ಒಂದು ಬಾರಿ ಚಾರ್ಜ್ ಮಾಡಿದ್ರೆ 1 ಸಾವಿರ ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಟ್ರಕ್...
ಹೆಚ್ಚಾಗುತ್ತಿರುವ ಮಾಲಿನ್ಯದಿಂದಾಗಿ ಬಹುತೇಕ ವಾಹನ ಉತ್ಪಾದಕರು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯತ್ತ ಮುಖ ಮಾಡುತ್ತಿದ್ದು, ಈ ನಡುವೆ ಟೆಸ್ಲಾ ಸಂಸ್ಥೆ ಸಿದ್ದಪಡಿಸಿರುವ ಹೊಸ ಬಗೆಯ ಎಲೆಕ್ಟ್ರಿಕ್ ಟ್ರಕ್‌ಗಳು ಭಾರೀ ಚರ್ಚೆಗೆ ಕಾರಣವಾಗಿವೆ.
ವಿಶ್ವಾದ್ಯಂತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಾಲಿನ್ಯದಿಂದಾಗಿ ಬಹುತೇಕ ವಾಹನ ಉತ್ಪಾದಕರು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯತ್ತ ಮುಖ ಮಾಡುತ್ತಿದ್ದು, ಈ ನಡುವೆ ಟೆಸ್ಲಾ ಸಂಸ್ಥೆ ಸಿದ್ದಪಡಿಸಿರುವ ಹೊಸ ಬಗೆಯ ಎಲೆಕ್ಟ್ರಿಕ್ ಟ್ರಕ್‌ಗಳು ಭಾರೀ ಚರ್ಚೆಗೆ ಕಾರಣವಾಗಿವೆ.

ಅಮೆರಿಕ ಪ್ರಸಿದ್ಧ ಎಲೆಕ್ಟ್ರಿಕ್ ಎಂಜಿನ್ ವಾಹನಗಳ ಉತ್ಪಾದನಾ ಸಂಸ್ಥೆಯಾದ ಟೆಸ್ಲಾ ಈ ಬಾರಿ ಸೆಮಿ ಟ್ರಕ್ ಮಾದರಿಗಳನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ಈ ಹಿನ್ನೆಲೆ ಹೊಸ ವಾಹನ ಕುರಿತಾದ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ವಾಣಿಜ್ಯ ಬಳಕೆಯ ವಾಹನಗಳಲ್ಲಿ ಹೊಸ ಕ್ರಾಂತಿ ಹುಟ್ಟುಹಾಕಲು ಈ ವಾಹನವನ್ನು ಅಭಿವೃದ್ದಿ ಮಾಡಲಾಗಿದ್ದು, ಹತ್ತು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ವಾಣಿಜ್ಯ ಚಟುವಟಿಕೆಗಳಿಗಾಗಿ ಸೆಮಿ ಟ್ರಕ್ ಮಾದರಿಗಳನ್ನು ಅಭಿವೃದ್ಧಿಗೊಳಿಸುತ್ತಿರುವ ಟೆಸ್ಲಾ ಸಂಸ್ಥೆಯು ಮೊದಲ ಬಾರಿಗೆ ಬೃಹತ್ ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ತೊಡಗಿದ್ದು, ಸ್ಪಾಟ್ ಟೆಸ್ಟಿಂಗ್ ವೇಳೆ ಹೊಸ ವಾಹನವು ಕಾಣಿಸಿಕೊಂಡಿದೆ.

ಸುಧಾರಿತ ತಂತ್ರಜ್ಞಾನ ಬಳಕೆಯೊಂದಿಗೆ ಟೆಸ್ಲಾ ಅಭಿವೃದ್ಧಿ ಮಾಡಿರುವ ಹೊಸ ಟ್ರಕ್‌ಗಳು ಆಟೋ ಉದ್ಯಮವನ್ನೇ ಬೆರಗುಗೊಳಿಸುವಂತೆ ಮಾಡಿದ್ದು, ಮೈಲೇಜ್ ವಿಚಾರವಾಗಿ ಪ್ರತಿಯೊಬ್ಬರಲ್ಲೂ ಕುತುಹೂಲ ಹುಟ್ಟುಹಾಕಿವೆ.

ಟೆಸ್ಲಾ ಅಭಿವೃದ್ಧಿ ಮಾಡಿರುವ ಸೆಮಿ ಟ್ರಕ್ ಮಾದರಿಯು ಸುಧಾರಿತ ಎಲೆಕ್ಟ್ರಿಕ್ ಎಂಜಿನ್ ಹೊಂದಿದ್ದು, ಒಂದು ಬಾರಿ ಚಾರ್ಜಿಂಗ್ ಮಾಡಿದಲ್ಲಿ ಬರೋಬ್ಬರಿ 966 ಕಿ.ಮಿ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿವೆ ಎನ್ನಲಾಗಿದೆ.

ಈ ಬಗ್ಗೆ ಟೆಸ್ಲಾ ಮುಖ್ಯಸ್ಥ ಇಯಾನ್ ಮಾಸ್ಕ್ ಕೂಡಾ ಟ್ವಿಟ್ ಮಾಡಿದ್ದು, ವಾಣಿಜ್ಯ ಉದ್ದೇಶಗಳಿಗಾಗಿ ಸದ್ಯದಲ್ಲೇ ಹೊಸ ಮಾದರಿಯ ಸೆಮಿ ಟ್ರಕ್ ಮಾದರಿಯೊಂದನ್ನು ಪರಿಚಯಿಸಲಾಗುತ್ತಿದ್ದು, ಹಿಂದೆಂದಿಗಿಂತಲೂ ಉತ್ತಮ ಮಾದರಿಯೊಂದನ್ನು ಪರಿಚಯಿಸಲಾಗುತ್ತಿದೆ" ಎಂದಿದ್ದಾರೆ.

ಇದಲ್ಲದೇ ಏರೋಡೈನಾಮಿಕ್ ವಿನ್ಯಾಸಗಳನ್ನು ಹೊಂದಿರುವ ಟೆಸ್ಲಾ ಸೆಮಿ ಟ್ರಕ್‌ಗಳು 2019ರ ವೇಳೆಗೆ ಮಾರುಕಟ್ಟೆಗೆ ಪ್ರವೇಶಿಸುವ ಬಗ್ಗೆ ಸುಳಿವು ಸಿಕ್ಕಿದ್ದು, ಪ್ರಸ್ತುತ ಟ್ರಕ್ ಮಾದರಿಗಳಿಂತ ಕೈಗೆಟುಕುವ ದರಗಳಲ್ಲಿ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಇನ್ನು ಟೆಸ್ಲಾ ಸಂಸ್ಥೆ ಸೆಮಿ ಟ್ರಕ್‌ಗಳು 36 ಟನ್ ತೂಕದ ಸರಕು ಸಾಗಿಸುಬಹುದಾದ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ ವಿಶೇಷ ಅಂದ್ರೆ ಸೂಪರ್ ಕಾರುಗಳು ಮಾದರಿಯಲ್ಲೇ ಪೂರ್ಣ ಪ್ರಮಾಣದ ಸರಕು ಸಾಗಿಸುವಾಗ ಕೇವಲ 20 ಸೇಕೆಂಡುಗಳಲ್ಲಿ 100 ಕಿ.ಮೀ ವೇಗ ಪಡೆಯಬಲ್ಲದು.

ಟೆಸ್ಲಾ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸೆಮಿ ಟ್ರಕ್ ಮಾದರಿಯಲ್ಲೇ ಎರಡು ಆಯ್ಕೆಗಳನ್ನು ನೀಡುತ್ತಿದ್ದು, ಉನ್ನತ ಮಾದರಿಯು ಪ್ರತಿ ಚಾರ್ಜ್‌ಗೆ 966ಕಿಮಿ ಮೈಲೇಜ್ ನೀಡಿದ್ರೆ ಎರಡನೇ ಮಾದರಿಯು ಪ್ರತಿ ಚಾರ್ಜ್‌ಗೆ 483ಕಿಮಿ ಮೈಲೇಜ್ ವಿಶೇಷತೆ ಹೊಂದಿದೆ.

ಟ್ರಕ್‌ಗಳು ಬೆಲೆಗಳು
ಉನ್ನತ ಮಾದರಿ(966 ಕಿ.ಮೀ) - 1,80,000 ಡಾಲರ್ (ರೂ.1.21 ಕೋಟಿ)
ಎರಡನೇ ಮಾದರಿ( 483 ಕಿ.ಮೀ)- 1,50,000 ಡಾಲರ್ (ರೂ.1.01 ಕೋಟಿ)

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಪ್ರಥಮ ಬಾರಿಗೆ ಟೆಸ್ಲಾ ಸಂಸ್ಥೆಯು ಸೆಮಿ ಟ್ರಕ್ ಮಾದರಿಯೊಂದನ್ನು ಬಿಡುಗಡೆಗೊಳಿಸುತ್ತಿದ್ದು, ಮುಂಬರುವ 2019ರ ಜನವರಿ ಅಂತ್ಯಕ್ಕೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಾಗುವ ನೀರಿಕ್ಷೆಯಿದೆ.


Click it and Unblock the Notifications








