ಟಾಪ್ 10ರ ಕಾರು ಮಾರಾಟದಲ್ಲಿ ಬರೋಬ್ಬರಿ 7 ಮಾರುತಿ ಸುಜುಕಿ ಕಾರುಗಳದ್ದೆ ದರ್ಬಾರ್..!

ದೇಶಿ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಖರೀದಿ ಭರಾಟೆ ಜೋರಾಗಿದ್ದು, 2018-19 ಹಣಕಾಸು ವರ್ಷದ ಅವಧಿಯಲ್ಲೂ ಕಾರು ಉತ್ಪಾದನಾ ಸಂಸ್ಥೆಗಳು ಉತ್ತಮ ಮುನ್ನಡೆ ಕಾಯ್ದುಕೊಂಡಿವೆ. ಇದರಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಕಾರು ಮಾರಾಟದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಕಳೆದ ತಿಂಗಳು ವಾಹನ ಮಾರಾಟಕ್ಕೆ ಹೋಲಿಕೆ ಮಾಡಿದ್ದಲ್ಲಿ ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ.

ಟಾಪ್ 10ರ ಕಾರು ಮಾರಾಟದಲ್ಲಿ ಬರೋಬ್ಬರಿ 7 ಮಾರುತಿ ಸುಜುಕಿ ಕಾರುಗಳದ್ದೆ ದರ್ಬಾರ್..!

ಸದ್ಯ ಭಾರತದಲ್ಲಿ ಹಲವಾರು ವಾಹನ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಪ್ಯಾಸೆಂಜರ್ ವೆಹಿಕಲ್, ಕಮರ್ಷಿಲ್ ವೆಹಿಕಲ್ ಮತ್ತು ತ್ರಿ ಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ಮಾರುತಿ ಸುಜುಕಿ ಮತ್ತೆ ಅಗ್ರಸ್ಥಾನವನ್ನು ತನ್ನದಾಸಿಕೊಂಡಿರುವುದಲ್ಲದೇ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಏಳು ಕಾರು ಮಾದರಿಗಳು ಸ್ಥಾನಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಗಾದ್ರೆ ಯಾವ ಕಾರು ಎಷ್ಟು ಪ್ರಮಾಣದಲ್ಲಿ ಮಾರಾಟಗೊಂಡಿವೆ ಎಂದು ತಿಳಿಯಲು ಮುಂದೆ ಓದಿ.

ಟಾಪ್ 10ರ ಕಾರು ಮಾರಾಟದಲ್ಲಿ ಬರೋಬ್ಬರಿ 7 ಮಾರುತಿ ಸುಜುಕಿ ಕಾರುಗಳದ್ದೆ ದರ್ಬಾರ್..!

01. ಮಾರುತಿ ಸುಜುಕಿ ಆಲ್ಟೋ

ಬಿಡುಗಡೆಗೊಂಡ ನಂತರ ಹಲವು ವರ್ಷಗಳ ತನಕ ಒಂದೇ ರೀತಿಯಾದ ಬೇಡಿಕೆಯನ್ನು ಉಳಿಸಿಕೊಂಡ ಕೆಲವೇ ಕೆಲವು ಕಾರು ಮಾದರಿಗಳಲ್ಲಿ ಆಲ್ಟೋ ಕಾರು ಸರಣಿ ಸಹ ಒಂದು. ಆಲ್ಟೋ 800 ಮತ್ತು ಆಲ್ಟೋ ಕೆ10 ಎಂಬ ಮಾದರಿಯಲ್ಲಿ ಖರೀದಿಗೆ ಲಭ್ಯವಿರುವ ಆಲ್ಟೋ ಕಾರುಗಳು ಅಕ್ಟೋಬರ್ ಅವಧಿಯಲ್ಲಿ ಬರೋಬ್ಬರಿ 22,180 ಕಾರುಗಳು ಮಾರಾಟವಾಗುವ ಮೂಲಕ ಮೊದಲ ಸ್ಥಾನಕ್ಕೇರಿದೆ.

ಟಾಪ್ 10ರ ಕಾರು ಮಾರಾಟದಲ್ಲಿ ಬರೋಬ್ಬರಿ 7 ಮಾರುತಿ ಸುಜುಕಿ ಕಾರುಗಳದ್ದೆ ದರ್ಬಾರ್..!

02. ಮಾರುತಿ ಬಲೆನೊ

2016ರಲ್ಲಿ ಮೊದಲ ಬಾರಿಗೆ ಬಿಡುಗೊಂಡ ಬಲೆನೊ ಕಾರುಗಳು ಸಹ ಅತ್ಯುತ್ತಮ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಹೊಂದಿರುವ ಬಲೆನೊ ಕಾರುಗಳು ಪ್ರಿಮಿಯಂ ವೈಶಿಷ್ಟ್ಯತೆಗಳೊಂದಿಗೆ ಭಾರೀ ಸದ್ದು ಮಾಡುತ್ತಿವೆ. ಹೀಗಾಗಿಯೇ ಕಾರು ಮಾರಾಟದಲ್ಲಿ ಈ ಬಾರಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿರುವ ಬಲೆನೊ ಕಾರುಗಳು ಅಕ್ಟೋಬರ್ ಅವಧಿಯಲ್ಲಿ ಬರೋಬ್ಬರಿ 18,657 ಕಾರುಗಳು ಮಾರಾಟಗೊಂಡಿವೆ.

ಟಾಪ್ 10ರ ಕಾರು ಮಾರಾಟದಲ್ಲಿ ಬರೋಬ್ಬರಿ 7 ಮಾರುತಿ ಸುಜುಕಿ ಕಾರುಗಳದ್ದೆ ದರ್ಬಾರ್..!

03. ಮಾರುತಿ ಡಿಜೈರ್

ಕಂಪ್ಯಾಕ್ಟ್ ಸೆಡಾನ್ ಮಾದರಿಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸುತ್ತಿರುವ ಡಿಜೈರ್ ಕಾರುಗಳು ಕಳೆದ 8 ತಿಂಗಳಿನಿಂದ ನಂ.1 ಸ್ಥಾನದಲ್ಲಿದ್ದು, ಇದೇ ಮೊದಲ ಬಾರಿಗೆ 3ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಹೋಂಡಾ ನ್ಯೂ ಅಮೇಜ್ ಕಾರುಗಳು ಉತ್ತಮ ಪೈಪೋಟಿ ನೀಡುತ್ತಿದ್ದು, ಅಕ್ಟೋಬರ್ ಅವಧಿಯಲ್ಲಿ 17,404 ಕಾರುಗಳು ಮಾರಾಟಗೊಂಡಿವೆ.

ಟಾಪ್ 10ರ ಕಾರು ಮಾರಾಟದಲ್ಲಿ ಬರೋಬ್ಬರಿ 7 ಮಾರುತಿ ಸುಜುಕಿ ಕಾರುಗಳದ್ದೆ ದರ್ಬಾರ್..!

04. ಮಾರುತಿ ಸ್ವಿಫ್ಟ್

ಹ್ಯಾಚ್‌ಬ್ಯಾಕ್ ಪ್ರಿಯರ ಹಾಟ್ ಫೇವರಿಟ್ ಎಂದೇ ಜನಪ್ರಿಯವಾಗಿರುವ ಸ್ವಿಫ್ಟ್ ಕಾರುಗಳು ಸಹ ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ 4ನೇ ಅಗ್ರಸ್ಥಾನವನ್ನು ಹೊಂದಿದ್ದು, ಬರೋಬ್ಬರಿ 17,215 ಕಾರುಗಳು ಮಾರಾಟಗೊಂಡಿವೆ. ನ್ಯೂ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಸ್ವಿಫ್ಟ್ ಕಾರುಗಳು 2018ರ ಎಕ್ಸ್‌ಪೋದಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದ್ದವು.

ಟಾಪ್ 10ರ ಕಾರು ಮಾರಾಟದಲ್ಲಿ ಬರೋಬ್ಬರಿ 7 ಮಾರುತಿ ಸುಜುಕಿ ಕಾರುಗಳದ್ದೆ ದರ್ಬಾರ್..!

05. ಮಾರುತಿ ವಿಟಾರಾ ಬ್ರೆಝಾ

ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಭಾರೀ ಜನಪ್ರಿಯತೆ ಸಾಧಿಸಿರುವ ಬ್ರೇಝಾ ಕಾರುಗಳು ಕಳೆದ ಮೇ ತಿಂಗಳಿನಲ್ಲಿ ಬಿಡುಗಡೆಯಾದ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಗಳಿಂದಾಗಿ ಮಾರಾಟಕ್ಕೆ ಪೂರಕವಾಗಿದ್ದು, ಅಕ್ಟೋಬರ್ ಅವಧಿಯಲ್ಲಿ 15,832 ಕಾರುಗಳು ಮಾರಾಟಗೊಂಡಿವೆ.

ಟಾಪ್ 10ರ ಕಾರು ಮಾರಾಟದಲ್ಲಿ ಬರೋಬ್ಬರಿ 7 ಮಾರುತಿ ಸುಜುಕಿ ಕಾರುಗಳದ್ದೆ ದರ್ಬಾರ್..!

06. ಹ್ಯುಂಡೈ ಐ20 ಎಲೈಟ್

ಮಾರುತಿ ಸುಜುಕಿ ನಿರ್ಮಾಣದ ಕಾರುಗಳ ಮಾರಾಟ ನಂತರ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಹ್ಯುಂಡೈ ಸಂಸ್ಥೆಯು, ಅಕ್ಟೋಬರ್ ಅವಧಿಯಲ್ಲಿ 13,290 ಐ20 ಎಲೈಟ್ ಕಾರುಗಳನ್ನು ಮಾರಾಟಮಾಡಿದೆ.

ಟಾಪ್ 10ರ ಕಾರು ಮಾರಾಟದಲ್ಲಿ ಬರೋಬ್ಬರಿ 7 ಮಾರುತಿ ಸುಜುಕಿ ಕಾರುಗಳದ್ದೆ ದರ್ಬಾರ್..!

07. ಹ್ಯುಂಡೈ ಗ್ರಾಂಡ್ ಐ10

ಹೊಸ ತಲೆಮಾರಿನ ಸ್ವಿಫ್ಟ್ ಕಾರುಗಳನ್ನು ಬಿಡುಗಡೆ ನಂತರ ಐ10 ಕಾರುಗಳ ಮಾರಾಟಕ್ಕೆ ಹೊಡೆದ ಬಿದ್ದಿದ್ದು, ಅಕ್ಟೋಬರ್ ಅವಧಿಯಲ್ಲಿ 11,820 ಕಾರುಗಳ ಮಾರಾಟದೊಂದಿಗೆ ಟಾಪ್ 10ರ ಲಿಸ್ಟ್‌ನಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

MOST READ: ಭಾರತದಲ್ಲಿ ಓಮ್ನಿ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ ಮಾರುತಿ..!

ಟಾಪ್ 10ರ ಕಾರು ಮಾರಾಟದಲ್ಲಿ ಬರೋಬ್ಬರಿ 7 ಮಾರುತಿ ಸುಜುಕಿ ಕಾರುಗಳದ್ದೆ ದರ್ಬಾರ್..!

08. ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಮಾದರಿಯು ಕಳೆದ ಎರಡು-ಮೂರು ತಿಂಗಳಿನಿಂದ ಮಾರಾಟದಲ್ಲಿ ಕುಸಿತ ಕಂಡಿದ್ದು, ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆಯ ನಂತರ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೀಗಾಗಿಯೇ ಅಕ್ಟೋಬರ್ ಅವಧಿಯಲ್ಲಿ 11,702 ಕ್ರೆಟಾ ಕಾರುಗಳನ್ನು ಮಾರಾಟಗೊಂಡಿವೆ.

ಟಾಪ್ 10ರ ಕಾರು ಮಾರಾಟದಲ್ಲಿ ಬರೋಬ್ಬರಿ 7 ಮಾರುತಿ ಸುಜುಕಿ ಕಾರುಗಳದ್ದೆ ದರ್ಬಾರ್..!

09. ಮಾರುತಿ ಸುಜುಕಿ ವ್ಯಾಗನ್ಆರ್

ದೇಶದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳಲ್ಲಿ ಮಾರುತಿ ಸುಜುಕಿ ನಿರ್ಮಾಣದ ವ್ಯಾಗನ್ ಆರ್ ಹ್ಯಾಚ್‌ಬ್ಯಾಕ್ ಕಾರು ಸಹ ಪ್ರಮುಖ ಮಾದರಿಯಾಗಿದೆ. ಪ್ರಥಮ ಬಾರಿಗೆ ಬಿಡುಗಡೆಯಾದ ನಂತರ ಕಳೆದ ತಿಂಗಳ ಹಿಂದಷ್ಟೇ 20 ಲಕ್ಷ ಕಾರು ಮಾರಾಟ ಗುರಿತಲುಪಿರುವ ವ್ಯಾಗನ್ ಆರ್ ಕಾರುಗಳು ಅಕ್ಟೋಬರ್ ಅವಧಿಯಲ್ಲಿ 10,655 ಕಾರುಗಳು ಮಾರಾಟವಾಗಿವೆ.

MOST READ: ಬಿಡುಗಡೆಗೆ ಸಿದ್ಧಗೊಂಡಿರುವ ಜಾವಾ ಬೈಕ್‍ಗಳ ಬೆಲೆ ಮತ್ತು ಬುಕ್ಕಿಂಗ್ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.!

ಟಾಪ್ 10ರ ಕಾರು ಮಾರಾಟದಲ್ಲಿ ಬರೋಬ್ಬರಿ 7 ಮಾರುತಿ ಸುಜುಕಿ ಕಾರುಗಳದ್ದೆ ದರ್ಬಾರ್..!

10. ಮಾರುತಿ ಸೆಲೆರಿಯೊ

ಸೆಲೆರಿಯೊ ಎಕ್ಸ್ ಕಾರುಗಳು ಬಿಡುಗಡೆಯ ನಂತರ ಹ್ಯಾಚ್‌ಬ್ಯಾಕ್ ಕಾರು ಮಾರಾಟ ಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳಾಗಿದ್ದು, ಅತ್ಯುತ್ತಮ ತಾಂತ್ರಿಕ ಅಂಶಗಳೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಸೆಲೆರಿಯೊ ಕಾರುಗಳು ಅಕ್ಟೋಬರ್ ಅವಧಿಯಲ್ಲಿ 9,260 ಕಾರುಗಳನ್ನು ಮಾರಾಟ ಮಾಡುವ ಮೂಲಕ ಬಹುದಿನ ನಂತರ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಟಾಪ್ 10ರ ಕಾರು ಮಾರಾಟದಲ್ಲಿ ಬರೋಬ್ಬರಿ 7 ಮಾರುತಿ ಸುಜುಕಿ ಕಾರುಗಳದ್ದೆ ದರ್ಬಾರ್..!

ಇದರ ಹೊರತಾಗಿ ಹೋಂಡಾ ಅಮೇಜ್, ಟಾಟಾ ಟಿಯಾಗೋ, ಮಾರುತಿ ಒಮ್ನಿ,, ಟೊಯೊಟಾ ಇನೋವಾ ಕ್ರಿಸ್ಟಾ, ಮಹೀಂದ್ರಾ ಬಲೆರೊ, ಮಾರುತಿ ಇಕೊ, ರೆನಾಲ್ಟ್ ಕ್ವಿಡ್, ಮಾರುತಿ ಇಗ್ನಿಸ್, ಮಾರುತಿ ಎರ್ಟಿಗಾ, ಹ್ಯುಂಡೈ ಅಯಾನ್, ಹ್ಯುಂಡೈ ಎಕ್ಸ್‌ಸೆಂಟ್, ಟಾಟಾ ನೆಕ್ಸಾನ್, ಮಾರುತಿ ಎಸ್ ಕ್ರಾಸ್, ಫೋರ್ಡ್ ಇಕೋಸ್ಪೋರ್ಟ್, ಹ್ಯುಂಡೈ ವೆರ್ನಾ ಕಾರುಗಳು ಟಾಪ್ 25ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಇದರಲ್ಲಿ ಮಾರುತಿ ಸುಜುಕಿ ಸಂಸ್ಥೆಯೇ ಉಳಿದೆಲ್ಲಾ ಕಾರು ಉತ್ಪಾದನಾ ಸಂಸ್ಥೆಗಳಿಂತಲೂ ಹೆಚ್ಚಿನ ಕಾರುಗಳನ್ನು ಮಾರಾಟ ಮಾಡುವುದರೊಂದಿಗೆ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದು, ತದನಂತರದ ಹ್ಯುಂಡೈ ಹಾಗೂ ಹೋಂಡಾ ಕೂಡಾ ಗ್ರಾಹಕರ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು.

Article Published On: Friday, November 9, 2018, 17:23 [IST]
English summary
Top-Selling Cars In India October 2018: Maruti Still Dominates; Hyundai Follows.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+