ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಆಪಲ್ ವಾಚ್‍‍ನಲ್ಲಿರುವ ಹಾರ್ಡ್ ಫಾಲ್ ಎಂಬ ಫೀಚರ್ ವಯಸ್ಸಾದ ವ್ಯಕ್ತಿಯೊಬ್ಬರ ಪ್ರಾಣ ಉಳಿಸಿದೆ. ಈ ಘಟನೆಯು ಅಮೇರಿಕಾದ ವಾಷಿಂಗ್ಟನ್‍‍ನ ರಿವರ್ ಸೈಡ್ ಸ್ಟೇಟ್ ಪಾರ್ಕ್‍‍ನಲ್ಲಿ ವೃದ್ದರೊಬ್ಬರು ಬೈಕ್ ಸವಾರಿ ಮಾಡುತ್ತಿದ್ದ ವೇಳೆ ಸಂಭವಿಸಿದೆ.

ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಗೇಬ್ ಬರ್ಡೆಟ್ ಎಂಬುವವರು ತಮ್ಮ ತಂದೆಯ ಆಪಲ್ ವಾಚ್‍‍ನಲ್ಲಿದ್ದ ಅಲರ್ಟ್ ಎಮರ್ಜೆನ್ಸಿ ಸೇವೆಯಿಂದಾಗಿ ತಮ್ಮ ತಂದೆಯ ಪ್ರಾಣ ಉಳಿಯಿತೆಂಬ ಕಾರಣಕ್ಕೆ ಆಪಲ್ ವಾಚ್ ಅನ್ನು ಶ್ಲಾಘಿಸಿದ್ದಾರೆ. ಮನುಷ್ಯನು ಹಿಂದೆಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಟೆಕ್ನಾಲಜಿಯ ಮೇಲೆ ಅವಲಂಬಿತನಾಗಿದ್ದಾನೆ.

ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ದಿನ ಕಳೆದಂತೆ ಈ ಅವಲಂಬನೆಯು ಹೆಚ್ಚಾಗುತ್ತಿದೆ. ಸ್ಮಾರ್ಟ್ ಫೋನ್ ಹಾಗೂ ಇತರ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್‍‍ಗಳ ಮೇಲೆ ಹೆಚ್ಚು ಅವಲಂಬಿತವಾಗುವುದು ಅಪಾಯಕಾರಿ. ಟೆಕ್ನಾಲಜಿಯನ್ನು ಬಳಸುವುದೇ ತಪ್ಪು ಎಂದಾದರೆ ಈ ಘಟನೆಯಲ್ಲಿ ತಂದೆಯ ಪ್ರಾಣವೇ ಉಳಿಯುತ್ತಿರಲಿಲ್ಲ. ಆಪಲ್ ಕಂಪನಿಯು ತನ್ನ ಆಪಲ್ ವಾಚ್‍‍ನಲ್ಲಿ ಹಾರ್ಡ್ ಫಾಲ್ ಫೀಚರ್ ಅನ್ನು ಅಳವಡಿಸಿದೆ.

ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಈ ಫೀಚರ್‍‍ನ ಮುಖ್ಯ ಉದ್ದೇಶವೆಂದರೆ ಈ ವಾಚ್ ಬಳಸುತ್ತಿರುವವರು ಜೋರಾಗಿ ಕೆಳಗೆ ಬಿದ್ದರೆ ಅಂತಹವರಿಗೆ ಈ ಫೀಚರ್ ಎಚ್ಚರಿಕೆ ನೀಡುತ್ತದೆ. ಈ ಫೀಚರ್ ಗೈರೊಸ್ಕೋಪ್ ಹಾಗೂ ಆಕ್ಸೆಲೆರೊಮೀಟರ್‍‍ಗಳನ್ನು ಬಳಸಿ ಈ ರೀತಿಯ ಎಚ್ಚರಿಕೆಗಳನ್ನು ನೀಡುತ್ತದೆ. ಆ ರೀತಿಯ ಸಂದರ್ಭದಲ್ಲಿ ಈ ಫೀಚರ್ ಸ್ಕ್ರೀನ್ ಮೇಲೆ ಸಂದೇಶವೊಂದನ್ನು ಬಿತ್ತರಿಸುತ್ತದೆ.

ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಳಕೆದಾರನಿಗೆ ಎಸ್‍ಒ‍ಎಸ್ ಸಂದೇಶ ಕಳುಹಿಸುವಂತೆ ಸೂಚಿಸುತ್ತದೆ. ಬಳಕೆದಾರನು ಯಾವುದೇ ಪ್ರತಿಕ್ರಿಯೆ ನೀಡದಿದ್ದಲ್ಲಿ ಈ ಫೀಚರ್ ಆಟೋಮ್ಯಾಟಿಕ್ ಆಗಿ ತುರ್ತು ಸಂದೇಶವನ್ನು ಎಮರ್ಜೆನ್ಸಿ ಕಾಂಟಾಕ್ಟಿಗೆ ಕಳುಹಿಸುತ್ತದೆ. ಈ ಘಟನೆಯಲ್ಲಿ ತಂದೆ ಬಾಬ್ ಬರ್ಡೆಟ್‍‍ರವರು ಹಾರ್ಡ್ ಫಾಲ್ ಫೀಚರ್ ಹೊಂದಿರುವ ಆಪಲ್ ವಾಚ್ ಧರಿಸಿದ್ದರು.

ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಈ ಮೊದಲೇ ನಿರ್ಧರಿಸಿದ್ದ ಜಾಗದಲ್ಲಿ ತಮ್ಮ ಮಗ ಗೇಬ್‍‍ರವರನ್ನು ಭೇಟಿಯಾಗಲು ಬಯಸಿದ್ದರು. ನಿಗದಿತ ಸಮಯಕ್ಕೆ ತಂದೆ ಬರಲಿಲ್ಲ. ಆದರೆ ಮಗನಿಗೆ ತಮ್ಮ ತಂದೆಯ ಆಪಲ್ ವಾಚ್‍‍ನಿಂದ ತುರ್ತು ಸಂದೇಶ ಬಂದಿದೆ. ಆ ಸಂದೇಶದಲ್ಲಿ, ಬಾಬ್ ಬರ್ಡೆಟ್‍‍ರವರು ಎಮರ್ಜೆನ್ಸಿ ಸೇವೆ ಕರೆ ಮಾಡಿದ್ದು, ಅವರು ಧರಿಸಿದ್ದ ಆಪಲ್ ವಾಚ್ ಹಾರ್ಡ್ ಫಾಲ್ ಅನ್ನು ಪತ್ತೆ ಹಚ್ಚಿದೆ.

ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಾಬ್‍‍ರವರು ನಿಮ್ಮನ್ನು ತುರ್ತು ಸಂಪರ್ಕದಲ್ಲಿ ಹೆಸರಿಸಿರುವುದರಿಂದ ನಿಮಗೆ ಈ ತುರ್ತು ಸಂದೇಶ ಬಂದಿದೆ ಎಂದು ಹೇಳಲಾಗಿತ್ತು. ಗೇಬ್‍‍ರವರು ಆ ಜಾಗಕ್ಕೆ ತಲುಪಿದಾಗ ಆ ಜಾಗದಲ್ಲಿ ತಮ್ಮ ತಂದೆ ಇಲ್ಲದೇ ಇರುವುದು ಕಂಡು ಬಂದಿದೆ. ನಂತರ ಅವರಿಗೆ ಆಪಲ್ ವಾಚ್‍‍ನಿಂದ ಮತ್ತೊಂದು ಸಂದೇಶ ಬಂದಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಆ ಸಂದೇಶದಲ್ಲಿ ತಮ್ಮ ತಂದೆ ಸೆಕ್ರೆಡ್ ಹಾರ್ಟ್ ಮೆಡಿಕಲ್ ಸೆಂಟರಿನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಆಪಲ್ ವಾಚ್ ಬಾಬ್‍‍ರವರು ಇದ್ದ ಸ್ಥಳದ ಬಗೆಗಿನ ಮಾಹಿತಿಯನ್ನು 911ಗೆ ಕಳುಹಿಸಿದೆ. 911 ಅಮೇರಿಕಾದಲ್ಲಿರುವ ತುರ್ತು ಸೇವೆಯ ನಂಬರಾಗಿದೆ. ನಂತರ ಬಾಬ್‍‍ರವರು ಇದ್ದ ಸ್ಥಳಕ್ಕೆ ತಲುಪಿದ ಆಂಬುಲೆನ್ಸ್ ಅಲ್ಲಿಂದ ಬಾಬ್‍‍ರವರನ್ನು ಕರೆದೊಯ್ದಿದೆ. ಮೌಂಟೆನ್ ಬೈಕಿಂಗ್ ಸಾಹಸಮಯವಾದ ಕ್ರೀಡೆಯಾಗಿದ್ದು, ಅಪಾಯಕಾರಿಯೂ ಆಗಿದೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಸ್ವಲ್ಪ ಹೆಚ್ಚು ಕಡಿಮೆಯಾದರೂ ಪ್ರಾಣಕ್ಕೆ ಸಂಚಕಾರ ತರುತ್ತದೆ. ಈ ಕ್ರೀಡೆಯಲ್ಲಿ ಪಾಲ್ಗೊಂಡಿದ್ದ ಬಾಬ್ ಬರ್ಡೆಟ್‍‍ರವರ ಬೈಕ್ ಪಲ್ಟಿ ಹೊಡೆದಿದೆ. ಕೆಳಗೆ ಬಿದ್ದ ಬಾಬ್‍‍ರವರ ತಲೆಗೆ ಪೆಟ್ಟು ಬಿದ್ದಿದೆ. ಇದರಿಂದಾಗಿ ಅವರಿಗೆ ಪ್ರಜ್ಞೆ ತಪ್ಪಿದೆ. ಅವರ ಕೈನಲ್ಲಿದ್ದ ಆಪಲ್ ವಾಚ್ ಅವರನ್ನು ಅಪದ್ಬಾಂಧವರಾಗಿ ಕಾಪಾಡಿದೆ. ಆಪಲ್ ವಾಚ್‍‍ನಲ್ಲಿದ್ದ ಹಾರ್ಡ್ ಫಾಲ್ ಫೀಚರ್‍‍ನಿಂದಾಗಿ ಆಂಬ್ಯುಲೆನ್ಸ್ ಅರ್ಧ ಗಂಟೆಯಲ್ಲಿ ಸ್ಥಳಕ್ಕೆ ಬಂದಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಬಾಬ್‍‍ರವರ ಮಗ ಗೇಬ್ ಪ್ರತಿಯೊಬ್ಬರು ತಮ್ಮ ಬಳಿಯಿರುವ ಆಪಲ್ ವಾಚ್‍‍ನಲ್ಲಿ ಈ ಹಾರ್ಡ್ ಫಾಲ್ ಫೀಚರ್ ಅಳವಡಿಸಿಕೊಳ್ಳುವಂತೆ ತಿಳಿಸಿದ್ದಾರೆ. ಇದರಿಂದಾಗಿ ಅಪಾಯದ ಸಮಯದಲ್ಲಿ ಪ್ರಾಣ ಉಳಿಯಲಿದೆ ಎಂದು ಹೇಳಿದ್ದಾರೆ.

ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಡ್ರೈವ್‍‍‍ಸ್ಪಾರ್ಕ್ ಅಭಿಪ್ರಾಯ

ತುರ್ತು ಎಸ್‍ಒ‍ಎಸ್ ಫೀಚರ್‍‍ಗಳು ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಗ್ಯಾಡ್ಜೆಟ್‍‍ಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಕೆಲವು ಕಾರುಗಳಲ್ಲಿಯೂ ಸಹ ಈ ಫೀಚರ್ ಅನ್ನು ಅಳವಡಿಸಲಾಗುತ್ತಿದೆ. ಕಾರುಗಳಲ್ಲಿರುವ ಸ್ಮಾರ್ಟ್ ಇನ್ಫೋ ಟೇನ್‍‍ಮೆಂಟ್ ಸಿಸ್ಟಂಗಳಲ್ಲಿಯೂ ಈ ಫೀಚರ್‍‍ಗಳನ್ನು ಅಳವಡಿಸಲಾಗುತ್ತಿದೆ. ಕೆಲವು ಟಾಪ್ ಎಂಡ್ ಕಾರುಗಳಲ್ಲಿ ಯಾವುದಾದರೂ ಒಂದು ನಂಬರಿಗೆ ಪ್ರೋಗ್ರಾಮಿಂಗ್ ಮಾಡಿ, ಅಪಘಾತಗಳಂತಹ ತುರ್ತು ಸಂದರ್ಭಗಳಲ್ಲಿ ಈ ನಂಬರಿಗೆ ಕರೆ ಮಾಡುವಂತೆ ಮಾಡಲಾಗಿರುತ್ತದೆ.

Most Read Articles

Kannada
English summary
Apple Watch Saves Mountain Biker’s Life After Crash By Alerting Emergency Services - Read in kannada
Story first published: Thursday, September 26, 2019, 11:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X