ಪರ್ಫಾಮೆನ್ಸ್ ಪ್ರಿಯರಿಗಾಗಿ ಬಿಡುಗಡೆಯಾದ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಟಾಟಾ ಮೋಟಾರ್ಸ್ ಇದೇ ಮೊದಲ ಬಾರಿಗೆ ಪರ್ಫಾಮೆನ್ಸ್ ಕಾರು ಪ್ರಿಯರಿಗಾಗಿ ತನ್ನ ಬಹುನೀರಿಕ್ಷಿತ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಕಾರುಗಳನ್ನು ಬಿಡುಗಡೆ ಮಾಡಿದ್ದು, ಹತ್ತು ಹಲವು ವಿಶೇಷ ಸೌಲಭ್ಯಗಳನ್ನು ಹೊಂದಿರುವ ಹೊಸ ಕಾರುಗಳು ಭಾರೀ ಆಕರ್ಷಣೆ ಪಡೆದುಕೊಂಡಿವೆ.

ಪರ್ಫಾಮೆನ್ಸ್ ಪ್ರಿಯರಾಗಿ ಬಿಡುಗಡೆಯಾದ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ತಮಿಳುನಾಡಿನ ಕೊಯಮತ್ತೂರು ಮೂಲದ ಜೇಯಮ್ ಟಾಟಾ ಪರ್ಫಾಮೆನ್ಸ್ (ಜೆಟಿಪಿ) ಸಂಸ್ಥೆಯೊಂದಿಗೆ ಜೊತೆಗೂಡಿರುವ ಟಾಟಾ ಸಂಸ್ಥೆಯು ತನ್ನ ಜನಪ್ರಿಯ ಕಾರು ಆವೃತ್ತಿಗಳಾದ ಟಿಯಾಗೊ ಮತ್ತು ಟಿಗೋರ್ ಆವೃತ್ತಿಗಳನ್ನು ಸ್ಪೋರ್ಟಿ ಲುಕ್ ಜೊತೆಗೆ ಪರ್ಫಾಮೆನ್ಸ್ ಬಳಕೆಯ ಉದ್ದೇಶಕ್ಕಾಗಿ ಹೆಚ್ಚಿನ ಮಟ್ಟದ ಎಂಜಿನ್ ದಕ್ಷತೆಯನ್ನು ಹೊಸ ಜೆಟಿಪಿ ಆವೃತ್ತಿಗಳಲ್ಲಿ ಒದಗಿಸಿದೆ.

ಪರ್ಫಾಮೆನ್ಸ್ ಪ್ರಿಯರಾಗಿ ಬಿಡುಗಡೆಯಾದ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಸಾಮಾನ್ಯ ಮಾದರಿಯ ಟಿಗೋರ್, ಟಿಯಾಗೊ ಕಾರುಗಳಿಂತಲೂ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಕಾರುಗಳು ಸ್ಪೋರ್ಟಿ ಲುಕ್‌ನೊಂದಿಗೆ ಪ್ರೀಮಿಯಂ ಫೀಚರ್ಸ್ ಹೊತ್ತುಬಂದಿದೆ. ಹೀಗಾಗಿ ಸಾಮಾನ್ಯ ಕಾರುಗಳಿಂತ ಜೆಟಿಪಿ ವರ್ಷನ್‌ಗಳ ಬೆಲೆ ತುಸು ದುಬಾರಿ ಎನ್ನಿಸುತ್ತವೆ.

ಪರ್ಫಾಮೆನ್ಸ್ ಪ್ರಿಯರಾಗಿ ಬಿಡುಗಡೆಯಾದ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಕಾರಿನ ಬೆಲೆಗಳು

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಟಾಟಾ ಹೊಸ ಟಿಯಾಗೊ ಜೆಟಿಪಿ ಬೆಲೆಯನ್ನು ರೂ. 6.39 ಲಕ್ಷಕ್ಕೆ ಮತ್ತು ಟಿಗೋರ್ ಜೆಟಿಪಿ ಕಾರಿನ ಬೆಲೆಯನ್ನು ರೂ.7.49 ಲಕ್ಷಕ್ಕೆ ನಿಗದಿಗೊಳಿಸಲಾಗಿದ್ದು, ಬೆಲೆಗೆ ತಕ್ಕಂತೆ ಹೊಸ ಸುಧಾರಿತ ಸೌಲಭ್ಯಗಳನ್ನು ಪಡೆದುಕೊಂಡಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ.

ಪರ್ಫಾಮೆನ್ಸ್ ಪ್ರಿಯರಾಗಿ ಬಿಡುಗಡೆಯಾದ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಈ ಮೊದಲು ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಕಾರುಗಳನ್ನು ದೆಹಲಿಯಲ್ಲಿ ನಡೆದಿದ್ದ 2018ರ ಆಟೋ ಎಕ್ಸ್‌ಪೋ ಮೇಳದಲ್ಲಿ ಹೊಸ ಕಾರಿನ ಪರಿಕಲ್ಪನೆಗಳನ್ನು ಪ್ರದರ್ಶನಗೊಳಿಸಿದ್ದ ಟಾಟಾ ಸಂಸ್ಥೆಯು, ಮಾರುತಿ ಸುಜುಕಿಯ ಜನಪ್ರಿಯ ಬಲೆನೊ ಕಾರುಗಳಿಗೆ ಪೈಪೋಟಿಯಾಗಿ ಈ ಹೊಸ ಕಾರುಗಳನ್ನು ಸಜ್ಜುಗೊಳಿಸಿದೆ.

ಪರ್ಫಾಮೆನ್ಸ್ ಪ್ರಿಯರಾಗಿ ಬಿಡುಗಡೆಯಾದ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಟಾಟಾ ಟಿಗೊರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಕಾರುಗಳು ಅತ್ಯಂತ ಪ್ರಭಾವಶಾಲಿ ಎಂಜಿನ್ ಅನ್ನು ಪಡೆದಿದ್ದು, ಈಗಾಗಲೇ ಹಲವಾರು ಬಾರಿ ಭಾರತೀಯ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಳ್ಳುವ ಮೂಲಕ ಕಾರು ಪ್ರಿಯರಲ್ಲ ಕುತೂಹಲ ಹುಟ್ಟುಹಾಕಿದ್ದವು.

ಪರ್ಫಾಮೆನ್ಸ್ ಪ್ರಿಯರಾಗಿ ಬಿಡುಗಡೆಯಾದ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಕಾರುಗಳು ಈ ಬಾರಿ ಹೊಸ ಅಪ್ಗ್ರೇಡ್‍ಗಳನ್ನು ಪಡೆದುಕೊಂಡಿದ್ದು, ಆಕ್ರಮಣಕಾರಿ ವಿನ್ಯಾಸವೇ ಇವುಗಳ ಪ್ರಮುಖ ಆಕರ್ಷಣೆ. ಹೀಗಾಗಿ ಕಾರಿನ ಮುಂಭಾಗದಲ್ಲಿ ಹೊಸ ಡಿಸೈನ್‍ನಿಂದ ಕೂಡಿದ ಅಗಲವಾದ ಲೋವರ್ ಗ್ರಿಲ್ ಹಾಗೂ ಬಂಪರ್ ಅನ್ನು ಅಳವಡಿಸಲಾಗಿದೆ.

ಪರ್ಫಾಮೆನ್ಸ್ ಪ್ರಿಯರಾಗಿ ಬಿಡುಗಡೆಯಾದ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಡ್ಯುಯಲ್ ವೇಂಬರ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ ಮತ್ತು ರೇಡಿಯೇಟರ್ ಗ್ರಿಲ್ ಅನ್ನು ಬಾನೆಟ್‍ನ ಮೇಲೆ ಅಳವಡಿಸುವ ಮೂಲಕ ಮುಂಭಾಗದ ವಿನ್ಯಾಸಕ್ಕೆ ಮತ್ತಷ್ಟು ಮೆರಗು ತರಲಾಗಿದ್ದು, ಕಾರಿನ ಸೈಡ್‍ನಲ್ಲಿ ಡೈಮಂಡ್ ಕಟ್ ಬ್ಲಾಕ್ ಮತ್ತು ಸಿಲ್ವರ್ ಬಣ್ಣದ 15-ಇಂಚಿನ ಅಲಾಯ್ ಚಕ್ರಗಳನ್ನು ನೀಡಲಾಗಿದೆ.

ಪರ್ಫಾಮೆನ್ಸ್ ಪ್ರಿಯರಾಗಿ ಬಿಡುಗಡೆಯಾದ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಇನ್ನು ಕಾರಿನ ರಿಯರ್ ವ್ಯೂ ಮಿರರ್ಸ್ ಕಾರಿನ ದೇಹದ ಬಣ್ಣವನ್ನು ಪಡೆದಿದ್ದು, ರೂಫ್ ಮತ್ತು ರಿಯರ್ ಸ್ಪಾಯ್ಲರ್‍‌ಗಳು ಗ್ಲಾಸಿ ಬ್ಲಾಕ್ ಬಣ್ಣದಿಂದ ಸಜ್ಜುಗೊಂಡಿದೆ. ಹಾಗಿಯೇ ಕಾರಿನ ಹಿಂಭಾಗದಲ್ಲಿ ಟೈಲ್ ಲ್ಯಾಂಪ್ ಸಿಗ್ನೇಚರ್ ಎಲ್ಇಡಿ ಲೈಟ್‍ಗಳು ಮತ್ತು ಜೆಟಿಪಿ ಬ್ಯಾಡ್ಜಿಂಗ್ ಹಾಗೂ ಪೂರ್ಣ ಕಾರ್ಯಭರಿತ ಟ್ವಿನ್ ಬ್ಯಾರೆಲ್ ಎಕ್ಸಾಸ್ಟ್ ಅನ್ನು ಹೊಂದಿದೆ.

ಪರ್ಫಾಮೆನ್ಸ್ ಪ್ರಿಯರಾಗಿ ಬಿಡುಗಡೆಯಾದ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಇನ್ನು ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಕಾರಿನ ಒಳಭಾಗದಲ್ಲಿ ಸ್ಪೋರ್ಟಿ ಬ್ಲಾಕ್ ಮತ್ತು ಕೆಂಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಎಸಿ ವೆಂಟ್ಸ್ ಗಳನ್ನು ಸಹ ಕೆಂಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಸ್ಟೀರಿಂಗ್ ವ್ಹೀಲ್‍ಗೆ ಕಪ್ಪು ಬಣ್ಣದ ಲೆದರ್‍ ಮತ್ತು ಸೀಟ್‍ಗಳಿಗೆ ಕೆಂಪು ಬಣ್ಣದ ಲೆದರ್ ಹೊದಿಕೆ ನೀಡುವ ಮೂಲದ ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸಿದೆ.

ಪರ್ಫಾಮೆನ್ಸ್ ಪ್ರಿಯರಾಗಿ ಬಿಡುಗಡೆಯಾದ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಇದಲ್ಲದೇ ಅಲ್ಯುಮಿನಿಯಂ ಕಂಟ್ರೋಲ್ ಪೆಡಲ್‍ಗಳನ್ನು ನೀಡಲಾಗಿದ್ದು, ಈ ಎರಡು ಕಾರುಗಳು ಪ್ರೀಮಿಯಂ ಮಾದರಿಯಂತೆ 8-ಸ್ಪೀಕರ್ಸ್ ಹರ್ಮನ್ ಮ್ಯೂಸಿಕ್ ಸಿಸ್ಟಂ ಹಾಗು ಕನೆಕ್ಟ್ ನೆಕ್ಸ್ಟ್, ಆ್ಯಪಲ್ ಕಾರ್‍ ಪ್ಲೇ ಮತ್ತು ಅಂಡ್ರಾಯ್ಡ್ ಆಟೋ ಸೌಲಭ್ಯಗಳನ್ನು ಹೊಂದಿದೆ.

MOST READ: ಭಾರತದಲ್ಲಿ ಓಮ್ನಿ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ ಮಾರುತಿ..!

ಪರ್ಫಾಮೆನ್ಸ್ ಪ್ರಿಯರಾಗಿ ಬಿಡುಗಡೆಯಾದ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಈ ಬಾರಿ ಹೊಸ ಜೆಟಿಪಿ ಕಾರುಗಳಲ್ಲಿ ದೊಡ್ಡ ಬದಲಾವಣೆ ಎಂದರೆ ಅವು ಎಂಜಿನ್. ಏಕೆಂದರೆ ಈ ಬಾರಿ ನೀಡಲಾಗಿರುವ ಹೆಚ್ಚು ಸಾಮರ್ಥ್ಯದ 1.2 ಲೀಟರ್ ರೆವೊಟ್ರಾನ್ ಟರ್ಬೋಚಾರ್ಜ್ಡ್ ಎಂಜಿನ್‍ಗಳು ಹೆಚ್ಚು ಸ್ಪೀಡ್ ಅನ್ನು ಒದಗಿಸಬಲ್ಲವು.

ಪರ್ಫಾಮೆನ್ಸ್ ಪ್ರಿಯರಾಗಿ ಬಿಡುಗಡೆಯಾದ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಟಾಟಾ ಟಿಯಾಗೊ ಜೆಟಿಪಿ ಹಾಗು ಟಿಗೋರ್ ಜೆಟಿಪಿ ಕಾರುಗಳಲ್ಲಿ ಅಳವಡಿಸಲಾಗಿರುವ 1.2 ರೆವೊಟ್ರಾನ್ ಪೆಟ್ರೋಲ್ ಎಂಜಿನ್‍ಗಳು 112-ಬಿಹೆಚ್‍ಪಿ ಮತ್ತು 150-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಪರ್ಫಾಮೆನ್ಸ್ ಪ್ರಿಯರಾಗಿ ಬಿಡುಗಡೆಯಾದ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಹಾಗೆಯೇ ಪ್ರಯಾಣಿಕರ ಸುರಕ್ಷತೆಗೂ ಹೊಸ ಕಾರುಗಳಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಡ್ಯುಯಲ್ ಏರ್‌ಬ್ಯಾಗ್, ಇಬಿಡಿ, ಕಾರ್ನರ್ ಸ್ಟ್ಯಾಬಿಲಿಟಿ ಕಂಟ್ರೋಲ್, ಅತ್ಯುತ್ತಮ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಕೇವಲ 10 ಸೇಕೆಂಡುಗಳಲ್ಲಿ 100ಕಿ.ಮಿ ವೇಗ ಪಡೆದುಕೊಳ್ಳುವ ಗುಣಹೊಂದಿವೆ.

ಪರ್ಫಾಮೆನ್ಸ್ ಪ್ರಿಯರಾಗಿ ಬಿಡುಗಡೆಯಾದ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಒಟ್ಟಿನಲ್ಲಿ ಟಾಟಾ ಸಂಸ್ಥೆಯ ಟಿಗೋರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಎರಡೂ ಕಾರುಗಳು ಚಾಲಕರಿಗೆ ಉತ್ತಮ ರೈಡ್ ಮತ್ತು ಹ್ಯಾಂಡ್ಲಿಂಗ್ ಅನುಭವವನ್ನು ನೀಡಲಿದ್ದು, ಗ್ರಾಹಕರು ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಮೈಲೇಜ್ ಕೊಡುವಂತಹ ರೆಗ್ಯುಲರ್ ಟಿಯಾಗೊ, ಟಿಗೋರ್ ಕಾರುಗಳನ್ನು ಮತ್ತು ಸ್ಪೋರ್ಟಿ ಡ್ರೈವ್ ಅನುಭವಕ್ಕಾಗಿ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಕಾರುಗಳನ್ನು ಬಳಸಬಹುದಾಗಿದೆ.

Article Published On: Saturday, October 27, 2018, 10:52 [IST]
English summary
Tata Tiago JTP And Tigor JTP Launched In India; Prices Start At Rs 6.39 Lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+