ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್‍‍ನ ಹೊಸ ಕೂಪೆ

ಮರ್ಸಿಡಿಸ್ ಬೆಂಝ್ 2020 ಜಿಎಲ್ಇ ಕೂಪೆ ಎಸ್‍ಯುವಿಯನ್ನು ಮುಂದಿನ ತಿಂಗಳು ಫ್ರಂಕ್‍ಫರ್ಟ್ ಮೋಟಾರ್‍‍ಶೊದಲ್ಲಿ ಮೊದಲ ಬಾರಿ ಅನಾವರಣವಾಗಲಿದೆ ಎಂದು ಬಹಿರಂಗಪಡಿಸಿದೆ. 2020 ಜಿಎಲ್ಇ ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿದೆ.

ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್‍‍ನ ಹೊಸ ಕೂಪೆ

ಬೆಂಝ್ ಕಾರು ಪ್ರಿಯರು ಕಾತರದಿಂದ ಕಾಯುತ್ತಿದ್ದ ಜಿಎಲ್ಇ ಕೂಪೆ ಮುಂದಿನ ತಿಂಗಳು ಅನಾವರಣವಾಗುತ್ತಿದೆ. ಈ ಕಾರು ಬಿಡುಗಡೆಗೊಂಡಿರುವ ಜಿಎಲ್ಇ ಕೂಪೆ ಕ್ಕಿಂತ 15 ಎಂಎಂ ಉದ್ದವಿದ್ದು 63 ಎಂಎಂ ಅಗಲ ಮತ್ತು 3 ಎಂಎಂ ಎತ್ತರವಿದೆ. ಮರ್ಸಿಡಿಸ್ ಕಾರುಗಳ ಇಂಟಿರಿಯರ್ ಯಾವಾಗಲೂ ಬಹಳ ಪ್ರೀಮಿಯಂ ಆಗಿರುತ್ತದೆ, ಜಿಎಲ್ಇ ಕೂಪೆಯು ಇದರಿಂದ ಹೊರತಾಗಿಲ್ಲ.

ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್‍‍ನ ಹೊಸ ಕೂಪೆ

ಕಾರಿನಲ್ಲಿ ಆಕರ್ಷಕವಾದ 12.3 ಇಂಚಿನ ಎರಡು ಸ್ಕ್ರೀನ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೇನ್‍‍ಮೆಂಟ್ ಸಿಸ್ಟಮ್ ಹೊಂದಿದ್ದು, ಸರಿಯಾದ ಗಾಳಿಯ ಪ್ರಸರಣವಾಗಲೂ 4 ಏರ್-ಕಾನ್‍ಗಳನ್ನು ಅಳವಡಿಸಲಾಗಿದೆ.

ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್‍‍ನ ಹೊಸ ಕೂಪೆ

ಜಿಎಲ್ಇ ಕುಪೆಗೆ ಇಂಟಿರಿಯರ್ ಎಲೆ‍ಮೆಟ್ಸ್ ಗ್ರಾಬ್ ಹ್ಯಾಂಡಲ್ಸ್, ಸ್ಪೋರ್ಟೀ ಸೀಟುಗಳು, ಸ್ಪೋರ್ಟಿ ಸ್ಟೀರಿಂಗ್ ವ್ಹೀಲ್ ನಪ್ಪಾ ಲೆದರ್‍‍ನಲ್ಲಿ ನಿರ್ಮಿಸಿದ್ದಾರೆ. ಅನ್-ಬೋರ್ಡ್ ಕಮ್ಯುನಿಕೇಷನ್ ಸಿಸ್ಟಮ್, ಅಮೆಜಾನ್ ಮ್ಯೂಸಿಕ್ ಸ್ಟ್ರೀಮಿಂಗ್ ಸೌಲಭ್ಯ ಒಳಗೊಂಡಿದೆ.

ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್‍‍ನ ಹೊಸ ಕೂಪೆ

ಹಿಂದಿನ ತಲೆಮಾರಿನ ಜಿಎಲ್ಇ ಕೂಪೆಗಿಂತ ಹೊಸ ತಲೆಮಾರಿನ ಜಿಎಲ್ಇ ಕೂಪೆ ಹೆಚ್ಚು ವಿಶಾಲವಾಗಿದೆ. ವ್ಹೀಲ್‍ಬೇಸ್ ಕೂಡ ಹಿಂದಿನ ಮದರಿಗಿಂತ ಉದ್ದವಾಗಿದೆ. ಮರ್ಸಿಡಿಸ್ ಹೊಸ ಜಿಎಲ್ಇ ಕೂಪೆ ಚಾಸಿಸ್ ಡೈನಾಮಿಕ್ಸ್ ಅನ್ನು ಬದಲಾಯಿಸಿದೆ. ಇ-ಆಕ್ಟಿವ್ ಬಾಡಿ ಕಂಟ್ರೋಲ್ ಸಿಸ್ಟಮ್ ಹೊಂದಿದ್ದು, ಪ್ರತಿ ಚಕ್ರದಲ್ಲಿ ಸ್ಪ್ರಿಂಗ್ ಮತ್ತು ಡ್ಯಾಂಪರ್ ಅನ್ನು ಅಳವಡಿಸಿದ್ದಾರೆ.

ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್‍‍ನ ಹೊಸ ಕೂಪೆ

ಕೂಪೆ ಎಸ್‍‍ಯುವಿ ಏರ್ ಸಸ್ಪೆಂಷನ್ ಯುನಿಟ್ ಹೊಂದಿದ್ದು, ಇದು ಸ್ಪೋಟ್ಸ್ ಮತ್ತು ಕಂಫರ್ಟ್ ಮೋಡ್‍ಗೆ ಬದಲಾಯಿಸಲು ಸಹಾಯ ಮಾಡುತ್ತದೆ. ಸ್ಟ್ಯಾಂಡರ್ಡ್ ಜಿಎಲ್ಇ ಕೂಪೆ 350 ಡಿ ಮತ್ತು 400 ಡಿ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, 350 ಡಿ ಕಾರು 3.0 ಲೀಟರ್ 6 ಸಿಲಿಂಡರ್ ಡೀಸೆಲ್ ಎಂಜಿನ್ 272 ಬಿಎಚ್‍ಪಿ ಪವರ್ ಮತ್ತು 600 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 450 ಡಿ ಅದೇ ಮಾದರಿಯ ಎಂಜಿನ್ ಹೊಂದಿದ್ದು, ಆದರೆ 330 ಬಿಎಚ್‍ಪಿ ಪವರ್ ಮತ್ತು 700 ಎನ್ಎಮ್ ಟಾರ್ಕ್ ಉತ್ಪಾದಿಸುತ್ತದೆ.

ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್‍‍ನ ಹೊಸ ಕೂಪೆ

ಜಿಎಲ್ಇ 53 ಎಎಂಜಿ ಕೂಪೆ ಕಾರು 3.0 ಲೀಟರ್ ಟ್ವಿನ್ ಟರ್ಬೋಜಾಜ್ಡ್ ಇನ್ ಲೈನ್ 6 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 435 ಬಿಎಚ್‍ಪಿ ಪವರ್ ಮತ್ತು 520 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮರ್ಸಿಡಿಸ್ ಇಕ್ಯೂ ಬೂಸ್ಟ್ ಸ್ಟಾರ್ಟರ್ ಹೊಂದಿದ್ದು, ಹೆಚ್ಚುವರಿಯಾಗಿ 22 ಎಚ್‍ಪಿ ಮತ್ತು 250 ಎನ್‍ಎಂ ಅಲ್ಫಾವಧಿಯಲ್ಲಿ ಉತ್ಪಾದಿಸುತ್ತದೆ.

ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್‍‍ನ ಹೊಸ ಕೂಪೆ

ಜಿಎಲ್ಇ ಕೂಪೆಯ ಎಲ್ಲಾ ಮೂರು ಮಾದರಿಗಳು 4 ಮ್ಯಾಟಿಕ್ ಆಲ್-ವೀಲ್-ಡ್ರೈವ್ ವ್ಯವಸ್ಥೆಯನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿವೆ. ಎಲ್ಲಾ ಹೊಸ ಜಿಎಲ್ಇ 53 ಎಎಂಜಿ ಸ್ಪೋರ್ಟ್ ಮತ್ತು ಸ್ಪೋರ್ಟ್ + ಡ್ರೈವಿಂಗ್ ಮೋಡ್‌ಗಳಲ್ಲಿರುವಾಗ 15 ಎಂಎಂ ನೆಲಕ್ಕೆ ಹತ್ತಿರವಾಗುತ್ತದೆ. ಕಂಫರ್ಟ್ ಮೋಡ್‌ನಲ್ಲಿರುವಾಗ 120 ಕಿಲೋಮೀಟರ್ ವೇಗವನ್ನು ದಾಟಿದಾಗ ಎಸ್‌ಯುವಿ ಸವಾರಿ ಎತ್ತರವನ್ನು ಕಡಿಮೆ ಮಾಡುತ್ತದೆ.

ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್‍‍ನ ಹೊಸ ಕೂಪೆ

ಜಿಎಲ್ಇ ಕೂಪೆಯ ಎಲ್ಲಾ ಮೂರು ಮಾದರಿಯ ಕಾರುಗಳು 4 ಮ್ಯಾಜಿಕ್ ಅಲ್-ವ್ಹೀಲ್-ಡ್ರೈವ್ ಸಿಸ್ಟಮ್ ಹೊಂದಿದ್ದು, ಎಲ್ಲಾ ಹೊಸ ಜಿಎಎಲ್ಇ 53 ಎಎಂಜಿ ಸ್ಪೋರ್ಟ್ ಮತ್ತು ಸ್ಪೋರ್ಟ್+ಡ್ರೈವಿಂಗ್ ಮೋಡ್‍ಗಳಲ್ಲಿರುವಾಗ 15 ಎಂಎಂ ನೆಲಕ್ಕೆ ಹತ್ತಿರವಾಗಿದೆ.

ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್‍‍ನ ಹೊಸ ಕೂಪೆ

ಜರ್ಮನ್ ಅವರು ಹಲವು ಫೀಚರ್ಸ್‍ಗಳ ಮೂಲಕ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಇ ಕೂಪೆಯನ್ನು ಬಿಡುಗಡೆಗೊಳಿಸುತ್ತಿದ್ದಾರೆ. ಹೆಚ್ಚು ಕಾರ್ಯಕ್ಷಮತೆ ಮತ್ತು ಪವರ್‍‍ಫುಲ್ ಕಾರು ಇದಾಗಿದೆ. ಭಾರತೀಯ ಕಾರು ಪ್ರಿಯರು ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡುವುದನ್ನು ಎದುರು ನೋಡುತ್ತ ಇದ್ದಾರೆ.

Most Read Articles

Kannada
English summary
Mercedes Benz Reveals India-Bound 2020 GLE Coupe SUV Ahead Of Its Debut At Frankfurt Motorshow - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X