ಫಸ್ಟ್ ಲುಕ್ ರಿವ್ಯೂ: ಸೆಡಾನ್ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಟೊಯೊಟಾ ಯಾರಿಸ್..

ಮಧ್ಯಮ ಗಾತ್ರದ ಬೆಲೆಗಳಲ್ಲಿ ಅತ್ಯುತ್ತಮ ಬೇಡಿಕೆ ಹೊಂದಿರುವ ಇಟಿಯಾಸ್ ಸೆಡಾನ್ ಆವೃತ್ತಿಯನ್ನು ಕೈಬಿಡಲು ನಿರ್ಧರಿಸಿರುವ ಟೊಯೊಟಾ ಇಂಡಿಯಾ ಸಂಸ್ಥೆಯು ಅದೇ ವಿನ್ಯಾಸಗಳನ್ನೇ ಹೊಂದಿರುವ ಹೊಚ್ಚ ಹೊಸ ಯಾರಿಸ್ ಸೆಡಾನ್ ಪರಿಚಯಿಸಲು ಮುಂದಾಗಿದೆ.

By Praveen

ಈ ಬಗ್ಗೆ ಬಗ್ಗೆ ಅಧಿಕೃತವಾಗಿ ಹೇಳಿಲ್ಲವಾದರೂ ಇಟಿಯಾಸ್ ಕಾರುಗಳನ್ನು ಉನ್ನತಿಕರಿಸುವ ಬಗ್ಗೆ ಸುಳಿವು ನೀಡಿರುವ ಟೊಯೊಟಾ ಸಂಸ್ಥೆಯು, ತನ್ನ ಹೊಸ ಕಾರು ಮಾದರಿಯನ್ನು 2018ರ ಆಟೋ ಎಕ್ಸ್ ಪೋ ದಲ್ಲಿ ಪ್ರದರ್ಶನಗೊಳಿಸುವ ಮೂಲಕ ಪ್ರಯಾಣಿಕ ಕಾರು ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸುವ ವಿಶ್ವಾಸ ವ್ಯಕ್ತಪಡಿಸಿದೆ.

Recommended Video

New Maruti Swift Launch: Price; Mileage; Specifications; Features; Changes
ಫಸ್ಟ್ ಲುಕ್ ರಿವ್ಯೂ: ಸೆಡಾನ್ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಟೊಯೊಟಾ ಯಾರಿಸ್..

ಇದಕ್ಕೆ ಪೂರಕ ಎಂಬಂತೆ ಸೇಕೆಂಡ್ ಜನರೇಷನ್ ಇಟಿಯಾಸ್ ಆವೃತ್ತಿಯನ್ನು ಪರಿಚಯಿಸುವ ಯೋಜನೆಯನ್ನು ಕೈಬಿಟ್ಟಿರುವ ಟೊಯೊಟಾ, 2019ರ ವೇಳೆಗೆ ಇಟಿಯಾಸ್ ಬದಲಾಗಿ ಯಾರಿಸ್ ಆವೃತ್ತಿಗಳನ್ನು ಬಿಡುಗಡೆ ಮಾಡಲಿದೆಯಂತೆ.

ಫಸ್ಟ್ ಲುಕ್ ರಿವ್ಯೂ: ಸೆಡಾನ್ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಟೊಯೊಟಾ ಯಾರಿಸ್..

ಇದಲ್ಲದೇ ಸದ್ಯ ಮಾರುಕಟ್ಟೆಯಲ್ಲಿರುವ ಟೊಯೊಟಾ ನಿರ್ಮಾಣದ ಸೆಡಾನ್ ಆವೃತ್ತಿಗಳು ಜನಪ್ರಿಯತೆ ಗಳಿಸುವಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಇದೇ ಉದ್ದೇಶಕ್ಕಾಗಿ ಗ್ರಾಹಕರನ್ನು ಸೆಳೆಯಲು ಉದ್ದೇಶದೊಂದಿಗೆ ಸುಧಾರಿತ ಮಾದರಿಯ ಯಾರಿಸ್ ಸಿದ್ಧಗೊಳಿಸಿದೆ.

ಫಸ್ಟ್ ಲುಕ್ ರಿವ್ಯೂ: ಸೆಡಾನ್ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಟೊಯೊಟಾ ಯಾರಿಸ್..

ಇದರಿಂದ ಸೆಡಾನ್ ಆವೃತ್ತಿಯಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ಹೋಂಡಾ ಸಿಟಿ, ಸುಜುಕಿ ಸಿಯಾಜ್, ಹ್ಯುಂಡೈ ವೆರ್ನಾ, ನಿಸ್ಸಾನ್ ಸನ್ನಿ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಲಿರುವ ಯಾರಿಸ್ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಅತ್ಯುತ್ತಮ ತಂತ್ರಜ್ಞಾನ ಸೌಲಭ್ಯವನ್ನು ಹೊಂದಿರಲಿದೆ.

ಫಸ್ಟ್ ಲುಕ್ ರಿವ್ಯೂ: ಸೆಡಾನ್ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಟೊಯೊಟಾ ಯಾರಿಸ್..

ಹೊಸ ಕಾರಿನ ವೈಶಿಷ್ಟ್ಯತೆ

ವೃತ್ತಾಕಾರದ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್ ಹೊಂದಿರುವ ಯಾರಿಸ್, ಎಲ್ಇಡಿ ಡೇ ಟೈಮ್ ಲೈಟ್, ಫ್ರಂಟ್ ಬಂಪರ್, ಫುಲ್ ಎಲ್ಇಡಿ ಟೈಲ್ ಲೈಟ್ಸ್, ಡ್ಯುಯಲ್ ಟೋನ್ ಇಂಟಿರಿಯರ್, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಸಂಜ್ಞೆಗಳ ಮೂಲಕ ನಿಯಂತ್ರಿಸಬಹುದಾದ ತಾಂತ್ರಿಕ ಪ್ರತಿಫಲಕವನ್ನು ನೀಡಲಾಗಿದೆ.

ಫಸ್ಟ್ ಲುಕ್ ರಿವ್ಯೂ: ಸೆಡಾನ್ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಟೊಯೊಟಾ ಯಾರಿಸ್..

ಎಂಜಿನ್ ಸಾಮರ್ಥ್ಯ

ಯಾರಿಸ್ ಕಾರು ಮಾದರಿಗಳು 1.5-ಲೀಟರ್ ಪೆಟ್ರೋಲ್ ಎಂಜಿನ್ ಪರಿಚಯಿಸಲಿರುವ ಟೊಯೊಟಾ, ಸದ್ಯ ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಸೆಡಾನ್ ಆವೃತ್ತಿಗಳಿಂತಲೂ ಕಡಿಮೆ ಬೆಲೆಗೆ ಈ ಹೊಸ ಕಾರು ಪರಿಚಯಿಸುವ ಸಾಧ್ಯತೆಗಳಿವೆ.

ಫಸ್ಟ್ ಲುಕ್ ರಿವ್ಯೂ: ಸೆಡಾನ್ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಟೊಯೊಟಾ ಯಾರಿಸ್..

ಜೊತೆಗೆ ಇಂಧನ ಕಾರ್ಯಕ್ಷಮತೆಗೂ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸುರಕ್ಷತೆಗಾಗಿ 7 ಏರ್‌ಬ್ಯಾಗ್‌ಗಳು, ಪವರ್ ಡ್ರೈವ್ ಸೀಟ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಆಲ್ ವೀಲ್ ಡಿಸ್ಕ್ ಬ್ರೇಕ್ ಒದಗಿಸಲಾಗಿದೆ. ಹೀಗಾಗಿ ಇದೊಂದು ಉತ್ತಮ ಸೆಡಾನ್ ಮಾದರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಫಸ್ಟ್ ಲುಕ್ ರಿವ್ಯೂ: ಸೆಡಾನ್ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಟೊಯೊಟಾ ಯಾರಿಸ್..

ಬಿಡುಗಡೆ ಯಾವಾಗ?

ಇದೇ ವರ್ಷ 2ನೇ ತ್ರೈಮಾಸಿಕ ಅಂತ್ಯಕ್ಕೆ ಯಾರಿಸ್ ಬಿಡುಗಡೆಯಾಗಲಿದ್ದು, ಹೋಂಡಾ ಸಿಟಿ ಮತ್ತು ಸಿಯಾಜ್ ಕಾರುಗಳಿಗೆ ತ್ರೀವ ಹೊಡೆತ ನೀಡಲಿದೆ.

ಫಸ್ಟ್ ಲುಕ್ ರಿವ್ಯೂ: ಸೆಡಾನ್ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಟೊಯೊಟಾ ಯಾರಿಸ್..

ಬೆಲೆ(ಅಂದಾಜು)

ಬೆಲೆಗಳ ಬಗೆಗೆ ನಿಖರ ಮಾಹಿತಿ ಇಲ್ಲವಾದರೂ ಯಾರಿಸ್ ಬೆಲೆಯನ್ನು ರೂ.8.50 ಲಕ್ಷದಿಂದ ರೂ.12 ಲಕ್ಷದವರೆಗೆ ನಿಗದಿಪಡಿಸಬಹುದಾದ ಸಾಧ್ಯತೆಗಳಿವೆ.

ಫಸ್ಟ್ ಲುಕ್ ರಿವ್ಯೂ: ಸೆಡಾನ್ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಟೊಯೊಟಾ ಯಾರಿಸ್..

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಸ್‌ಯುವಿ ಆವೃತ್ತಿಗಳಲ್ಲಿ ತನ್ನದೇ ಆದ ಬೇಡಿಕೆ ಹೊಂದಿರುವ ಟೊಯೊಟಾ ಸಂಸ್ಥೆಯು ಸೆಡಾನ್ ವಿಭಾಗದಲ್ಲಿ ಮತ್ತಷ್ಟು ಜನಪ್ರಿಯತೆ ಪಡೆಯುವ ನಿಟ್ಟಿನಲ್ಲಿ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದು, ಯಾರಿಸ್ ಹೊಸ ಸಂಚಲನ ಉಂಟು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
Read more on toyota ಟೊಯೊಟಾ
English summary
Toyota Yaris First Look Review — A Feature-Loaded Proposition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X