ಸನರೂಫ್ ಹೊಂದಲಿದೆ ಹೊಸ ಹ್ಯುಂಡೈ ಐ20

ಹ್ಯುಂಡೈ ಕಂಪನಿಯು ತನ್ನ ಹೊಸ ಐ20 ಕಾರ್ ಅನ್ನು ಸ್ಪಾಟ್ ಟೆಸ್ಟ್ ನಡೆಸಿದೆ. ಹೊಸ ತಲೆಮಾರಿನ ಐ20 ಕಾರಿನ ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದಂತೆ ಹೊಸ ಕಾರಿನಲ್ಲಿ ಸನ್‍ರೂಫ್ ಸೇರಿದಂತೆ ಹಲವಾರು ಬದಲಾವಣೆಗಳನ್ನು ಮಾಡಿರುವುದು ಕಂಡು ಬಂದಿದೆ.

ಸನರೂಫ್ ಹೊಂದಲಿದೆ ಹೊಸ ಹ್ಯುಂಡೈ ಐ20

ಹೊಸ ಐ20 ಕಾರು ಸ್ಪಾಟ್ ಟೆಸ್ಟ್ ನಡೆಸುವ ಸ್ಪೈ ಚಿತ್ರವನ್ನು ವಿಕತನ್ ಬಹಿರಂಗಪಡಿಸಿದೆ. ವಿಕತನ್ ಸ್ಪೈ ಚಿತ್ರದಲ್ಲಿ ಹಲವಾರು ಪ್ರಮುಖ ಮಾಹಿತಿಗಳು ಬಹಿರಂಗವಾಗಿವೆ. ಇದರಲ್ಲಿ ಹೊಸ ಐ20 ಕಾರು ಹೊಸದಾಗಿ ಫ್ರಂಟ್ ಬಂಪರ್, ಮೆಶ್ ಗ್ರಿಲ್, ಹ್ಯಾಲೊಜೆನ್ ಹೆಡ್‌ಲ್ಯಾಂಪ್‌, ಹೆಡ್‌ಲ್ಯಾಂಪ್ ಕ್ಲಸ್ಟರ್, ಅಲಾಯ್ ವ್ಹೀಲ್‌, ವೈಡರ್ ಒಆರ್‍‍ವಿಎಂ ಮತ್ತು ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದೆ.

ಸನರೂಫ್ ಹೊಂದಲಿದೆ ಹೊಸ ಹ್ಯುಂಡೈ ಐ20

ಹೊಸ ಐ20 ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವೈರಲೆಸ್ ಚಾರ್ಜಿಂಗ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ದೊಡ್ಡ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಮತ್ತು ಹ್ಯುಂಡೈನ ಬ್ಲೂಲಿಂಕ್ ಕನಕ್ಟಿವಿಟಿ ತಂತ್ರಜ್ಞಾನವನ್ನು ಹೊಂದಿರಲಿದೆ.

ಸನರೂಫ್ ಹೊಂದಲಿದೆ ಹೊಸ ಹ್ಯುಂಡೈ ಐ20

ಹೊಸ ಹ್ಯುಂಡೈ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಪ್ರಸ್ತುತ ಕಾರಿನಲ್ಲಿರುವ 1.4 ಲೀಟರ್ ಡೀಸೆಲ್ ಯು‍‍ನಿ‍ಟ್ ಎಂಜಿನ್ ಅನ್ನು ಬದಲಾಯಿಸಲಾಗುತ್ತದೆ. ಹೊಸ ಡೀಸೆಲ್ ಎಂಜಿನ್ ಕಿಯಾ ಸೆಲ್ಟೋಸ್‍ನ ಎಂಜಿನ್ ಮಾದರಿಯಲ್ಲಿರಲಿದೆ. ಸೆಲ್ಟೋಸ್ ಕಾರಿನ ಎಂಜಿನ್ 115 ಬಿಎಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸನರೂಫ್ ಹೊಂದಲಿದೆ ಹೊಸ ಹ್ಯುಂಡೈ ಐ20

ಪ್ರಸ್ತುತ ತಲೆಮಾರಿನ ಐ20 ಮೂರು ಪೆಟ್ರೋಲ್ ಮಾದರಿ ಮತ್ತು ಒಂದು ಡೀಸೆಲ್ ಮಾದರಿಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಮಾದರಿಗಳು 1.2 ಲೀಟರ್ ಎಂಜಿನ್ ಅನ್ನು ಹೊಂದಿದೆ ಮತ್ತು ಡೀಸೆಲ್ ಮಾದರಿಯು 1.4 ಲೀಟರ್ ಎಂಜಿನ್ ಅನ್ನು ಹೊಂದಿದೆ. ಪ್ರಸ್ತುತ ಹ್ಯುಂಡೈ ಐ20 ಕಾರು ಭಾರತೀಯ ಎಕ್ಸ್ ಶೋರೂಂ ಪ್ರಕಾರ ರೂ.7.74 ಲಕ್ಷದಿಂದ 9.93 ಲಕ್ಷ ಬೆಲೆಯನ್ನು ಹೊಂದಿದೆ.

ಸನರೂಫ್ ಹೊಂದಲಿದೆ ಹೊಸ ಹ್ಯುಂಡೈ ಐ20

ಹ್ಯುಂಡೈ ಐ20 ಕಾರ್ ಅನ್ನು ಮೊದಲ ಬಾರಿಗೆ ಪ್ಯಾರಿಸ್ ಮೋಟಾರ್ ಶೋದಲ್ಲಿ ಜಾಗತಿಕ ಮಟ್ಟದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಜಾಗತಿಕವಾಗಿ ಮೂರು ಮತ್ತು ಐದು ಡೋರ್ ಆವೃತ್ತಿಗಳಲ್ಲಿ ಲಭ್ಯವಿದೆ. ಎರಡನೇ ತಲೆಮಾರಿನ ಐ20 ಕಾರನ್ನು 2014ರಲ್ಲಿ ಬಿಡುಗಡೆಗೊಳಿಸಲಾಗಿತ್ತು ಮತ್ತು 2015ರಲ್ಲಿ ಇಂಡಿಯಾ ಕಾರ್ ಆಫ್ ದಿ ಇಯರ್ ಅನ್ನು ಗೆದ್ದುಕೊಂಡಿತ್ತು.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಸನರೂಫ್ ಹೊಂದಲಿದೆ ಹೊಸ ಹ್ಯುಂಡೈ ಐ20

ಎರಡನೇ ತಲೆಮಾರಿನ ಮಾದರಿಗಳು ಹ್ಯುಂಡೈನ 'ಫ್ಲೂಯಿಡಿಕ್ ಸ್ಕಲ್ಪ್ಚರ್ 2.0' ವಿನ್ಯಾಸವನ್ನು ಹೊಂದಿದೆ. ಇದನ್ನು ಜರ್ಮನಿಯ ರಸ್ಸೆಲ್‌ಶೈಮ್‌ನಲ್ಲಿರುವ ಹ್ಯುಂಡೈನ ವಿನ್ಯಾಸ ಕೇಂದ್ರದಲ್ಲಿ ವಿನ್ಯಾಸಗೊಳಿಸಲಾಗಿದೆ. ಭಾರತದಲ್ಲಿ ಹತ್ತು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಿತ್ತು ಮತ್ತು 2018ರ ಫೇಸ್‍‍ಲಿಫ್ಟ್ ವೇಳೆಯಲ್ಲಿ ಹೆಸರುಗಳನ್ನು ಬದಲಾಯಿಸಲಾಗಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಸನರೂಫ್ ಹೊಂದಲಿದೆ ಹೊಸ ಹ್ಯುಂಡೈ ಐ20

ಭಾರತದಲ್ಲಿ ಹ್ಯುಂಡೈನ ಸಾಲಿನಲ್ಲಿ ಐ20 ಕಾರು ಮಾರಾಟದಲ್ಲಿ ಸ್ಥಿರ ಪ್ರದರ್ಶನ ನೀಡುವುದರಲ್ಲಿ ಯಶಸ್ವಿಯಾಗಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಹ್ಯುಂಡೈ ಐ 20ಯ 10,141 ಯು‍‍ನಿ‍‍ಟ್‍ಗಳು ಮಾರಾಟವಾಗಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ಮಾರುತಿ ಸುಜುಕಿ ಬಲೆನೊವಿನ 11,420 ಯು‍‍ನಿ‍ಟ್‍ಗಳು ಮಾರಾಟವಾಗಿವೆ. ಬಲೆನೊ ಕಾರಿಗೆ ಹ್ಯುಂಡೈ ಐ20 ಪ್ರಬಲ ಪೈಪೋಟಿಯನ್ನು ನೀಡುತ್ತದೆ.

MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಸನರೂಫ್ ಹೊಂದಲಿದೆ ಹೊಸ ಹ್ಯುಂಡೈ ಐ20

ಹ್ಯುಂಡೈ ಸಂಸ್ಥೆಯು ತನ್ನ ಹೊಸ ಐ20 ಕಾರನ್ನು ಸ್ಪಾಟ್ ಟೆಸ್ಟ್ ಮಾಡಿದೆ. ಕಂಪನಿಯು ಹೊಸ ಐ20 ಕಾರಿನಲ್ಲಿ ಸನ್‍‍ರೋಫ್ ವೈಶಿಷ್ಟ್ಯವನ್ನು ನೀಡಿದೆ. ಹೊಸ ವೈಶಿಷ್ಟ್ಯಗಳನ್ನು ಅಳವಡಿಸಿ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ತಂತ್ರವನ್ನು ರೂಪಿಸಿದೆ. ಹೊಸ ಐ20 ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಬಲೆನೊ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

Article Published On: Thursday, November 14, 2019, 12:22 [IST]
English summary
Spy Pics: Hyundai i20 To Feature Sunroof, New Alloy Wheels, And More - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+