ಯುದ್ಧ ಅಂಗಳದಲ್ಲಿ ಸದ್ದು ಮಾಡಲಿರುವ ಟಾಟಾ ಸಫಾರಿ ಕಾರುಗಳ ವಿಶೇಷತೆ ಏನು?
ಕಾಲಕ್ಕೆ ತಕ್ಕಂತೆ ಭಾರತೀಯ ಸೇನೆಯು ಕೂಡಾ ವಾಹನ ತಂತ್ರಜ್ಞಾನದಲ್ಲಿ ಬದಲಾವಣೆ ಹೊಂದುತ್ತಲೇ ಬಂದಿದೆ. ಇದೀಗ ಬಹುದಿನಗಳಿಂದ ಬಳಕೆಯಾಗುತ್ತಿದ್ದ ಜನಪ್ರಿಯ ಮಾರುತಿ ಜಿಪ್ಸಿಗೆ ಗುಡ್ ಬೈ ಹೇಳಲಾಗಿದ್ದು, ಅದರ ಬದಲಾಗಿ ಟಾಟಾ ವಿನೂತನ ಸಫಾರಿ ಸ್ಟ್ರೋಮ್ ಎಸ್‌ಯುವಿ ಬಳಕೆಗೆ ಹಸಿರು ನಿಶಾನೆ ತೊರಿರುವುದು ಮತ್ತೊಂದು ವಿಶೇಷ.

ಭಾರತೀಯ ಸೇನೆಯಲ್ಲಿ ಸದ್ಯ ಯುದ್ಧ ಪ್ರದೇಶಗಳಲ್ಲಿ ಕಾರ್ಯಾಚರಣೆಗಾಗಿ ಸುಮಾರು 25 ಸಾವಿರದಷ್ಟು ಮಾರುತಿ ಜಿಪ್ಸಿ ಯುಟಿಲಿಟಿ ವಾಹನಗಳನ್ನು ಬಳಕೆ ಮಾಡಲಾಗುತ್ತಿದ್ದು, ಈ ಹಗುರ ವಾಹನಗಳನ್ನು ಭಯೋತ್ಪಾದನಾ ನಿಗ್ರಹ ಹಾಗೂ ಇತರ ಭದ್ರತಾ ಕಾರ್ಯಾಚರಣೆಗೆ ಬಳಸಲಾಗಿತ್ತು. ಆದ್ರೆ ಸುಧಾರಿತ ತಂತ್ರಜ್ಞಾನ ಕೊರತೆಯನ್ನು ನಿಗಿಸಲು ಜಿಪ್ಸಿಗೆ ಗುಡ್ ಬೈ ಹೇಳಲಾಗಿದ್ದು, ಹಲವು ವಿಶೇಷತೆಗಳಿಗಳಿಂದ ಕೂಡಿರುವ ಸಫಾರಿ ಸ್ಟ್ರಾರ್ಮ್ ಕಾರುಗಳನ್ನು ಆಯ್ಕೆ ಮಾಡಿದೆ.

ಹೌದು, ಸೇನಾ ವಾಹನಗಳನ್ನು ಉನ್ನತೀಕರಿಸುವ ಉದ್ದೇಶದಿಂದ ಬರೋಬ್ಬರಿ 3 ಸಾವಿರ ಕೋಟಿ ಮೌಲ್ಯದ ಯೋಜನೆಯೊಂದನ್ನು ಜಾರಿಗೆ ಮಾಡಲಾಗಿದ್ದು, ಇದರ ಪರಿಣಾಮವೇ ಸೇನಾ ಪಡೆಯಲ್ಲಿನ ಗಸ್ತು ವಾಹನಗಳ ಪಟ್ಟಿಯಲ್ಲಿ ಟಾಟಾ ಸಫಾರಿ ಸ್ಟ್ರೋಮ್ ಹೊಸ ಆಯ್ಕೆಯಾಗಿ ಹೊರಹೊಮ್ಮಿದೆ.

ಕಳೆದ ಕೆಲದಿನಗಳ ಹಿಂದಷ್ಟೇ ಮಿಲಿಟರಿ ವರ್ಷನ್ ಎಸ್‌ಯುವಿ ಕಾರುಗಳಿಗಾಗಿ ಬಿಡ್ ಮಾಡಿದ್ದ ಭಾರತೀಯ ಸೇನೆಯು, ಮಹೀಂದ್ರಾ ಸ್ಕಾರ್ಪಿಯೊ ಮತ್ತು ಟಾಟಾ ಸಫಾರಿ ಸ್ಟ್ರೋಮ್ ಕಾರುಗಳ ಮೂಲಕ ಪರೀಕ್ಷೆ ಕೈಗೊಂಡಿತ್ತು. ಇದರಲ್ಲಿ ಸಫಾರಿ ಸ್ಟೋಮ್‌ಗಳು ಸೇನಾಪಡೆಯ ಅಗತ್ಯಕ್ಕೆ ತಕ್ಕಂತೆ ಸಿದ್ದವಾಗಿರುವುದು ಆಯ್ಕೆಗೆ ಕಾರಣವಾಗಿದೆ.

ಭಾರತೀಯ ಸೇನೆಯಿಂದ ಟಾಟಾ ಸಂಸ್ಥೆಗೆ ಒಟ್ಟು 3,192 ಆರ್ಮಿ ವರ್ಷನ್ ಸಫಾರಿ ಸ್ಟ್ರೋಮ್ ಕಾರುಗಳನ್ನು ಒದಗಿಸುವಂತೆ ಬೇಡಿಕೆ ಸಲ್ಲಿಸಲಾಗಿದ್ದು, ಮೊದಲ ಹಂತವಾಗಿ 1,500 ಜಿಎಸ್800 ಸಫಾರಿ ಸ್ಪ್ರೋಮ್ ಕಾರುಗಳನ್ನು ಸೇನಾಪಡೆಗೆ ಹಸ್ತಾಂತರ ಮಾಡಲಾಗಿದೆ.

ಪುಣೆಯಲ್ಲಿರುವ ಟಾಟಾ ಕಾರು ಉತ್ಪಾದನಾ ಘಟಕದಲ್ಲೇ ಆರ್ಮಿ ವರ್ಷನ್ ಸಫಾರಿ ಸ್ಟ್ರಾಮ್ ಕಾರುಗಳನ್ನು ಸಿದ್ದಗೊಳಿಸಲಾಗುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಇನ್ನುಳಿದ 1,692 ಕಾರುಗಳನ್ನು ಪೂರೈಕೆ ಮಾಡುವ ಬಗ್ಗೆ ಟಾಟಾ ಹಿರಿಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೇನಾಪಡೆಗಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಆರ್ಮಿ ವರ್ಷನ್ ಸಫಾರಿ ಸ್ಟ್ರೋಮ್ ಕಾರುಗಳು ಮ್ಯಾಟೆ ಗ್ರೀನ್ ಬಣ್ಣ ಹೊಂದಿದ್ದು, ಸ್ಟ್ರೋಮ್ ಕಾರಿನ ಇಂಚಿಂಚೂ ಕೂಡಾ ಆರ್ಮಿ ಗ್ರೀನ್ ಬಣ್ಣದೊಂದಿಗೆ ಮಿಂಚುತ್ತಿವೆ.

ಜೊತೆಗೆ ಫುಟ್ ಬೋರ್ಡ್ ಮತ್ತು ರೂಫ್ ರೈಲ್ಸ್ ಹೊರತುಪಡಿಸಿ ಸಂಪೂರ್ಣ ಹಸಿರು ಮಯವಾಗಿರುವ ಸಫಾರಿ ಸ್ಟ್ರೋಮ್ ಆರ್ಮಿ ವರ್ಷನ್ ಕಾರುಗಳು, ಸಾಮಾನ್ಯ ಮಾದರಿಯ ಸಫಾರಿ ಸ್ಟ್ರೋಮ್‌ಗೆ ಕಾರುಗಳಿಂತ ಸಾಕಷ್ಟು ವಿಭಿನ್ನತೆಯನ್ನು ಹೊಂದಿವೆ.

ಹೀಗಾಗಿ ಸೇನೆ ಅನುಕೂಲಕರವಾಗುವಂತೆ ಕಾರಿನ ಸೌಲಭ್ಯಗಳನ್ನು ಹೆಚ್ಚಿಸಲಾಗಿದ್ದು, ಸರಕು ಸಾಗಿಸಲು ಅನುಕೂಲಕವಾಗುವಂತೆ ರಿಯರ್ ಹುಕ್, ಕಾರಿನ ಬ್ಯಾನೆಟ್ ಮೇಲೆ ಆ್ಯಂಟೆನಾ, ಫ್ರಂಟ್ ಬಂಪರ್‌ಗಳಲ್ಲಿ ಸ್ಪಾಟ್ ಲೈಟ್ ಪಡೆದುಕೊಂಡಿದ್ದು, ಇನ್ನು ಕಾರಿನ ಒಳಭಾಗದಲ್ಲಿ ಅಳವಡಿಸಲಾಗಿರುವ ಕೆಲವು ರಕ್ಷಣಾ ತಾಂತ್ರಿಕ ಅಂಶಗಳ ಬಗೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಎಂಜಿನ್ ಸಾಮರ್ಥ್ಯ
2.2-ಲೀಟರ್ ಫೌರ್ ಸಿಲಿಂಡರ್, ಟರ್ಬೋಚಾರ್ಜ್ಡ್ ಡಿಸೇಲ್ ಎಂಜಿನ್ ಹೊಂದಿದ್ದು, ಇದರಲ್ಲಿ ಎರಡು ಪ್ರಮುಖ ಎಂಜಿನ್ ಪವರ್ ಆಯ್ಕೆಯನ್ನು ನೀಡಲಾಗಿದೆ. ಮೊದಲ ಡಿಸೇಲ್ ಎಂಜಿನ್ ಮಾದರಿಯು 148-ಬಿಎಚ್‌ಪಿ, 320-ಎನ್ಎಂ ಟಾರ್ಕ್ ಮತ್ತು ಎರಡನೇ ಡೀಸೆಲ್ ಎಂಜಿನ್ ಮಾದರಿಯು 153-ಬಿಎಚ್‌ಪಿ, 400-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಇದರೊಂದಿಗೆ ಗೇರ್‌ಬಾಕ್ಸ್ ಆಯ್ಕೆಯಲ್ಲೂ ಭಿನ್ನತೆ ಹೊಂದಿರುವ ಸಫಾರಿ ಸ್ಟ್ರೋಮ್ ಆರ್ಮಿ ವರ್ಷನ್ ಕಾರುಗಳು ಮೊದಲ ಡೀಸೆಲ್ ಎಂಜಿನ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯ ಪಡೆದಿದ್ದರೇ ಎರಡನೇ ಡಿಸೇಲ್ ಎಂಜಿನ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಣೆ ಹೊಂದಿದೆ.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಟಾಟಾ ಸಫಾರಿ ಸ್ಟ್ರೋಮ್ ಕಾರುಗಳು 4x4 ಡ್ರೈವ್ ಟೆಕ್ನಾಲಜಿಯೊಂದಿಗೆ ಆಫ್ ರೋಡ್ ಕೌಶಲ್ಯ ಹೊಂದಿದ್ದು, ಇದು ಗಡಿಭಾಗಗಳಲ್ಲಿನ ರಕ್ಷಣಾ ಕಾರ್ಯಚರಣೆಗಳಲ್ಲಿ ಮಹತ್ವದ ಪಾತ್ರವಹಿಸಲಿವೆ.

ಇನ್ನು ಸಮಕಾಲೀನ ಪರಿಸ್ಥಿತಿಯಲ್ಲಿ ಭಾರತೀಯ ಸೇನೆಯು ತನ್ನ ಅಗತ್ಯಗಳಿಗನುಸಾರವಾಗಿ ವಾಹನಗಳನ್ನು ಅಪ್‌ಗ್ರೇಡ್ ಮಾಡುತ್ತಿದ್ದು, ಸೇನೆಗೆ ಇದೀಗ ತನ್ನ ಸಾಮಾನ್ಯ ಸೇನಾ ವಾಹನಗಳಿಗಾಗಿ ಕನಿಷ್ಠ 120 ಹಾರ್ಸ್ ಪವರ್ ಉತ್ಪಾದಿಸುವ ಟರ್ಬೋ ಡೀಸೆಲ್ ಎಂಜಿನ್ ವಾಹನಗಳ ಅಗತ್ಯವಿದೆ. ಇದರಿಂದ ಭಾರತೀಯ ಸೇನೆಯು ತನ್ನ ಬಜೆಟ್‌ಗೆ ಅನುಸಾರವಾಗಿ ಟಾಟಾ ಸಫಾರಿ ಕಾರುಗಳನ್ನು ಆಯ್ಕೆ ಮಾಡಿದೆ.

ಇದರಿಂದ ಸದ್ಯ ಕಾರ್ಯನಿರ್ವಹಣೆಯಲ್ಲಿರುವ 1.3-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಮಾರುತಿ ಜಿಪ್ಸಿ ಕಾರುಗಳನ್ನು ಕೈಬಿಡುತ್ತಿರುವ ಭಾರತೀಯ ಸೇನೆಯು, ಡ್ಯುಯಲ್ ಏರ್‌ಬ್ಯಾಗ್, ಪವರ್ ವಿಂಡೋ, ಎಬಿಎಸ್‌ಗಳಂತಹ ಆಧುನಿಕ ಸೌಲಭ್ಯವಿರುವ ವಾಹನಗಳನ್ನು ಖರೀದಿಸಲು ಬೃಹತ್ ಪ್ರಮಾಣದ ಯೋಜನೆ ರೂಪಿಸಿದೆ ಎನ್ನಬಹುದು.


Click it and Unblock the Notifications