ಮಾಡಿಫೈಡ್ ವಿನ್ಯಾಸದಲ್ಲಿ ಮಿಂಚಿದ ಟೊಯೊಟಾ ಇನೋವಾ ಕ್ರಿಸ್ಟಾ

ಬಹುತೇಕ ಕಾರು ಪ್ರೇಮಿಗಳಿಗೆ ಮಾಡಿಫೈ ಕಾರಿನ ಬಗೆಗೆ ಎಲ್ಲಿದ ಕ್ರೇಜ್ ಇದ್ದೇ ಇರುತ್ತೆ. ಆದ್ರೆ ಮಾಡಿಫೈಗೆ ಬೇಕಾದ ಸೂಕ್ತ ಕಾರುಗಳು ಸಿಗುವುದೇ ಕಷ್ಟ. ಆದರೂ ಸಿದ್ದವಾಗುವ ಕೆಲವು ಮಾಡಿಫೈ ಕಾರುಗಳು ಮೂಲ ಕಾರಿಗೂ ಟಾಂಗ್ ನೀಡುವಷ್ಟು ತಾಂತ್ರಿಕವಾಗಿ ಬದಲಾವಣೆ ಮಾಡಲಾಗಿರುತ್ತದೆ ಎಂದ್ರೆ ತಪ್ಪಾಗುವುದಿಲ್ಲ.

ಮಾಡಿಫೈಡ್ ವಿನ್ಯಾಸದಲ್ಲಿ ಮಿಂಚಿದ ಟೊಯೊಟಾ ಇನೋವಾ ಕ್ರಿಸ್ಟಾ

ಮಾಡಿಫೈ ತಂತ್ರಜ್ಞಾನವು ಆಟೋ ಉದ್ಯಮದಲ್ಲಿ ತನ್ನದೇ ಪ್ರಭಾವವನ್ನು ಹೊಂದಿದ್ದು, ವಾಹನ ಪ್ರಿಯರು ತಮ್ಮ ನೆಚ್ಚಿನ ವಿನ್ಯಾಸಗಳನ್ನು ಹೊಂದಿರುವ ವಾಹನಗಳನ್ನು ಪಡೆದುಕೊಳ್ಳಲು ಒಂದು ಉತ್ತಮ ಮಾರ್ಗ ಎನ್ನಬಹುದು. ಹೀಗಾಗಿ ಮಾಡಿಫೈ ವಿನ್ಯಾಸಕಾರರಿಗೆ ಹೆಚ್ಚಿನ ಬೇಡಿಕೆ ಇದ್ದು, ಇದೀಗ ಮಾರುಕಟ್ಟೆಯಲ್ಲಿ ಮಾಡಿಫೈ ಕಾರುಗಳ ಹಾವಳಿ ಕೂಡಾ ಜೋರಾಗಿಯೇ ಇದೆ.

ಮಾಡಿಫೈಡ್ ವಿನ್ಯಾಸದಲ್ಲಿ ಮಿಂಚಿದ ಟೊಯೊಟಾ ಇನೋವಾ ಕ್ರಿಸ್ಟಾ

ಇಲ್ಲೊಂದು ಮಾಡಿಫೈ ಸಂಸ್ಥೆ ಕೂಡಾ ಜನಪ್ರಿಯ ಇನೋವಾ ಕ್ರಿಸ್ಟಾ ಎಂಪಿವಿ ಕಾರಿಗೆ ಅತ್ಯುತ್ತಮ ಮಾಡಿಫೈ ಡಿಸೈನ್ ಮಾಡುತ್ತಿರುವುದು ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಲೆಕ್ಸಸ್ ಕಾರುಗಳ ಆಕಾರದಲ್ಲಿ ಮಿಂಚುತ್ತಿವೆ.

ಮಾಡಿಫೈಡ್ ವಿನ್ಯಾಸದಲ್ಲಿ ಮಿಂಚಿದ ಟೊಯೊಟಾ ಇನೋವಾ ಕ್ರಿಸ್ಟಾ

ಥೈಲ್ಯಾಂಡ್‌ ಮೂಲದ ಆಟಿವಸ್ ಎನ್ನುವ ಸಂಸ್ಥೆಯು ಇನೋವಾ ಕ್ರಿಸ್ಟಾ ಕಾರುಗಳನ್ನು ಲೆಕ್ಸಸ್ ಮಾದರಿಗಳಿಗೆ ಮಾಡಿಫೈ ಮಾಡುವುದು ಸಾಕಷ್ಟು ಜನಪ್ರಿಯತೆ ಪಡೆಯುತ್ತಿದ್ದು, ಅದಲ್ಲೂ ಲೆಕ್ಸಸ್ ನಿರ್ಮಾಣದ ಆರ್‌ಎಕ್ಸ್ 450ಹೆಚ್ ಮಾದರಿಗಳಂತೆ ಇನೋವಾ ಕ್ರಿಸ್ಟಾ ಮಾಡಿಫೈ ಮಾಡಿಸಲು ಸಾವಿರಾರು ಗ್ರಾಹಕರು ಮುಗಿಬಿದ್ದಿದ್ದಾರೆ.

ಮಾಡಿಫೈಡ್ ವಿನ್ಯಾಸದಲ್ಲಿ ಮಿಂಚಿದ ಟೊಯೊಟಾ ಇನೋವಾ ಕ್ರಿಸ್ಟಾ

ಇನ್ನೊಂದು ವಿಶೇಷ ಅಂದ್ರೆ ಟೊಯೊಟಾ ಅಂಗಸಂಸ್ಥೆಯಾದ ಲೆಕ್ಸಸ್ ಕೂಡಾ ಸದ್ಯ ಐಷಾರಾಮಿ ಕಾರುಗಳ ನಿರ್ಮಾಣದಲ್ಲಿ ಜನಪ್ರಿಯತೆ ಸಾಧಿಸುತ್ತಿದ್ದು, ಜಾಗತಿಕವಾಗಿ ಆಟೋ ಉದ್ಯಮದಲ್ಲಿ ಮುಂದಿರುವ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಕಾರು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

ಮಾಡಿಫೈಡ್ ವಿನ್ಯಾಸದಲ್ಲಿ ಮಿಂಚಿದ ಟೊಯೊಟಾ ಇನೋವಾ ಕ್ರಿಸ್ಟಾ

ಹೀಗಿರುವಾಗ ಥಾಯ್ ಮಾಡಿಫೈ ಸಂಸ್ಥೆಯು ಲೆಕ್ಸಸ್ ಕಾರುಗಳ ವಿನ್ಯಾಸವನ್ನೇ ಇಟ್ಟುಕೊಂಡು ಇನೋವಾ ಕ್ರಿಸ್ಟಾ ಕಾರಗಳನ್ನು ಮಾಡಿಫೈ ಮಾಡುತ್ತಿದ್ದು, ಇದಕ್ಕಾಗಿ ಸಾವಿರಾರು ಗ್ರಾಹಕರು ಹೆಚ್ಚುವರಿ ಬೆಲೆ ತೆತ್ತು ಮಾಡಿಫೈ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.

ಮಾಡಿಫೈಡ್ ವಿನ್ಯಾಸದಲ್ಲಿ ಮಿಂಚಿದ ಟೊಯೊಟಾ ಇನೋವಾ ಕ್ರಿಸ್ಟಾ

ಇನ್ನು ಸ್ಥಳೀಯ ಮಾರುಕಟ್ಟೆಯಲ್ಲೂ ಸಹ ಇನೋವಾ ಕ್ರಿಸ್ಟಾ ಕಾರುಗಳಿಗೆ ವಿವಿಧ ಮಾದರಿಯ ಮಾಡಿಫೈ ಡಿಸೈನ್‌ಗಳು ಲಭ್ಯವಿದ್ದರೂ ಕೂಡಾ ಇದರಲ್ಲಿ ಲೆಕ್ಸಸ್ ವಿನ್ಯಾಸವು ಮಾಡಿಫೈ ಅತ್ಯುತ್ತಮ ಡಿಸೈನ್ ಎನ್ನಬಹುದು. ಜೊತೆಗೆ ಕಡಿಮೆ ಬೆಲೆಗಳಲ್ಲಿ ಮಾಡಿಫೈ ಮಾಡಬಹುದಾದ ಮಾದರಿ ಇದಾಗಿದೆ ಎನ್ನಬಹುದು.

ಮಾಡಿಫೈಡ್ ವಿನ್ಯಾಸದಲ್ಲಿ ಮಿಂಚಿದ ಟೊಯೊಟಾ ಇನೋವಾ ಕ್ರಿಸ್ಟಾ

ಭಾರತದಲ್ಲೂ ಆಟಿವಸ್ ಮಾಡಿಫೈ ಲಭ್ಯ

ಆಟಿವಸ್ ಸಂಸ್ಥೆಯು ಸದ್ಯ ಥೈಲ್ಯಾಂಡ್‌ನಲ್ಲಿ ಮಾತ್ರವಲ್ಲದೇ ಭಾರತ, ಶ್ರೀಲಂಕಾ, ಇಂಡೋನೇಷ್ಯಾದಲ್ಲೂ ತನ್ನ ಅಂಗಸಂಸ್ಥೆಗಳನ್ನು ತೆರೆದಿದ್ದು, ಪ್ರಮುಖವಾಗಿ ಟೊಯೊಟಾ ಇನೋವಾ ಕ್ರಿಸ್ಟಾ, ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ವಿಶೇಷ ಮಾಡಿಫೈ ಮಾಡುತ್ತಿದೆ.

ಮಾಡಿಫೈಡ್ ವಿನ್ಯಾಸದಲ್ಲಿ ಮಿಂಚಿದ ಟೊಯೊಟಾ ಇನೋವಾ ಕ್ರಿಸ್ಟಾ

ಸುದ್ದಿ ಮೂಲಗಳ ಪ್ರಕಾರ, ಥಾಯ್ ಮಾಡಿಫೈ ಸಂಸ್ಥೆಯು 2 ರಿಂದ 3 ಲಕ್ಷಕ್ಕೆ ಇನೋವಾ ಕ್ರಿಸ್ಟಾ ಕಾರುಗಳನ್ನು ಲೆಕ್ಸಸ್‌ ಡಿಸೈನ್‌ಗೆ ಮಾಡಿಫೈ ಮಾಡಿಕೊಡುತ್ತಿದ್ದು, ಭಾರತದಲ್ಲಿ ಇದು ಇನ್ನು ಕಡಿಮೆ ಬೆಲೆಗಳಲ್ಲಿ ಮಾಡಿಫೈ ಮಾಡಬಹುದಾದ ಸಾಧ್ಯತೆಗಳಿವೆ.

MOST READ: ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಮಾಡಿಫೈಡ್ ವಿನ್ಯಾಸದಲ್ಲಿ ಮಿಂಚಿದ ಟೊಯೊಟಾ ಇನೋವಾ ಕ್ರಿಸ್ಟಾ

ಎಂಜಿನ್ ಸಾಮರ್ಥ್ಯ

ಮಾಡಿಫೈಗೊಂಡಿರುವ ಇನೋವಾ ಕ್ರಿಸ್ಟಾ ಕಾರುಗಳಲ್ಲಿ ಹೊರಭಾಗದ ಡಿಸೈನ್‌ಗಳನ್ನು ಹೊರತುಪಡಿಸಿ ಒಳವಿನ್ಯಾಸ ಮತ್ತು ಎಂಜಿನ್ ವಿಭಾಗವನ್ನು ಯಥಾವತ್ತಾಗಿ ಮುಂದುವರಿಸಲಾಗಿದ್ದು, ಸದ್ಯ ಇನೋವಾ ಕ್ರಿಸ್ಟಾ ಕಾರುಗಳು ಪ್ರಮುಖ 3 ವಿವಿಧ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದೆ.

ಮಾಡಿಫೈಡ್ ವಿನ್ಯಾಸದಲ್ಲಿ ಮಿಂಚಿದ ಟೊಯೊಟಾ ಇನೋವಾ ಕ್ರಿಸ್ಟಾ

ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 2.7-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.4-ಡೀಸೆಲ್ ಡೀಸೆಲ್ ಎಂಜಿನ್ ಇಲ್ಲವೇ 2.8-ಲೀಟರ್ ಡೀಸೆಲ್ ಎಂಜಿನ್‌ಗಳು ಖರೀದಿಗೆ ಲಭ್ಯವಿದ್ದು, ಇವುಗಳಲ್ಲಿ ಒಟ್ಟು 14 ವೆರಿಂಟ್‌ಗಳು ವಿವಿಧ ಬೇಡಿಕೆಗೆ ಅನುಗುಣವಾಗಿ ಖರೀದಿಸಬಹುದಾಗಿದೆ.

MOST READ: ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

ಮಾಡಿಫೈಡ್ ವಿನ್ಯಾಸದಲ್ಲಿ ಮಿಂಚಿದ ಟೊಯೊಟಾ ಇನೋವಾ ಕ್ರಿಸ್ಟಾ

ಹಾಗಿಯೇ ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.14.64 ಲಕ್ಷದಿಂದ ಟಾಪ್ ವೆರಿಯೆಂಟ್‌ಗಳು ರೂ.23.04 ಲಕ್ಷ ಬೆಲೆ ಹೊಂದಿರುವ ಇನೋವಾ ಕ್ರಿಸ್ಟಾ ಕಾರುಗಳು ಅತ್ಯುತ್ತಮ ಎಂಜಿನ್ ಸೌಲಭ್ಯದೊಂದಿಗೆ ಬಹುಬಳಕೆ ಕಾರು ಮಾದರಿಯಾಗಿ ಜನಪ್ರಿಯತೆ ಸಾಧಿಸಿದೆ ಎನ್ನಬಹುದು.

ಮಾಡಿಫೈ ಇನೋವಾ ಕ್ರಿಸ್ಟಾ ಕುರಿತಾದ ಹೆಚ್ಚಿನ ಮಾಹಿತಿಗಾಗಿ-Ativus

More from DriveSpark

Article Published On: Saturday, December 1, 2018, 11:53 [IST]
English summary
Toyota Innova Crysta Modified.
Read more on car modification toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+