತಿದೆ.

More from DriveSpark

Article Published On: Monday, May 7, 2018, 19:59 [IST]
English summary
Tata E-Vision Electric Sedan Concept — More Real-Life Images Emerge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+