ಇನ್ಮುಂದೆ ಹೆಚ್‌ಪಿ ಪೆಟ್ರೋಲ್ ಬಂಕ್‌ಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ..!
ದೇಶಾದ್ಯಂತ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳಿಂದಾಗಿ ವಾಹನ ಸವಾರರು ಕಂಗೆಟ್ಟು ಹೋಗಿದ್ದಾರೆ. ಇದರಿಂದ ವಾಹನ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ಕಾರುಗಳ ಮಾರಾಟದ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಟಾಟಾ ಪವರ್ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಅಗತ್ಯ ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲು ಮುಂದಾಗಿವೆ.

ಭಾರತದಲ್ಲಿ ಸದ್ಯ ವಾಹನ ಖರೀದಿದಾರರು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ಕಾರುಗಳತ್ತ ಮುಖ ಮಾಡುತ್ತಿದ್ದು, ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಾದ ಚಾರ್ಜಿಂಗ್ ಸ್ಟೆಷನ್‌ಗಳು ಇಲ್ಲದಿರುವುದರಿಂದ ಬಹುತೇಕ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿಯೇ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಯೊಂದಿಗೆ ಕೈ ಜೋಡಿಸಿರುವ ಟಾಟಾ ಪವರ್ ಸಂಸ್ಥೆಯು ಬೃಹತ್ ಯೋಜನೆಯೊಂದನ್ನ ರೂಪಿಸಿವೆ.

ಹಿಂದೂಸ್ತಾನ್ ಪೆಟ್ರೋಲಿಯಂ ಇಂಧನ ಮಾರಾಟ ಕೇಂದ್ರಗಳಲ್ಲೇ ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಾಗಿ ಬೇಕಿರುವ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯಲು ಮುಂದಾಗಿರುವ ಟಾಟಾ ಪವರ್ ಸಂಸ್ಥೆಯು, ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಈ ಯೋಜನೆಯನ್ನು ರೂಪಿಸಿದೆ.

ದೇಶದ ಪ್ರಮುಖ ನಗರಗಳಲ್ಲಿ ಆಯ್ದ ಹೆಚ್‌ಪಿ ಪೆಟ್ರೋಲ್ ಬಂಕ್‌ಗಳಲ್ಲಿ ಇವಿ ಚಾರ್ಜಿಂಗ್ ಪಾಯಿಂಟ್ ಸೇವೆ ಲಭ್ಯವಿರಲಿದ್ದು, ಹಂತ ಹಂತವಾಗಿ ಪ್ರತಿ ಪೆಟ್ರೋಲ್ ಬಂಕ್‌ಗಳಲ್ಲೂ ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯಲು ನಿರ್ಧರಿಸಿರುವುದಾಗಿ ಟಾಟಾ ಪವರ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಇದಲ್ಲದೇ ಹೊಸ ಯೋಜನೆ ಬಗ್ಗೆ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಯ ಎಂಡಿ ರಜನೀಶ್ ಮೆಹ್ತಾ ಕೂಡಾ ಪ್ರತಿಕ್ರಿಯೆಸಿದ್ದು, ಭವಿಷ್ಯದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಉತ್ತಮ ಮಾರುಕಟ್ಟೆಯಿರುವುದರಿಂದಾಗಿ ಟಾಟಾ ಪವರ್ ಜೊತೆಗೂಡಿ ಇವಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯಲು ಯೋಜನೆ ಸಿದ್ದಪಡಿಸಿದ್ದೇವೆ ಎಂದಿದ್ದಾರೆ.

ಇನ್ನು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಕಠಿಣ ನಿಯಮ ಜಾರಿಗೆ ತರುತ್ತಿರುವ ಕೇಂದ್ರ ಸಾರಿಗೆ ಇಲಾಖೆಯು ಸದ್ಯದಲ್ಲೇ ಹೊಸ ಮೋಟಾರ್ ವೆಹಿಕಲ್ ನಿಯಮದಡಿ 15 ವರ್ಷ ಮೇಲ್ಪಟ್ಟ ಕಾರುಗಳನ್ನು ಸ್ಕ್ರ್ಯಾಪ್‌ಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಸಿದ್ದತೆ ನಡೆಸಿದ್ದು, ಹೊಸ ನಿಯಮದಿಂದ ಬರೋಬ್ಬರಿ 2.80 ಕೋಟಿಗೂ ಅಧಿಕ ಕಾರುಗಳು ಗುಜುರಿ ಸೇರಲಿವೆ.

ವಿಪರಿತಗೊಂಡ ವಾಹನಗಳ ಸಂಖ್ಯೆಯಿಂದಾಗಿ ನಗರ ಪ್ರದೇಶಗಳಲ್ಲಿ ಉಸಿರಾಡಲು ಸಹ ಹರಸಾಹಸ ಮಾಡಬೇಕಾದ ವಾತಾವರಣ ಸೃಷ್ಠಿಯಾಗುತ್ತಿದ್ದು, ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪರಿಸ್ಥಿತಿಯನ್ನು ಹೇಳತಿರದು. ಈ ಹಿನ್ನೆಲೆಯಲ್ಲಿ ಮಾಲಿನ್ಯ ತಡೆಯಲು ಕೇಂದ್ರ ಸರ್ಕಾರವು ಕಠಿಣ ಕ್ರಮಗಳನ್ನು ಸಿದ್ದಗೊಳಿಸಿದ್ದು, ಸದ್ಯದಲ್ಲೇ ಸ್ವಯಂಚಾಲಿತ ಸ್ಕ್ರ್ಯಾರ್ಪಿಂಗ್ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

ಕೇಂದ್ರ ಸಾರಿಗೆ ಇಲಾಖೆಯು ಈ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದು, ಸ್ಕ್ರ್ಯಾರ್ಪಿಂಗ್ ಪ್ರಕ್ರಿಯೆಗೆ ಕೆಲವು ನಿಯಮಗಳನ್ನು ರೂಪಿಸಿರುವುದಾಗಿ ತಿಳಿಸಿದೆ. ಹೊಸ ನಿಯಮದ ಪ್ರಕಾರ, ಸಾರಿಗೆ ಇಲಾಖೆಯು ಗುರುತಿಸಿರುವ ಅಧಿಕೃತ ಸ್ಕ್ರ್ಯಾರ್ಪ್ ಸೆಂಟರ್‌ಗಳಲ್ಲೇ ಕಾರಿನ ಸ್ಕ್ರ್ಯಾರ್ಪ್ ಮಾಡಿಸತಕ್ಕದ್ದು ಎಂದಿದೆ.
MOST READ: ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ

ಒಂದು ವೇಳೆ ಸಾರಿಗೆ ಇಲಾಖೆಯ ನಿಯಮಗಳನ್ನು ಮೀರಿ ಹಳೆಯ ಕಾರುಗಳನ್ನು ರಸ್ತೆಗಿಳಿಸಿದ್ದೇ ಆದಲ್ಲಿ ಸೀಜ್ ಮಾಡುವ ಬಗ್ಗೆ ಎಚ್ಚರಿಕೆ ನೀಡಿದ್ದು, ಪೆಟ್ರೋಲ್ ಎಂಜಿನ್, ಸಿಎನ್‌ಜಿ ಎಂಜಿನ್ ಕಾರುಗಳಿಗೆ 15 ವರ್ಷ ಮತ್ತು ಡೀಸೆಲ್ ಕಾರುಗಳಿಗೆ 10 ವರ್ಷ ಮಿತಿ ನಿಗದಿಪಡಿಸಲಾಗಿದೆ.

ಅವಧಿಗೂ ಮಿರಿದ ಕಾರುಗಳು ದೆಹಲಿಯಲ್ಲಿ ಚಾಲನೆ ಮಾಡಿದ್ದಲ್ಲಿ ಸೀಜ್ ಮಾಡುವುದರ ಜೊತೆ ಇಂತಿಷ್ಟು ಪ್ರಮಾಣದ ದಂಡವಿಧಿಸುವ ಬಗ್ಗೆ ಹೊಸ ನಿಯಮಗಳನ್ನು ಸಿದ್ದಪಡಿಸಿರುವ ಸಾರಿಗೆ ಇಲಾಖೆಯು ಮುಂದಿನ ಕೆಲವೇ ದಿನಗಳಲ್ಲಿ ಹೊಸ ಯೋಜನೆ ಚಾಲನೆ ನೀಡಲಿದ್ದಾರೆ.

ಮಾಲಕರೇ ಬಂದು ತಮ್ಮ ಹಳೆಯ ಕಾರುಗಳನ್ನು ಸ್ಕ್ರ್ಯಾಪ್ ಮಾಡಿದಲ್ಲಿ ಮಾರುಕಟ್ಟೆಗೆ ಅನುಗುಣವಾಗಿ ವಿವಿಧ ಬೆಲೆಗಳನ್ನು ನಿಗದಿಗೊಳಿಸಿರುವ ಸಾರಿಗೆ ಇಲಾಖೆಯು, ಸ್ಕ್ರ್ಯಾರ್ಪಿಂಗ್‌ನಿಂದ ಬಂದ ಹಳೆಯ ಕಾರುಗಳ ಬಿಡಿಭಾಗಗಳನ್ನು ಮತ್ತೆ ಮರುಬಳಿಕೆಗಾಗಿ ಆಟೋ ಉತ್ಪಾದನಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವ ತೀರ್ಮಾನಕ್ಕೆ ಬಂದಿದೆ.

ಸೀಜ್ ಆದ್ರೆ ಪರಿಹಾರ ಇಲ್ವಂತೆ..!
ಸ್ವಯಂಪ್ರೇರಿತವಾಗಿ ಬರುವ ಕಾರು ಮಾಲೀಕರಿಗೆ ಸ್ಕ್ರ್ಯಾರ್ಪಿಂಗ್ ನಂತರ ಮಾರುಕಟ್ಟೆಯಲ್ಲಿ ಆ ಕಾರಿನ ಬೆಲೆ ಎಷ್ಟು ಎಂದು ತೀರ್ಮಾನಿಸಿ ಪರಿಹಾರ ನೀಡಲಿದ್ದು, ಒಂದು ವೇಳೆ ಅವಧಿ ಮುಗಿದರೂ ಸ್ಕ್ರ್ಯಾಪಿಂಗ್ ಮಾಡದೇ ಇದ್ದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳೇ ಅಂತಹ ಕಾರುಗಳನ್ನು ಪತ್ತೆಹಚ್ಚಿ ಸ್ಕ್ರ್ಯಾರ್ಪಿಂಗ್ ಮಾಡಿಸುವುದಲ್ಲದೇ ಸಿಗಬಹುದಾದ ಪರಿಹಾರಕ್ಕೂ ಕತ್ತರಿ ಹಾಕಲಿದೆ.

ಇನ್ನು ಜಾರಿಗೆ ತರಲಾಗುತ್ತಿರುವ ವ್ಯಾಲೆಂಟರಿ ವೆಹಿಕಲ್ ಫ್ಲಿಟ್ ಮಾಡರ್ನೈಷನ್ ಪ್ರೋಗ್ರಾಂ (ವಿ-ವಿಎಂಪಿ) ಅಡಿ ಬರೋಬ್ಬರಿ 2.80 ಕೋಟಿಗೂ ಹೆಚ್ಚು ಹಳೆಯ ಕಾರುಗಳು (2005ರ ಮಾರ್ಚ್ 31 ಮೊದಲು ಖರೀದಿ ಮಾಡಿದ) ಸ್ಕ್ರ್ಯಾರ್ಪಿಂಗ್‌ಗೊಳ್ಳಲಿದ್ದು, ಇದರಿಂದ ಶೇ. 65ರಷ್ಟು ಮಾಲಿನ್ಯ ತಗ್ಗಲಿದೆ ಎನ್ನಲಾಗಿದೆ.
MOST READ: ಟ್ರಾಫಿಕ್ ಪೊಲೀಸ್‍ರಿಂದ ತಪ್ಪಿಸಿಕೊಳ್ಳಬಹುದು ಆದ್ರೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.!

ಇದಲ್ಲದೇ ಹೊಸ ಯೋಜನೆಯು ಯಶಸ್ವಿಯಾದಲ್ಲಿ ಪರೋಕ್ಷವಾಗಿ 10 ಸಾವಿರ ಕೋಟಿ ಆದಾಯ ಕೂಡಾ ಹರಿದುಬರಲಿದ್ದು, ಕಾರುಗಳ ಉತ್ಪಾದನಾ ವೆಚ್ಚ ತಗ್ಗುವುದಲ್ಲದೇ ಕಾರಿನ ಬೆಲೆಗಳು ಕೂಡಾ ಕಡಿತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುವುದು ಸಚಿವ ನಿತಿನ್ ಗಡ್ಕರಿಯವರ ಅಭಿಪ್ರಾಯವಾಗಿದೆ.

ಹೀಗಾಗಿ ಹೊಸ ನೀತಿ ಜಾರಿಯಾದಲ್ಲಿ ಸ್ಕ್ರ್ಯಾರ್ಪಿಂಗ್ ವಿಭಾಗಗಳಲ್ಲಿ ಕೂಡಾ ವಿಫುಲ ಉದ್ಯೋಗ ಅವಕಾಶಗಳು ಸೃಷ್ಠಿಯಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿರುವ ಮಾರುತಿ ಸುಜುಕಿ ಬಲೆನೊ(ಸೆಡಾನ್), ಮಾರುತಿ 800, ಹೋಂಡಾ ಸಿಟಿ ಟೈಪ್ 2 ವಿಟೆಕ್, ಫಿಯೆಟ್ ಫಾಲಿಯೋ ಎಸ್10 ಕಾರುಗಳೇ ಹೆಚ್ಚಿನ ಮಟ್ಟದಲ್ಲಿ ಗುಜುರಿ ಸೇರಲಿವೆ ಎನ್ನಲಾಗಿದೆ.
More from DriveSpark
ಭಾರತದಲ್ಲೇ ಸಿದ್ದವಾಗುತ್ತಿರುವ ಹ್ಯುಂಡೈ ಸಂಸ್ಥೆಯ ಅತಿ ಮೈಲೇಜ್ ನೀಡಬಲ್ಲ ಕೋನಾ ಎಲೆಕ್ಟಿಕ್ ಕಾರಿನ ಫೋಟೋ ಗ್ಯಾಲರಿ..


Click it and Unblock the Notifications








