ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಮಾರುತಿ ಸುಜುಕಿ ಕಂಪನಿಯು ಸದ್ದಿಲ್ಲದೇ ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಸರಣಿಯ ಕಾರುಗಳನ್ನು ರಿಕಾಲ್ ಮಾಡುತ್ತಿದೆ. ವರದಿಗಳ ಪ್ರಕಾರ ಈ ರೀತಿಯಾಗಿ ಕಾರುಗಳನ್ನು ರಿಕಾಲ್ ಮಾಡುತ್ತಿರುವ ಉದ್ದೇಶವು ತನ್ನ ಜನಪ್ರಿಯ ಕಾರುಗಳಲ್ಲಿರುವ ಸ್ಟೀಯರಿಂಗ್ ವ್ಹೀಲ್ ಸಮಸ್ಯೆಯನ್ನು ಸರಿಪಡಿಸುವುದಾಗಿದೆ.

ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಸ್ವಿಫ್ಟ್, ಡಿಜೈರ್, ಬಲೆನೊ, ವಿಟಾರಾ ಬ್ರಿಝಾ ಹಾಗೂ ಎಸ್ ಕ್ರಾಸ್ ಕಾರುಗಳನ್ನು ರಿಕಾಲ್ ಮಾಡಲಾಗುತ್ತಿದೆ. ಈ ಕಾರುಗಳಲ್ಲಿರುವ ಸ್ಟೀಯರಿಂಗ್‍ ವ್ಹೀಲ್‍‍ಗಳು, ಕಾರ್ನರ್‍‍ಗಳಲ್ಲಿ ಕಾರುಗಳನ್ನು ಟರ್ನ್ ಮಾಡಿದ ನಂತರ ಮತ್ತೆ ಮೊದಲಿನ ಸ್ಥಿತಿಗೆ ಬರುತ್ತಿಲ್ಲ.

ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಮಾರುತಿ ಸುಜುಕಿ ಕಂಪನಿಯು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ ರಶ್‍‍ಲೇನ್, ಮಾರುತಿ ಸುಜುಕಿ ಕಂಪನಿಯ ಆಂತರಿಕ ದಾಖಲೆಯೊಂದನ್ನು ಬಿಡುಗಡೆಗೊಳಿಸಿದೆ. ಈ ದಾಖಲೆಯಲ್ಲಿ ಸಮಸ್ಯೆಯನ್ನು ಎದುರಿಸುತ್ತಿರುವ ಕಾರುಗಳ ವಿ‍ಐ‍ಎನ್ ನಂಬರ್, ಮಾಡೆಲ್ ಕೋಡ್ ಹಾಗೂ ಎಂಜಿನ್ ವಿಧದ ಬಗ್ಗೆ ಹೇಳಲಾಗಿದೆ.

ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಈ ದಾಖಲೆಗಳ ಪ್ರಕಾರ ಸಮಸ್ಯೆಯನ್ನು ಎದುರಿಸುತ್ತಿರುವ ಎಲ್ಲಾ ವಾಹನಗಳಿಗೆ ಉಚಿತವಾಗಿ ಸ್ಟೀಯರಿಂಗ್ ವ್ಹೀಲ್ ಬದಲಿಸಿ ನೀಡಲಾಗುವುದು. ಮಾರುತಿ ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಕಾರುಗಳ ಬೆಲೆಯನ್ನು ಇತ್ತೀಚಿಗೆ ಕಡಿಮೆಗೊಳಿಸಿದೆ.

ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಸ್ವಿಫ್ಟ್, ಡಿಜೈರ್, ಬಲೆನೊ, ವಿಟಾರಾ ಬ್ರಿಝಾ ಹಾಗೂ ಎಸ್ ಕ್ರಾಸ್ ಕಾರುಗಳ ಜೊತೆಗೆ ಟೂರ್ ಎಸ್ ಆವೃತ್ತಿ ಹಾಗೂ ಇಗ್ನಿಸ್ ಮಾದರಿಗಳ ಬೆಲೆಗಳನ್ನು ಕಡಿಮೆಗೊಳಿಸಿದೆ. ಕೇಂದ್ರ ಸರ್ಕಾರವು ಇತ್ತೀಚಿಗೆ ಕಾರ್ಪೋರೆಟ್ ತೆರಿಗೆಯನ್ನು ಕಡಿತಗೊಳಿಸಿದ ಕಾರಣ, ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ಕಾರಣಕ್ಕೆ ಮಾರುತಿ ಕಂಪನಿಯು ರೂ.5,000ದವರೆಗೆ ಬೆಲೆ ಕಡಿಮೆ ಮಾಡಿದೆ.

ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಮಾರುತಿ ಸುಜುಕಿ ಕಂಪನಿಯು ತನ್ನ ಬಹು ನಿರೀಕ್ಷಿತ ಎಂಟ್ರಿ ಲೆವೆಲ್‍‍ನ ಎಸ್ ಪ್ರೆಸ್ಸೊ ಹ್ಯಾಚ್ ಬ್ಯಾಕ್ ಕಾರ್ ಅನ್ನು ಇಂದು ಭಾರತದಲ್ಲಿ ಬಿಡುಗಡೆಗೊಳಿಸುತ್ತಿದೆ. ಹೊಸ ಎಸ್ ಪ್ರೆಸ್ಸೊ ಕಾರು ಹೊಸ ವಿನ್ಯಾಸವನ್ನು ಹೊಂದಿದ್ದು, ಇದರಲ್ಲಿರುವ ವಿನ್ಯಾಸವನ್ನು 2018ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾದ ಫ್ಯೂಚರ್ ಎಸ್ ಕಾನ್ಸೆಪ್ಟ್ ನಿಂದ ಪಡೆಯಲಾಗಿದೆ.

ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಎಸ್ ಪ್ರೆಸ್ಸೊ ಕಾರು ಮಾರುತಿ ಕಂಪನಿಯ ಆಲ್ಟೋ ಕೆ10 ಕಾರಿನ ಮೇಲಿನ ಸರಣಿಯಲ್ಲಿರಲಿದೆ. ಎಸ್ ಪ್ರೆಸ್ಸೊ ಕಾರು ಅಕ್ಟೋಬರ್ 1ರಂದು ಬಿಡುಗಡೆಯಾಗಲಿರುವ ರೆನಾಲ್ಟ್ ಕ್ವಿಡ್ ಫೇಸ್ ಲಿಫ್ಟ್ ಹಾಗೂ ದಟ್ಸನ್ ರೆಡಿ ಗೊ ಕಾರುಗಳಿಗೆ ಪೈಪೋಟಿ ನೀಡಲಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಹೊಸ ಮಾರುತಿ ಎಸ್ ಪ್ರೆಸ್ಸೊ ಕಾರಿನಲ್ಲಿ 1.0 ಲೀಟರಿನ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಆಲ್ಟೋ ಕೆ10 ಕಾರಿನಲ್ಲಿಯೂ ಅಳವಡಿಸಲಾಗಿದೆ. ಈ ಎಂಜಿನ್ ಅನ್ನು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿ‍ಎಸ್ 6 ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಈ ಎಂಜಿನ್ 68 ಬಿ‍‍ಹೆಚ್‍‍ಪಿ ಪವರ್ ಹಾಗೂ 90 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 5 ಸ್ಪೀಡ್‍‍ನ ಮ್ಯಾನುವಲ್ ಅಥವಾ ಹೆಚ್ಚುವರಿಯಾದ ಎ‍‍ಜಿ‍ಎಸ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರಲಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ಕಂಪನಿಯು ದೋಷವಿರುವ ಆಯ್ದ ಕಾರುಗಳನ್ನು ರಿಕಾಲ್ ಮಾಡಿದೆ. ಈ ಕಾರುಗಳನ್ನು ಪರೀಕ್ಷಿಸಿ, ಯಾವುದೇ ಸಮಸ್ಯೆ ಕಂಡು ಬಂದಲ್ಲಿ ಉಚಿತವಾಗಿ ಬಿಡಿಭಾಗಗಳನ್ನು ಬದಲಿಸಲಾಗುವುದು. ಆದರೆ ಕಂಪನಿಯು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

Source: Rushlane

Most Read Articles

Kannada
English summary
Maruti Suzuki Cars Silently Recalled In India Over Steering Column Replacement? - Read in Kannada
Story first published: Monday, September 30, 2019, 10:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X