ಟಾಟಾ ಹ್ಯಾರಿಯರ್ ಕಾರುಗಳ ಖರೀದಿಗಾಗಿ ಶುರುವಾಗಿದೆ ಬುಕ್ಕಿಂಗ್

ಟಾಟಾ ಮೋಟಾರ್ಸ್ ಸಂಸ್ಥೆಯು ಬರಲಿರುವ ದೀಪಾವಳಿ ಹೊತ್ತಿಗೆ ತನ್ನ ಬಹುನೀರಿಕ್ಷಿತ ಹ್ಯಾರಿಯರ್ ಕಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ವೇದಿಕೆ ಸಿದ್ದಗೊಳಿಸುತ್ತಿದ್ದು, ಇದೀಗ ದೇಶದ ಆಯ್ದ ಟಾಟಾ ಡೀಲರ್ಸ್ ಬಳಿ ಹೊಸ ಕಾರಿನ ಖರೀದಿಗಾಗಿ ಬುಕ್ಕಿಂಗ್ ಸಹ ಸ್ವಿಕರಿಸುತ್ತಿರುವ ಮಾಹಿತಿ ಲಭ್ಯವಾಗಿದೆ.

ಟಾಟಾ ಹ್ಯಾರಿಯರ್ ಕಾರುಗಳ ಖರೀದಿಗಾಗಿ ಶುರುವಾಗಿದೆ ಬುಕ್ಕಿಂಗ್

ಹ್ಯಾರಿಯರ್ ಕಾರುಗಳು ಬಿಡುಗಡೆಯ ಸನಿಹದಲ್ಲಿರುವ ಕಾರಣ ಗ್ರಾಹಕರು ಹೊಸ ಖರೀದಿಗೆ ಉತ್ಸುಕರಾಗಿದ್ದು, ಟಾಟಾ ಸಂಸ್ಥೆಯು ಅಧಿಕೃತವಾಗಿ ಬುಕ್ಕಿಂಗ್ ಆರಂಭ ಮಾಡುವುದಕ್ಕೂ ಮುನ್ನವೇ ಹೊಸ ಕಾರುನ್ನು ಮೊದಲು ತಮ್ಮದಾಗಿಸಿಕೊಳ್ಳಲು ಮುಂದಾಗಿರುವ ಕೆಲವು ಕಾರು ಪ್ರಿಯರು ರೂ.50 ಸಾವಿರ ಮುಂಗಡ ಪಾವತಿ ತಮ್ಮ ನೆಚ್ಚಿನ ಕಾರನ್ನು ಕಾಯ್ದಿರಿಸುತ್ತಿದ್ದಾರೆ.

ಟಾಟಾ ಹ್ಯಾರಿಯರ್ ಕಾರುಗಳ ಖರೀದಿಗಾಗಿ ಶುರುವಾಗಿದೆ ಬುಕ್ಕಿಂಗ್

ಬೆಂಗಳೂರಿನ ಕೆಲವು ಟಾಟಾ ಡೀಲರ್ಸ್‌ಗಳು ಸಹ ಹೊಸ ಕಾರು ಖರೀದಿಗಾಗಿ ಮುಂಗಡ ಪಡೆದುಕೊಳ್ಳುತ್ತಿದ್ದು, ದೀಪಾವಳಿ ಹೊತ್ತಿಗೆ ಕಾರು ಬಿಡುಗಡೆಯಾಗುವ ಭರವಸೆ ನೀಡುತ್ತಿದ್ದಾರೆ. ಮಾಹಿತಿಗಳ ಪ್ರಕಾರ, ಇದುವರೆಗೆ 10 ರಿಂದ 15 ಸಾವಿರ ಗ್ರಾಹಕರು ಹೊಸ ಕಾರು ಖರೀದಿಗಾಗಿ ಮುಂಗಡ ಪಾವತಿಸಿರಬಹುದು ಎನ್ನಲಾಗಿದ್ದು, ಬಿಡುಗಡೆಯ ಹೊತ್ತಿಗೆ ಇದು ಲಕ್ಷ ದಾಟಿದರೂ ಅಚ್ಚರಿ ಇಲ್ಲ.

ಟಾಟಾ ಹ್ಯಾರಿಯರ್ ಕಾರುಗಳ ಖರೀದಿಗಾಗಿ ಶುರುವಾಗಿದೆ ಬುಕ್ಕಿಂಗ್

ಟಾಟಾ ಮೋಟಾರ್ಸ್ ವಾರ್ನಿಂಗ್!

ಮೇಲೆ ಹೇಳಿದ ಹಾಗೆ, ಡೀಲರ್ಸ್‌ಗಳು ಸ್ವಿಕರಿಸುತ್ತಿರುವ ಮುಂಗಡ ಪ್ರಕ್ರಿಯೆ ಅಧಿಕೃತವಲ್ಲ. ಹೀಗಾಗಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಟಾಟಾ ಸಂಸ್ಥೆಯು ಗ್ರಾಹಕರಿಂದ ಮುಂಗಡ ಸ್ವಿಕರಿಸುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು, ಒಂದೇ ವೇಳೆ ಹಣ ಪಾವತಿಸಿ ಬುಕ್ಕಿಂಗ್ ಗ್ರಾಹಕರಿಗೆ ಕೊನೆಯ ಕ್ಷಣದಲ್ಲಿ ಕಾರು ಇಷ್ಟವಾಗದೆ ಇದ್ದ ಪಕ್ಷದಲ್ಲಿ ಯಾವುದೇ ನಿರ್ಬಂಧವಿಲ್ಲದೆ ಹಣ ವಾಪಸ್ ನೀಡಿ ಎಂದು ಸೂಚನೆ ನೀಡಿದೆ.

ಟಾಟಾ ಹ್ಯಾರಿಯರ್ ಕಾರುಗಳ ಖರೀದಿಗಾಗಿ ಶುರುವಾಗಿದೆ ಬುಕ್ಕಿಂಗ್

ಇನ್ನು ಎಸ್‌ಯುವಿ ವಿಭಾಗಕ್ಕೆ ವಿನೂತನ ಕಾರು ಮಾದರಿಯನ್ನು ಪರಿಚಯಿಸಲು ಸಿದ್ದವಾಗುತ್ತಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಕಾರನ್ನು ಹಲವು ಸುತ್ತಿನ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಕಾರಿನಲ್ಲಿ ಒದಗಿಸಲಾಗಿರುವ ಗುಣಮಟ್ಟದ ತಾಂತ್ರಿಕ ಸೌಲಭ್ಯಗಳು ಎಸ್‌ಯುವಿ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ.

ಟಾಟಾ ಹ್ಯಾರಿಯರ್ ಕಾರುಗಳ ಖರೀದಿಗಾಗಿ ಶುರುವಾಗಿದೆ ಬುಕ್ಕಿಂಗ್

ಕಾರಿನ ಎಂಜಿನ್ ವೈಶಿಷ್ಟ್ಯತೆ, ಕಾರಿನ ವಿನ್ಯಾಸಗಳ ಆಧಾರದ ಮೇಲೆ ಟಾಟಾ ಹೊಸ ಕಾರಿಗೆ ಹ್ಯಾರಿಯರ್ ಎಂದು ನಾಮಕರಣ ಮಾಡಲಾಗಿದ್ದು, ಹೆಸರಿಗೆ ತಕ್ಕಂತೆ ಹೊಸ ಕಾರುಗಳಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನ ಒದಗಿಸುವ ಬಗ್ಗೆ ಟಾಟಾ ಸುಳಿವು ನೀಡಿದೆ.

ಟಾಟಾ ಹ್ಯಾರಿಯರ್ ಕಾರುಗಳ ಖರೀದಿಗಾಗಿ ಶುರುವಾಗಿದೆ ಬುಕ್ಕಿಂಗ್

ಬೆಂಗಳೂರಿನ ಪ್ರಮುಖ ಕಡೆಗಳಲ್ಲಿ ಕಳೆದ ಒಂದು ವಾರದಿಂದ ವಿವಿಧ ಹಂತದ ಎಂಜಿನ್ ಕಾರ್ಯಕ್ಷಮತೆ ಕುರಿತು ಸ್ಪಾಟ್‌ ಟೆಸ್ಟಿಂಗ್ ನಡೆಸುತ್ತಿರುವಾಗ ಹೊಸ ಹ್ಯಾರಿಯರ್ ಕಾರುಗಳು ಅಲಾಯ್ ಚಕ್ರಗಳ ಜೊತೆಗೆ ಗುಣಮಟ್ಟದ ಬ್ರಿಡ್ಜ್ ಸ್ಟೋನ್ ಟೈರ್ ಮಾದರಿಯನ್ನ ಪಡೆದುಕೊಂಡಿರುವುದು ಕಂಡುಬಂದಿದೆ.

MOST READ: ಮಾರುತಿ ಸುಜುಕಿ ಕಾರುಗಳನ್ನು ನಿರ್ಮಾಣ ಮಾಡಲಿದೆ ಟೊಯೊಟಾ

ಟಾಟಾ ಹ್ಯಾರಿಯರ್ ಕಾರುಗಳ ಖರೀದಿಗಾಗಿ ಶುರುವಾಗಿದೆ ಬುಕ್ಕಿಂಗ್

ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ವಿನ್ಯಾಸಗಳು ಅದ್ಭುತವಾಗಿವೆ.

ಟಾಟಾ ಹ್ಯಾರಿಯರ್ ಕಾರುಗಳ ಖರೀದಿಗಾಗಿ ಶುರುವಾಗಿದೆ ಬುಕ್ಕಿಂಗ್

ಇದರಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ (ಜಾಗ್ವಾರ್, ಲ್ಯಾಂಡ್ ರೋವರ್, ರೇಂಜ್ ರೋವರ್) ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಲಾಗಿದೆ.

ಟಾಟಾ ಹ್ಯಾರಿಯರ್ ಕಾರುಗಳ ಖರೀದಿಗಾಗಿ ಶುರುವಾಗಿದೆ ಬುಕ್ಕಿಂಗ್

ಕಾರಿನ ವೈಶಿಷ್ಟ್ಯತೆಗಳು ಹ್ಯಾರಿಯರ್ ಕಾರುಗಳು ಸ್ಲಿಕ್ ಆ್ಯಂಗರಲ್ ಎಲ್‌ಇಡಿ ಹೆಡ್ ಲೈಟ್ಸ್‌ಗಳನ್ನು ಹೊಂದಿದ್ದು, ಇಂಪ್ಯಾಕ್ಟ್ ಡಿಸೈನ್ ಗ್ರೀಲ್‌ಗಳು ಕಾರಿನ ಲುಕ್ ಹೆಚ್ಚಿಸಿವೆ. ಜೊತೆಗೆ ಪರಿಕಲ್ಪನೆ ಮಾದರಿಯನ್ನು ಗ್ರೇ ಪೇಟಿಂಗ್ ವಿನ್ಯಾಸಗಳು ಗಮನಸೆಳೆಯುತ್ತಿದ್ದು, ದೊಡ್ಡದಾದ ಚಕ್ರಗಳು, ವಿಸ್ತರಿತ ಬೂಟ್ ಸ್ಪೆಸ್ ಬಳಕೆ ಮಾಡಲಾಗಿದೆ.

ಟಾಟಾ ಹ್ಯಾರಿಯರ್ ಕಾರುಗಳ ಖರೀದಿಗಾಗಿ ಶುರುವಾಗಿದೆ ಬುಕ್ಕಿಂಗ್

ಜೊತೆಗೆ ರೂಫ್ ಮೌಟೆಂಡ್ ಸ್ಪಾಯ್ಲರ್ ಮತ್ತು ಶಾರ್ಪ್ ಮಾದರಿಯ ರಿರ್ ವೀಂಡ್ ಸ್ಕ್ರೀನ್‌ಗಳನ್ನು ಅದ್ಭುತವಾಗಿ ಡಿಸೈನ್ ಮಾಡಲಾಗಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಆವೃತ್ತಿಗಿಂತ ಹೆಚ್ಚಿನ ಗುಣ ವಿನ್ಯಾಸ ಹೊಂದಿರುವ ಹ್ಯಾರಿಯರ್ ಕಾರುಗಳು ಎಸ್‌ಯುವಿ ಪ್ರಿಯರ ಹಾಟ್ ಫೆವರಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

MOST READ: ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಮರಾಜೊ ಹೊಸ ಎಂಪಿವಿ

ಟಾಟಾ ಹ್ಯಾರಿಯರ್ ಕಾರುಗಳ ಖರೀದಿಗಾಗಿ ಶುರುವಾಗಿದೆ ಬುಕ್ಕಿಂಗ್

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಮಾದರಿಗಳ ಎಂಜಿನ್ ಬಗೆಗೆ ಟಾಟಾ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲವಾದರೂ ಕೆಲವು ವರದಿಗಳ ಪ್ರಕಾರ 2.0-ಲೀಟರ್ ಪೆಟ್ರೋಲ್ ಎಂಜಿನ್ ಅಥವಾ 2.0-ಲೀಟರ್ ಮಲ್ಟಿ ಜೆಟ್ ಡೀಸೆಲ್ ಎಂಜಿನ್ ಮಾದರಿಯಲ್ಲಿ ಹೊಸ ಕಾರುಗಳು ಅಭಿವೃದ್ಧಿಯಾಗಲಿವೆ.

ಟಾಟಾ ಹ್ಯಾರಿಯರ್ ಕಾರುಗಳ ಖರೀದಿಗಾಗಿ ಶುರುವಾಗಿದೆ ಬುಕ್ಕಿಂಗ್

ಕಾರಿನ ಬೆಲೆಗಳು (ಅಂದಾಜು)

ಟಾಟಾ ಹ್ಯಾರಿಯರ್ ಕಾರುಗಳು ದೀಪಾವಳಿ ಹೊತ್ತಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಹೊಸ ಕಾರಿನ ಬೆಲೆಗಳು ರೂ. 12 ಲಕ್ಷದಿಂದ ರೂ. 15 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

More from DriveSpark

ಬಿಡುಗಡೆ ಸಿದ್ದವಾಗಿರುವ ಟಾಟಾ ಹ್ಯಾರಿಯರ್ ಕಾರುಗಳ ವೈಶಿಷ್ಟ್ಯತೆಗಳನ್ನು ತಿಳಿಯಲು ಇಲ್ಲಿರುವ ಫೋಟೋ ಗ್ಯಾಲರಿ ನೋಡಿ..

Article Published On: Saturday, September 22, 2018, 11:01 [IST]
English summary
Tata Harrier Unofficial Bookings Begin — To Be Launched In 2019
Read more on tata motors suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+