ರಾಂಗ್ ಸೈಡ್‍‍ನಲ್ಲಿ ಹೋದರೆ ಜೈಲಿಗೆ ಹೋಗೊದು ಗ್ಯಾರಂಟಿ..

ರಸ್ತೆ ನಿಯಮ ಉಲ್ಲಂಘಯಿಂದಾಗಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆಯು ಹೆಚುತ್ತಿದೆ. ಮಾಹಿತಿಗಳ ಪ್ರಕಾರ 2017ರಲ್ಲಿ ಸುಮಾರು 1.47 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಮರಣಿಸಿದ್ದಾರೆ. ರಸ್ತೆ ನಿಯಮಗಳನ್ನು ಪಾಲಿಸಲು ಪೊಲೀಸರು ಹೊಸ ಯೋಜನಗಳನ್ನು ರೂಪಿಸಿ ಜನಸಾಮಾನ್ಯರಿಗೆ ಟ್ರಾಫಿಕ್ ನಿಯಮಗಳ ಬಗ್ಗೆ ಅರಿವನ್ನು ಮೂಡಿಸುತ್ತಿದ್ದಾರೆ.

ರಾಂಗ್ ಸೈಡ್‍‍ನಲ್ಲಿ ಹೋದರೆ ಜೈಲಿಗೊ ಹೋಗೊದು ಗ್ಯಾರಂಟಿ..

ಪುಣೆ ನಗರದ ಟ್ರಾಫಿಕ್ ಪೊಲೀಸರು ಜನ ಸಾಮಾನ್ಯರಿಗೆ ಟ್ರಾಫಿಕ್ ನಿಯಮದ ಬಗ್ಗೆ ಅರಿವು ಮೂಡಿಸುವಲ್ಲಿ ಹೊಸ ಯೋಜನೆಗಳನ್ನು ಮಾಡುತ್ತಿದ್ದಾರೆ. ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿ ಪೊಲೀಸರಿಂದ ಬಚಾವ್ ಆದವರ ಪಾಸ್‍ಪೋರ್ಟ್ ಅರ್ಜಿಯನ್ನು ರದ್ದು ಮಾಡಲಾಗುವುದು ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ರಾಂಗ್ ಸೈಡ್‍‍ನಲ್ಲಿ ಹೋದರೆ ಜೈಲಿಗೊ ಹೋಗೊದು ಗ್ಯಾರಂಟಿ..

ಇದಲ್ಲದೇ ಕೇವಲ 8 ತಿಂಗಳಿನಲ್ಲಿ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದವರಿಂದ ಸುಮಾರು 22.55 ಕೋಟಿ ವೆಚ್ಚದ ದಂಡವನ್ನು ವಸೂಲಿ ಮಾಡಿದ್ದಾರೆ. ಇದೀಗ ಪುಣೆ ಪೊಲೀಸರು ರಾಂಗ್ ಸೈಡ್‍‍ನಲ್ಲಿ ವಾಹನ ಚಲಾಯಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ರಾಂಗ್ ಸೈಡ್‍‍ನಲ್ಲಿ ಹೋದರೆ ಜೈಲಿಗೊ ಹೋಗೊದು ಗ್ಯಾರಂಟಿ..

ರಸ್ತೆಯಲ್ಲಿ ರಾಂಗ್ ಸೈಡ್ ಚಾಲನೆ ಮಾಡುವುದು ಭಾರತದಲ್ಲಿ ಅತ್ಯಂತ ಸಾಮಾನ್ಯ ದಟ್ಟಣೆ ಆಗಿಹೋಗಿದೆ. ರಾಂಗ್ ಸೈಡ್‍‍ನಲ್ಲಿ ಬರುವ ಮೂಲಕ ಚಾಲಕನು ಮತ್ತೊಂದು ವಾಹನಕ್ಕೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದಾಗಿದ್ದು, ಈಗಾಗಲೆ ನಾವು ಇಂತಹ ಘಟನೆಗಳನ್ನು ನೋಡಿಯೆ ಇರುತ್ತೇವೆ. ಈಗ, ರಾಂಗ್ ಸೈಡ್‍ ಚಾಲನೆ ಮಾಡುವಾಗ ಪೊಲೀಸರಿಗೆ ಕಂಡಲ್ಲಿ 6 ತಿಂಗಳಿನ ಜೈಲು ವಾಸ ಅನುಭವಿಸಬೇಕಾಗುತ್ತದೆ.

ರಾಂಗ್ ಸೈಡ್‍‍ನಲ್ಲಿ ಹೋದರೆ ಜೈಲಿಗೊ ಹೋಗೊದು ಗ್ಯಾರಂಟಿ..

ರಾಂಗ್ ಸೈಡ್ ಡ್ರೈವಿಂಗ್ ಅಭ್ಯಾಸವನ್ನು ನಿಗ್ರಹಿಸಲು, ಪಿಂಪ್ರಿ ಚಿಂಚ್ವಾಡ್ ಪೊಲೀಸರು ಅಂತಹ ಅಪರಾಧಿಗಳ ವಿರುದ್ಧ ಕ್ರಿಮಿನಲ್ ಕೇಸ್ ನೋಂದಾಯಿಸಲು ಪ್ರಾರಂಭಿಸಿದ್ದಾರೆ. ಅವರನ್ನು ಕ್ರಿಮಿನಲ್ ಮೊಕದ್ದಮೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 279 ರ ಅಡಿಯಲ್ಲಿ ದಾಖಲಾಗುವುದು. ತಪ್ಪಿತಸ್ಥರೆಂದು ಕಂಡುಬಂದರೆ, ಆ ವ್ಯಕ್ತಿಯನ್ನು ಆರು ತಿಂಗಳ ವರೆಗೆ ಬಂಧಿಸಲಾಗುವುದು ಅಥವಾ ರೂ 1,000 ದಂಡವನ್ನು ವಿದಿಸಲಾಗುವುದು.

ರಾಂಗ್ ಸೈಡ್‍‍ನಲ್ಲಿ ಹೋದರೆ ಜೈಲಿಗೊ ಹೋಗೊದು ಗ್ಯಾರಂಟಿ..

ಪುಣೆ ಪೋಲಿಸರು ಕೂಡಾ ರಾಂಗ್ ಸೈಡ್ ಡ್ರೈವಿಂಗ್ ಅಪರಾಧಿಗಳ ವಿರುದ್ಧ ಅದೇ ಕಾನೂನನ್ನು ಅನುಸರಿಸಲು ಯೋಜಿಸುತ್ತಿದೆ. ಪಿಂಪ್ರಿ ಚಿಂಚ್ವಾಡ್ ಪೊಲೀಸರು ಈಗಾಗಲೇ ದ್ವಿಚಕ್ರ ವಾಹನಗಳು ಮತ್ತು ಆಟೋಗಳನ್ನು ಒಳಗೊಂಡಂತೆ 19 ವಾಹನಗಳನ್ನು ಬುಕ್ ಮಾಡಿದ್ದಾರೆ. ಐಪಿಸಿ ಸೆಕ್ಷನ್ 279 ರ ಅಡಿಯಲ್ಲಿ ಅಪರಾಧಿಗಳನ್ನು ಬುಕ್ ಮಾಡಲಾಗಿದೆ ಮತ್ತು ಪೊಲೀಸರು ಶೀಘ್ರದಲ್ಲೇ ಅವರ ವಿರುದ್ಧ ಚಾರ್ಜ್ ಶೀಟ್ ಅನ್ನು ಸಲ್ಲಿಸಲಿದ್ದಾರೆ.

ರಾಂಗ್ ಸೈಡ್‍‍ನಲ್ಲಿ ಹೋದರೆ ಜೈಲಿಗೊ ಹೋಗೊದು ಗ್ಯಾರಂಟಿ..

ರಾಂಗ್ ಸೈಡ್‍ ವಾಹನ ಚಾಲನೆಯು ದೇಶದ್ಯಾಂತ ಸಾಮಾನ್ಯವಾಗಿ ಹೋಗಿದೆ. ಸಮಯವನ್ನು ಉಳಿಸಲು ಅಥವಾ ಪ್ರಯಾಣದ ದೂರವನ್ನು ಕಡಿತಗೊಳಿಸಲು ಅನೇಕರು ರಾಂಗ್ ಸೈಡ್‍‍ನಲ್ಲಿ ವಾಹನವನ್ನು ಓಡಿಸುವ ಆಯ್ಕೆಯನ್ನು ಆರಿಸಿಕೊಳ್ಳುತ್ತಾರೆ. ಆದರೆ ರಾಂಗ್ ಸೈಡ್‍‍ನಲ್ಲಿ ವಾಹನ ಚಾಲನೆ ಮಾಡುವ ಮೂಲಕ, ಒಬ್ಬ ವ್ಯಕ್ತಿಯು ತನ್ನ ಮತ್ತು ಇತರರ ಜೀವನವನ್ನು ಅಪಾಯದಲ್ಲಿ ಸಿಲುಕುವ ಹಾಗೆ ಮಾಡುತ್ತಾನೆ.

ರಾಂಗ್ ಸೈಡ್‍‍ನಲ್ಲಿ ಹೋದರೆ ಜೈಲಿಗೊ ಹೋಗೊದು ಗ್ಯಾರಂಟಿ..

ಹೆದ್ದಾರಿಗಳಲ್ಲಿ ರಾಂಗ್ ಸೈಡ್‍ನಲ್ಲಿ ಬರುವುದು ಬಹಳಾ ಅಪಾಯಕಾರಿ ಏಕೆಂದರೆ ಎದುರಿಂದ ಬರುವ ವಾಹನ ಅತೀ ವೇಗದಲ್ಲಿ ಬರುತ್ತಿರುತ್ತದೆ. ಇದರಿಂದ ನಿಮ್ಮ ಮತ್ತು ಎದುರಿರುವ ವಾಹನಕ್ಕೂ ಹಾಗು ವಾಹನದಲ್ಲಿರುವವರಿಗು ಅಪಾಯ ತಪ್ಪಿದ್ದಲ್ಲ.

ರಾಂಗ್ ಸೈಡ್‍‍ನಲ್ಲಿ ಹೋದರೆ ಜೈಲಿಗೊ ಹೋಗೊದು ಗ್ಯಾರಂಟಿ..

ಇನ್ನು ರಾತ್ರಿಯ ವೇಳೆ ರಾಂಗ್ ಸೈಡ್‍‍ನಲ್ಲಿ ವಾಹನ ಚಾಲಾಯಿಸುವುದರ ಮೂಲಕ ಅಪಘಾತಗಳು ಸಂಭವಿಸಬಹುದು, ಏಕೆಂದರೆ ನೀವು ರಾಂಗ್ ಸೈಡ್‍‍ನಲ್ಲಿ ಹೋಗುತ್ತಿರುವಾಗ ನೀವು ಎದುರಿನ ವಾಹನಕ್ಕೆ ಸಿಗ್ನಲ್ ಕೊಡಲು ಬಳಸುವ ಹೈ ಬೀಮ್ ಲೈಟ್‍‍ಗಳು ಎದುರಿರುವ ವಾಹನದಲ್ಲಿನ ಚಾಲಕನ ಡ್ರೈವಿಂಗ್ ನಿಯಂತ್ರಣವನ್ನು ತಪ್ಪು ದಾರಿಯನ್ನು ಹಿಡುಯುವ ಹಾಗೆ ಮಾಡುತ್ತದೆ.

ರಾಂಗ್ ಸೈಡ್‍‍ನಲ್ಲಿ ಹೋದರೆ ಜೈಲಿಗೊ ಹೋಗೊದು ಗ್ಯಾರಂಟಿ..

ಈ ನಿಟ್ಟಿನಲ್ಲಿ ನೀವು ಟ್ರಾಫಿಕ್ ನಿಯಮವನ್ನು ಅನುಸರಿಸಲೇಬೇಕಾಗಿದ್ದು, ರಾಂಗ್ ಸೈಡ್‍‍ನಲ್ಲಿ ವಾಹನ ಚಲಾಯಿಸದಿರಿ. ತಲುಪಬೇಕಾದ ಗಮ್ಯವನ್ನು ಬೇಗ ತಲುಪಲು ಜೀವನದಲ್ಲಾಗಲಿ ಅಥವಾ ರಸ್ತೆಯ ಮೇಲಾಗಲಿ ರಾಂಗ್ ಸೈಡ್‍ನಲ್ಲಿ ಹೋಗುವ ಆಯ್ಕೆಯನ್ನು ಆರಿಸಿಕೊಂಡರೆ ಅಪಾಯ ತಪ್ಪಿದ್ದಲ್ಲ.

ರಾಂಗ್ ಸೈಡ್‍‍ನಲ್ಲಿ ಹೋದರೆ ಜೈಲಿಗೊ ಹೋಗೊದು ಗ್ಯಾರಂಟಿ..

ರಾಂಗ್ ಸೈಡ್‍‍ನಲ್ಲಿ ವಾಹನ ಚಾಲಾಯಿಸುವವರ ಬಗ್ಗೆ ಪುಣೆ ಪೊಲೀಸರು ತೆಗೆದುಕೊಂಡ ಈ ನಿರ್ಣಯವನ್ನು ನಾವು ಮೆಚ್ಚಲೇಬೇಕು.

More from DriveSpark

ಅಗ್ಗದ ಬೆಲೆಯಲ್ಲಿ ಟಾಟಾ ಮೋಟಾರ್ಸ್ ಬಿಡುಗಡೆಗೊಳಿಸಿದ ಟಿಯಾಗೊ ಎನ್‍ಆರ್‍‍ಜಿ ಕಾರಿನ ಚಿತ್ರಗಳು ಹೇಗಿದೆ ನೋಡಿ..

Article Published On: Saturday, September 15, 2018, 18:21 [IST]
English summary
Driving On The Wrong Side Of The Road Can Land You In Jail.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+