ಭಾರತಕ್ಕೆ ಕಾಲಿಡಲಿದೆ ಚೀನಾಗಿಂತ ಭಿನ್ನ ಮಾದರಿಯ ಹ್ಯುಂಡೈ ಕ್ರೆಟಾ

ಚೀನಾ ಮತ್ತು ಭಾರತ ದೇಶಗಳು ವಿಭಿನ್ನವಾದ ಆಚಾರ, ವಿಚಾರ, ಸಂಸ್ಕೃತಿ ಮತ್ತು ಭೂಪ್ರದೇಶವನ್ನು ಹೊಂದಿವೆ. ಎರಡು ದೇಶದ ಆಹಾರದಲ್ಲಿ ವಿಭಿನ್ನ ಅಭಿರುಚಿಯನ್ನು ಹೊಂದಿದ್ದು, ಹಾಗೆಯೇ ಕಾರುಗಳ ವಿನ್ಯಾಸದಲ್ಲಿಯೂ ಕೂಡ ವಿಭಿನ್ನ ಅಭಿರುಚಿಯನ್ನು ಹೊಂದಿವೆ. ಇದನ್ನು ಹ್ಯುಂಡೈ ಕಂಪನಿಯು ಚೆನ್ನಾಗಿ ಅರ್ಥಮಾಡಿಕೊಂಡಿದೆ. ಇದೇ ಕಾರಣದಿಂದ ಹ್ಯುಂಡೈ ಕ್ರೆಟಾ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಭಾರತಕ್ಕೆ ಕಾಲಿಡಲಿದೆ ಚೀನಾಗಿಂತ ಭಿನ್ನ ಮಾದರಿಯ ಹ್ಯುಂಡೈ ಕ್ರೆಟಾ

ಹ್ಯುಂಡೈ ಕಂಪನಿಯು 2020ರ ಕ್ರೆಟಾವನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಮೊದಲು ಐಎಕ್ಸ್25 ವಿನ್ಯಾಸದಲ್ಲಿ ಕೆಲವು ಬದಲಾವಣೆ ತರಲು ಮುಂದಾಗಿದೆ. ಎರಡನೇ ಜನರೇಷನ್ ಕ್ರೆಟಾ ಮುಂದಿನ ವರ್ಷದ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಚೀನಾದಲ್ಲಿ ಬಿಡುಗಡೆಯಾಗಿರುವ ಅದೇ ಮಾದರಿಯು ಭಾರತದಲ್ಲಿ ಬಿಡುಗಡೆಗೊಳಿಸುವುದಾದರೂ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳಿವೆ.

ಭಾರತಕ್ಕೆ ಕಾಲಿಡಲಿದೆ ಚೀನಾಗಿಂತ ಭಿನ್ನ ಮಾದರಿಯ ಹ್ಯುಂಡೈ ಕ್ರೆಟಾ

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಕ್ರೆಟಾ ಮಾದರಿಯ ಸ್ಪೈ ಚಿತ್ರವನ್ನು ರಶ್‍‍ಲೇನ್ ಬಹಿರಂಗಪಡಿಸಿದೆ. ಚೀನಾ ಮಾದರಿಯ ಐಎಕ್ಸ್25 ಮಾದರಿಯಾದರೂ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಭಾರತಕ್ಕೆ ಕಾಲಿಡಲಿದೆ ಚೀನಾಗಿಂತ ಭಿನ್ನ ಮಾದರಿಯ ಹ್ಯುಂಡೈ ಕ್ರೆಟಾ

ಸ್ಪೈ ಚಿತ್ರದಲ್ಲಿ ಕೆಲವು ಮಾಹಿತಿಗಳು ಬಹಿರಂಗವಾಗಿದೆ. ಅದರಲ್ಲಿ ಚೀನಾದಲ್ಲಿ ಬಿಡುಗಡೆಯಾದ ಕ್ರೆಟಾದಲ್ಲಿ ಹನಿಕ್ಯೊಬ್ ಗ್ರಿಲ್ ಹೊಂದಿದ್ದರೆ, ಭಾರತದ ಮಾದರಿಯಲ್ಲಿ ಚೆಕರ್ಡ್ ಪ್ಯಾಟರ್ನ್ ಗ್ರಿಲ್ ಅನ್ನು ಹೊಂದಿದೆ. ಐಎಕ್ಸ್ 25 ಅಲ್ಲಿ ಇರುವ ಅಲಾಯ್ ವ್ಹೀಲ್‍ಗಳಿಗಿಂತ ಭಿನ್ನವಾಗಿ ಕಂಡು ಬಂದಿದೆ. ಇಷ್ಟು ಮಾಹಿತಿಗಳು ಮಾತ್ರ ಸ್ಪೈ ಚಿತ್ರದಲ್ಲಿ ಬಹಿರಂಗವಾಗಿದೆ.

ಭಾರತಕ್ಕೆ ಕಾಲಿಡಲಿದೆ ಚೀನಾಗಿಂತ ಭಿನ್ನ ಮಾದರಿಯ ಹ್ಯುಂಡೈ ಕ್ರೆಟಾ

ಉಳಿದಂತೆ ಪ್ರಸ್ತತ ಜನರೇಷನ್ ಮಾದರಿಗೆ ಹೊಸ ಜನರೇಷನ್ ಹ್ಯುಂಡೈ ಹೋಲಿಸಿದರೆ ಕ್ರೆಟಾ 30 ಎಂಎಂ ಉದ್ದ, 10 ಎಂಎಂ ಅಗಲವನ್ನು ಹೊಂದಿದೆ. ಪ್ರಸ್ತುತ ಜನರೇಷನ್ ಎಸ್‍‍ಯು‍ವಿ ಶಾರ್ಪ್ ವಿನ್ಯಾಸವನ್ನು ಹೊಂದಿದ್ದರೆ ಹೊಸ ಮಾದರಿಯಲ್ಲಿ ರೌಂಡಡ್ ವಿನ್ಯಾಸವನ್ನು ಹೊಂದಿರಲಿದೆ.

ಭಾರತಕ್ಕೆ ಕಾಲಿಡಲಿದೆ ಚೀನಾಗಿಂತ ಭಿನ್ನ ಮಾದರಿಯ ಹ್ಯುಂಡೈ ಕ್ರೆಟಾ

ಹೊಸ ಎಸ್‍‍ಯುವಿಯ ಮುಂಭಾಗದಲ್ಲಿ ಹೊಸ ಹೆಡ್‍‍ಲ್ಯಾಂಪ್ ಮತ್ತು ಸ್ಲಿಮ್ ಆಕಾರದ ಎಲ್ಇ‍ಡಿ ಡಿಆರ್‍ಎಲ್‍, ಸ್ಪ್ಲಿಟ್ ಹೆಡ್‍‍ಲ್ಯಾಂಪ್ ಸೆಟ್ ಅಪ್, ಹೆಡ್‍‍ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿದೆ.

ಭಾರತಕ್ಕೆ ಕಾಲಿಡಲಿದೆ ಚೀನಾಗಿಂತ ಭಿನ್ನ ಮಾದರಿಯ ಹ್ಯುಂಡೈ ಕ್ರೆಟಾ

ಹೊಸ ಹ್ಯುಂಡೈ ಕ್ರೆಟಾ ಇಂಟಿರಿಯರ್‍‍ನಲ್ಲಿ ಹೊಸ 10.25 ಇಂಚಿನ ಟಚ್‍‍ಸ್ಕ್ರೀನ್ ಇನ್ಪೋಟೇನ್‍ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ. ಹೊಸ ಕಾರಿನಲ್ಲಿ ಆಕರ್ಷಕ ಡ್ಯಾಶ್ ಬೋರ್ಡ್ ಹೊಂದಿರಲಿದೆ. ಇದರಲ್ಲಿ ಟಯರ್ ಪ್ರೆಶರ್ ಮಾನಿಟರ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಫ್ಲಾಟ್ - ಬಾಟಮ್ ಸ್ಟೀರಿಂಗ್ ವ್ಹೀಲ್, ಆಡಿಯೋ ಸಿಸ್ಟಂ, ಮೌಂಟೆಡ್ ಕಂಟ್ರೋಲ್ ಅನ್ನು ಹೊಂದಿದೆ. ಇಂಟರ್‍‍ನೆಟ್ ಕನೆಕ್ಟ್ ಹೊಂದಿರುವ ಹಲವಾರು ಇತರ ವೈಶಿಷ್ಟ್ಯಗಳು ಹೊಂದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಭಾರತಕ್ಕೆ ಕಾಲಿಡಲಿದೆ ಚೀನಾಗಿಂತ ಭಿನ್ನ ಮಾದರಿಯ ಹ್ಯುಂಡೈ ಕ್ರೆಟಾ

ಕೊರಿಯನ್ ವಾಹನ ಉತ್ಪಾದನಾ ಸಂಸ್ಥೆ ಹ್ಯುಂಡೈ ಹೊಸ ಜನರೇಷನ್ ಕ್ರೆಟಾ ಎಸ್‍‍ಯು‍ವಿನಲ್ಲಿ ಬಿಎಸ್-6 ಎಂಜಿನ್ ಅನ್ನು ಹೊಂದಲಿದೆ. ಇದರಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ 114 ಬಿಎಚ್‍ಪಿ ಪವರ್ ಮತ್ತು 144 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.5 ಲೀಟರ್ ಡೀಸೆಲ್ ಎಂಜಿನ್ 114 ಬಿಎಚ್‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಎಂಜಿನ್‍‍ಗಳು ಕಿಯಾ ಸೆಲ್ಟೋಸ್ ಎಂಜಿನ್ ಮಾದರಿಯಲ್ಲಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಭಾರತಕ್ಕೆ ಕಾಲಿಡಲಿದೆ ಚೀನಾಗಿಂತ ಭಿನ್ನ ಮಾದರಿಯ ಹ್ಯುಂಡೈ ಕ್ರೆಟಾ

ಹೊಸ ಜನರೇಷನ್ ಕ್ರೆಟಾ ಎಸ್‍‍ಯು‍ವಿನಲ್ಲಿ 360 ಡಿಗ್ರಿ ಕ್ಯಾಮೆರಾ, ಲೇನ್ ಕೀಪ್ ಅಸಿಸ್ಟ್, ಫ್ರಂಟ್ ವಾರ್ನಿಂಗ್ ಬ್ರೇಕಿಂಗ್ ಸಿಸ್ಟಂ‍ನೊಂದಿಗೆ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಂ ಮತ್ತು ಪನೋರಮಿಕ್ ಸನ್‍‍ರೂಫ್ ಅನ್ನು ಹೊಂದಿದೆ. ಸುರಕ್ಷತಾ ಉಪಕರಣಗಳನ್ನು ಮತ್ತು ವೈಶಿಷ್ಟಗಳನ್ನು ಅಪ್‍‍ಡೇಟ್ ಮಾಡಲಾಗಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಭಾರತಕ್ಕೆ ಕಾಲಿಡಲಿದೆ ಚೀನಾಗಿಂತ ಭಿನ್ನ ಮಾದರಿಯ ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ಎಸ್‍‍ಯುವಿಯು ಕಳೆದ ತಿಂಗಳಲ್ಲಿ ಉತ್ತಮವಾಗಿ ಮಾರಾಟವಾಗಿದೆ. ಭಾರತೀಯರ ಗಮನಸೆಳೆಯಲು ವಿನ್ಯಾಸದಲ್ಲಿ ಬದಲಾವಣೆಗಳನ್ನು ನಡೆಸಿದೆ. ಇದರೊಂದಿಗೆ ಹಲವಾರು ಉನ್ನತ ವೈಶಿಷ್ಟ್ಯಗಳನ್ನು ಹೊಂದಿದರಿಂದ ಈ ಹೊಸ ಎಸ್‍‍ಯುವಿ ಕಿಯಾ, ಸೆಲ್ಟೋಸ್ ಮತ್ತು ಎಂಜಿ ಹೆಕ್ಟರ್ ಎಸ್‍‍ಯು‍ವಿಗಳಿಗೆ ಪೈಪೋಟಿ ನೀಡಲಿದೆ.

Article Published On: Saturday, November 23, 2019, 15:28 [IST]
English summary
2020 Hyundai Creta spied at night – LED headlight and DRL revealed - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+