ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಸೆಡಾನ್..!!

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಸೆಡಾನ್..!!

By Praveen Sannamani

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಠಿಸಲು ಯಾರಿಸ್ ಸೆಡಾನ್ ಕಾರುಗಳನ್ನು ಪರಿಚಯಿಸಿರುವ ಟೊಯೊಟಾ ಸಂಸ್ಥೆಯು ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯಲು ಬೃಹತ್ ಯೋಜನೆ ರೂಪಿಸಿದೆ. ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ಕಾರುಗಳ ಬೆಲೆಯನ್ನು ಆಂಭಿಕವಾಗಿ ಎಕ್ಸ್‌ಶೋರಂ ಪ್ರಕಾರ ರೂ.8.75 ಲಕ್ಷ ನಿಗದಿ ಮಾಡುವ ಮೂಲಕ ಜನಪ್ರಿಯ ಸೆಡಾನ್ ಆವೃತ್ತಿಗಳಿಗೆ ತ್ರೀವ ಪೈಪೋಟಿ ನೀಡುವ ನಿರೀಕ್ಷೆಯಲ್ಲಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಸೆಡಾನ್..!!

2018ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳುವ ಮೂಲಕ ಸೆಡಾನ್ ಪ್ರಿಯರ ಕುತೂಹಲಕ್ಕೆ ಕಾರಣವಾಗಿದ್ದ ಟೊಯೊಟಾ ಯಾರಿಸ್ ಕಾರುಗಳು ಇದೀಗ ಬಿಡುಗಡೆಗೊಂಡಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿರುವ ಯಾರಿಸ್ ಕಾರುಗಳು ಮಧ್ಯಮ ಕ್ರಮಾಂಕದ ಸೆಡಾನ್ ಕಾರುಗಳಲ್ಲೇ ವಿಶೇಷ ಎನ್ನಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಸೆಡಾನ್..!!

ಟೊಯೊಟಾ ಯಾರಿಸ್ ಕಾರುಗಳು ಜೆ, ಜಿ, ವಿ ಹಾಗೂ ವಿಎಕ್ಸ್ ವೇರಿಯಂಟ್‍‍ಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಕೇವಲ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಖರೀದಿಗೆ ಲಭ್ಯವಿದೆ. ಹೀಗಾಗಿ ಲಭ್ಯವಿರುವ ಪ್ರತಿ ವೆರಿಯೆಂಟ್‌ನಲ್ಲೂ ಬೆಲೆಗೆ ಅನುಗುಣವಾಗಿ ಕೆಲವು ತಾಂತ್ರಿಕ ಅಂಶಗಳಲ್ಲಿ ಬದಲಾವಣೆ ಹೊಂದಿವೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಸೆಡಾನ್..!!

ಯಾರಿಸ್ ಕಾರುಗಳ ಬೆಲೆ ಪಟ್ಟಿ(ದೆಹಲಿ ಎಕ್ಸ್‌ಶೋರಂ ಪ್ರಕಾರ)

ಕಾರು ಮಾದರಿಗಳು ಮ್ಯಾನುವಲ್ ಆವೃತ್ತಿ ಆಟೋಮ್ಯಾಟಿಕ್ ಆವೃತ್ತಿ
ಜೆ ರೂ. 8,75,000 ರೂ. 9,95,000
ಜಿ ರೂ. 10,56,000 ರೂ. 11,76,000
ವಿ ರೂ. 11,70,000 ರೂ. 12,90,000
ವಿಎಕ್ಸ್ ರೂ. 12,85,000 ರೂ. 14,07,000

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಸೆಡಾನ್..!!

ಯಾರಿಸ್ ಎಂಜಿನ್ ಸಾಮರ್ಥ್ಯ

ಟೊಯೊಟಾ ಯಾರಿಸ್ ಕಾರುಗಳು 1.5-ಲೀಟರ್ ಡ್ಯುಯಲ್ ವಿವಿಟಿ-ಐ ಪೆಟ್ರೋಲ್ ಎಂಜಿನ್ ಹೊಂದಿದ್ದು, ಈ ಮೂಲಕ 108-ಬಿಎಚ್‌ಪಿ ಮತ್ತು 140-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಜೊತೆಗೆ ಹೊಸ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳು ಆಯ್ಕೆಗೆ ಲಭ್ಯವಿರಲಿವೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಸೆಡಾನ್..!!

ಕಾರಿನ್ ಇಂಟಿರಿಯರ್ ಡಿಸೈನ್

ವಿಶೇಷ ಮಾದರಿಯ ಕ್ಯಾಬಿನ್ ಸೌಲಭ್ಯ ಹೊಂದಿರುವ ಟೊಯೊಟಾ ಯಾರಿಸ್ ಕಾರುಗಳು ಸ್ಮಾರ್ಟ್ ಕನೆಕ್ವಿಟಿ ಜೊತೆಗೆ ಅತ್ಯುತ್ತಮ ತಂತ್ರಜ್ಞಾನ ಪ್ರೇರಿತ ಡ್ಯಾಶ್‌ಬೋರ್ಡ್ ಹೊಂದಿಕೊಂಡಿರುವುದು ಆರಾಮದಾಯಕ ಪ್ರಯಾಣಕ್ಕೆ ಅನೂಕಲಕರವಾಗಲಿವೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಸೆಡಾನ್..!!

ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್‌ಗಳು ಕಾರಿನ ಒಳ ಅಂದಕ್ಕೆ ಮೆರಗು ತಂದಿದ್ದು, ಸಾಫ್ಟ್ ಟಚ್ ಕ್ಲೈಮೆಟ್ ಕಂಟ್ರೊಲರ್ ಬಟನ್‌ಗಳು, ವಾಟರ್ ಫಾಲ್ ಮಾದರಿಯ ಸೆಂಟರ್ ಕನ್‌ಸೊಲ್ ಡಿಸೈನ್‌ಗಳು ಸೆಡಾನ್ ಮಾದರಿಯ ಮತ್ತೊಂದು ವೈಶಿಷ್ಟ್ಯತೆಯಾಗಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಸೆಡಾನ್..!!

ಹಾಗೆಯೇ 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಕೂಡಾ ಇದ್ದು, ಸಂಜ್ಞೆಯ ಮೂಲಕವೇ ಕಾರಿನ ಸ್ಮಾರ್ಟ್ ಕನೆಕ್ಟಿವಿಟಿಗಳನ್ನು ನಿಯಂತ್ರಿಸಬಹುದಾಗಿದೆ. ಅದಾಗ್ಯೂ ಯಾರಿಸ್ ಕಾರುಗಳಲ್ಲಿ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಜೋಡಣೆ ಹೊಂದಿಲ್ಲ ಎನ್ನುವುದು ಮುಖ್ಯ ವಿಚಾರ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಸೆಡಾನ್..!!

ಇನ್ನು ಮ್ಯಾನುವಲ್ ಕಾರುಗಳ ಗೇರ್ ಸ್ಟೀಕ್‌ಗಳು ಪ್ರಿಮಿಯಂ ಬ್ಲ್ಯಾಕ್ ಲೆದರ್ ವ್ಯಾರ್ಪ್ಡ್ ಹೊಂದಿರಲಿದ್ದು, ಆಟೋಮ್ಯಾಟಿಕ್ ಗೇರ್ ಸ್ಟಿಕ್‌ಗಳು ಸಹ ಮೆಟಲ್ ಕ್ರೋಮ್ ಮಾದರಿಯ ಲೆದರ್ ಕಾಂಬಿನೇಷನ್ ಡಿಸೈನ್ ಪಡೆದುಕೊಂಡಿರಲಿವೆ. ಜೊತೆಗೆ ಕಪ್ ಹೋಲ್ಡರ್ ಸಹ ಕಾರಿನ ಇಂಟಿರಿಯರ್ ವಿನ್ಯಾಸಕ್ಕೆ ಮೆರಗು ತಂದಿವೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಸೆಡಾನ್..!!

ಕಾರಿನ ಮೈಲೇಜ್

ಯಾರಿಸ್ ಕಾರುಗಳು 42 ಲೀಟರ್ ಇಂಧನ ಟ್ಯಾಂಕ್ ಸೌಲಭ್ಯದೊಂದಿಗೆ ಸಿವಿಟಿ ಆವೃತ್ತಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 17.8 ಕಿ.ಮೀ ಮತ್ತು ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 17.1 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಸೆಡಾನ್..!!

ಸುರಕ್ಷಾ ಸೌಲಭ್ಯಗಳು

ಯಾರಿಸ್ ಕಾರುಗಳಲ್ಲಿ ಏಳು ಏರ್‌ಬ್ಯಾಗ್‌ಗಳು, ಎಬಿಎಸ್ ಮತ್ತು ಇಬಿಡಿ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಸ್ಟ್ಯಾಬಿಲಿಟಿ ಕಂಟ್ರೋಲ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಫೋರ್ ವೀಲ್ ಡಿಸ್ಕ್ ಬ್ರೇಕ್‌ಗಳು, ಹೈ ಸೋಲಾರ್ ಎನರ್ಜಿ ಅಬ್ ಸಾರ್ಬಿಂಗ್, ಇನ್‌ಫ್ರಾ ರೆಡ್ ಕಿರಣಗಳಿಗೆ ತಡೆಯೊಡ್ಡುವ ತಂತ್ರಜ್ಞಾನ, ವೈಬ್ರೇಷನ್‌ ಮುಕ್ತ ಗ್ಲಾಸ್‌ಗಳಿಂದಾಗಿ ನಿಶ್ಯಬ್ಧ ಕ್ಯಾಬಿನ್ ಸೌಲಭ್ಯ ಇದರಲ್ಲಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಸೆಡಾನ್..!!

ಲಭ್ಯಲಿರುವ ಬಣ್ಣಗಳು

ಸೂಪರ್ ವೈಟ್, ಪರ್ಲ್ ವೈಟ್, ಸಿಲ್ವರ್, ವೈಲ್ಡ್‌ಫೈರ್ ರೆಡ್, ಫ್ಯಾಂತಮ್ ಬ್ರೌನ್ ಮತ್ತು ಗ್ರೇ ಬಣ್ಣಗಳಲ್ಲಿ ಯಾರಿಸ್ ಕಾರುಗಳನ್ನು ಖರೀದಿಸಬಹುದು.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಸೆಡಾನ್..!!

ಒಟ್ಟಿನಲ್ಲಿ ವಿಶೇಷ ವಿನ್ಯಾಸಗಳನ್ನು ಹೊಂದಿರುವ ಯಾರಿಸ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಸಿಯಾಜ್, ಸ್ಕೋಡಾ ರ‍್ಯಾಪಿಡ್, ಫೋಕ್ಸ್‌ವ್ಯಾಗನ್ ವೆಂಟೊ ಮತ್ತು ಹೋಂಡಾ ಸಿಟಿ ಕಾರುಗಳಿಗೆ ಇದು ತೀವ್ರ ಪೈಪೋಟಿ ನೀಡಲಿದ್ದು, ಈ ಮೂಲಕ ಪ್ರಯಾಣಿಕ ಕಾರು ವಿಭಾಗದಲ್ಲಿ ಮತ್ತೊಮ್ಮೆ ಹೊಸ ಟ್ರೆಂಡ್ ಸೃಷ್ಠಿಸುವ ವಿಶ್ವಾಸದಲ್ಲಿದೆ.

ಹೆಚ್ಚಿನ ಮಾಹಿತಿಗಾಗಿ ಟೆಸ್ಟ್ ಡ್ರೈವ್ ರೀಪೋರ್ಟ್ ಇಲ್ಲಿದೆ ನೋಡಿ- ಭಾರತದಲ್ಲಿ ಬೆಸ್ಟ್ ಸೆಡಾನ್ ಆಗಲಿದೆಯಾ ಟೊಯೊಟಾ ಯಾರಿಸ್?

More from DriveSpark

Article Published On: Friday, May 18, 2018, 13:55 [IST]
English summary
Toyota Yaris Launched In India; Prices Start At Rs 8.75 Lakh.
Read more on toyota sedan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+