ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಫಿಗೊ ಫೇಸ್‍ಲಿಫ್ಟ್ ಸಿಎನ್‍ಜಿ ಕಾರು..
ಅಮೇರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ತಮ್ಮ ಹೊಸ ಫಿಗೊ ಕಾರಿನ ಫೇಸ್‍ಲಿಫ್ಟ್ ಮಾದರಿಯನ್ನು ಪರಿಚಯಿಸಲಿದ್ದು, ಇದೀಗ ಬಿಡುಗಡೆಗು ಮುನ್ನವೆ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.
ಅಮೇರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ತಮ್ಮ ಹೊಸ ಫಿಗೊ ಕಾರಿನ ಫೇಸ್‍ಲಿಫ್ಟ್ ಮಾದರಿಯನ್ನು ಪರಿಚಯಿಸಲಿದ್ದು, ಇದೀಗ ಬಿಡುಗಡೆಗು ಮುನ್ನವೆ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಹೊಸದಾಗಿ ಬಿಡುಗಡೆಗೊಳ್ಳಲಿರುವ ಫಿಗೊ ಫೇಸ್‍ಲಿಫ್ಟ್ ಕಾರು ಹಳೆಯ ಮಾದರಿಗಿಂತ ಹೊಸ ವೈಶಿಷ್ಟ್ಯತೆ ಮತ್ತು ವಿನ್ಯಾಸವನ್ನು ಪಡೆದಿದ್ದು, ಮುಂದಿನ ಎರದಿ ತಿಂಗಳುಗಳೊಳಗೆ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. ಸ್ಪಾಟ್ ಟೆಸ್ಟಿಂಗ್ ವೇಳೆ ಸೆರೆಹಿಡಿದ ಚಿತ್ರವನ್ನು ಗಮನಿಸಿದ್ದಲ್ಲಿ, ಸಂಸ್ಥೆಯು ಫಿಗೊ ಕಾರಿನ ಸಿಎನ್‍ಜಿ ವೇರಿಯಂಟ್ ಅನ್ನು ಸಹ ಬಿಡುಗಡೆಗೊಳಿಸಲಿದೆ ಎಂದು ಖಚಿತವಾಗಿದೆ.

ಚಿತ್ರಗಳಲ್ಲಿ ಕಾಣಿಸಿಕೊಂಡ ಕಾರು ಫೋರ್ಡ್ ಫಿಗೊ ಸಿಎನ್‍ಜಿ ಆವೃತ್ತಿಯಾಗಿದ್ದು, ಸಂಸ್ಥೆಯು ಈ ಕಾರನ್ನು ಮುಂದಿನ ವರ್ಷದಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ. ಫಿಗೊ ಫೇಸ್‍ಲಿಫ್ಟ್ ಕಾರು 1.2 ಲೀಟರ್ 3 ಸಿಲಿಂಡರ್ ಡ್ರ್ಯಾಗನ್ ಸಿರೀಸ್ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಂಡಿರಲಿದೆ.

ಬಳಸಲಾದ ಸಿಎನ್‍ಜಿ ವರ್ಷನ್ ಕಡಿಮೆ ಪವರ್ ಔಟ್‍ಪುಟ್ ಅನ್ನು ಪಡೆದಿರಲಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಿರಲಾಗಿದೆ. ಆದರೆ ಫ್ರೀಸ್ಟೈಲ್ ಕಾರಿನಲ್ಲಿ 95ಬಿಹೆಚ್‍ಪಿ ಮತ್ತು 120ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದೆ.

1.2 ಲೀಟರ್ ಪೆಟ್ರೋಲ್ ಮತ್ತು ಸಿಎನ್‍ಜಿ ವೇರಿಯಂಟ್ ಅಲ್ಲದೆ ಫೋರ್ಡ್ ಫಿಗೊ ಫೇಸ್‍ಲಿಫ್ಟ್ ಕಾರು 1.5 ಲೀಟರ್, 4 ಸಿಲಿಂಡರ್ ಟರ್ಬೋಚಾರ್ಜ್ಡ್ ಟಿಡಿಸಿಐ ಎಂಜಿನ್ ಅನ್ನು ಪಡೆದಿರಲಿದ್ದು, 98.6 ಬಿಹೆಚ್‍ಪಿ ಮತ್ತು 215ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಳ್ಳಲಿದೆ.

ಮೇಲೆ ಹೇಳಿರುವ ಹಾಗೆ ಹೊಸ ಫೋರ್ಡ್ ಫಿಗೊ ಫೇಸ್‍ಲಿಫ್ಟ್ ಕಾರು ಹೊಸ ಅಪ್ಡೇಟ್ ಅನ್ನು ಪಡೆದುಕೊಂಡಿರಲಿದ್ದು, ಕಾರಿನ ಮುಂಭಾಗದಲ್ಲಿ ಸ್ಪೋರ್ಟಿಯರ್ ಗ್ರಿಲ್ ಮತ್ತು ಹೊಸ ಬಂಪರ್ ಅನ್ನು ಪಡೆದಿರಲಿದೆ. ಇನ್ನು ಕಾರಿನ ಹಿಂಭಾಗದಲ್ಲಿ ಕೂಡಾ ಹೊಸ ಬಂಪರ್ ಅನ್ನು ಪಡೆದುಕೊಂಡಿರಲಿದೆ.

ಇದಲ್ಲದೆ ಈ ಕಾರು ಹೊಸ ಲಾಯ್ ಚಕ್ರಗಳನ್ನು ಪಡೆದಿರಲಿದೆ ಎನ್ನಲಾಗಿದ್ದು, ಕಾರಿನ ಒಳಭಾಗದಲ್ಲಿ ನವೀಕರಿಸಲಾದ ಡ್ಯಾಶ್‍ಬೋರ್ಡ್ ವಿನ್ಯಾಸ, SYNC3 ಇನ್ಫೋಟೈನ್ಮೆಂಟ್ ಯೂನಿಟ್‍ನಿಂದ ಸಜ್ಜುಗೊಳಿಸಲಾಗಿದೆ.

ಅಲ್ಲದೆ ಈ ಬಾರಿ ಹೊಸದಾಗಿ ಅಳವಡಿಸಲಾಗಿರುವ ಇನ್ಫೋಟೈನ್ಮೆಂಟ್ ಸಿಸ್ಟಮ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಆಯ್ಕೆಗಳನ್ನು ಸಪೋರ್ಟ್ ಮಾಡುತ್ತವೆ. ಇವುಗಳನ್ನಲ್ಲದೆ ಈ ಕಾರು ಇನ್ನಷ್ಟು ವೈಶಿಷ್ಟ್ಯತೆಗಳನ್ನು ಪಡೆದಿರಲಿದೆ ಎನ್ನಲಾಗಿದ್ದು, ಇದೇ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳ್ಳಲಿದೆ. ಮತ್ತು ಕಾರಿನ ಕುರಿತಾಗಿ ಹೆಚ್ಚು ಮಾಹಿತಿಯು ಅಲಭ್ಯವಿದೆ.


Click it and Unblock the Notifications








