ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಸಿಯಾಜ್ ಕಾರು..
ದೇಶಿಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಹೊಸ ಸಿಯಾಜ್ ಫೇಸ್‍ಲಿಫ್ಟ್ ಕಾರನ್ನು ಇದೇ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ.
ದೇಶಿಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಹೊಸ ಸಿಯಾಜ್ ಫೇಸ್‍ಲಿಫ್ಟ್ ಕಾರನ್ನು ಇದೇ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಗೊಳಿಸಲು ಮುಂದಾಗಿದ್ದು, ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಹೊಸ ಫೇಸ್‌ಲಿಫ್ಟ್ ಮತ್ತೊಮ್ಮೆ ಗ್ರಾಹಕರನ್ನು ಮೋಡಿ ಮಾಡುವ ತವಕದಲ್ಲಿದೆ.

ಡೀಸೆಲ್ ಮಾದರಿಯಲ್ಲಿ ಹೊಸ ಎಂಜಿನ್ ಅನ್ನು ವಿನ್ಯಾಸಗೊಳಿಸಿರುವುದು ಮಾರುತಿ ಸಿಯಾಜ್ ಫೇಸ್‍ಲಿಫ್ಟ್ ಕಾರಿನ ಪ್ರಮುಖ ಬದಲಾವಣೆಯಾಗಿದ್ದು, ಬಿಡುಗಡೆಗು ಮುನ್ನವೆ ಭಾರತೀಯ ರಸ್ಥೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ನಡುಸು ವೇಳೆ ಕಾಣಿಸಿಕೊಂಡಿದೆ.

ಮಾರುಕಟ್ಟೆಯಲ್ಲಿರುವ ಪ್ರಸ್ಥುತ ಸಿಯಾಜ್ ಕಾರು 1.4 ಲೀಟರ್ ಪೆಟ್ರೋಲ್ ಮತ್ತು 1.3 ಡೀಸೆಲ್ ಎಂಜಿನ್‍ಗಳಲ್ಲಿ ಲಭ್ಯವಿದ್ದು, ವರದಿಗಳ ಪ್ರಕಾರ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ 1.3 ಲೀಟರ್ ಡಿಸೇಲ್ ಎಂಜಿನ್ ಬದಲಾಗಿ 1.5 ಲಿಟರ್ ಡೀಸೆಲ್ ಎಂಜಿನ್ ಬಳಕೆ ಮಾಡಲಾಗುತ್ತಿದೆ.

ಜೊತೆಗೆ ಕಾರಿನ ವಿನ್ಯಾಸಗಳಲ್ಲೂ ಗುರುತರ ಬದಲಾವಣೆ ತರಲಾಗಿದ್ದು, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಅಲ್ಲದೇ ಒಳಭಾಗದಲ್ಲಿಯೂ ಸೂಕ್ಷ್ಮ ಬದಲಾವಣೆಗಳನ್ನು ಮಾಡಲಾಗಿದೆ.

ಪ್ರಸ್ಥುತ ಕಾರಿನ ಬೆಲೆಯು 8 ಲಕ್ಷದಿಂದ 12 ಲಕ್ಷದವರೆಗೆ ಲಭ್ಯವಿದ್ದು, ಹೊಸದಾಗಿ ಬಿಡುಗಡೆಯಾಗುವ ಸಿಯಾಜ್ ಫೇಸ್‍ಲಿಫ್ಟ್ ಕಾರಿನ ಬೆಲೆಯು ಇನ್ನು ಅಧಿಕಗೊಳ್ಳಬಹುದು ಎಂದು ಹೇಳಲಾಗಿದೆ. ಇನ್ನು ಹೊಸ ಸಿಯಾಜ್ ಕಾರನ್ನು ಖರೀದಿ ಮಾಡಲು ಬುಕ್ಕಿಂಗ್ ಪ್ರಕ್ರಿಯೆ ಅನ್ನು ಜುಲೈನಿಂದ ಶುರುವಾಗಲಿದೆ ಎನ್ನಲಾಗಿದೆ.

ಭಾರತದ ಮಾರುಕಟ್ಟೆಯಲ್ಲಿ ವಿವಿಧ ಕಾರ್‍ಮೇಕರ್ ಸಂಸ್ಥೆಗಳು ಭವಿಷ್ಯದ ಸೆಡಾನ್ ಕಾರುಗಳನ್ನು ತಯಾರು ಮಾಡುತ್ತಿದ್ದು, ಹೊಂಡಾ ಮತ್ತು ಹ್ಯುಂಡೈ ವೆರ್ನಾ ಹಾಗು ಸಿಟಿ ಕಾರುಗಳಲ್ಲಿ ಹೊಸ ಮಾರ್ಪಾಡುಗಳನ್ನು ತರಲು ಮುಂದಾಗಿವೆ.

ಇನ್ನು ಸಿಯಾಜ್ ಕಾರುಗಳು 2014ರಿಂದ ಯಾವುದೇ ರೀತಿಯಾದ ಬದಲಾವಣೆಗಳನ್ನು ಕಂಡಿಲ್ಲ. ಹೀಗಾಗಿ ತನ್ನ ಎದುರಾಳಿಗಳಿಗೆ ಪೈಪೋಟಿಯನ್ನು ನೀಡಲು ಸಿಯಾಜ್ ಫೇಸ್‍ಲಿಫ್ಟ್ ಕಾರನ್ನು ಹೊಸತನದೊಂದಿಗೆ ಅಭಿವೃದ್ದಿಗೊಳಿಸುತ್ತಿದೆ.

ಇದಲ್ಲದೇ ಪ್ರಮುಖ ವಾಹನ ತಯಾರಕ ಸಂಸ್ಥೆಗಳಾದ ಟೊಯೊಟಾ, ಹೊಂಡಾ ಮತ್ತು ಹ್ಯುಂಡೈ ಕೂಡಾ ತಮ್ಮ ಸೆಡಾನ್ ಕಾರುಗಳಾದ ಯಾರಿಸ್, ಸಿಟಿ ಮತ್ತು ವೆರ್ನಾ ಕಾರುಗಳನ್ನು ಹೊಸ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಪಡಿಸಲಾಗುತ್ತಿದ್ದು, ಕಾರುಗಳ ಎಂಜಿನ್ ಅನ್ನು ಇನ್ನಷ್ಟು ಬಲಶಾಲಿಗೊಳಿಸಲಿವೆ.

ಇದೇ ಉದ್ದೇಶದಿಂದ ತನ್ನ ಎದುರಾಳಿಗಳಂತೆಯೇ ಮಾರುತಿ ಸುಜುಕಿ ಸಂಸ್ಥೆಯು ಕೂಡ ಸಿಯಾಜ್ ಫೇಸ್‍ಲಿಫ್ಟ್ ಕಾರನ್ನು ಬಲಿಷ್ಠವಾದ ಡೀಸೆಲ್ ಎಂಜಿನ್‌ನೊಂದಿಗೆ ಅಭಿವೃದ್ದಿಗೊಳಿಸಲು ಮುಂದಾಗಿದೆ.
Source :cartoq


Click it and Unblock the Notifications








