ಸೇನೆಯಲ್ಲಿ ಭಾರೀ ಬದಲಾವಣೆ- ಯುದ್ದಕ್ಕೆ ಸಿದ್ದಗೊಂಡ ಟಾಟಾ ನಿರ್ಮಾಣದ ಹೊಸ ವಾಹನಗಳು.!
ಭಾರತೀಯ ಸೇನೆಯು ಈ ಹಿಂದೆಂಗಿಂತಲೂ ತಾಂತ್ರಿಕವಾಗಿ ಸಾಕಷ್ಟು ಬಲಿಷ್ಠವಾಗುತ್ತಿದ್ದು, ಸೇನಾ ಬತ್ತಳಿಕೆಯಲ್ಲಿ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನ ಒದಗಿಸಲಾಗುತ್ತಿದೆ. ಸೇನಾ ಸೌಲಭ್ಯಗಳನ್ನು ನವೀಕರಣಗೊಳಿಸಲು ಕೇಂದ್ರ ಸರ್ಕಾರವು ಭಾರೀ ಪ್ರಮಾಣದ ಹಣ ಖರ್ಚು ಮಾಡುತ್ತಿದ್ದು, ಇದರ ಪರಿಣಾಮವೇ ಸೇನಾ ಪಡೆಯು ಇಂದು ಹತ್ತು ಹಲವು ವಿಶ್ವದರ್ಜೆ ಸವಲತ್ತುಗಳನ್ನು ಅಳವಡಿಸಿಕೊಳ್ಳುತ್ತಿದೆ.

ಭಾರತೀಯ ಸೇನೆಯಲ್ಲಿ ಈಗಾಗಲೇ ಹತ್ತಾರು ಬಗೆಯ ಸಾವಿರಾರು ಯುದ್ದ ವಾಹನಗಳು ಸೇವೆಯಲ್ಲಿದ್ದು, ಇದೀಗ ಟಾಟಾ ಮೋಟಾರ್ಸ್ ನಿರ್ಮಾಣದ ಹೊಚ್ಚ ಹೊಸ ಮಾದರಿಯ 4x4 ಮೈನ್ ಪ್ರೊಟೆಕ್ಟೆಡ್ ವೆಹಿಕಲ್(MPV) ಮತ್ತು ವ್ಯಾಪ್( WhAP) 8x8 ಇನ್ಫ್ಯಾಂಟ್ರಿ ಕಾಂಬ್ಯಾಟ್ ವೆಹಿಕಲ್ ( ICV) ವಾಹನಗಳು ಸೇನೆಗೆ ಮತ್ತಷ್ಟು ಬಲ ತುಂಬಲಿವೆ.

ಟಾಟಾ ಮೋಟಾರ್ಸ್ ಸಂಸ್ಥೆಯು ಸೆಪ್ಟೆಂಬರ್ 15 ರಂದು ಪುಣೆನಲ್ಲಿ ನಡೆದ ಎರಡು ದಿನಗಳ ಬಿಮ್ಸ್ಟೆಕ್ ಆರ್ಮಿ ಮುಖ್ಯಸ್ಥರ ಸಮಾವೇಶದಲ್ಲಿ ಸ್ವತಂತ್ರವಾಗಿ ನಿರ್ಮಿಸಲ್ಪಟ್ಟ ಹೊಸ ರಕ್ಷಣಾ ವಾಹನಗಳನ್ನು ಪ್ರದರ್ಶನ ಮಾಡಿದ್ದು, ಕಠಿಣ ಭೂ ಪ್ರದೇಶಗಳನ್ನು ಇವು ಸರಾಗವಾಗಿ ನುಗ್ಗಬಲ್ಲ ಗುಣಹೊಂದಿವೆ.

ಇಂಡಿಯನ್ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಷನ್ (ಡಿಆರ್ಡಿಒ) ಯೊಂದಿಗೆ ಜಂಟಿಯಾಗಿ ಹೊಸ ಯುದ್ದ ವಾಹನಗಳನ್ನು ಸಿದ್ದಗೊಳಿಸಿರುವ ಟಾಟಾ ಸಂಸ್ಥೆಯು ಸದ್ಯದಲ್ಲೇ ಸೇನೆಗೆ ಹೊಸ ವಾಹನಗಳನ್ನು ಹಸ್ತಾಂತರ ಮಾಡಲಿದೆ.

ಹೊಸ ವಾಹನಗಳ ವಿಶೇಷತೆ ಏನು?
ಟಾಟಾ ವ್ಯಾಪ್ 8x8 ಎಂಬುದು ಭಾರತದ ಮೊದಲ ಪದಾತಿ ಸೈನ್ಯದ ಯುದ್ಧ ವಾಹನವಾಗಿದ್ದು, ಇದು ಅತ್ಯುತ್ತಮ ಎಂಜಿನ್ ಸಾಮರ್ಥ್ಯದೊಂದಿಗೆ ಕಠಿಣ ಭೂ ಪ್ರದೇಶಗಳಲ್ಲೂ ಸರಾಗವಾಗಿ ನುಗ್ಗುವುದಲ್ಲದೇ ಶತ್ರುಪಡೆಗಳು ನಡೆಸುವ ಪ್ರತಿದಾಳಿಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲವು.

ಹೀಗಾಗಿಯೇ ವ್ಯಾಪ್ 8x8 ಇನ್ಫ್ಯಾಂಟ್ರಿ ಕಾಂಬ್ಯಾಟ್ ವೆಹಿಕಲ್‌ಗಳಲ್ಲಿ ಬ್ಲ್ಯಾಸ್ಟ್ ಪ್ರೊಟೆಕ್ಷನ್ ಸೇರಿದಂತೆ ಹಲವು ವಿಶ್ವದರ್ಜೆ ಸೌಲಭ್ಯಗಳನ್ನು ಜೋಡಿಸಲಾಗಿದ್ದು, ಅತಿ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರುವ ಈ ವಾಹನದಲ್ಲಿ ಚಾಲಕನ ಆಸನ ಸೇರಿ 12 ಆಸನಗಳನ್ನು ಅಳವಡಿಸಲಾಗಿದೆ.

ಮತ್ತೊಂದು ವಿಶೇಷ ಅಂದ್ರೆ, ಸೇನಾಪಡೆಗಳ ಬೇಡಿಕೆಗೆ ಅನುಗುಣವಾಗಿ ವ್ಯಾಪ್ ವಾಹನವನ್ನು ಮಾಡಿಫೈ ಕೂಡಾ ಮಾಡಿಕೊಳ್ಳಬಹುದಾಗಿದ್ದು, 8x8 ಡ್ರೈವ್ ಟೆಕ್ನಾಲಜಿ ಹೊಂದಿರುವ ಈ ವಾಹನದಲ್ಲಿ ಪ್ರತಿ ಚಕ್ರವು ಸಹ ಪ್ರತ್ಯೇಕ ನಿಯಂತ್ರಣ ಹೊಂದಿರುತ್ತವೆ.
MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ವ್ಯಾಪ್ 8x8 ವಾಹನಗಳ ವಿಧಗಳು!
ಟಾಟಾ ಸಂಸ್ಥೆಯು ವ್ಯಾಪ್ 8x8 ವಾಹನಗಳನ್ನು ಆರ್ಮ್ಡ್ ಫೈಟಿಂಗ್ ವೆಹಿಕಲ್, ಸಿಬಿಎನ್ಆರ್ ವೆಹಿಕಲ್, ರೆಸ್ಸ್ ಮತ್ತು ಸರ್ಪೋಟ್ ವೆಹಿಕಲ್, ಮೆಡಿಕಲ್ ಇವ್ಯಾಕ್ಯುವೇಶನ್ ವೆಹಿಕಲ್, ಇಂಜಿನಿಯರ್ ಸ್ಕ್ವಾಡ್ ವೆಹಿಕಲ್, ಮಾರ್ಟರ್ ಕ್ಯಾರಿಯರ್, ಕಮಾಂಡರ್ಸ್ ವೆಹಿಕಲ್ ಮತ್ತು ಆ್ಯಂಟಿ-ಟ್ಯಾಂಕ್ ಗೈಡೆಡ್ ಮಿಸೈಲ್ ವಾಹನಗಳನ್ನು ಅಭಿವೃದ್ಧಿ ಮಾಡಿದೆ.

ಇನ್ನು 4x4 ಮೈನ್ ಪ್ರೊಟೆಕ್ಟೆಡ್ ವೆಹಿಕಲ್(MPV)ಕೂಡಾ ವ್ಯಾಪ್ 8x8 ವಾಹನಗಳಿಗೆ ಪೂರಕವಾಗಿ ಕಾರ್ಯನಿರ್ವಹಣೆ ಮಾಡುವ ವಾಹನ ಮಾದರಿಯಾಗಿದ್ದು, ಸೇನಾಪಡೆಗಳಿಗೆ ಎಸ್ಕಾರ್ಟ್ ರಕ್ಷಣಾ ವಾಹನವಾಗಲಿರಲಿದೆ.

ವಾಹನದ ಒಳಭಾಗವು ಟ್ರಕ್ ಮಾದರಿಯ ಸ್ಥಳ ವಿನ್ಯಾಸ ಹೊಂದಿದ್ದು, ಈ ವಾಹನವು ಸುಧಾರಿತ ತಂತ್ರಜ್ಞಾನ ಪ್ರೇರಿತ ರೂಫ್ ಟಾಪ್ ಪಡೆದುಕೊಂಡಿದೆ. ಒಂದು ವೇಳೆ ಈ ವಾಹನ ಮೇಲೆ ಶತ್ರುಗಳು ದಾಳಿ ನಡೆಸಿದ್ರು ವಾಹನದಲ್ಲಿರುವ ಗುಣಮಟ್ಟದ ಬಾಡಿ ಕವಚವು ಬಾಂಬ್ ದಾಳಿಗಳನ್ನು ಮೆಟ್ಟಿಹಾಕಲಿದೆ.

ಜೊತಗೆ ಯುದ್ದ ಪ್ರದೇಶಗಳಿಗೆ ಗರಿಷ್ಠ ಮಟ್ಟದ ಸರಕು ಸಾಗಾಣಿಕೆ ಸಾಗಿಸಲು ನೆರವಾಗಲಿರುವ ಈ ವಾಹನವು ಬೆಸ್ಟ್ ಇನ್ ಕ್ಲಾಸ್ ಗ್ರೌಂಡ್ ಕಿಯ್ಲೆರೆನ್ಸ್ ಹೊಂದಿದ್ದು, ಭದ್ರತಾ ದೃಷ್ಠಿಯಿಂದ ಈ ವಾಹನಗಳಲ್ಲಿ ನೀಡಲಾಗಿರುವ ಮಹತ್ವದ ತಾಂತ್ರಿಕ ಅಂಶಗಳನ್ನು ಗೌಪ್ಯವಾಗಿ ಇಡಲಾಗಿದೆ.
MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ವಿದೇಶಿಯಲ್ಲೂ ಇದೆ ಟಾಟಾ ಹವಾ.!
ಟಾಟಾ ಸಂಸ್ಥೆಯು ಭಾರತೀಯ ಸೇನೆಗೆ ಅಷ್ಟೇ ಅಲ್ಲದೇ ಮಯನ್ಮಾರ್ ಮತ್ತು ಥೈಲ್ಯಾಂಡ್ ಸೇನೆಗೂ ತನ್ನ ಅತ್ಯಾಧುನಿಕ ತಂತ್ರಜ್ಞಾನ ಪ್ರೇರಿತ ಝೆನಾನ್ ಜಿಎಸ್ 800, 2.5ಟಿ ಜಿಎಸ್ ಎಲ್‌ಪಿಟಿಎ 715 4x4 ಮತ್ತು 5ಟಿ ಜಿಎಸ್ ಎಲ್‌ಪಿಟಿಎ 1628 4x4 ವಾಹನಗಳನ್ನು ರಫ್ತು ಮಾಡುತ್ತಿದೆ.


Click it and Unblock the Notifications








