ಭಾರತದಲ್ಲಿ ರೂ. 10 ಲಕ್ಷದೊಳಗೆ ಖರೀದಿ ಮಾಡಬಹುದಾದ ಉತ್ತಮ ಸುರಕ್ಷೆಯುಳ್ಳ ಕಾರುಗಳಿವು..!

ಅದೊಂದು ಕಾಲವಿತ್ತು. ಕಾರು ಖರೀದಿಸುವ ಬಹುತೇಕ ಗ್ರಾಹಕರು ಅಗ್ಗದ ಬೆಲೆಯ ಕಾರುಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಆದ್ರೆ ಇದೀಗ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯ ಕಾರುಗಳಿಂತ ಉತ್ತಮ ಸುರಕ್ಷೆತೆಯುಳ್ಳ ಕಾರು ಖರೀದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಡ್ರೈವ್‌ಸ್ಪಾರ್ಕ್ ತಂಡವು ರೂ.10 ಲಕ್ಷ ಬಜೆಟ್ ಖರೀದಿ ಮಾಡಬಹುದಾದ ಉತ್ತಮ ಕಾರುಗಳ ಪಟ್ಟಿಯನ್ನು ಸಿದ್ದಗೊಳಿಸಿದೆ.

ಭಾರತದಲ್ಲಿ ರೂ. 10 ಲಕ್ಷದೊಳಗೆ ಖರೀದಿ ಮಾಡಬಹುದಾದ ಉತ್ತಮ ಸುರಕ್ಷೆಯುಳ್ಳು ಕಾರುಗಳಿವು..!

ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಸುರಕ್ಷಾ ಸೌಲಭ್ಯಗಳನ್ನು ಹೊಂದಿರುವ ಅನೇಕ ಕಾರು ಮಾದರಿಗಳು ಮಾರಾಟಕ್ಕೆ ಲಭ್ಯವಿದ್ದರೂ ಸಹ ದುಬಾರಿ ಬೆಲೆಗಳಿಂದಾಗಿ ಮಧ್ಯಮ ವರ್ಗದ ಗ್ರಾಹಕರು ಅವುಗಳನ್ನು ಖರೀದಿ ಮಾಡುವುದು ಕಷ್ಟಸಾಧ್ಯ. ಹೀಗಾಗಿ ರೂ. 10 ಲಕ್ಷದೊಳಗೆ ಖರೀದಿ ಮಾಡಬಹುದಾದ ಉತ್ತಮ ಸುರಕ್ಷಾ ಸೌಲಭ್ಯವನ್ನು ಹೊಂದಿರುವ ಕಾರುಗಳ ಮಾಹಿತಿ ಇಲ್ಲಿ ನೀಡಲಾಗಿದ್ದು, ಇವು ಐಷಾರಾಮಿ ಕಾರುಗಳಲ್ಲಿರುವ ಸೌಲಭ್ಯಗಳಿಂತ ಕಡಿಮೆ ಎನ್ನಿಸಿದರೂ ವಾಹನ ಚಾಲನೆ ವೇಳೆ ಗರಿಷ್ಠ ಸುರಕ್ಷೆ ನೀಡಬಲ್ಲವು ಎನ್ನುವುದು ನಮ್ಮ ಅಭಿಪ್ರಾಯ.

ಭಾರತದಲ್ಲಿ ರೂ. 10 ಲಕ್ಷದೊಳಗೆ ಖರೀದಿ ಮಾಡಬಹುದಾದ ಉತ್ತಮ ಸುರಕ್ಷೆಯುಳ್ಳು ಕಾರುಗಳಿವು..!

ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಸುರಕ್ಷಾ ವಿಚಾರವಾಗಿ 4 ಸ್ಟಾರ್ ರೇಟಿಂಗ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ವಿಟಾರಾ ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿ ಕಾರು ಸದ್ಯ ದೇಶದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 7.58 ಲಕ್ಷಕ್ಕೆ ಹಾಗೂ ಟಾಪ್ ಎಂಡ್ ಮಾದರಿಯು ರೂ. 10.55 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ.

ಭಾರತದಲ್ಲಿ ರೂ. 10 ಲಕ್ಷದೊಳಗೆ ಖರೀದಿ ಮಾಡಬಹುದಾದ ಉತ್ತಮ ಸುರಕ್ಷೆಯುಳ್ಳು ಕಾರುಗಳಿವು..!

1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಬ್ರೆಝಾ ಕಾರುಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಪಡೆದಿದ್ದು, 89-ಬಿಎಚ್‌ಪಿ ಮತ್ತು 200-ಎನ್ಎಂ ಟಾರ್ಕ್‌ನೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿದೆ.

ಭಾರತದಲ್ಲಿ ರೂ. 10 ಲಕ್ಷದೊಳಗೆ ಖರೀದಿ ಮಾಡಬಹುದಾದ ಉತ್ತಮ ಸುರಕ್ಷೆಯುಳ್ಳು ಕಾರುಗಳಿವು..!

ರೆನಾಲ್ಟ್ ಡಸ್ಟರ್

ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ವಿಟಾರಾ ಬ್ರೆಝಾ ನಂತರ ಅತಿಹೆಚ್ಚು ಬೇಡಿಕೆ ಹೊಂದಿರುವುದೇ ರೆನಾಲ್ಟ್ ಡಸ್ಟರ್. ಕಳೆದ ಬಾರಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 3 ಸ್ಟಾರ್ ಸೆಫ್ಟಿ ರೇಟಿಂಗ್ ಪಡೆದಿದ್ದ ಡಸ್ಟರ್ ಕಾರುಗಳು ಪೆಟ್ರೋಲ್ ಮತ್ತು ಡಿಸೇಲ್ ವರ್ಷನ್‌ಗಳಲ್ಲಿ ಖರೀದಿಗೆ ಲಭ್ಯವಿವೆ.

ಭಾರತದಲ್ಲಿ ರೂ. 10 ಲಕ್ಷದೊಳಗೆ ಖರೀದಿ ಮಾಡಬಹುದಾದ ಉತ್ತಮ ಸುರಕ್ಷೆಯುಳ್ಳು ಕಾರುಗಳಿವು..!

1.5-ಲೀಟರ್ ಡೀಸೆಲ್ ಎಂಜಿನ್ ಮತ್ತು 1.6-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಡಸ್ಟರ್ ಕಾರುಗಳು ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಪೆಟ್ರೋಲ್ ಆವೃತ್ತಿಗೆ ರೂ. 7.59 ಲಕ್ಷ ಮತ್ತು ಡೀಸೆಲ್ ಆವೃತ್ತಿಗೆ 8.95 ಲಕ್ಷ ಬೆಲೆ ಹೊಂದಿವೆ.

ಭಾರತದಲ್ಲಿ ರೂ. 10 ಲಕ್ಷದೊಳಗೆ ಖರೀದಿ ಮಾಡಬಹುದಾದ ಉತ್ತಮ ಸುರಕ್ಷೆಯುಳ್ಳು ಕಾರುಗಳಿವು..!

ಇಟಿಯಾಸ್ ಲಿವಾ

ಟೊಯೊಟಾ ಸಂಸ್ಥೆಯು ತನ್ನ ಹೊಸ ಕಾರು ಉತ್ಪನ್ನಗಳನ್ನು ಪ್ರಮುಖ ಮೂರು ತತ್ವದಡಿ ನಿರ್ಮಾಣಗೊಳಿಸುತ್ತಿದ್ದು, ವಿನ್ಯಾಸ, ಗುಣಮಟ್ಟ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಹೊಸ ಉತ್ಪನ್ನಗಳ ಅಭಿವೃದ್ಧಿಗೆ ಬದ್ಧವಾಗಿದೆ. ಹೀಗಾಗಿ ಖರೀದಿಗೆ ಯೋಗ್ಯ ಎನ್ನಿಸುವ ಟೊಯೊಟಾ ಉತ್ಪನ್ನಗಳಲ್ಲಿ ಇದೀಗ ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್ ಹೊಸ ಸೇರ್ಪಡೆಯಾಗಿದೆ.

ಭಾರತದಲ್ಲಿ ರೂ. 10 ಲಕ್ಷದೊಳಗೆ ಖರೀದಿ ಮಾಡಬಹುದಾದ ಉತ್ತಮ ಸುರಕ್ಷೆಯುಳ್ಳು ಕಾರುಗಳಿವು..!

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಇಟಿಯಾಸ್ ಲಿವಾ ಕಾರುಗಳು 4 ಸ್ಟಾರ್ ಸುರಕ್ಷಾ ರೇಟಿಂಗ್ ತನ್ನದಾಗಿಸಿಕೊಂಡಿದ್ದು, ಕಾರಿನ ಬೆಲೆಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಪೆಟ್ರೋಲ್ ಮಾದರಿಯನ್ನು ರೂ.6.50 ಲಕ್ಷಕ್ಕೆ ಮತ್ತು ಡೀಸೆಲ್ ಮಾದರಿಯನ್ನು ರೂ.7.65 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.

ಭಾರತದಲ್ಲಿ ರೂ. 10 ಲಕ್ಷದೊಳಗೆ ಖರೀದಿ ಮಾಡಬಹುದಾದ ಉತ್ತಮ ಸುರಕ್ಷೆಯುಳ್ಳು ಕಾರುಗಳಿವು..!

ಫೋರ್ಡ್ ಆಸ್ಪೈರ್

ಕಂಪ್ಯಾಕ್ಟ್ ಸೆಡಾನ್ ಕಾರು ಮಾದರಿಗಳಲ್ಲಿ ಅತ್ಯುತ್ತಮ ಬೇಡಿಕೆ ಹೊಂದಿರುವ ಫೋರ್ಡ್ ಆಸ್ಪೈರ್ ಕಾರುಗಳು ಸುರಕ್ಷತೆಯಲ್ಲಿ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, 3 ಸ್ಟಾರ್ ಸೆಫ್ಟಿ ರೇಟಿಂಗ್‌ನೊಂದಿಗೆ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಮತ್ತು ಇಬಿಡಿ ಸ್ಯಾಂಡರ್ಡ್ ಆಗಿ ದೊರೆಯಲಿದೆ.

ಭಾರತದಲ್ಲಿ ರೂ. 10 ಲಕ್ಷದೊಳಗೆ ಖರೀದಿ ಮಾಡಬಹುದಾದ ಉತ್ತಮ ಸುರಕ್ಷೆಯುಳ್ಳು ಕಾರುಗಳಿವು..!

1.2-ಲೀಟರ್ ಡ್ರ್ಯಾಗನ್ ಸೀರಿಸ್ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಟಿಡಿಸಿಐ ಡಿಸೇಲ್ ಎಂಜಿನ್ ಹೊಂದಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಪೆಟ್ರೋಲ್ ವರ್ಷನ್ ರೂ. 5.55 ಲಕ್ಷಕ್ಕೆ ಮತ್ತು ಡಿಸೇಲ್ ವರ್ಷನ್ ರೂ. 6.45 ಲಕ್ಷಕ್ಕೆ ಖರೀದಿಗೆ ಲಭ್ಯವಿವೆ.

ಭಾರತದಲ್ಲಿ ರೂ. 10 ಲಕ್ಷದೊಳಗೆ ಖರೀದಿ ಮಾಡಬಹುದಾದ ಉತ್ತಮ ಸುರಕ್ಷೆಯುಳ್ಳು ಕಾರುಗಳಿವು..!

ಫೋಕ್ಸ್‌ವ್ಯಾಗನ್ ಪೊಲೋ

ಸದ್ಯ ಮಾರುಕಟ್ಟೆಯಲ್ಲಿರುವ 1.2 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಫೋಕ್ಸ್‌ವ್ಯಾಗನ್ ಸಂಸ್ಥೆಯು ಸ್ಥಗಿತಗೊಳಿಸಿದ್ದು, ಇದರ ಬದಲಾಗಿ ಅತಿ ಹೆಚ್ಚು ಮೈಲೇಜ್ ನೀಡಬಲ್ಲ 1 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯನ್ನು ಬಿಡುಗಡೆ ಮಾಡಿದೆ. ಇದು ಸುರಕ್ಷತೆಯಲ್ಲೂ ಉತ್ತಮ ಸೌಲಭ್ಯಗಳನ್ನು ಹೊಂದಿದೆ ಅಂದ್ರೆ ತಪ್ಪಾಗುವುದಿಲ್ಲ.

MOST READ: ಬಿಡುಗಡೆಗೆ ಸಿದ್ಧಗೊಂಡಿರುವ ಜಾವಾ ಬೈಕ್‍ಗಳ ಬೆಲೆ ಮತ್ತು ಬುಕ್ಕಿಂಗ್ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಭಾರತದಲ್ಲಿ ರೂ. 10 ಲಕ್ಷದೊಳಗೆ ಖರೀದಿ ಮಾಡಬಹುದಾದ ಉತ್ತಮ ಸುರಕ್ಷೆಯುಳ್ಳು ಕಾರುಗಳಿವು..!

ಹೊಸ ಕಾರು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಪ್ರತಿಲೀಟರ್ ಪೆಟ್ರೋಲ್‌ಗೆ 18.78 ಕಿಮಿ ಮೈಲೇಜ್ ಹಿಂದಿರುಗಿಸಲಿದ್ದು, ಈ ಕಾರಿನ ಆರಂಭಿಕ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ 5.63 ಲಕ್ಷಕ್ಕೆ ಲಭ್ಯವಿವೆ.

ಭಾರತದಲ್ಲಿ ರೂ. 10 ಲಕ್ಷದೊಳಗೆ ಖರೀದಿ ಮಾಡಬಹುದಾದ ಉತ್ತಮ ಸುರಕ್ಷೆಯುಳ್ಳು ಕಾರುಗಳಿವು..!

ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್

ಕ್ರೇಟಾ ಫೇಸ್‌‌ಲಿಫ್ಟ್ ಕಾರುಗಳು ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿದ್ದು, ಇವುಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಆವೃತ್ತಿಯಲ್ಲಿ 6 ವೆರಿಯೆಂಟ್‌ಗಳು ಮತ್ತು ಡೀಸೆಲ್ ಆವೃತ್ತಿಯಲ್ಲಿ 7 ವೆರಿಯೆಂಟ್‌ಗಳನ್ನು ಪರಿಚಯಿಸಲಾಗಿದೆ.

ಭಾರತದಲ್ಲಿ ರೂ. 10 ಲಕ್ಷದೊಳಗೆ ಖರೀದಿ ಮಾಡಬಹುದಾದ ಉತ್ತಮ ಸುರಕ್ಷೆಯುಳ್ಳು ಕಾರುಗಳಿವು..!

ಸುರಕ್ಷತೆಯಲ್ಲಿ 4 ಸ್ಟಾರ್ ಪಡೆದುಕೊಂಡಿರುವ ಕ್ರೇಟಾ ಕಾರುಗಳಲ್ಲಿ 4 ಏರ್‌ಬ್ಯಾಗ್‌ಗಳು, ಎಬಿಎಸ್, ಇಬಿಡಿ ಸೇರಿದಂತೆ ಹಲವು ಕ್ಲಾಸ್ ಲೀಡಿಂಗ್ ಸೌಲಭ್ಯಗಳನ್ನು ಹೊಂದಿದ್ದು, ಆರಂಭಿಕವಾಗಿ ರೂ.9.43 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.15. 03 ಲಕ್ಷಕ್ಕೆ ಖರೀದಿಸಬಹುದಾಗಿದೆ.

MOST READ: ಚಾಲಕರೇ ಎಚ್ಚರ - ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ..!!

ಭಾರತದಲ್ಲಿ ರೂ. 10 ಲಕ್ಷದೊಳಗೆ ಖರೀದಿ ಮಾಡಬಹುದಾದ ಉತ್ತಮ ಸುರಕ್ಷೆಯುಳ್ಳು ಕಾರುಗಳಿವು..!

ಮಹೀಂದ್ರಾ ಎಕ್ಸ್‌ಯುವಿ

ಪ್ರೀಮಿಯಂ ಸೌಲಭ್ಯಗಳೊಂದಿಗೆ ಈ ಹಿಂದೆ 2011ರಲ್ಲೇ ಬಿಡುಗಡೆಯಾಗಿರುವ ಮಹೀಂದ್ರಾ ಎಕ್ಸ್‌ಯುವಿ 500 ಕಾರುಗಳು ಎಸ್‌ಯುವಿ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆ ಹೊಂದಿದ್ದು, 2016ರಲ್ಲಿ ಎರಡನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮರುಬಿಡುಗಡೆಯಾಗಿರುವುದಲ್ಲದೇ ಕಳೆದ ಮೇ ನಲ್ಲಿ ಫೇಸ್‌ಲಿಫ್ಟ್ ಆವೃತ್ತಿ ಕೂಡಾ ಮಾರಾಟಗೊಳ್ಳುತ್ತಿದೆ.

ಭಾರತದಲ್ಲಿ ರೂ. 10 ಲಕ್ಷದೊಳಗೆ ಖರೀದಿ ಮಾಡಬಹುದಾದ ಉತ್ತಮ ಸುರಕ್ಷೆಯುಳ್ಳು ಕಾರುಗಳಿವು..!

ಸುರಕ್ಷತೆಯಲ್ಲಿ 4 ಸ್ಟಾರ್ ರೇಟಿಂಗ್ ಹೊಂದಿರುವ ಎಕ್ಸ್‌ಯುವಿ 500 ಕಾರುಗಳು ಆರಂಭಿಕವಾಗಿ 12.39 ಲಕ್ಷ ಬೆಲೆ ಹೊಂದಿದ್ದರೂ ಸಹ ಸುರಕ್ಷತೆ ಮತ್ತು ಪ್ರೀಮಿಯಂ ಸೌಲಭ್ಯಗಳಿಂದಾಗಿ ಖರೀದಿಗೆ ಉತ್ತಮ ಮಾದರಿಯಾಗಿದ್ದು, 2.2-ಲೀಟರ್ ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಪಡೆದಿದೆ.

Most Read Articles

Kannada
English summary
Top safest cars in India you can buy right now for under Rs 10 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X