ಪ್ರೀಮಿಯಂ ಫೀಚರ್ಸ್ ಹೊತ್ತು ಬರಲಿವೆ ಟಾಟಾ ಸಂಸ್ಥೆಯ ಈ ಹೊಸ ಕಾರುಗಳು
ಜಯಂ ಟಾಟಾ ಪರ್ಫಾರ್ಮೆನ್ಸ್ (ಜೆಟಿಪಿ) ಹೊಸ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಕಾರುಗಳನ್ನು ಇಂದು ಅಧಿಕೃತವಾಗಿ ಬಹಿರಂಗಗೊಳಿಸಿದ್ದು, ಇದೀಗ ಈ ಕಾರುಗಳ ತಾಂತ್ರಿಕ ವಿವರಗಳೂ ಸಹ ಬಹಿರಂಗಗೊಂಡಿದೆ. ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೊರ್ ಜೆಟಿಪಿಯು ಬಹುನಿರೀಕ್ಷಿತ ದೇಶಿಯ ಮಾರುಕಟ್ಟೆಯಲ್ಲಿ ಕಾರುಗಳಾಗಿವೆ.

ಮೊದಲ ಬಾರಿಗೆ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೊರ್ ಜೆಟಿಪಿ ಕಾರುಗಳು ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್‌ಪೋ ಮೇಳದಲ್ಲಿ ಕಾರುಗಳ ಪರಿಕಲ್ಪನೆಯನ್ನು ಪ್ರದರ್ಶನಗೊಳಿಸಲಾಗಿದ್ದು, ಮಾರುತಿ ಸುಜುಕಿ ಸಂಸ್ಥೆಯ ಜನಪ್ರಿಯ ಬಲೆನೊ ಕಾರುಗಳಿಗೆ ಪೈಪೋಟಿಯಾಗಿ ಈ ಕಾರುಗಳನ್ನು ಸಜ್ಜುಗೊಳಿಸಲಾಗಿದೆ.

ಟಾಟಾ ಟಿಗೊರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಕಾರುಗಳು ಅತ್ಯಂತ ಪ್ರಭಾವಶಾಲಿಯಾದ ಎಂಜಿನ್ ಅನ್ನು ಪಡೆಯಲಿದ್ದು, ಈಗಾಗಲೇ ಹಲವಾರು ಬಾರಿ ಭಾರತೀಯ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ. ಇದೀಗ ಸಂಸ್ಥೆಯು ಈ ಕಾರುಗಳನ್ನು ಬಹಿರಂಗಗೊಳಿಸಿದೆ.

ಟಾಟಾ ಟಿಗೊರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಕಾರುಗಳು ಈ ಬಾರಿ ಹೊಸ ಅಪ್ಗ್ರೇಡ್‍ಗಳನ್ನು ಪಡೆದುಕೊಂಡಿದ್ದು, ಆಕ್ರಮಣಕಾರಿ ವಿನ್ಯಾಸವನ್ನು ಪಡೆದುಕೊಂಡಿದೆ. ಕಾರಿನ ಮುಂಭಾಗದಲ್ಲಿ ಹೊಸ ಡಿಸೈನ್‍ನಿಂದ ಕೂಡಿದ ಅಗಲವಾದ ಲೋವರ್ ಗ್ರಿಲ್ ಹಾಗು ಬಂಪರ್ ಅನ್ನು ಅಳವಡಿಸಲಾಗಿದೆ.

ಡ್ಯುಯಲ್ ವೇಂಬರ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ ಮತ್ತು ರೇಡಿಯೇಟರ್ ಗ್ರಿಲ್ ಅನ್ನು ಬಾನೆಟ್‍ನ ಮೇಲೆ ಅಳವಡಿಸುವ ಮೂಳದ ಮುಂಭಾಗದ ವಿನ್ಯಾಸವು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಕಾರಿನ ಸೈಡ್‍ನಲ್ಲಿ ಡೈಮಂಡ್ ಕಟ್ ಬ್ಲಾಕ್ ಮತ್ತು ಸಿಲ್ವರ್ 15 ಇಂಚಿನ ಅಲಯ್ ಚಕ್ರಗಳನ್ನು ನೀಡಲಾಗಿದೆ.

ಇನ್ನು ಕಾರಿನ ರಿಯರ್ ವ್ಯೂ ಮಿರರ್ಸ್ ಕಾರಿನ ದೇಹ ಬಣ್ಣವನ್ನು ಪಡೆದಿದ್ದು, ರೂಫ್ ಮತ್ತು ರಿಯರ್ ಸ್ಪಾಯ್ಲರ್‍ಗಳು ಗ್ಲಾಸಿ ಬ್ಲಾಕ್ ಬಣ್ಣದಿಂದ ಸಜ್ಜುಗೊಂಡಿದೆ. ಕಾರಿನ ಹಿಂಭಾಗದಲ್ಲಿ ಟೈಲ್ ಲ್ಯಾಂಪ್ ಸಿಗ್ನೇಚರ್ ಎಲ್ಇಡಿ ಲೈಟ್‍ಗಳು ಮತ್ತು ಜೆಟಿಪಿ ಬ್ಯಾಡ್ಜಿಂಗ್ ಹಾಗು ಪೂರ್ಣ ಕಾರ್ಯಭರಿತ ಟ್ವಿನ್ ಬ್ಯಾರೆಲ್ ಎಕ್ಸಾಸ್ಟ್ ಅನ್ನು ಹೊಂದಿದೆ.

ಟಿಯಾಗೊ ಜೆಟಿಪಿ ಹಾಗು ಟಿಗೊರ್ ಜೆಟಿಪಿ ಕಾರಿನ ಒಳಭಾಗದಲ್ಲಿ ಸ್ಪೋರ್ಟಿ ಬ್ಲಾಕ್ ಮತ್ತು ಕೆಂಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಏಸಿ ವೆಂಟ್ಸ್ ಗಳನ್ನು ಸಹ ಕೆಂಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಸ್ಟೀರಿಂಗ್ ವ್ಹೀಲ್‍ಗೆ ಕಪ್ಪು ಬಣ್ಣದ ಲೆಧರ್‍ನಿಂದ ಮತ್ತು ಸೀಟ್‍ಗಳಿಗೆ ಕೆಂಪು ಬಣ್ಣಗಳನ್ನು ನೀಡುವುದರ ಮೂಲದ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಇದಲ್ಲದೇ ಅಲ್ಯುಮೀನಿಯಮ್ ಕಂಟೋಲ್ ಪೆಡಲ್‍ಗಳನ್ನು ನೀಡಲಗಿದ್ದು, ಈ ಎರಡು ಕಾರುಗಳು ಪ್ರೀಮಿಯಂ 8 ಸ್ಪೀಕರ್ ಹರ್ಮಾನ್ ಮ್ಯೂಸಿಕ್ ಸಿಸ್ಟಂ ಹಾಗು ಕನೆಕ್ಟ್ ನೆಕ್ಸ್ಟ್, ಆಪಲ್ ಕಾರ್‍ಪ್ಲೇ ಮತ್ತು ಅಆಂಡ್ರಾಯ್ಡ್ ಆಟೋ ಎಂಬ ವೈಶಿಷ್ಟ್ಯತೆಗಳನ್ನು ನೀಡಲಾಗಿದೆ.

ಈ ಬಾರಿ ಕಾರುಗಳಲ್ಲಿ ದೊಡ್ಡ ಬದಲಾವಣೆ ಎಂದರೆ ಅವು ಎಂಜಿನ್. ಏಕೆಂದರೆ ಈ ಬಾರಿ ನೀಡಲಾಗಿರುವ ಹೆಚ್ಚು ಸಾಮರ್ಥ್ಯದ 1.2 ಲೀಟರ್ ರೆವೊಟ್ರಾನ್ ಟರ್ಬೋಚಾರ್ಜ್ಡ್ ಎಂಜಿನ್‍ಗಳು ಹೆಚ್ಚು ಸ್ಪೀಡ್ ಅನ್ನು ಒದಗಿಸಬಲ್ಲವು.

ಟಾಟಾ ಟಿಯಾಗೊ ಜೆಟಿಪಿ ಹಾಗು ಟಿಗೊರ್ ಜೆಟಿಪಿ ಕಾರುಗಳಲ್ಲಿ ಅಳವಡಿಸಲಾಗಿರುವ 1.2 ರೆವೊಟ್ರಾನ್ ಪೆಟ್ರೋಲ್ ಎಂಜಿನ್‍ಗಳು 112ಬಿಹೆಚ್‍ಪಿ ಮತ್ತು 150ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.


Click it and Unblock the Notifications








