ಅಂತರರಾಷ್ಟೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಟ್ರಯಂಫ್ ಟೈಗರ್ 900
ಟ್ರಯಂಫ್ ಮೋಟಾರ್‍ಸೈಕಲ್ಸ್, ಹೊಸ ಟೈಗರ್ 900 ಬೈಕ್ ಅನ್ನು ಅಂತರರಾಷ್ಟೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಬೈಕ್ ಟೈಗರ್ 800 ಬೈಕಿನ ಸ್ಥಾನವನ್ನು ತುಂಬಲಿದೆ. ಹೊಸ ಟೈಗರ್ 900 ಬೈಕ್ ಅನ್ನು ಹಲವಾರು ನವೀಕರಣಗಳೊಂದಿಗೆ ಬಿಡುಗಡೆಗೊಳಿಸಲಾಗಿದೆ.

ಟ್ರಯಂಫ್ ಟೈಗರ್ 900 ಬೈಕ್ ಅನ್ನು ನವೀಕರಿಸಿದ ಚಾಸಿಸ್, ಸಸ್ಪೆಂಷನ್, ಹೊಸ ಎಂಜಿನ್ ಮತ್ತು ಹೊಸ ಎಂಜಿನ್‍ನೊಂದಿಗೆ ಬಿಡುಗಡೆಗೊಳಿಸಲಾಗಿದೆ. ಭಾರತದಲ್ಲಿ ಟೈಗರ್ 800 ಬೈಕ್, ಅಡ್ವೆಂಚರ್ ಬೈಕ್‍ಗಳ ಸರಣಿಯಲ್ಲಿ ಉತ್ತಮ ಬೈಕ್ ಆಗಿದೆ.

ಹೊಸ ಟೈಗರ್ 900 ಬೈಕ್ ಹೆಚ್ಚು ಪವರ್‍ಫುಲ್ ಎಂಜಿನ್ ಅನ್ನು ಹೊಂದಿದೆ. ಮುಂದಿನ ವರ್ಷದಲ್ಲಿ ಟೈಗರ್ 900 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಹೊಸ ಟೈಗರ್ 900 ಬೈಕಿನಲ್ಲಿ ಬೋಲ್ಡ್ - ಆನ್ ಸಬ್ ಫ್ರೇಮ್, ಹೊಸ ಅಲ್ಯೂಮಿನಿಯಂ ಸ್ವಿಂಗಾರ್ಮ್, ಹೊಸ ಎಲ್‍ಇಡಿ ಹೆಡ್‍ಲ್ಯಾಂಪ್, ಡಿಆರ್‍ಎಲ್ ಮತ್ತು ಟಿಎಫ್‍ಟಿ ಸ್ಕ್ರೀನ್ ಅನ್ನು ಅಳವಡಿಸಲಾಗಿದೆ.

ಹೊಸ ಬೈಕ್ ಟೈಗರ್ 800 ಬೈಕ್‍ಗಿಂತ ಹಗುರವಾಗಿದೆ. ಟೈಗರ್ 900 ಬೈಕ್ ಟೈಟರ್ ಫ್ಯೂಯಲ್ ಟ್ಯಾಂಕ್ ಹೊಂದಿರುವುದರಿಂದ ಬೈಕ್ ಅನ್ನು ಸುಲಭವಾಗಿ ರೈಡ್ ಮಾಡಲು ಹೆಚ್ಚು ಸಹಕಾರಿಯಾಗಿದೆ.

ಇದು ಟೈಗರ್ 800 ಮಾದರಿಯ ಅಲ್ಯೂಮಿನಿಯಂ ಫಿನಿಶ್‍ಗೆ ಹೋಲಿಸಿದರೆ ಪ್ಲಾಸ್ಟಿಕ್‍ನಿಂದ ಮಾಡಲ್ಪಟ್ಟ ನವೀಕರಿಸಿದ ಫ್ರಂಟ್ ಫೆಂಡರ್, ವಿಂಡ್‍ಸ್ಕ್ರೀನ್ ಮತ್ತು ಸಂಪ್ ಗಾರ್ಡ್ ಅನ್ನು ಹೊಂದಿದೆ. ಟ್ರಯಂಫ್ ಟೈಗರ್ 800 ಬೈಕಿನ ಎಕ್ಸ್‌ಆರ್ ಮತ್ತು ಎಕ್ಸ್‌ಸಿ ರೂಪಾಂತರಗಳನ್ನು ಟ್ರೈಗರ್ 900ನಲ್ಲಿ ಜಿಟಿ ಮತ್ತು ರ್‍ಯಾಲಿ ಮಾದರಿಗಳೊಂದಿಗೆ ಬದಲಾಯಿಸಿದೆ.

ಟ್ರಯಂಫ್ ಟೈಗರ್ 900 ಬೈಕಿನಲ್ಲಿ 888 ಸಿಸಿ ಇನ್‍ಲೈನ್ 3 ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಯುರೋ 5 ಮತ್ತು ಬಿಎಸ್-6 ಮಾಲಿನ್ಯ ನಿಯಮದ ಅನುಸಾರವಾಗಿದೆ. ಈ ಎಂಜಿನ್ 94 ಬಿಹೆಚ್‍ಪಿ ಪವರ್ ಮತ್ತು 86 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಬೈಕ್ ಕಾರ್ನರಿಂಗ್ ಎಬಿಎಸ್ ಮತ್ತು ರೈನ್, ರೋಡ್, ಸ್ಪೋರ್ಟ್, ಆಫ್-ರೋಡ್, ರೈಡರ್ ಮತ್ತು ಆಫ್-ರೋಡ್ ಪ್ರೊ ಎಂಬ 6 ರೂಪಾಂತರಗಳನ್ನು ಹೊಂದಿದೆ. ಟ್ರಯಂಫ್ ಶಿಫ್ಟ್ ಅಸಿಸ್ಟ್ ಮತ್ತು ಮೈ ಟ್ರಯಂಫ್ ಕನೆಕ್ಟಿವಿಟಿಯನ್ನು ಪ್ರೊ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಜಿಟಿ ರೂಪಾಂತರದಲ್ಲಿ ಸಸ್ಪೆಂಷನ್ ಮತ್ತು ಬ್ರೇಕಿಂಗ್ ಅನ್ನು 180 ಎಂಎಂ ಫ್ರಂಟ್ ಮತ್ತು 170 ರೇರ್ ಬ್ರೇಕ್‍ನೊಂದಿಗೆ ಅಡ್ಜೆಂಸ್ಟ್ ಮಾಡಬಹುದಾದ ಮೊನೊಶಾಕ್ ಹೊಂದಿದೆ. ಪ್ರೊ ಟ್ರೀಮ್ 9 ಹಂತದ ಡ್ಯಾಂಪಿಂಗ್ ಮತ್ತು 4 ಫ್ರೀಪಿಕ್ಸ್ ಪ್ರೀ ಲೋಡ್ ಸೆಟ್ಟಿಂಗ್‍ಗಳೊಂದಿಗೆ ಎಲೆಕ್ಟ್ರಾನಿಕ್ ಅಡ್ಜೆಂಸ್ಟ್ ಬಲ್ ಹೊಂದಿರುವ ಮೊನೊಶಾಕ್ ಅನ್ನು ಹೊಂದಿದೆ.

ಎರಡೂ ಬೈಕ್‍ಗಳು ಮೆಟ್ಜೆಲರ್ ಟೂರನ್ಸ್ ನೆಕ್ಸ್ಟ್ ಟಯರ್‍ಗಳೊಂದಿಗೆ 19/17 ಅಲಾಯ್ ವ್ಹೀಲ್‍ಗಳನ್ನು ಹೊಂದಿದೆ. ಸ್ಟೈಲ್ಮಾ ಕ್ಯಾಲಿಪರ್‍ಗಳ ಮೂಲಕ ಬ್ರೇಕಿಂಗ್ ಹೊಂದಿದೆ. ಹೊಸ ಬೈಕ್ ಭಾರತದಲ್ಲಿ ರೂ.17 ಲಕ್ಷಗಳಿಗೆ ಮಾರಾಟವಾಗಬಹುದು.

ಹೊಸ ಟೈಗರ್ 900 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಬಿಎಂಡಬ್ಲ್ಯು ಎಫ್ 850 ಜಿಎಸ್, ಹೊಸ ತಲೆಮಾರಿನ ಹೋಂಡಾ ಆಫ್ರಿಕಾ ಟ್ವಿನ್ ಮತ್ತು ಡುಕಾಟಿ ಮಲ್ಟಿಸ್ಟ್ರಾಡಾ 950 ಬೈಕ್‍ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








