ಜರ್ಮನ್ ಬ್ರಾಂಡ್ ಲಿಮೊಸಿನ್‌ಗೆ ಟಕ್ಕರ್ ಕೊಡುತ್ತಾ ಜಪಾನ್ ಬ್ರಾಂಡ್ ಟೊಯೊಟಾ ಸೆಂಚ್ಯುರಿ?

ಲಗ್ಷುರಿ ಕಾರುಗಳ ಮಾರಾಟದಲ್ಲಿ ಮುನ್ನಡೆ ಸಾಧಿಸುತ್ತಿರುವ ಜರ್ಮನ್ ಬ್ರಾಂಡ್‌ಗೆ ಜಪಾನ್ ಬ್ರಾಂಡ್ ಟೊಯೊಟಾ ಇದೀಗ ತಕ್ಕ ಉತ್ತರ ನೀಡುವ ಮೂಲಕ ತನ್ನ ಕನಸಿನ ಸೆಂಚ್ಯುರಿ ಲಗ್ಷುರಿ ಲಿಮೊಸಿನ್ ಅನಾವರಣ ಮಾಡಿದೆ.

By Praveen Sannamani

ವಿಶ್ವಾದ್ಯಂತ ಮಾರಾಟವಾಗುತ್ತಿರುವ ಬಹುತೇಕ ಕಾರುಗಳಲ್ಲಿ ಜರ್ಮನ್ ಬ್ರಾಂಡ್ ಇಲ್ಲವೇ ಜಪಾನ್ ಬ್ರಾಂಡ್ ಆಗಿರಲೇಬೇಕು. ಯಾಕೇಂದ್ರೆ ಆಟೋ ಉದ್ಯಮದಲ್ಲಿ ಅತಿ ಹೆಚ್ಚು ಪೈಪೋಟಿ ಇರುವುದೇ ಈ ಬ್ರಾಂಡ್‌ಗಳ ಮಧ್ಯೆ. ಅದರಲ್ಲೂ ಲಗ್ಷುರಿ ಕಾರುಗಳ ಮಾರಾಟದಲ್ಲಿ ಮುನ್ನಡೆ ಸಾಧಿಸುತ್ತಿರುವ ಜರ್ಮನ್ ಬ್ರಾಂಡ್‌ಗೆ ಜಪಾನ್ ಬ್ರಾಂಡ್ ಟೊಯೊಟಾ ಇದೀಗ ತಕ್ಕ ಉತ್ತರ ನೀಡುವ ಮೂಲಕ ತನ್ನ ಕನಸಿನ ಸೆಂಚ್ಯುರಿ ಲಗ್ಷುರಿ ಲಿಮೊಸಿನ್ ಅನಾವರಣ ಮಾಡಿದೆ.

ಜರ್ಮನ್ ಬ್ರಾಂಡ್ ಲಿಮೊಸಿನ್‌ಗೆ ಟಕ್ಕರ್ ಕೊಡುತ್ತಾ ಜಪಾನ್ ಬ್ರಾಂಡ್ ಟೊಯೊಟಾ ಸೆಂಚ್ಯುರಿ?

ಆಟೋ ಉದ್ಯಮದಲ್ಲಿ ಹಲವಾರು ಸಂಸ್ಥೆಗಳು ತಮ್ಮ ವಿವಿಧ ಮಾದರಿಯ ಕಾರು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರೂ ಕೆಲವೇ ಸಂಸ್ಥೆಗಳು ಮಾತ್ರ ಐಷಾರಾಮಿಗಳಿಗೆ ಹೆಸರುವಾಸಿಯಾಗಿರುವ ಲಿಮೊಸಿನ್‌ ಕಾರುಗಳ ಉತ್ಪಾದನೆ ಮಾಡುತ್ತಿವೆ ಎನ್ನಬಹುದು.

ಇದಕ್ಕೆ ಕಾರಣ, ದುಬಾರಿ ವಾಹನಗಳೆಂದೆ ಜನಪ್ರಿಯವಾಗಿರುವ ಲಿಮೊಸಿನ್‌ ಮಾದರಿಗಳು ಇಂದು ಜರ್ಮನ್ ಬ್ರಾಂಡ್‌ಗಳಿಗೆ ಮಾತ್ರ ಸಿಮಿತವಾಗಿದ್ದು, ಇದೀಗ ಜಪಾನ್ ದೈತ ಆಟೋ ಉತ್ಪಾದನಾ ಸಂಸ್ಥೆಯಾದ ಟೊಯೊಟಾ ಸಹ ತನ್ನ ಸೆಂಚ್ಯುರಿ ಕಾರು ಮಾದರಿಯನ್ನು ಮತ್ತಷ್ಟು ಹೊಸತನಗಳೊಂದಿಗೆ ಬಿಡುಗಡೆಗೊಳಿಸಲು ಮುಂದಾಗಿದೆ.

ಜರ್ಮನ್ ಬ್ರಾಂಡ್ ಲಿಮೊಸಿನ್‌ಗೆ ಟಕ್ಕರ್ ಕೊಡುತ್ತಾ ಜಪಾನ್ ಬ್ರಾಂಡ್ ಟೊಯೊಟಾ ಸೆಂಚ್ಯುರಿ?

ಟೊಯೊಟಾ ಸಂಸ್ಥೆಯು ಅನಾವರಣ ಮಾಡಿರುವ ಸೆಂಚ್ಯುರಿ ಕಾರುಗಳು ಜರ್ಮನ್ ಬ್ರಾಂಡ್ ಲಿಮೊಸಿನ್ ಕಾರುಗಳಿಂತಲೂ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದ್ದು, ಹತ್ತು ಹಲವು ಹೊಸ ಸೌಲಭ್ಯಗಳಿಂದಾಗಿ ಕಾರಿನ ಐಷಾರಾಮಿಗೆ ಮತ್ತಷ್ಟು ಮೆರಗು ತಂದಿದೆ.

ಜರ್ಮನ್ ಬ್ರಾಂಡ್ ಲಿಮೊಸಿನ್‌ಗೆ ಟಕ್ಕರ್ ಕೊಡುತ್ತಾ ಜಪಾನ್ ಬ್ರಾಂಡ್ ಟೊಯೊಟಾ ಸೆಂಚ್ಯುರಿ?

ಟೊಯೊಟಾ ಸಂಸ್ಥೆಯು ಅನಾವರಣ ಮಾಡಿರುವ ನ್ಯೂ ಜನರೇಷನ್ ಸೆಂಚ್ಯುರಿ ಕಾರುಗಳು 1967ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ನಂತರ ಇದುವರೆಗೆ ಹಲವು ಬದಲಾವಣೆಗಳನ್ನು ಕಂಡಿದ್ದು, 21 ವರ್ಷಗಳ ನಂತರ ಮೊದಲ ಬಾರಿಗೆ ಹೊಸ ತಂತ್ರಜ್ಞಾನದೊಂದಿಗೆ ಮರು ವಿನ್ಯಾಸಗೊಳಿಸಲಾಗಿದೆ.

ಜರ್ಮನ್ ಬ್ರಾಂಡ್ ಲಿಮೊಸಿನ್‌ಗೆ ಟಕ್ಕರ್ ಕೊಡುತ್ತಾ ಜಪಾನ್ ಬ್ರಾಂಡ್ ಟೊಯೊಟಾ ಸೆಂಚ್ಯುರಿ?

ಇನ್ನೊಂದು ವಿಶೇಷ ಅಂದ್ರೆ ಟೊಯೊಟಾ ಸಂಸ್ಥೆಯನ್ನ ಹುಟ್ಟುಹಾಕಿದ ಸಂಸ್ಥಾಪಕ ಅಧ್ಯಕ್ಷ ಸಾಕಿಚಿ ಟಯೊದಾ ಅವರ 100ನೇ ವರ್ಷದ ಜನ್ಮದಿನದ ಪ್ರಯುಕ್ತ ಸೆಂಚ್ಯುರಿ ಕಾರುಗಳನ್ನು ಮರುವಿನ್ಯಾಸಗೊಳಿಸಿ ಮಾರಾಟಕ್ಕೆ ಸಿದ್ದಗೊಳಿಸಲಾಗಿದ್ದು, ಕಾರಿನ ಮೇಲೆ ಜೋಡಣೆ ಮಾಡಲಾಗಿರುವ ಫಿನಿಕ್ಸ್ ಹಕ್ಕಿಯ ಲೊಗೊ ಕಾರಿನ ಮತ್ತೊಂದು ಆಕರ್ಷಣೆ ಎನ್ನಬಹುದು.

ಜರ್ಮನ್ ಬ್ರಾಂಡ್ ಲಿಮೊಸಿನ್‌ಗೆ ಟಕ್ಕರ್ ಕೊಡುತ್ತಾ ಜಪಾನ್ ಬ್ರಾಂಡ್ ಟೊಯೊಟಾ ಸೆಂಚ್ಯುರಿ?

ಇನ್ನು ನ್ಯೂ ಜನರೇಷನ್ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಸೆಂಚ್ಯುರಿ ಕಾರುಗಳು ಬ್ಲ್ಯಾಕ್ ಪೇಂಟ್ ಸ್ಕೀಮ್ ಹೊಂದಿದ್ದು, 7 ಪದರುಗಳಲ್ಲಿ ಪೇಂಟ್ ಸ್ಕೀಮ್ ನೀಡಲಾಗಿದೆ. ಜೊತೆಗೆ ಕಾರಿನ ಪ್ರಮುಖ ಡಿಸೈನ್‌ಗಳು ಹ್ಯಾಂಡ್‌ಮೆಡ್ ವಿನ್ಯಾಸ ಹೊಂದಿರುವುದು ಕಾರಿನ ಗತವೈಭವಕ್ಕೆ ಮತ್ತಷ್ಟು ಮೆರಗು ತಂದಿದೆ.

ಜರ್ಮನ್ ಬ್ರಾಂಡ್ ಲಿಮೊಸಿನ್‌ಗೆ ಟಕ್ಕರ್ ಕೊಡುತ್ತಾ ಜಪಾನ್ ಬ್ರಾಂಡ್ ಟೊಯೊಟಾ ಸೆಂಚ್ಯುರಿ?

ಕಾರಿನ ಉದ್ದಳತೆ

ಹಳೆಯ ತಲೆಮಾರಿನ ಕಾರಿಗಿಂತ 65ಎಂಎಂ ಹೆಚ್ಚುವರಿ ವೀಲ್‌ಬೇಸ್ ಪಡೆದಿರುವ ನ್ಯೂ ಜನರೇಷನ್ ಸೆಂಚ್ಯುರಿ ಕಾರುಗಳು ಸದ್ಯ 5,335ಎಂಎಂ ಉದ್ದ, 1,930ಎಂಎಂ ಅಗಲ, 1,505ಎಂಎಂ ಎತ್ತರ ಮತ್ತು 15ಎಂಎಂ ತಗ್ಗಿದ ಗ್ರೌಂಡ್ ಕ್ಲಿಯರೆನ್ಸ್ ಪಡೆದಿವೆ.

ಜರ್ಮನ್ ಬ್ರಾಂಡ್ ಲಿಮೊಸಿನ್‌ಗೆ ಟಕ್ಕರ್ ಕೊಡುತ್ತಾ ಜಪಾನ್ ಬ್ರಾಂಡ್ ಟೊಯೊಟಾ ಸೆಂಚ್ಯುರಿ?

ಸೆಂಚ್ಯುರಿ ಕಾರುಗಳ ಉದ್ದಳತೆಯನ್ನು ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಕಾರುಗಳಿಗೆ ಹೋಲಿಕೆ ಮಾಡಿದ್ದಲ್ಲಿ 110ಎಂಎಂ ಹೆಚ್ಚುವರಿ ಉದ್ದಳತೆ ಹೊಂದಿರುವ ಸೆಂಚ್ಯುರಿ ಕಾರುಗಳು, ಪೆಟ್ರೋಲ್ ಜೊತೆಗೆ ಎಲೆಕ್ಟ್ರಿಕ್ ಮೋಟಾರ್ ಸೌಲಭ್ಯವನ್ನು ಸಹ ಪಡೆದಿದೆ.

ಜರ್ಮನ್ ಬ್ರಾಂಡ್ ಲಿಮೊಸಿನ್‌ಗೆ ಟಕ್ಕರ್ ಕೊಡುತ್ತಾ ಜಪಾನ್ ಬ್ರಾಂಡ್ ಟೊಯೊಟಾ ಸೆಂಚ್ಯುರಿ?

ಎಂಜಿನ್ ವೈಶಿಷ್ಟ್ಯತೆ

5.0-ಲೀಟರ್ ವಿ8 ಎಂಜಿನ್ ಹೊಂದಿರುವ ನ್ಯೂ ಸೆಂಚ್ಯುರಿ ಕಾರುಗಳು ಎಲೆಕ್ಟ್ರಿಕ್ ಮೋಟಾರ್ ಸಹಾಯದೊಂದಿಗೆ ಮುನ್ನಡೆಯುತ್ತಿದ್ದು, 375-ಬಿಎಚ್‌ಪಿ ಮತ್ತು 510-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು. ಅದೇ ಎಲೆಕ್ಟ್ರಿಕ್ ಮೋಟಾರ್ ಜೊತೆಗೂಡಿದ್ದಲ್ಲಿ 425-ಬಿಎಚ್‌ಪಿ ಉತ್ಪಾದನೆ ಮಾಡುತ್ತದೆ.

ಜರ್ಮನ್ ಬ್ರಾಂಡ್ ಲಿಮೊಸಿನ್‌ಗೆ ಟಕ್ಕರ್ ಕೊಡುತ್ತಾ ಜಪಾನ್ ಬ್ರಾಂಡ್ ಟೊಯೊಟಾ ಸೆಂಚ್ಯುರಿ?

ಮೈಲೇಜ್

ಪೆಟ್ರೋಲ್ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರ್ ಸೌಲಭ್ಯ ಹೊಂದಿದ್ದರೂ ಸಹ ನ್ಯೂ ಸೆಂಚ್ಯುರಿ ಕಾರುಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ ಕೇವಲ 13.6 ಕಿ.ಮೀ ಮೈಲೇಜ್ ನೀಡಬಲ್ಲವು.

ಜರ್ಮನ್ ಬ್ರಾಂಡ್ ಲಿಮೊಸಿನ್‌ಗೆ ಟಕ್ಕರ್ ಕೊಡುತ್ತಾ ಜಪಾನ್ ಬ್ರಾಂಡ್ ಟೊಯೊಟಾ ಸೆಂಚ್ಯುರಿ?

ಕಾರಿನ ಒಳವಿನ್ಯಾಸ

ಕಾರಿನ ಒಳವಿನ್ಯಾಸವು ಬಹುತೇಕ ವುಡ್ ಫಿಚರ್ಸ್‌ನೊಂದಿಗೆ ಅಭಿವೃದ್ಧಿ ಮಾಡಲಾಗಿದ್ದು, ಹಿಂಭಾಗ ಸೀಟುಗಳಲ್ಲಿ 11.6 ಇಂಚಿನ ಎಂಟರ್‌ಟೈನ್‌ಮೆಂಟ್ ಸಿಸ್ಟಂ, 12 ಚಾನೆಲ್ ಆಡಿಯೋ ಆ್ಯಂಪ್, ಹಿಂಭಾಗದ ಕುಳಿತುಕೊಳ್ಳುವ ಸವಾರರಿ ಮಾಹಿತಿಗಾಗಿ 7 ಇಂಚಿನ ಸೆಂಟರ್ ಆರ್ಮ್‌ನಲ್ಲಿ 7 ಇಂಚಿನ ಟಚ್ ಪ್ಯಾನೆಲ್, ಕರಟೈನ್ ಮತ್ತು ಡ್ಯುಯಲ್ ಜೋನ್ ಕಂಡಿಷನರ್ ಸೌಲಭ್ಯವಿದೆ.

ಜರ್ಮನ್ ಬ್ರಾಂಡ್ ಲಿಮೊಸಿನ್‌ಗೆ ಟಕ್ಕರ್ ಕೊಡುತ್ತಾ ಜಪಾನ್ ಬ್ರಾಂಡ್ ಟೊಯೊಟಾ ಸೆಂಚ್ಯುರಿ?

ಸುರಕ್ಷಾ ಸೌಲಭ್ಯಗಳು

ಬ್ಲೈಂಡ್ ಸ್ಪಾಟ್ ಮಾನಿಟರ್, ಟೊಯೊಟಾ ಸೆಫ್ಟಿ ಸೆನ್ಸ್, ಪಾರ್ಕಿಂಗ್ ಸರ್ಪೋಟ್ ಅಲರ್ಟ್, ಪ್ರೀ-ಕೂಲಿಷನ್ ಸಿಸ್ಟಂ, ಲೆನ್ ಡಿಪಾರ್ಚರ್ ಅಲರ್ಟ್, ರೆಡಾರ್ ಕ್ರೂಸ್ ಕಂಟ್ರೊಲರ್, ಅಡಾಟಿವ್ ಹೈ ಬೀಮ್ ಸಿಸ್ಟಂ ಸೇರಿದಂತೆ ಪ್ರಯಾಣವನ್ನು ಸುಖಕರವಾಗಿಸಲು ಹೆಲ್ಪ್ ನೆಟ್ ಮತ್ತು ಡಿ-ಕಾಲ್ ನೆಟ್ ಎನ್ನುವ ಅತ್ಯಾಧುನಿಕ ತುರ್ತು ಪರಿಸ್ಥಿತಿಯನ್ನು ತಡೆಯಬಲ್ಲ ಸೌಲಭ್ಯ ಇದರಲ್ಲಿದೆ.

ಜರ್ಮನ್ ಬ್ರಾಂಡ್ ಲಿಮೊಸಿನ್‌ಗೆ ಟಕ್ಕರ್ ಕೊಡುತ್ತಾ ಜಪಾನ್ ಬ್ರಾಂಡ್ ಟೊಯೊಟಾ ಸೆಂಚ್ಯುರಿ?

ಮಾರಾಟ ಮತ್ತು ಬೆಲೆ

ಮಾಹಿತಿಗಳ ಪ್ರಕಾರ, ಟೊಯೊಟಾ ಸಂಸ್ಥೆಯು ತನ್ನ ವಿನೂತನ ನ್ಯೂ ಸೆಂಚ್ಯುರಿ ಕಾರುಗಳನ್ನು ತಿಂಗಳಿಗೆ ಕೆಲವ 50 ಯುನಿಟ್‌ಗಳನ್ನು ಮಾತ್ರ ಉತ್ಪಾದನೆ ಮಾಡಿ ಮಾರಾಟ ಮಾಡಲು ನಿರ್ಧರಿಸಿದ್ದು, ಹೊಸ ಕಾರಿನ ಬೆಲೆಯು ರೂ. 1.22 ಕೋಟಿ ಇರಲಿದೆ ಎನ್ನಲಾಗಿದೆ. ಇದರ ಜೊತೆಗೆ ಹೊಸ ಕಾರಿನ ವಿವಿಧ ತೆರಿಗೆಗಳನ್ನು ಸಹ ಪಾವತಿಸಬೇಕಾಗುತ್ತದೆ.

Most Read Articles

Kannada
Read more on toyota ಟೊಯೊಟಾ
English summary
New Toyota Century Unveiled — Japan’s Answer To The German Limos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X