ಶೀಘ್ರವೇ ಮಾರುಕಟ್ಟೆಯಲ್ಲಿ ಕಾಲಿಡಲಿದೆ ಟಾಟಾ ಟಿಗೋರ್ ಇವಿ ಕಾರು..

ಟಾಟಾ ಮೋಟರ್ಸ್ ತಮ್ಮ ಟಿಗೋರ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ನವೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲು ಯೋಜಿಸುತ್ತಿದೆ. ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟರ್ಸ್ ತಮ್ಮ ಎಲೆಕ್ಟ್ರಿಕ್ ವೆಹಿಕಲ್ ಅನ್ನು ಉತ್ಪಾದಿಸಲು ಆಂಧ್ರ ಪ್ರದೇಶದ

By Rahul Ts

ಟಾಟಾ ಮೋಟರ್ಸ್ ತಮ್ಮ ಟಿಗೋರ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ನವೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲು ಯೋಜಿಸುತ್ತಿದೆ. ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟರ್ಸ್ ತಮ್ಮ ಎಲೆಕ್ಟ್ರಿಕ್ ವೆಹಿಕಲ್ ಅನ್ನು ಉತ್ಪಾದಿಸಲು ಆಂಧ್ರ ಪ್ರದೇಶದಲ್ಲಿ ಪ್ಲಾಂಟ್‍‍ಗಾಗಿ ಹುಡುಕುತ್ತಿದೆ.

ಶೀಘ್ರವೇ ಮಾರುಕಟ್ಟೆಯಲ್ಲಿ ಕಾಲಿಡಲಿದೆ ಟಾಟಾ ಟಿಗೋರ್ ಇವಿ ಕಾರು..

ಮಾಹಿತಿಗಳ ಪ್ರಕಾರ ಟಾಟಾ ಮೋಟರ್ಸ್ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳಾದ ಎನ್.ಚಂದ್ರಬಾಬು ಅವರೊಂದಿಗೆ ಟಿಗೋರ್ ಎಲೆಕ್ಟ್ರಿಕ್ ಕಾರನ್ನು ಎರಡು ತಿಂಗಳ ಅವಧಿಯಲ್ಲಿ ಪರಿಚಯಿಸುವ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ.

ಶೀಘ್ರವೇ ಮಾರುಕಟ್ಟೆಯಲ್ಲಿ ಕಾಲಿಡಲಿದೆ ಟಾಟಾ ಟಿಗೋರ್ ಇವಿ ಕಾರು..

ಸಾರ್ವಜನಿಕ ವಲಯದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಇದೇ ಕಾರಣಕ್ಕಾಗಿ ಟಾಟಾ ಸಂಸ್ಥೆಯು ತನ್ನ ಇವಿ ಟಿಗೋರ್ ಕಾರನ್ನ ಖಾಸಗಿಯಾಗಿಯು ಖರೀದಿಸುವ ಅವಕಾಶ ಒದಗಿಸುತ್ತಿದ್ದು, ಇದಕ್ಕೂ ದೇಶದ ಪ್ರಮುಖ ನಗರಗಳಲ್ಲಿ ಅಗತ್ಯ ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯುವ ಇರಾದೆಯಲ್ಲಿದೆ.

ಶೀಘ್ರವೇ ಮಾರುಕಟ್ಟೆಯಲ್ಲಿ ಕಾಲಿಡಲಿದೆ ಟಾಟಾ ಟಿಗೋರ್ ಇವಿ ಕಾರು..

ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಟಿಗೋರ್ ಎಲೆಕ್ಟ್ರಿಕ್ ಕಾರುಗಳು 40ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯದೊಂದಿಗೆ ಇತರೆ ಇವಿ ಕಾರುಗಳಿಂತಲೂ ಉತ್ತಮವಾಗಿವೆ ಎಂಬುವುದು ಈಗಾಗಲೇ ಸಾಬೀತಾಗಿದ್ದು, ಇದೇ ಕಾರಣಕ್ಕೆ ಇಇಎಸ್ಎಲ್ ಸಂಸ್ಥೆಯು ಟಿಗೋರ್ ಇವಿ ಕಾರುಗಳನ್ನೇ ಆಯ್ಕೆ ಮಾಡಿದೆ.

ಶೀಘ್ರವೇ ಮಾರುಕಟ್ಟೆಯಲ್ಲಿ ಕಾಲಿಡಲಿದೆ ಟಾಟಾ ಟಿಗೋರ್ ಇವಿ ಕಾರು..

ಜೊತೆಗೆ 2+3 ಪ್ರಯಾಣಿಕ ಸೀಟುಗಳ ವ್ಯವಸ್ಥೆಯನ್ನು ಹೊಂದಿರುವ ಟಿಗೋರ್ ಎಲೆಕ್ಟ್ರಿಕ್ ಕಾರುಗಳು, 1,216 ಕೆಜಿ ಭಾರ ಪಡೆದುಕೊಳ್ಳುವ ಮೂಲಕ ಮಹೀಂದ್ರಾ ವೆರಿಟೋ ಕಾರಿಗಿಂತ 200 ಕೆಜಿಯಷ್ಚು ಹಗುರವಾಗಿದೆ ಎನ್ನಲಾಗಿದೆ

ಶೀಘ್ರವೇ ಮಾರುಕಟ್ಟೆಯಲ್ಲಿ ಕಾಲಿಡಲಿದೆ ಟಾಟಾ ಟಿಗೋರ್ ಇವಿ ಕಾರು..

ಬ್ಯಾಟರಿ ಸಾಮರ್ಥ್ಯ

ಟಿಗೋರ್ ಎಲೆಕ್ಟ್ರಿಕ್ ಕಾರು ಮಾದರಿಯಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಬಳಕೆ ಮಾಡಲಾಗಿದ್ದು, ಒಂದು ಬಾರಿ ಪೂರ್ಣ ಪ್ರಮಾಣದ ಬ್ಯಾಟರಿ ಚಾರ್ಜಿಂಗ್ ಮಾಡಿದಲ್ಲಿ ಗರಿಷ್ಠವಾಗಿ 150 ಕಿ.ಮಿ ಮೈಲೇಜ್ ಒದಗಿಸಲಿದೆ ಎಂದು ಟಾಟಾ ಸಂಸ್ಥೆ ಹೇಳಿಕೊಂಡಿದೆ.

ಶೀಘ್ರವೇ ಮಾರುಕಟ್ಟೆಯಲ್ಲಿ ಕಾಲಿಡಲಿದೆ ಟಾಟಾ ಟಿಗೋರ್ ಇವಿ ಕಾರು..

ಕಾರಿನ ಬೆಲೆಗಳು

ಎಲೆಕ್ಟ್ರಿಕ್ ಕಾರುಗಳಲ್ಲಿ ಸದ್ಯ ಮಹೀಂದ್ರಾ ಇ ವೆರಿಟೊ ಸಹ ಸದ್ದು ಮಾಡುತ್ತಿದ್ದು, ಅದಕ್ಕಿಂತೂ ಹೆಚ್ಚಿನ ವೈಶಿಷ್ಟ್ಯತೆ ಹೊಂದಿರುವ ಟಾಟಾ ಇವಿ ಟಿಗೋರ್ ಕಾರುಗಳು ಎಕ್ಸ್‌ಶೋರಂ ಪ್ರಕಾರ ರೂ.9 ಲಕ್ಷ ದಿಂದ ರೂ. 11 ಲಕ್ಷಕ್ಕೆ ಆರಂಭಿಕವಾಗಿ ಲಭ್ಯವಾಗುವ ಸಾಧ್ಯತೆಗಳಿವೆ.

ಶೀಘ್ರವೇ ಮಾರುಕಟ್ಟೆಯಲ್ಲಿ ಕಾಲಿಡಲಿದೆ ಟಾಟಾ ಟಿಗೋರ್ ಇವಿ ಕಾರು..

ಹೀಗಾಗಿ ಇದು ಭಾರತೀಯ ಗ್ರಾಹಕರನ್ನು ಸೆಳೆಯುವ ವಿಶ್ವಾಸವನ್ನು ಹೊಂದಿರುವ ಟಾಟಾ ಸಂಸ್ಥೆಯು, ಟಿಗೋರ್ ಜೊತೆಗೆ ಮತ್ತೊಂದು ಜನಪ್ರಿಯ ಕಾರು ಮಾದರಿಯಾದ ನ್ಯಾನೋ ಆವೃತ್ತಿಯನ್ನು ಕೂಡಾ ಎಲೆಕ್ಟ್ರಿಕ್ ಎಂಜಿನ್ ಜೊತೆಗೆ ಬಿಡುಗಡೆಗೊಳಿಸುವ ಇರಾದೆಯಲ್ಲಿದೆ.

ಶೀಘ್ರವೇ ಮಾರುಕಟ್ಟೆಯಲ್ಲಿ ಕಾಲಿಡಲಿದೆ ಟಾಟಾ ಟಿಗೋರ್ ಇವಿ ಕಾರು..

ಭಾರತ ಸರ್ಕಾರವು ಸೆಪ್ಟೆಂಬರ್ ತಿಂಗಳಿನಲ್ಲಿ ಫೇಮ್ 2 ಸ್ಕೀಮ್ ಅನ್ನು ಪ್ರಾರಂಭಿಸಲಿದೆ. ಹೊಸ ಟಾಟಾ ಟಿಗೊರ್ ಎಲೆಕ್ಟ್ರಿಕ್ ವೆಹಿಕಲ್ ಕೂಡಾ ಫೇಮ್ 2 ಸ್ಕೀಮ್ ಶುರುವಾದ ನಂತರವೆ ಬಿಡುಗಡೆಗೊಳ್ಳಲಿದೆ ಎನ್ನಲಾಗಿದ್ದು, ಇದು ಬಿಡುಗಡೆಗೊಂಡಲ್ಲಿ ಫೇಮ್ 2 ಸ್ಕೀಮ್‍‍ನಲ್ಲಿ ಲಗ್ಗೆಯಿಟ್ಟ ಮೊದಲ ಎಲೆಕ್ಟ್ರಿಕ್ ಕಾರು ಎಂಬ ಗುರುತನ್ನು ಪಡೆದುಕೊಳ್ಳಲಿದೆ.

More from DriveSpark

Article Published On: Friday, August 31, 2018, 10:06 [IST]
English summary
Tata Tigor Electric Vehicle To Be Launched In India Soon; Details Revealed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+