ಟೊಯೊಟಾದಿಂದ ಹಾರುವ ಕಾರು - ಇದು ಕನಸು ನನಸಾಗುವ ಕಾಲ
ಹೌದು, ಇದು ನಿಜ. ಹಾರುವ ಕಾರುಗಳ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಜಗತ್ತಿನ ಅನೇಕ ವಾಹನ ಉತ್ಪಾದನಾ ಸಂಸ್ಥೆಗಳು ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಪ್ರೇರಿತ ಹಾರುವ ಕಾರುಗಳ ಪರಿಕಲ್ಪನೆಯನ್ನು ಬಿಚ್ಚಿಡುತ್ತಿದ್ದು, ಇದರಲ್ಲಿ ಟೊಯೊಟಾ ನಿರ್ಮಾಣ ಮಾಡಲು ಮುಂದಾಗಿರುವ ಹಾರುವ ಕಾರು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಜಗತ್ತಿನಾದ್ಯಂತ ಹಾರುವ ಕಾರುಗಳ ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ಬಂಡವಾಳದೊಂದಿಗೆ ಹೊಸ ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದ್ದು, 2020ರ ವೇಳೆಗೆ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಹಾರುವ ಕಾರುಗಳ ಪರಿಕಲ್ಪನೆಗಳನ್ನು ಸಹಕಾರಗೊಳಿಸುವುದಕ್ಕಾಗಿ ವೇದಿಕೆ ಸಜ್ಜುಗೊಳಿಸುತ್ತಿವೆ.

ಇದರಲ್ಲಿ ಉಬರ್, ಬೋಯಿಂಗ್ ಮತ್ತು ಸುಬಾರು ಸಂಸ್ಥೆಗಳು ಈಗಾಗಲೇ ತಮ್ಮ ಹಾರುವ ಕಾರುಗಳ ಕುರಿತಾಗಿ ತಹರೆವಾರಿ ಪರೀಕ್ಷೆಗಳನ್ನು ಕೈಗೊಂಡಿದ್ದು, ಇದೀಗ ಟೊಯೊಟಾ ಸಂಸ್ಥೆಯು ಸಹ ತಾನು ಕೂಡಾ ವಿನೂತನ ಮಾದರಿಯ ಹಾರುವ ಕಾರು ಮಾದರಿಯೊಂದನ್ನು ನಿರ್ಮಾಣ ಮಾಡುತ್ತಿರುವುದಾಗಿ ಹೇಳಿಕೊಂಡಿದೆ.

ಈ ಕುರಿತಾಗಿ ವಿಶ್ವ ಮಟ್ಟದ ವಾಹನ ತಯಾರಿಕಾ ನಿಯಂತ್ರಣ ಸಂಘದಲ್ಲಿ ಪೇಟೆಂಟ್ ದಾಖಲಿಸಿರುವ ಟೊಯೊಟಾ ಸಂಸ್ಥೆಯು, ವೀಲ್ ರೋಟರ್‌ಗಳೊಂದಿಗೆ ಡ್ಯುಯಲ್-ಮೋಡ್ ವಾಹನ ಮಾದರಿಯನ್ನು ನಿರ್ಮಾಣ ಮಾಡುತ್ತಿರುವುದಾಗಿ ಸುಳಿವು ನೀಡಿದೆ.

ಅಂದ್ರೆ, ಟೊಯೊಟಾ ನಿರ್ಮಾಣದ ಹಾರುವ ಕಾರುಗಳು ಆಕಾಶದಲ್ಲಿ ಅಷ್ಟೆ ಅಲ್ಲದೆೇ ನೆಲದ ಮೇಲೂ ಸಾಮಾನ್ಯ ಕಾರುಗಳಂತೆ ಚಾಲನಾ ಸಾಮರ್ಥ್ಯ ಹೊಂದಿದ್ದು, ರಿಮೋಟ್ ನಿಯಂತ್ರಿತ ಕ್ವಾಡ್ಕೋಪ್ಟರ್ ಮಾದರಿಗಳ ರೀತಿಯಲ್ಲೇ ಇದು ಕಾರ್ಯನಿರ್ವಹಣೆ ಮಾಡುವ ಸಾಧ್ಯತೆಗಳಿವೆ.

ಹೀಗಾಗಿ ಚಾಲಕನು ತನ್ನ ಅಗತ್ಯಕ್ಕೆ ಅನುಗುಣವಾಗಿ ರಸ್ತೆ ಮೇಲೆ ಮತ್ತು ಆಕಾಶದಲ್ಲಿ ಈ ಕಾರನ್ನು ಚಾಲನೆ ಮಾಡಬಹುದಾಗಿದ್ದು, ಕಾರು ಚಾಲನೆ ವೇಳೆ ಕಾರಿನಲ್ಲಿ ಡ್ರೈವಿಂಗ್ ಬದಲಿಸುವ ಮೂಲಕ ಎರಡೂ ಪ್ರಕಾರದ ಸೇವೆಗಳನ್ನು ಪಡೆಯಬಹುದಾಗಿದೆ.

ಪೇಟೆಂಟ್ ಮಾಡಲಾಗಿರುವ ಚಿತ್ರಗಳನ್ನು ಗಮಿಸಿದಲ್ಲಿ, ಅಮೆರಿಕದ ಮಿಲಟರಿ ಪಡೆಗಳಲ್ಲಿ ಜನಪ್ರಿಯವಾಗಿರುವ ಬೆಲ್ ಬೋಯಿಂಗ್ ವಿ -22 ಮಾದರಿಯಲ್ಲಿ ಸಿದ್ದವಾಗಿರುವ ಟೊಯೊಟಾ ಹಾರುವ ಕಾರುಗಳು ಅತಿ ಕಡಿಮೆ ಅವಧಿಯಲ್ಲಿ ಟೆಕ್ ಆಫ್ ಮತ್ತು ಲ್ಯಾಂಡಿಂಗ್ ಆಗುವ ಗುಣಹೊಂದಿವೆ.

ಆದ್ರೆ ಹಾರುವ ಕಾರುಗಳ ಒಳಭಾಗದ ವಿನ್ಯಾಸಗಳು ಮತ್ತು ಕಾರಿನ ಎಂಜಿನ್ ಮಾದರಿಯ ಕುರಿತಾದ ಯಾವುದೇ ಮಾಹಿತಿಯನ್ನು ಬಿಟ್ಟುಕೊಡದ ಟೊಯೊಟಾ ಸಂಸ್ಥೆಯು 2019ರ ಅಂತ್ಯದೊಳಗೆ ತನ್ನ ಕನಸಿನ ಹಾರುವ ಕಾರುನ್ನು ಪ್ರಾಯೋಗಿಕವಾಗಿ ಹೊರತರುವ ಸಾಧ್ಯತೆಗಳಿವೆ.

ಒಟ್ಟಿನಲ್ಲಿ ಹಾರುವ ಕಾರುಗಳ ನಿರ್ಮಾಣಕ್ಕಾಗಿ ಜಗತ್ತಿನ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳ ನಡುವೆ ಪೈಪೋಟಿ ಶುರುವಾಗಿದ್ದು, ಮುಂದೊಂದು ದಿನ ರಸ್ತೆಗಳಲ್ಲಿ ಬದಲಾಗಿ ಆಕಾಶದಲ್ಲಿ ವಾಹನಗಳ ಟ್ರಾಫಿಕ್ ಜಾಮ್ ಆದ ಸುದ್ದಿಗಳು ಪ್ರಕಟವಾಗಬಹುದು.

ಬಿಡುಗಡೆಗೆ ಸಜ್ಜಾದ ಪಿಎಲ್-ವಿ ಲಿಬರ್ಟಿ
ಟೊಯೊಟಾ ಸೇರಿದಂತೆ ಹಲವು ಸಂಸ್ಥೆಗಳು ಹಾರುವ ಕಾರುಗಳ ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿದ್ದು, ಪಿಎಲ್-ವಿ ಲಿಬರ್ಟಿ ಸಂಸ್ಥೆಯಿಂದ ನಿರ್ಮಾಣವಾಗಿರುವ ಹಾರುವ ಕಾರು ಮಾದರಿಯೊಂದು ಈಗಾಗಲೇ ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿದೆ.

2019ರ ಒಳಗಾಗಿ ಹಾರುವ ಕಾರುಗಳ ಉತ್ಪಾದನೆಯನ್ನು ಶುರುಮಾಡುವ ಬಗ್ಗೆ ಸುಳಿವು ನೀಡಿರುವ ಪಿಎಲ್-ವಿ ಲಿಬರ್ಟಿ ಸಂಸ್ಥೆಯು, ಹೆಲಿಕಾಪ್ಟರ್‌ಗಿಂತ ಕಡಿಮೆ ಮಾದರಿಯ ಮತ್ತು ಟೈಸೈಕಲ್‌ಗಳಿಂತ ಉನ್ನತ ಸೌಲಭ್ಯಗಳನ್ನು ಈ ಕಾರಿನಲ್ಲಿ ಇರಿಸಲು ಯೋಜಿಸಿದೆ.

ಸುಧಾರಿತ ಸೌಲಭ್ಯಗಳೊಂದಿಗೆ ಟು ಸೀಟರ್ ಸೌಲಭ್ಯವನ್ನು ಇದರಲ್ಲಿ ಇರಿಸಲಾಗಿದ್ದು, ಯುರೋಪ್ ಮತ್ತು ಅಮೆರಿಕನ್ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುವ ಸಾಧ್ಯತೆಗಳಿವೆ. ಇದಕ್ಕೆ ಕಾರಣ ಅಮೆರಿಕನ್ ಮತ್ತು ಯುರೋಪಿನ್ ಮಾರುಕಟ್ಟೆಯಲ್ಲಿ ಈಗಾಗಲೇ ಹಾರುವ ಕಾರುಗಳಿಗೆ ಮಾನ್ಯತೆ ಸಿಕ್ಕಿದ್ದು, 2020ರ ವೇಳೆಗೆ ಹೊಸ ಮಾದರಿಯ ಸಾರಿಗೆ ವ್ಯವಸ್ಥೆಯೊಂದು ಜಗತ್ತಿಗೆ ತೆರೆದುಕೊಳ್ಳಲಿದೆ.

ಇನ್ನು ಕಾರ್ಬನ್ ಮತ್ತು ಟೈಟಾನಿಯಂನಿಂದ ಈ ಹಾರುವ ಕಾರುಗಳನ್ನು ಉತ್ಪಾದನೆ ಮಾಡಲಾಗುತ್ತಿದ್ದು, 680 ಕೆಜಿ ತೂಕವನ್ನು ಪಡೆದುಕೊಂಡಿವೆ. ಹೀಗಾಗಿ ಕಡಿಮೆ ಅಂತರದಲ್ಲಿ ಟೆಕ್ ಆಫ್ ಮತ್ತು ಲ್ಯಾಂಡಿಂಗ್‌ಗೆ ಅನೂಕರವಾಗಿವೆ.

ಮೂಲಗಳ ಪ್ರಕಾರ ಪಿಎಲ್-ವಿ ಲಿಬರ್ಟಿಯ ಸಂಸ್ಥೆಯ ಕಾರುಗಳು ಟೆಕ್ ಆಫ್ ಆಗಲು 165 ಮೀಟರ್ ಮತ್ತು ಲ್ಯಾಂಡಿಂಗ್‌ಗೆ 30 ಮೀಟರ್ ಬೇಕಾಗಲಿದ್ದು, 100 ಬಿಎಚ್‌ಪಿ ಉತ್ಪಾದನಾ ಎಂಜಿನ್ ಬಳಕೆ ಮಾಡಲಾಗಿದೆ.

ಈ ಮೂಲಕ ಪ್ರತಿಗಂಟೆಗೆ 180ಕಿಮಿ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದಿರುವ ಪಿಎಲ್-ವಿ ಲಿಬರ್ಟಿ ಹಾರುವ ಕಾರುಗಳು, ರಸ್ತೆಯಲ್ಲೂ ಸಂಚರಿಸುವ ಸುಗಮವಾಗಿ ಸಂಚರಿಸಬಲ್ಲವು. ರಸ್ತೆ ಸಂಚರಿಸುವಾಗ ಕಾರಿನ ರೆಕ್ಕೆಗಳು ಮಡಿಚಿಕೊಳ್ಳುವ ವ್ಯವಸ್ಥೆಯನ್ನು ಇದರಲ್ಲಿ ಇರಿಸಲಾಗಿದ್ದು, ಮೂರು ಚಕ್ರಗಳೊಂದಿಗೆ ವೇಗವಾಗಿ ಸಂಚರಿಸುವುದಲ್ಲದೇ ಅರಾಮದಾಯಕ ಪ್ರಯಾಣವನ್ನು ಒದಗಿಸಲಿವೆ.

ಹೀಗಾಗಿ 2020ರ ವೇಳೆಗೆ ಪ್ರತಿ ವರ್ಷಕ್ಕೆ 50ರಿಂದ 100 ಹಾರುವ ಕಾರುಗಳನ್ನು ಮಾರಾಟ ಮಾಡುವ ಗುರಿಹೊಂದಲಾಗಿದ್ದು, ಒಂದು ವೇಳೆ ಪಿಎಲ್-ವಿ ಲಿಬರ್ಟಿ ಹಾರುವ ಖರೀದಿ ಮಾಡಬೇಕೆಂದ್ರೆ ಕಡ್ಡಾಯವಾಗಿ ಡ್ರೈವಿಂಗ್ ಲೈನೆಸ್ಸ್ ಜೊತೆಗೆ ಪೈಲೆಟ್ ಲೈಸೆನ್ಸ್ ಅನ್ನು ಹೊಂದಿರಬೇಕೆಂದು ಸೂಚಿಸಲಾಗಿದೆ.

ಹಾರುವ ಕಾರುಗಳ ಬೆಲೆ
ಭಾರತೀಯ ಮೌಲ್ಯದಲ್ಲಿ ಹೇಳುವುದಾರೇ ಆರಂಭಿಕ ಕಾರಿನ ಬೆಲೆಯನ್ನು ರೂ. 2.18 ಕೋಟಿ ಮತ್ತು ಉನ್ನತ ಮಾದರಿಯನ್ನು ರೂ. 3.90 ಕೋಟಿಗೆ ನಿಗದಿ ಮಾಡಲಿದ್ದು, ಕಾರು ಖರೀದಿಗೆ ಮುಂಗಡ ಪಾವತಿಸಿದ 150 ಗಂಟೆಗಳಲ್ಲಿ ಕಾರು ಒದಗಿಸುವ ಬಗ್ಗೆ ಪಿಎಲ್-ವಿ ಲಿಬರ್ಟಿಯ ಸಂಸ್ಥೆ ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ವಿಶ್ವಾದ್ಯಂತ ಈಗಾಗಲೇ ಪ್ರಮುಖ ಸಂಸ್ಥೆಗಳು ಹಾರುವ ಕಾರು ಮಾದರಿಗಳನ್ನು ಸಿದ್ಧಪಡಿಸಿದಲ್ಲೇ ಟೆಸ್ಟಿಂಗ್ ಕೂಡಾ ನಡೆಸಿದ್ದು, ಪಿಎಲ್-ವಿ ಲಿಬರ್ಟಿಯ ಸಂಸ್ಥೆಯು ಒಂದು ಹೆಜ್ಜೆ ಮುಂದೆ ಹೊಗುವ ಮೂಲಕ 2020ರ ವೇಳೆಗೆ ಹೊಸ ಸಾರಿಗೆ ವ್ಯವಸ್ಥೆಗೆ ಲಗ್ಗೆಯಿಡುವ ವಿಶ್ವಾಸ ವ್ಯಕ್ತಪಡಿಸಿದೆ.


Click it and Unblock the Notifications








