ಈ ಬೈಕ್‌ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಇಂಡಿಯಾ ತನ್ನ ಎಂಟ್ರಿ ಲೆವೆಲ್ ಬೈಕ್‌ಗಳಾದ ಸ್ಪೀಡ್ 400 ಮತ್ತು ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೆಲೆಗಳನ್ನು ಭಾರತದಲ್ಲಿ ಹೆಚ್ಚಿಸಿದೆ. ಟ್ರಯಂಫ್ ಸ್ಪೀಡ್ 400 ಮತ್ತು ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್‌ಗಳು ಬೆಲೆ ಈಗ ಸರಿಸುಮಾರು ರೂ. 1,500 ಹೆಚ್ಚಾಗಿದೆ.

ಬೆಲೆ ಏರಿಕೆಯ ಬಳಿಕ, ಟ್ರಯಂಫ್ ಸ್ಪೀಡ್ 400 (Triumph Speed 400) ಬೆಲೆಯು ರೂ. 2,34,497 ಆದರೆ ಟ್ರಯಂಫ್ ಸ್ಕ್ರ್ಯಾಂಬ್ಲರ್ 400 X (Triumph Scrambler 400X) ಬೈಕಿನ ಬೆಲೆಯು ರೂ.2,64,496 ಆಗಿದೆ. ಈ ಎರಡೂ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾದ ನಂತರ ಈ ಬೈಕ್‌ಗಳು ಪಡೆದ ಮೊದಲ ಬೆಲೆ ಏರಿಕೆಯಾಗಿದೆ. ಆದರೆ ಇದು ಸ್ಪೀಡ್ 400 ಬೈಕಿನ ಪರಿಚಯಾತ್ಮಕ ಬೆಲೆಯನ್ನು ಹೊರತುಪಡಿಸಿದೆ.

Triumph Speed 400

ಈ ಬೈಕುಗಳು ಒಂದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದರೂ, ಅವು ವಿನ್ಯಾಸ ಮತ್ತು ವಿಶೇಷಂಣಗಳು ಭಿನ್ನವಾಗಿದೆ. ಮೊದಲಿಗೆ ಟ್ರಯಂಫ್ ಸ್ಪೀಡ್ 400 ಬೈಕಿನ ಬಗ್ಗೆ ಹೇಳುವುದಾದರೆ, ಈ ಬೈಕ್ ತನ್ನ 'ಟಿಯರ್-ಡ್ರಾಪ್' ಆಕಾರದ ಫ್ಯೂಯಲ್ ಟ್ಯಾಂಕ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್ಇಡಿ ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿದೆ. ಇದರೊಂದಿಗೆ ರಿಯರ್-ವ್ಯೂ ಮಿರರ್‌ಗಳು ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್‌ಗಳಂತಹ ವೃತ್ತಾಕಾರದ ವಿನ್ಯಾಸದ ಅಂಶಗಳೊಂದಿಗೆ ಆಕರ್ಷಕವಾದ ನಿಯೋ-ರೆಟ್ರೊ ಥೀಮ್ ಅನ್ನು ಹೊಂದಿದೆ.

ಇನ್ನು ಈ ಹೊಸ ಬೈಕ್ ಸಾಕಷ್ಟು ಟ್ರಯಂಫ್ ವಿನ್ಯಾಸದ ಅಂಶಗಳೊಂದಿಗೆ ಆಕಷಕವಾಗಿದೆ. ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕಿನ ಎಂಜಿನ್ ಬಗ್ಗೆ ಹೇಳುವುದಾದರೆ, 398.15cc, ಲಿಕ್ವಿಡ್-ಕೂಲ್ಡ್, 4-ವಾಲ್ವ್, DOHC, ಓವರ್‌ಸ್ಕ್ವೇರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,000rpm ನಲ್ಲಿ 39.5bhp ಮತ್ತು 6,500rpm ನಲ್ಲಿ 37.5Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಗೇರ್‌ಬಾಕ್ಸ್ ಅನ್ನು ಸಹ ಹೊಂದಿದೆ.

400 400 400 400 1 500 400 2 34 497 400 X 2 64 496 400 400 - - - 400 398 15cc - 4- DOHC 8 000rpm 39 5bhp 6 500rpm 37 5Nm 400 - - 43mm USD - 400 300 230 - ABS 400 17 400 398cc - 398cc 8 000 rpm 40 bhp 6 500 rpm 37 5 Nm 6- 400 - - - - - - 400 400 400 43 - 320mm 300mm

ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕಿನ ಸಸ್ಪೆಕ್ಷನ್ ಸಂಬಂಧಿಸಿದಂತೆ,ಬೋಲ್ಟ್-ಆನ್ ರಿಯರ್ ಸಬ್‌ಫ್ರೇಮ್ ಮತ್ತು ಟ್ವಿನ್-ಸೈಡೆಡ್ ಅಲ್ಯೂಮಿನಿಯಂ ಸ್ವಿಂಗರ್ಮ್‌ನೊಂದಿಗೆ ಫ್ರೇಮ್ ಅನ್ನು ಹೊಂದಿದೆ. ಈ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 43mm USD ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಗ್ಯಾಸ್-ಚಾರ್ಜ್ಡ್ ಮೊನೊಶಾಕ್‌ನಿಂದ ಒಳಗೊಂಡಿದೆ.

ಇನ್ನು ಟ್ರಯಂಫ್ ಸ್ಪೀಡ್ 400 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ABS ಸಹಾಯವನ್ನು ಸಹ ಹೊಂದಿದೆ. ಟ್ರಯಂಫ್ ಸ್ಪೀಡ್ 400 ಬೈಕಿನಲ್ಲಿ 17 ಇಂಚಿನ ಅಲಾಯ್ ವೀಲ್ಸ್ ಪಡೆದಿದೆ.

Triumph Speed 400

ಇನ್ನು ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್ ಬಗ್ಗೆ ಹೇಳುವುದಾದರೆ, ಮ್ಯಾಟ್ ಕಾಫಿ ಗ್ರೀನ್, ಫ್ಯಾಂಟಮ್ ಬ್ಲ್ಯಾಕ್ ಮತ್ತು ಆರ್ನಿವಲ್ ರೆಡ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಬೈಕಿನಲ್ಲಿ 398cc, ಸಿಸಿ-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದೇ ಎಂಜಿನ್ ಅನ್ನು ರೋಡ್‌ಸ್ಟರ್ ಬೈಕಿನಲ್ಲೂ ನೀಡಲಾಗಿತ್ತು.ಈ 398cc ಎಂಜಿನ್ 8,000 rpm ನಲ್ಲಿ 40 bhp ಮತ್ತು 6,500 rpm ನಲ್ಲಿ 37.5 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ ಮತ್ತು ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಪ್ರಯೋಜನಕಾರಿಯಾಗಿದೆ. ಈ ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕಿನಲ್ಲಿ ಸ್ಕ್ರ್ಯಾಂಬ್ಲರ್ ರೈಡ್-ಬೈ-ವೈರ್ ಥ್ರೊಟಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ-ಸಿ ಚಾರ್ಜಿಂಗ್ ಸಾಕೆಟ್, ಆಲ್-ಎಲ್‌ಇಡಿ ಲೈಟಿಂಗ್ ಸಿಸ್ಟಮ್ ಮತ್ತು ಸ್ಟೀರಿಂಗ್ ಲುಕ್ ಹೊಂದಿದೆ. ಇನ್ನು ಈ ಹೊಸ ಬೈಕ್ ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

Triumph

ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್ ಅನ್ನು ಸ್ಪೀಡ್ 400 ಬೈಕಿಗೆ ಹೋಲಿಸಿದರೆ, ಎತ್ತರದ ಸಸ್ಪೆಕ್ಷನ್ ಯುನಿಟ್ ಗಳನ್ನು ಹೊಂದಿದೆ. ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್ ಟ್ರ್ಯಾವೆಲ್ ನೊಂದಿಗೆ 43 ಎಂಎಂ ಬಿಗ್-ಪಿಸ್ಟನ್ ಫ್ರಂಟ್ ಫೋರ್ಕ್ ಮತ್ತು ಅದೇ ಟ್ರ್ಯಾವೆಲ್ ನೊಂದಿಗೆ ಮೊನೊಶಾಕ್ ಯುನಿಟ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ 320mm ಫ್ರಂಟ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 300mm ಡಿಸ್ಕ್ ಯುನಿಟ್ ಅನ್ನು ಹೊಂದಿದೆ.

More from DriveSpark

Article Published On: Tuesday, April 23, 2024, 16:39 [IST]
English summary
Triumph speed 400 scrambler 400x prices hiked new prices details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+