ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್‌ ನಡೆಸಿದ 2019ರ ಜೀಪ್ ರ‍್ಯಾಂಗ್ಲರ್

ಅಮೆರಿಕದ ಜನಪ್ರಿಯ ಕಾರು ಉತ್ಪಾದನಾ ಜೀಪ್ ಸಂಸ್ಥೆಯು ಮೊದಲ ಬಾರಿಗೆ ಭಾರತದಲ್ಲಿ 2019ರ ರ‍್ಯಾಂಗ್ಲರ್ ಎಸ್‌ಯುವಿ ಆವೃತ್ತಿಯನ್ನು ಸ್ಪಾಟ್ ಟೆಸ್ಟಿಂಗ್ ನಡೆಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ಸುಳಿವು ನೀಡಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್‌ ನಡೆಸಿದ 2019ರ ಜೀಪ್ ರ‍್ಯಾಂಗ್ಲರ್

2017ರ ಲಾಸ್ ಏಂಜಲೀಸ್ ಆಟೋ ಮೇಳದಲ್ಲಿ ಹೊಸ ಮಾದರಿಯ ರ‍್ಯಾಂಗ್ಲರ್ ಎಸ್‌ಯುವಿ ಕಾರುಗಳನ್ನು ಪ್ರದರ್ಶನಗೊಳಿಸಿದ್ದ ಜೀಪ್ ಸಂಸ್ಥೆಯು ಇದೀಗ ಬಿಡುಗಡೆಗೊಳಿಸಲು ಸಿದ್ದವಾಗುತ್ತಿದ್ದು, ಪುಣೆಯ ಪ್ರಮುಖ ಕಡೆಗಳಲ್ಲಿ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಾಗಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಸ್ಪಾಟ್ ಟೆಸ್ಟಿಂಗ್‌ನಲ್ಲಿ ಕಾಣಿಸಿಕೊಂಡಿರುವ ರ‍್ಯಾಂಗ್ಲರ್ ಎಸ್‌ಯುವಿ ಈ ಹಿಂದಿನ ಮಾದರಿಗಿಂತಲೂ ಭಾರೀ ಬದಲಾವಣೆ ಹೊಂದಿದ್ದು, ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ದೊಡ್ಡದಾದ ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಎಲ್ಇಡಿ ಹಗಲಿನ ರನ್ನಿಂಗ್ ಲೈಟ್‌ಗಳನ್ನು ಫೆಂಡರ್‌ಗಳಲ್ಲಿ ಹೊಂದಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್‌ ನಡೆಸಿದ 2019ರ ಜೀಪ್ ರ‍್ಯಾಂಗ್ಲರ್

ಜೊತೆಗೆ ಕಾರಿನ ವಿಂಡೋಗಳುಜೊತೆಗೆ ಕಾರಿನ ಕಿಟಕಿಗಳು ಈ ಹಿಂದಿನ ಮಾದರಿಗಳಿಂತ ಸ್ವಲ್ಪ ಮಟ್ಟಿಗೆ ದೊಡ್ಡದಾಗಿದ್ದು, ವಿಸ್ತರಿತ ವಿಂಡ್ ಸ್ಕ್ರೀನ್, ಸ್ಲಿಕ್ ಎಲ್ಇಡಿ ಟೈಲ್ ಲೈಟ್ ಕ್ಲಸ್ಟರ್. ವೀಲ್ ಮತ್ತು ಪರಿಷ್ಕರಿಸಿದ ಬಂಪರ್ ಕೂಡಾ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್‌ ನಡೆಸಿದ 2019ರ ಜೀಪ್ ರ‍್ಯಾಂಗ್ಲರ್

ಇನ್ನು ಕಾರಿನ ಇಂಟಿರಿಯರ್ ವಿನ್ಯಾಸಗಳ ಬಗೆಗೆ ಹೇಳುವುದಾದರೇ, ಈ ಹಿಂದಿನ ಮಾದರಿಯಂತೆಯೇ ಬಹುತೇಕ ಫೀಚರ್ಸ್‌ಗಳು ಹೊಸ ಮಾದರಿಯಲ್ಲೂ ಮುಂದುವರಿಸಲಾಗಿದ್ದು, ಸುಧಾರಿತ ಡ್ಯಾಶ್‌ಬೋರ್ಡ್, ಚಾಲಕನ ಭಾಗದಲ್ಲಿ 7 ಇಂಚಿನ್ ಎಲ್‌ಸಿಡಿ ಮಾಹಿತಿ ಪರದೆ ಮತ್ತು 8.4 ಇಂಚಿನ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಪಡೆದಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್‌ ನಡೆಸಿದ 2019ರ ಜೀಪ್ ರ‍್ಯಾಂಗ್ಲರ್

ಹಾಗೆಯೇ 4ನೇ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣವಾಗುತ್ತಿರುವ 2019ರ ಜೀಪ್ ರ‍್ಯಾಂಗ್ಲರ್‌ ಮಾದರಿಗಳು ಈ ಬಾರಿ ವೀಲ್‌ಬೇಸ್‌ನಲ್ಲೂ ಬದಲಾವಣೆ ಹೊಂದಿದ್ದು, ಪರಿಣಾಮ ಲೆಗ್ ರೂಮಂ ವಿಸ್ತರಣೆ ಮಾಡುವ ಮೂಲಕ ಆಪ್ ರೋಡ್ ಪ್ರಿಯರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಾಗಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್‌ ನಡೆಸಿದ 2019ರ ಜೀಪ್ ರ‍್ಯಾಂಗ್ಲರ್

ಎಂಜಿನ್ ಸಾಮರ್ಥ್ಯ

ಸದ್ಯ ವಿದೇಶಿ ಮಾರುಕಟ್ಟೆಯಲ್ಲಿರುವ ಹೊಸ ಜೀಪ್ ರ‍್ಯಾಂಗ್ಲರ್ ಆವೃತ್ತಿಗಳು 2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 2.2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಇದೇ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲೂ ಬಿಡುಗಡೆಯಾಗಬಹುದು ಎನ್ನಲಾಗಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್‌ ನಡೆಸಿದ 2019ರ ಜೀಪ್ ರ‍್ಯಾಂಗ್ಲರ್

ಇದರೊಂದಿಗೆ ಹೈ ಪರ್ಫಾಮೆನ್ಸ್ ಬಯಸುವ ಗ್ರಾಹಕರಿಗೆ ಸಾಂಪ್ರದಾಯಿಕ ಎಂಜಿನ್‌ಗಳನ್ನು ಹೊರತುಪಡಿಸಿ 3.6-ಲೀಟರ್ ವಿ6 ಎಂಜಿನ್‌ ಆಯ್ಕೆ ಕೂಡಾ ಲಭ್ಯವಿರಲಿದ್ದು, ಮೂರು ಬಾಗಿಲು ಮತ್ತು ಐದು ಬಾಗಿಲು ಆಯ್ಕೆಯೊಂದಿಗೆ ಹೊಸ ಕಾರು ಮಾರುಕಟ್ಟೆಗೆ ಬರಲಿದೆ.

MOST READ: ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್‌ ನಡೆಸಿದ 2019ರ ಜೀಪ್ ರ‍್ಯಾಂಗ್ಲರ್

ಹಾಗೆಯೇ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಲಿರುವ ಹೊಸ ಜೀಪ್ ರ‍್ಯಾಂಗ್ಲರ್‌ಗಳು, ಎಕ್ಸ್‌ಶೋರಂ ಪ್ರಕಾರ ಬರೋಬ್ಬರಿ 75 ಲಕ್ಷ ಬೆಲೆ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

Source: overdrive

Most Read Articles

Kannada
Read more on ಜೀಪ್ jeep
English summary
2019 Jeep Wrangler Seen Testing Without Camo. Read in Kannada.
Story first published: Saturday, April 27, 2019, 17:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X