ಅಪಘಾತದಲ್ಲಿ ಮೃತಪಟ್ಟವರ ಪರಿಹಾರದ ಮೊತ್ತದಲ್ಲಿ ಭಾರೀ ಹೆಚ್ಚಳ

ದೇಶಾದ್ಯಂತ ಪ್ರತಿದಿನ ಹತ್ತಾರು ಭೀಕರ ಅಪಘಾತ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಬಹುತೇಕ ಪ್ರಕರಣಗಳಲ್ಲಿ ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸದ ಹಿನ್ನೆಲೆ ಅನೇಕ ವಾಹನ ಸವಾರರು ಮತ್ತು ಪ್ರಯಾಣಿಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಮೃತರ ಕುಟುಂಬಗಳ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರವು ಸದ್ಯ ಪಾವತಿ ಮಾಡಲಾಗುತ್ತಿರುವ ಪರಿಹಾರದ ಮೊತ್ತದಲ್ಲಿ ಭಾರೀ ಬದಲಾವಣೆ ಮಾಡಿದೆ.

ಅಪಘಾತದಲ್ಲಿ ಮೃತಪಟ್ಟವರ ಪರಿಹಾರದ ಮೊತ್ತದಲ್ಲಿ ಭಾರೀ ಹೆಚ್ಚಳ

ಅಪಘಾತದಲ್ಲಿ ಸಾವನ್ನಪ್ಪಿದ ಮತ್ತು ಗಂಭೀರವಾಗಿ ಗಾಯಗೊಂಡ ಸಂತ್ರಸ್ತರಿಗೆ ಇದುವರೆಗೆ ಒದಗಿಸಲಾಗುತ್ತಿದ್ದ ಪರಿಹಾರದ ಮೊತ್ತವನ್ನು ಹತ್ತು ಪಟ್ಟು ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರವು, ಪರಿಹಾರದ ಮೊತ್ತವನ್ನು ಪಡೆಯುವಲ್ಲಿ ಇದುವರೆಗೆ ಇದ್ದ ಕೆಲವು ನಿಯಮಗಳನ್ನು ಸಡಿಸಲಾಗಿರುವುದು ಮತ್ತೊಂದು ಪ್ರಮುಖ ವಿಚಾರ.

ಅಪಘಾತದಲ್ಲಿ ಮೃತಪಟ್ಟವರ ಪರಿಹಾರದ ಮೊತ್ತದಲ್ಲಿ ಭಾರೀ ಹೆಚ್ಚಳ

ಸದ್ಯ ಅಪಘಾತದಲ್ಲಿ ಮೃತಪಟ್ಟ ವಾಹನ ಮಾಲೀಕನ ಕುಟುಂಬಕ್ಕೆ ಕೇಂದ್ರ ಸರ್ಕಾರವು ರೂ.1 ಲಕ್ಷ ಪರಿಹಾರ ನೀಡುತ್ತಿದ್ದು, ಅಪಘಾತಗಳಲ್ಲಿ ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಸಂತ್ರಸ್ತರಿಗೆ ರೂ.50 ಸಾವಿರ ಪರಿಹಾರ ಒದಗಿಸುತ್ತಿದೆ.

ಅಪಘಾತದಲ್ಲಿ ಮೃತಪಟ್ಟವರ ಪರಿಹಾರದ ಮೊತ್ತದಲ್ಲಿ ಭಾರೀ ಹೆಚ್ಚಳ

ಆದ್ರೆ ಕೆಲವು ಅಪಘಾತ ಪ್ರಕರಣಗಳಲ್ಲಿ ಮೃತರ ಕುಟುಂಬಗಳಿಗೆ ಒದಗಿಸಲಾಗುವ ರೂ. 1 ಲಕ್ಷ ಮತ್ತು ಗಾಯಾಳುಗಳಿಗೆ ಒದಗಿಸಲಾಗುವ ರೂ. 50 ಸಾವಿರ ಪರಿಹಾರ ಯಾವುದಕ್ಕೂ ಸಾಲದು. ಕಾರಣ, ಮೃತ ವ್ಯಕ್ತಿಯನ್ನು ನಂಬಿಕೊಂಡ ಕುಟುಂಬಸ್ಥರ ಪಾಡು ಹೇಳತಿರದು.

ಅಪಘಾತದಲ್ಲಿ ಮೃತಪಟ್ಟವರ ಪರಿಹಾರದ ಮೊತ್ತದಲ್ಲಿ ಭಾರೀ ಹೆಚ್ಚಳ

ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ಪರಿಹಾರ ಮೊತ್ತವನ್ನು ರೂ. 1 ಲಕ್ಷದಿಂದ ರೂ. 15 ಲಕ್ಷಕ್ಕೆ ಹೆಚ್ಚಿಸಿದ್ದು, ಗಾಯಾಳುಗಳಿಗೆ ರೂ.50 ಸಾವಿರದಿಂದ 5 ಲಕ್ಷ ಪರಿಹಾರ ಒದಗಿಸುವ ಸುತ್ತೋಲೆಗೆ ಸಹಿ ಹಾಕಿದೆ. ಜೊತೆಗೆ ಹೊಸ ನಿಯಮವು ಈ ಕೂಡಲೇ ಜಾರಿಗೆ ಬರುವಂತೆ ನಿರ್ದೇಶನ ನೀಡಲಾಗಿದೆ.

ಅಪಘಾತದಲ್ಲಿ ಮೃತಪಟ್ಟವರ ಪರಿಹಾರದ ಮೊತ್ತದಲ್ಲಿ ಭಾರೀ ಹೆಚ್ಚಳ

ಇದಲ್ಲದೇ, ಕೇಂದ್ರ ಸರ್ಕಾರ ಹೊಸ ನಿಯಮದಂತೆ ಅಪಘಾತದಲ್ಲಿ ಮೃತಪಟ್ಟ ಪ್ರತಿಯೊಬ್ಬರು ರೂ. 5 ಲಕ್ಷ ಪರಿಹಾರಕ್ಕೆ ಅರ್ಹರಾಗಿದ್ದು, ಕೆಲವು ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತರ ಕುಟುಂಬಗಳು ಇನ್ನು ಹೆಚ್ಚಿನ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

MOST READ: ನಟ ದರ್ಶನ್ ಕಾರು ಅಪಘಾತ- ಪೊಲೀಸರು ಸುಮೊಟೊ ಕೇಸ್ ಹಾಕಿದ್ದು ಏಕೆ?

ಅಪಘಾತದಲ್ಲಿ ಮೃತಪಟ್ಟವರ ಪರಿಹಾರದ ಮೊತ್ತದಲ್ಲಿ ಭಾರೀ ಹೆಚ್ಚಳ

ಒಟ್ಟಿನಲ್ಲಿ ಕೇಂದ್ರ ಸರ್ಕಾರವು ಅಪಘಾತದಲ್ಲಿ ಮೃತ ಪಟ್ಟ ವ್ಯಕ್ತಿ ಕುಟುಂಬಕ್ಕೆ ಮತ್ತು ಗಂಭೀರವಾಗಿ ಗಾಯಗೊಂಡ ಸಂತ್ರಸ್ತರ ಕುಟುಂಬಗಳಿಗೆ ಆರ್ಥಿಕವಾಗಿ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದು, ಅಷ್ಟೇ ಪ್ರಮಾಣದಲ್ಲಿ ಅಪಘಾತಗಳ ಸಂಖ್ಯೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಹಲವು ಕಠಿಣ ರಸ್ತೆ ನಿಯಮಗಳನ್ನು ಜಾರಿಗೆ ತರುತ್ತಿದೆ.

ಅಪಘಾತದಲ್ಲಿ ಮೃತಪಟ್ಟವರ ಪರಿಹಾರದ ಮೊತ್ತದಲ್ಲಿ ಭಾರೀ ಹೆಚ್ಚಳ

ವಾಹನಗಳ ವಿಮಾ ಪ್ರೀಮಿಯಂ ಮೊತ್ತ ಹೆಚ್ಚಳ?

ಕೇಂದ್ರ ಸರ್ಕಾರವು ಅಪಘಾತದಲ್ಲಿ ಮೃತ ಕುಟುಂಬಗಳಿಗೆ ದೊಡ್ಡ ಮೊತ್ತದ ಪರಿಹಾರ ಒದಗಿಸುವ ಸಲುವಾಗಿ ಪರಿಹಾರದ ಮೊತ್ತದಲ್ಲಿ ಭಾರೀ ಬದಲಾವಣೆ ತಂದಿದ್ದು, ಅತ್ತ ವಾಹನಗಳ ಮೇಲೆ ನಿಗದಿಪಡಿಸುವ ವಿಮಾ ಪ್ರೀಮಿಯಂ ಮೊತ್ತವನ್ನು ಸಹ ಹೆಚ್ಚಿಸಿದೆ.

ಅಪಘಾತದಲ್ಲಿ ಮೃತಪಟ್ಟವರ ಪರಿಹಾರದ ಮೊತ್ತದಲ್ಲಿ ಭಾರೀ ಹೆಚ್ಚಳ

ಇನ್ನು ಮೃತರ ಕುಟುಂಬಗಳಿಗೆ ಕೇಂದ್ರ ಸರ್ಕಾರವು ಒದಗಿಸುವ ರೂ. 15 ಲಕ್ಷ ಪರಿಹಾರ ಮೊತ್ತವನ್ನು ಹೊರತುಪಡಿಸಿ ವಾಹನ ಮಾಲೀಕರು ಪಾವತಿಸುವ ವಿಮಾ ಮೊತ್ತದ ಆಧಾರ ಮೇಲೂ ಸಂತ್ರಸ್ತರ ಪರಿಹಾರವು ನಿಗದಿಯಾಗಲಿದ್ದು, ಇದು ವಾಹನ ಮಾಲೀಕರು ವಿಮಾ ಸಂಸ್ಥೆಗಳೊಂದಿಗೆ ಮಾಡಿಕೊಂಡ ವಿವಿಧ ಮಾದರಿಯ ಇನ್ಸುರೆನ್ಸ್‌ಗಳ ಮೇಲೆ ಪರಿಹಾರದ ಹಣ ನಿರ್ಧಾರವಾಗುತ್ತೆ.

ಅಪಘಾತದಲ್ಲಿ ಮೃತಪಟ್ಟವರ ಪರಿಹಾರದ ಮೊತ್ತದಲ್ಲಿ ಭಾರೀ ಹೆಚ್ಚಳ

ಇದರಲ್ಲಿ ಕೆೇವಲ ಮೃತರ ಕುಟುಂಬಗಳಿಗೆ ಮಾತ್ರವಲ್ಲದೇ ಹಾನಿಗೊಳಗಾದ ವಾಹನಗಳಿಗೂ ಪರಿಹಾರ ಸಿಗಲಿದ್ದು, ಪ್ರತಿಯೊಬ್ಬ ವಾಹನ ಮಾಲೀಕರು ಕೂಡಾ ತಪ್ಪದೇ ಥರ್ಡ್ ಪಾರ್ಟಿ ಇನ್ಸುರೆನ್ಸ್ ಹೊಂದಿರಲೇಬೇಕು. ಆದ್ರೆ ಅದೇನೇ ಇರಲಿ ಸುರಕ್ಷಿತವಾಗಿ ವಾಹನೆ ಚಾಲನೆ ಮಾಡಿದಲ್ಲಿ ನಿಮಗೆ ಅಷ್ಟೇ ಅಲ್ಲದೇ ಇತರಿಗೂ ಒಳ್ಳೆಯದು.

MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಅಪಘಾತದಲ್ಲಿ ಮೃತಪಟ್ಟವರ ಪರಿಹಾರದ ಮೊತ್ತದಲ್ಲಿ ಭಾರೀ ಹೆಚ್ಚಳ

ಹೀಗಾಗಿ ಸರ್ಕಾರಗಳು ನೀಡುವ ಭಾರೀ ಪ್ರಮಾಣದ ಪರಿಹಾರ ಮೊತ್ತ ದೊಡ್ಡ ವಿಚಾರವಲ್ಲ. ನೀವು ಚೆನ್ನಾಗಿದಲ್ಲಿ ಪರಿಹಾರದ ಹಣಕ್ಕಿಂತ ಹತ್ತು ಪಟ್ಟು ಗಳಿಕೆ ಮಾಡಬಹುದು ಅಲ್ಲವೇ?

ಹ್ಯಾಪಿ ಜರ್ನಿ.....

More from DriveSpark

ಮಹೀಂದ್ರಾ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ಮರಾಜೊ ಎಂಪಿವಿ ಕಾರುಗಳ ಫೋಟೋ ಗ್ಯಾಲರಿ..!

Article Published On: Wednesday, September 26, 2018, 11:27 [IST]
English summary
Vehicle Insurance: Accident Cover For Owners Increased To Rs 15 Lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+