ಆಟೋ ಎಕ್ಸ್‌ಪೋ 2018: ನೆಕ್ಸಾನ್ ಎಎಂಟಿ ಆವೃತ್ತಿಯನ್ನು ಅನಾವರಣ ಮಾಡಿದ ಟಾಟಾ ಮೋಟಾರ್ಸ್

ಟಾಟಾ ನೆಕ್ಸಾನ್ ಕಾರು ಆವೃತ್ತಿಗಳು ಕೇವಲ ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ ಮಾತ್ರ ಮಾರಾಟಕ್ಕೆ ಲಭ್ಯವಿದ್ದು, ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಯನ್ನು ಕೂಡಾ ಪರಿಚಯಿಸಲಾಗುತ್ತಿದೆ.

By Praveen

ಕಳೆದ ಸಪ್ಟೆಂಬರ್‌ನಲ್ಲಿ ದೇಶಿಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ಟಾಟಾ ನೆಕ್ಸಾನ್ ಕಾರು ಆವೃತ್ತಿಗಳು ಕೇವಲ ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ ಮಾತ್ರ ಮಾರಾಟಕ್ಕೆ ಲಭ್ಯವಾಗಿದ್ದವು. ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಯನ್ನು ಕೂಡಾ ಪರಿಚಯಿಸಲಾಗುತ್ತಿದೆ.

ಆಟೋ ಎಕ್ಸ್‌ಪೋ 2018: ನೆಕ್ಸಾನ್ ಎಎಂಟಿ ಆವೃತ್ತಿಯನ್ನು ಅನಾವರಣ ಮಾಡಿದ ಟಾಟಾ ಮೋಟಾರ್ಸ್

2018ರ ಆಟೋ ಎಕ್ಸ್‌ ಪೋದಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೆಕ್ಸಾನ್ ಆವೃತ್ತಿಗಳನ್ನು ಪ್ರದರ್ಶನಗೊಳಿಸಿದ್ದು, ಫೋರ್ಡ್ ಇಕೋ ಸ್ಪೋರ್ಟ್ ಎಎಂಟಿ, ಮಹೀಂದ್ರಾ ಟಿಯುವಿ300 ಎಎಂಟಿ ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡಲಿವೆ.

ಆಟೋ ಎಕ್ಸ್‌ಪೋ 2018: ನೆಕ್ಸಾನ್ ಎಎಂಟಿ ಆವೃತ್ತಿಯನ್ನು ಅನಾವರಣ ಮಾಡಿದ ಟಾಟಾ ಮೋಟಾರ್ಸ್

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಟಾ ನೆಕ್ಸಾನ್ ಆವೃತ್ತಿಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಒದಗಿಸಲಾಗಿದ್ದು, ಗ್ರಾಹಕರ ಬೇಡಿಕೆ ಹಿನ್ನೆಲೆ ಇದೀಗ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಒದಗಿಸಲು ಮುಂದಾಗಿದೆ.

ಆಟೋ ಎಕ್ಸ್‌ಪೋ 2018: ನೆಕ್ಸಾನ್ ಎಎಂಟಿ ಆವೃತ್ತಿಯನ್ನು ಅನಾವರಣ ಮಾಡಿದ ಟಾಟಾ ಮೋಟಾರ್ಸ್

ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳಿಗೆ ಈಗಾಗಲೇ ಸಾವಿರಾರು ಗ್ರಾಹಕರು ಬೇಡಿಕೆಯಿಟ್ಟಿದ್ದು, ಈ ಹಿನ್ನೆಲೆ ಮಹತ್ವದ ಯೋಜನೆ ರೂಪಿಸಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಆಟೋ ಎಕ್ಸ್‌ಪೋ ನಂತರ ಆಟೋಮ್ಯಾಟಿಕ್ ಗೇರ್‍‌ಬಾಕ್ಸ್ ಆವೃತ್ತಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಆಟೋ ಎಕ್ಸ್‌ಪೋ 2018: ನೆಕ್ಸಾನ್ ಎಎಂಟಿ ಆವೃತ್ತಿಯನ್ನು ಅನಾವರಣ ಮಾಡಿದ ಟಾಟಾ ಮೋಟಾರ್ಸ್

ಇನ್ನು ವಿಶಿಷ್ಟ ವಿನ್ಯಾಸಗಳೊಂದಿಗೆ ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ನೆಕ್ಸಾನ್ ಆವೃತ್ತಿಯು ಇಂಪ್ಯಾಕ್ಟ್ 2.0 ಡಿಸೈನ್‌ನೊಂದಿಗೆ ಅಭಿವೃದ್ಧಿಗೊಂಡಿದ್ದು, ಮಲ್ಟಿ ಡ್ರೈವ್ ಮೋಡ್, ತೇಲುವ ಡ್ಯಾಶ್ ಟಾಪ್ ಎಚ್‌ಡಿ ಟಚ್‌ಸ್ಕ್ರೀನ್, ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಬೃಹತ್ತಾದ ಸೆಂಟ್ರಲ್ ಕನ್ಸಾಲ್ ಪಡೆದುಕೊಂಡಿರುವುದು ಹೊಸ ನೀರಿಕ್ಷೆ ಹುಟ್ಟುಹಾಕಿದೆ.

ಆಟೋ ಎಕ್ಸ್‌ಪೋ 2018: ನೆಕ್ಸಾನ್ ಎಎಂಟಿ ಆವೃತ್ತಿಯನ್ನು ಅನಾವರಣ ಮಾಡಿದ ಟಾಟಾ ಮೋಟಾರ್ಸ್

ಎಂಜಿನ್ ಸಾಮರ್ಥ್ಯ

ನೂತನ ಟಾಟಾ ನೆಕ್ಸಾನ್ ಆವೃತ್ತಿಯು 1.2 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ರೆವೊಟ್ರಾನ್ ಮತ್ತು 1.5 ಲೀಟರ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಆಳವಡಿಸಲಾಗಿದ್ದು, ಹೊಸತಾದ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನೊಂದಿಗೆ ಪರಿಚಯಿಸಲಾಗಿದೆ.

ಆಟೋ ಎಕ್ಸ್‌ಪೋ 2018: ನೆಕ್ಸಾನ್ ಎಎಂಟಿ ಆವೃತ್ತಿಯನ್ನು ಅನಾವರಣ ಮಾಡಿದ ಟಾಟಾ ಮೋಟಾರ್ಸ್

ಬೆಲೆ (ಬೆಂಗಳೂರು ಎಕ್ಸ್‌ಶೋರಂ)

ಪೆಟ್ರೋಲ್ ಆವೃತ್ತಿಯ ಆರಂಭಿಕ ಕಾರಿನ ಬೆಲೆಯು ರೂ. 5.94 ಲಕ್ಷಕ್ಕೆ ಮತ್ತು ಉನ್ನತ ಆವೃತ್ತಿಯ ಬೆಲೆಯು ರೂ8.69 ಲಕ್ಷಕ್ಕೆ ಲಭ್ಯವಿದ್ದರೆ ಡೀಸೆಲ್ ಆವೃತ್ತಿಯ ಆರಂಭಿಕ ಬೆಲೆಯು ರೂ. 6.85 ಲಕ್ಷಕ್ಕೆ ಮತ್ತು ಉನ್ನತ ಆವೃತ್ತಿಯನ್ನು ರೂ.9.54 ಲಕ್ಷಕ್ಕೆ ಖರೀದಿಸಬಹುದಾಗಿದೆ.

ಆಟೋ ಎಕ್ಸ್‌ಪೋ 2018: ನೆಕ್ಸಾನ್ ಎಎಂಟಿ ಆವೃತ್ತಿಯನ್ನು ಅನಾವರಣ ಮಾಡಿದ ಟಾಟಾ ಮೋಟಾರ್ಸ್

ಇದಲ್ಲದೇ ನೆಕ್ಸಾನ್ ಮಾದರಿಯ ಮತ್ತಷ್ಟು ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಕಾರು ರಿವರ್ಸ್ ಕ್ಯಾಮೆರಾ, 6.5 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಎಚ್‌ಡಿ ಡಿಸ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೌಲಭ್ಯಗಳನ್ನು ಹೊಂದಿದೆ.

Most Read Articles

Kannada
English summary
Auto Expo 2018: Tata Nexon AMT Unveiled - Expected Launch Date & Prices, Features, Images.
Story first published: Sunday, February 11, 2018, 17:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X