ಡೆಲ್ಲಿ ಡೇರ್ ಡೆವಿಲ್ಸ್ ಥೀಮ್‌ನಲ್ಲಿ ಮಿಂಚಿದ ಟಾಟಾ ನೆಕ್ಸಾನ್ ಐಪಿಎಲ್ ಎಡಿಷನ್

ಟಾಟಾ ಮೋಟಾರ್ಸ್ ಈಗಾಗಲೇ ತಮ್ಮ ವಿವಿಧ ಕಾರು ಮಾದರಿಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು,ಇದೀಗ ಐಪಿಎಲ್ ಪಂದ್ಯಗಳಿಗಾಗಿ ವಿನ್ಯಾಸದ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಎಡಿಷನ್‌ಗಳನ್ನು ಪ್ರದರ್ಶನಗೊಳಿಸಿ ಗ್ರಾಹಕರನ್ನ ಸೆಳೆಯುತ್ತಿದೆ.

By Praveen Sannamani

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಈಗಾಗಲೇ ತಮ್ಮ ವಿವಿಧ ಕಾರು ಮಾದರಿಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಇದೀಗ ಐಪಿಎಲ್ ಪಂದ್ಯಗಳಿಗಾಗಿ ವಿನ್ಯಾಸದ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಎಡಿಷನ್‌ಗಳನ್ನು ಪ್ರದರ್ಶನಗೊಳಿಸಿ ಗ್ರಾಹಕರನ್ನು ಸೆಳೆಯುತ್ತಿದೆ.

ಡೆಲ್ಲಿ ಡೇರ್ ಡೆವಿಲ್ಸ್ ಥೀಮ್‌ನಲ್ಲಿ ಮಿಂಚಿದ ಟಾಟಾ ನೆಕ್ಸಾನ್ ಐಪಿಎಲ್ ಎಡಿಷನ್

ಈ ಬಾರಿ ಐಪಿಎಲ್‌ನ ಅಧಿಕೃತ ಪಾಲುದಾರ ಕಾರ್ ಬ್ರಾಂಡ್ ಆಗಿ ಟಾಟಾ ಮೋಟಾರ್ಸ್ ಮೂರು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದು, ಫೆವರೀಟ್ ತಂಡಗಳನ್ನು ಪ್ರತಿನಿಧಿಸುವ ನೆಕ್ಸಾನ್ ಸ್ಪೆಷಲ್ ಎಡಿಷನ್‌ಗಳನ್ನು ಹೊರತರುತ್ತಿದೆ. ಈ ಹಿಂದೆ ಮುಂಬೈ ಇಂಡಿಯನ್ಸ್ ಥೀಮ್ ಪ್ರೇರಿತ ನೆಕ್ಸಾನ್ ಕಾರು ಮಾದರಿಯನ್ನು ಹೊರತಂದಿದ್ದ ಟಾಟಾ ಮೋಟಾರ್ಸ್, ಐಪಿಎಲ್ ಭಾಗಿಯಾಗುವ ಕ್ರೀಡಾ ಪ್ರೇಮಿಗಳಿಗೆ ಬಂಪರ್ ಆಫರ್ ಸಹ ನೀಡಿದೆ.

ಡೆಲ್ಲಿ ಡೇರ್ ಡೆವಿಲ್ಸ್ ಥೀಮ್‌ನಲ್ಲಿ ಮಿಂಚಿದ ಟಾಟಾ ನೆಕ್ಸಾನ್ ಐಪಿಎಲ್ ಎಡಿಷನ್

ಅಭಿಮಾನಿಗಳಿಗಾಗಿ ಟಾಟಾ ಸಂಸ್ಥೆಯು ನೆಕ್ಸಾನ್ ಫ್ಯಾನ್ ಕ್ಯಾಚ್ ಸ್ಪರ್ಧೆಯನ್ನು ಆಯೋಜಿಸಿದ್ದು, ಒಂದು ಬಾರಿ ಕ್ಯಾಚ್ ಹಿಡಿದಲ್ಲಿ 1 ಲಕ್ಷ ಬಹುಮಾನ ಮತ್ತು ಅತಿ ಹೆಚ್ಚು ಕ್ಯಾಚ್‌ಗಳನ್ನು ಹಿಡಿದ ಒಬ್ಬ ಅಭಿಮಾನಿಗಳಿಗೆ ನೆಕ್ಸಾನ್ ಕಾರು ಅನ್ನು ಗಿಫ್ಟ್ ಆಗಿ ನೀಡಲಿದೆ.

ಡೆಲ್ಲಿ ಡೇರ್ ಡೆವಿಲ್ಸ್ ಥೀಮ್‌ನಲ್ಲಿ ಮಿಂಚಿದ ಟಾಟಾ ನೆಕ್ಸಾನ್ ಐಪಿಎಲ್ ಎಡಿಷನ್

ಹೀಗಾಗಿ ಸೂಪರ್ ಸ್ಟ್ರೈಕರ್‌ನಲ್ಲಿ ಕ್ಯಾಚ್ ಹಿಡಿಯುವ ಅಭಿಮಾನಿಗಳು ನೆಕ್ಸಾನ್ ಎಸ್‌ಯುವಿ ಕಾರ್ ಅನ್ನು ತಮ್ಮದಾಗಿಸಿಕೊಳ್ಳಬಹುದಾಗಿದ್ದು, ಪಂದ್ಯದ ಅವಧಿಯಲ್ಲಿ ಕ್ಯಾಚ್ ಹಿಡಿಯುವ ಎಲ್ಲಾ ಅಭಿಮಾನಿಗಳು ಲಕ್ಕಿ ವಿನ್ನರ್ಸ್ ಆಗಲಿದ್ದಾರೆ.

ಡೆಲ್ಲಿ ಡೇರ್ ಡೆವಿಲ್ಸ್ ಥೀಮ್‌ನಲ್ಲಿ ಮಿಂಚಿದ ಟಾಟಾ ನೆಕ್ಸಾನ್ ಐಪಿಎಲ್ ಎಡಿಷನ್

ಇದರ ಜೊತೆಗೆ ಐಪಿಎಲ್ ಅಂಗಳದಲ್ಲಿರುವ ಆಯಾ ತಂಡಗಳ ಅಭಿಮಾನಿಗಳನ್ನು ಸೆಳೆಯಲು ಯೋಜಿಸಿರುವ ಟಾಟಾ ಸಂಸ್ಥೆಯು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈರ್ಸ್ ಹೈದ್ರಾಬಾದ್ ಥೀಮ್ ಮಾದರಿಯಲ್ಲಿ ನೆಕ್ಸಾನ್ ಆವೃತ್ತಿಗಳನ್ನು ಹೊರತಂದಿದ್ದು, ಇದೀಗ ಮಾಡಿಫೈ ಸಂಸ್ಥೆಯೊಂದು ಕೂಡಾ ಟಾಟಾ ಸಂಸ್ಥೆಯ ಗಮನ ಸೆಳೆಯಲು ಡೆಲ್ಲಿ ಡೇರ್ ಡೆವಿಲ್ಸ್ ಥೀಮ್‌ನಲ್ಲಿ ನೆಕ್ಸಾನ್ ಕಾರನ್ನು ಸಿದ್ದಗೊಳಿಸಿದೆ.

ಡೆಲ್ಲಿ ಡೇರ್ ಡೆವಿಲ್ಸ್ ಥೀಮ್‌ನಲ್ಲಿ ಮಿಂಚಿದ ಟಾಟಾ ನೆಕ್ಸಾನ್ ಐಪಿಎಲ್ ಎಡಿಷನ್

ದೆಹಲಿ ಮೂಲದ ಮಾಡಿಫೈ ತಂತ್ರಜ್ಞ ವಿನಯ್ ಕಪೂರ್ ಎಂಬುವವರು ಈ ಹೊಸ ಥೀಮ್ ಕಾರುನ್ನು ಸಿದ್ದಗೊಳಿಸಿದ್ದು, ಮ್ಯಾಟೆ ರೆಡ್ ಮತ್ತು ಸಿಲ್ವರ್ ಕಲರ್ ಬಳಕೆ ಮಾಡಿ ಕಾರಿನ ಲುಕ್ ಹೆಚ್ಚಿಸಿದ್ದಾರೆ. ದೆಹಲಿ ತಂಡವನ್ನು ಪ್ರತಿನಿಧಿಸುವ ಉದ್ದೇಶದಿಂದ ಈ ಕಾರನ್ನು ಸಿದ್ದಗೊಳಿಸಿದ್ದು, ತಾಂತ್ರಿಕ ಅಂಶಗಳನ್ನು ಹೊರತುಪಡಿಸಿ ಕಾರಿನ ಹೊರ ಭಾಗದಲ್ಲಿ ವ್ಯಾರ್ಪಿಂಗ್ ಮಾಡಿಸಲಾಗಿದೆ.

ಡೆಲ್ಲಿ ಡೇರ್ ಡೆವಿಲ್ಸ್ ಥೀಮ್‌ನಲ್ಲಿ ಮಿಂಚಿದ ಟಾಟಾ ನೆಕ್ಸಾನ್ ಐಪಿಎಲ್ ಎಡಿಷನ್

ಕಾರಿನ ಮೇಲೆ ಡೆಲ್ಲಿ ಡೇರ್ ಡೆವಿಲ್ಸ್ ಲೋಗೊ ಕಾರಿನ ಅಂದವನ್ನು ಹೆಚ್ಚಿಸಿದ್ದು, ಟಾಪ್ ಎಂಡ್ ಮಾದರಿಯಾದ ಎಕ್ಸ್‌ಜೆಡ್ ಪ್ಲಸ್ ಟ್ರಿಮ್ ಕಾರನ್ನು ಇದಕ್ಕಾಗಿ ಬಳಕೆ ಮಾಡಲಾಗಿದೆ. ಒಟ್ಟಿನಲ್ಲಿ ಗ್ರಾಹಕನ್ನು ಸೆಳೆಯಲು ಟಾಟಾ ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿದ್ದು, ಇದಕ್ಕೆ ಸವಾಲು ಎನ್ನುವಂತೆ ಮಾಡಿಫೈ ತಂತ್ರಜ್ಞರು ಕೂಡಾ ಹೊಸ ಥೀಮ್‌ಗಳನ್ನು ಸಿದ್ದಗೊಳಿಸುತ್ತಿದ್ದಾರೆ.

ಡೆಲ್ಲಿ ಡೇರ್ ಡೆವಿಲ್ಸ್ ಥೀಮ್‌ನಲ್ಲಿ ಮಿಂಚಿದ ಟಾಟಾ ನೆಕ್ಸಾನ್ ಐಪಿಎಲ್ ಎಡಿಷನ್

ಇನ್ನು ಟಾಟಾ ಮೋಟಾರ್ಸ್ ಇತ್ತೀಚೆಗೆ ಬಿಡುಗಡೆಗೊಳಿಸಿರುವ ನೆಕ್ಸಾನ್ ಕಾರಿನ ಎಕ್ಸ್ ಜೆಡ್ ಪ್ಲಸ್ ಟ್ರಿಮ್ ವೇರಿಯಂಟ್‌ಗಳು 1.2-ಲೀಟರ್ ರೆವಟ್ರಾನ್ ಎಂಜಿನ್ ಮತ್ತು 1.5-ಲೀಟರ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಅನ್ನು ಪಡೆದುಕೊಂಡಿವೆ.

ಡೆಲ್ಲಿ ಡೇರ್ ಡೆವಿಲ್ಸ್ ಥೀಮ್‌ನಲ್ಲಿ ಮಿಂಚಿದ ಟಾಟಾ ನೆಕ್ಸಾನ್ ಐಪಿಎಲ್ ಎಡಿಷನ್

ಪೆಟ್ರೋಲ್ ಮಾದರಿಗಳು 108ಬಿಹೆಚ್‍ಪಿ ಮತ್ತು 170ಎನ್ಎಂ ಟಾರ್ಕ್ ಮತ್ತು 260ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾಡಿಫೈ ತಂತ್ರಜ್ಞ ವಿನಯ್ ಕಪೂರ್ ಸಿದ್ದಗೊಳಿಸಿರುವ ಡೆಲ್ಲಿ ಡೇರ್ ಡೆವಿಲ್ಸ್ ನೆಕ್ಸಾನ್ ಥೀಮ್‌ ಕಾರಿನ ವಿಡಿಯೋ ಇಲ್ಲಿದೆ ನೋಡಿ....

Article Published On: Thursday, May 10, 2018, 12:09 [IST]
English summary
Tata Nexon IPL Edition With Delhi Daredevils Theme.
Read more on tata motors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+